ಅಭಿಜ್ಞಾನ ಶಾಕುಂತಲಮ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಪರಿಷ್ಕರಣೆ
೧ ನೇ ಸಾಲು:
[[File:Raja Ravi Varma - Mahabharata - Shakuntala.jpg|thumbnail|200px|ಶಾಕುಂತಳ.[[ರಾಜಾ ರವಿವರ್ಮ]] ರಚಿಸಿದ ವರ್ಣಚಿತ್ರ.]]
[[File:Shakuntala RRV.jpg|right|thumb|200px|ದುಷ್ಯಂತನಿಗೆ ಪತ್ರ ಬರೆಯುತ್ತಿರುಚ ಶಕುಂತಳೆ.<br/>[[ರಾಜಾ ರವಿವರ್ಮ]] ರಚಿಸಿದ ವರ್ಣಚಿತ್ರ.]]
[[File:Ravi Varma-Shakuntala.jpg|right|thumb|200px|ಖಿನ್ನಳಾದ ಶಕುಂತಳೆ.<br/>[[ರಾಜಾ ರವಿವರ್ಮ]] ರಚಿಸಿದ ವರ್ಣಚಿತ್ರ.]]
 
'''ಅಭಿಜ್ಞಾನ ಶಾಕುಂತಲಮ್''' ([[ಕನ್ನಡ]]ದಲ್ಲಿ "ಅಭಿಜ್ಞಾನ ಶಾಕುಂತಳ" ಎಂಬ ಪ್ರಯೋಗವು ಹೆಚ್ಚಾಗಿದೆ) ‘ಕವಿಕುಲಗುರು’ ಎಂದು ಪ್ರಖ್ಯಾತನಾದ [[ಕಾಳಿದಾಸ]]ನು [[ಸಂಸ್ಕೃತ]]ದಲ್ಲಿ ಬರೆದ ಏಳು ಅಂಕಗಳ [[ನಾಟಕ]]. ಜಗತ್ತಿನ ಶ್ರೇಷ್ಠ ಕವಿಗಳಲ್ಲಿ ಕಾಳಿದಾಸನೂ ಒಬ್ಬನೆನ್ನುವ ಸ್ಥಾನವನ್ನು ಗಳಿಸಿಕೊಟ್ಟ ನಾಟಕ. "ಕಾವ್ಯೇಷು ನಾಟಕಂ ರಮ್ಯಂ; ತತ್ರ ರಮ್ಯಾ ಶಾಕುಂತಲಾ" ಎಂದು ಹೊಗಳಿಸಿಕೊಂಡ ಶೃಂಗಾರರಸ ಪ್ರಧಾನವಾಗಿರುವ ಕೃತಿ. ಇದರ ಕಥಾವಸ್ತು ಕವಿಯ ಕಲ್ಪನೆಯಲ್ಲ; [[ವ್ಯಾಸ]]ನಿಂದ ರಚಿತವಾದ [[ಮಹಾಭಾರತ]]ದಲ್ಲಿ ಇದರ ಉಲ್ಲೇಖವಿದೆ. ಶಕುಂತಲೆ ಮತ್ತು ದುಷ್ಯಂತರ ಪ್ರೇಮ ಕಥೆಯಿದು.
 
Line ೪ ⟶ ೮:
===ನಾಟಕ ವಸ್ತು===
 
[[ಮೇನಕ|ಮೇನಕೆ]] ಮತ್ತು ವಿಶ್ವಾಮಿತ್ರರ[[ವಿಶ್ವಾಮಿತ್ರ]]ರ ಮಗಳಾಗಿ ಹುಟ್ಟಿ ಕಣ್ವರ[[ಕಣ್ವ]]ರ ಸಾಕುಮಗಳಾಗಿ ಆಶ್ರಮದಲ್ಲಿ ಹುಲ್ಲೆ-[[ನವಿಲು]], ಗಿಡ-ಬಳ್ಳಿಗಳೊಡನೆ ಒಂದಾಗಿ ಬೆಳೆದ ಶಕುಂತಲೆ (ಶಕುಂತಳೆ ಎಂಬ ಪ್ರಯೋಗವೂ ಕನ್ನಡದಲ್ಲಿದೆ), ದುಷ್ಯಂತನನ್ನು[[ದುಷ್ಯಂತ]]ನನ್ನು ಮೊದಲ ಬಾರಿ ಕಂಡಾಗ ಪ್ರೇಮಾಂಕುರವಾದದ್ದೂ ಗೊತ್ತಾಗದ ಮುಗ್ದೆ. ಬಳಿಕ ಪ್ರೇಮಪ್ರವಾಹಕ್ಕೆ ಸಿಕ್ಕಿ, ಅವನನ್ನು [[ಗಾಂಧರ್ವ ವಿವಾಹವಾಗಿವಿವಾಹ]]ವಾಗಿ, ಗರ್ಭಿಣಿಯಾಗುತ್ತಾಳೆ. ನಲ್ಲನ ವಿರಹದಲ್ಲಿ ಮೈಮರೆತಿರುವಾಗ ಬಂದ [[ದೂರ್ವಾಸ|ದುರ್ವಾಸರ]] ಶಾಪಕ್ಕೆ ಗುರಿಯಾಗುತ್ತಾಳೆ. ಪರಿಣಾಮವಾಗಿ, ತನ್ನನ್ನು ಅರಮನೆಗೆ ಕರೆಸಿಕೊಳ್ಳಲು ಮರೆತ ದುಷ್ಯಂತನ ಬಳಿ ತಾನೇ ಹೋದಾಗ, ಅಲ್ಲಿ ತಿರಸ್ಕೃತಳಾಗುತ್ತಾಳೆ. ಅಲ್ಲಿಂದ ತನ್ನ ತಾಯಿಯ ಸಹಾಯದಿಂದ ಮಾರೀಚಾಶ್ರಮವನ್ನು ಸೇರಿ, ಚಕ್ರವರ್ತಿಯ ಲಕ್ಷಣಗಳುಳ್ಳ ಮಗನನ್ನು ಹಡೆಯುತ್ತಾಳೆ.
 
 
Line ೯೫ ⟶ ೯೯:
''ಎರಡನೆಯ ಅಂಕ''
 
ಆಶ್ರಮದ ಋಷಿಗಳ ಕೋರಿಕೆಯಂತೆ ತೊಂದರೆ ಕೊಡುತ್ತಿರುವ ರಾಕ್ಷಸರಿಂದ ಯಾಗರಕ್ಷಣೆಗಾಗಿ ದುಷ್ಯಂತ ಆಶ್ರಮದಲ್ಲಿಯೇ ಇರಬೇಕಾಗುತ್ತದೆ. ಇದು ಅವನ ಮತ್ತು ಶಕುಂತಲೆಯ ನಡುವುನನಡುವಿನ ಪ್ರೇಮವು ಗಾಢವಾಗಲು ಸಹಾಯಕವಾಗುತ್ತದೆ. ಆದರೆ ರಾಜನ ತಾಯಿಯು ಮಾಡಲು ನಿರ್ಧರಿಸಿರುವ ಪುತ್ರಪಿಂಡಪಾಲನವ್ರತಕ್ಕೆ ಅರಮನೆಯಿಂದ ಕರೆಬರುತ್ತದೆ. ತನ್ನ ಪ್ರತಿನಿಧಿಯಾಗಿ ಮಿತ್ರ ಹಾಗೂ ವಿದೂಷಕ ಮಾಢವ್ಯನನ್ನು ಸಪರಿವಾರನಾಗಿ ಕಳುಹಿಸುತ್ತಾನೆ.
 
 
''ಮೂರನೆಯ ಅಂಕ''
 
ಯಾಗ ಮುಗಿದ ನಂತರ ವಿರಹವೇದನೆಯಿಂದ ಬಳಲುತ್ತಿರುವ ದುಷ್ಯಂತ ಶಕುಂತಲೆಯರು ಗಾಂಧರ್ವವಿಧಿಯಿಂದ ವಿವಾಹವಾಗುತ್ತಾರೆ. ಶಕುಂತಲೆಯನ್ನು ಬೇಗನೇ ತನ್ನಲ್ಲಿಗೆ ಕರೆಯಿಸಿಕೊಳ್ಳುವೆನೆಂದು ಭಾಷೆಯಿತ್ತು, ಅವಳ ಬೆರಳಿಗೆ ತನ್ನ ನಾಮಾಂಕಿತ ಉಂಗುರವನ್ನು ತೊಡಿಸಿ ರಾಜನು ಹಸ್ತಿನಾವತಿಗೆ[[ಹಸ್ತಿನಾಪುರ| ಹಸ್ತಿನಾವತಿ]]ಗೆ ಮರಳುತ್ತಾನೆ.
 
 
Line ೧೦೮ ⟶ ೧೧೨:
 
 
ಸೋಮತೀರ್ಥದಿಂದ ಮರಳಿ ಬಂದ ಕಣ್ವರು ಶಕುಂತಲೆಯು ಬಸುರಿಯಾಗಿರುವದನ್ನು ತಿಳಿಯುತ್ತಾರೆ. ಅವಳನ್ನು [[ಗೌತಮಿ]], [[ಶಾರ್ಙ್ಗರವ]] ಮತ್ತು ಶಾರದ್ವತರೊಡನೆ ಪತಿಗೃಹಕ್ಕೆಂದು ದುಷ್ಯಂತನಲ್ಲಿಗೆ ಕಳುಹಿಸಿಕೊಡುತ್ತಾರೆ.
 
 
Line ೧೧೮ ⟶ ೧೨೨:
''ಆರನೆಯ ಅಂಕ''
 
ಕಣ್ವಾಶ್ರಮದಿಂದ ದುಷ್ಯಂತನ ಅರಮನೆಗೆ ಬರುತ್ತಿರುವಾಗ ದಾರಿಯಲ್ಲಿ ಸಿಕ್ಕ ಶಚೀತೀರ್ಥಕ್ಕೆ ಶಕುಂತಲೆಯು ನಮಸ್ಕರಿಸುತ್ತಿದ್ದಾಗ ಅವಳ ಬೆರಳಿನಿಂದ ರಾಜನಿತ್ತ ಉಂಗುರವು ಜಾರಿ ಬಿದ್ದಿರುತ್ತದೆ. ಅದನ್ನು ಒಂದು ಮೀನು ನುಂಗಿದ್ದು, ಅದನ್ನು ಹಿಡಿದ ಬೆಸ್ತನೊಬ್ಬನು ಆ ಮೀನನ್ನು ಕತ್ತರಿಸಿದಾಗ ಉಂಗುರವು ಸಿಗುತ್ತದೆ. ಅದನ್ನು ಮಾರಲು ರಾಜಧಾನಿಯಲ್ಲಿ ಬೆಸ್ತನು ಪ್ರಯತ್ನಿಸುತ್ತಿದ್ದಾಗ ಅವನನ್ನು ಹಿಡಿದ ನಗರರಕ್ಷಕರು ಉಂಗುರವನ್ನು ದುಷ್ಯಂತನಿಗೆ ಕೊಡುವರು. ಅದನ್ನು ನೋಡುತ್ತಲೇ ದುರ್ವಾಸನ ಶಾಪ ವಿಮೋಚನೆಯಾಗಿ, ಅರಸನಿಗೆ ಶಕುಂತಲೆಯ ನೆನಪೆಲ್ಲಾ ಮರುಕಳಿಸುತ್ತದೆ. ತನ್ನ ಅಪರಾಧಕ್ಕೆ ಪಶ್ಚಾತ್ತಾಪ ಪಡುತ್ತಿರುವಾಗ, ತನ್ನನ್ನು ಪೀಡಿಸುತ್ತಿರುವ ರಾಕ್ಷಸರ ವಿರುದ್ಧ ಯುದ್ಧದಲ್ಲಿ ಸಹಾಯವನ್ನು ಯಾಚಿಸಿ ಇಂದ್ರನಿಂದ[[ಇಂದ್ರ]]ನಿಂದ ಕರೆಬರುತ್ತದೆ. ದುಷ್ಯಂತನು ಸ್ವರ್ಗಕ್ಕೆ[[ಸ್ವರ್ಗ]]ಕ್ಕೆ ತೆರಳುತ್ತಾನೆ.
 
 
''ಏಳನೆಯ ಅಂಕ''
 
ಯುದ್ಧದಲ್ಲಿ ಜಯವನ್ನು ಪಡೆದು, ಇಂದ್ರನಿಂದ ವಿಶೇಷವಾಗಿ ಸನ್ಮಾನಿತನಾದ ದುಷ್ಯಂತನು ಸ್ವರ್ಗದಿಂದ ಭೂಮಿಗೆ ಮರಳುತ್ತಿರುವಾಗ ನಡುವೆ ಹೇಮಕೂಟ ಪರ್ವತದಲ್ಲಿರುವ ಮಾರೀಚಾಶ್ರಮದಲ್ಲಿ ನಿಲ್ಲುವನು. ಅವನನ್ನು ಕರೆತಂದ ಇಂದ್ರಸಾರಥಿಯಾದ ಮಾತಲಿಯು, ಮಾರೀಚ ಮುನಿಗಳ ಸಮಯವನ್ನು ತಿಳಿದು ಬರಲು ಹೋಗುವನು. ಅಲ್ಲಿಯೇ ಅಶೋಕವೃಕ್ಷವೊಂದರಡಿಯಲ್ಲಿ ವಿಶ್ರಮಿಸುತ್ತಿದ್ದ ರಾಜನು ಸಿಂಹದ[[ಸಿಂಹ]]ದ ಮರಿಯೊಂದಿಗೆ ಆಟವಾಡುತ್ತಿರುವ ಬಾಲಕನನ್ನು ನೋಡುವನು. ಅರಸನಿಗೆ ಆ ಹುಡುಗನಲ್ಲಿ ಮಮತೆಯೂ ಕುತೂಹಲವೂ ಉಂಟಾಗುತ್ತದೆ. ಕ್ರಮೇಣ ಅವನು ತನ್ನ ಮಗನೆಂದು ಗೊತ್ತಾಗುತ್ತದೆ. ಅಷ್ಟರಲ್ಲಿ ಅಲ್ಲಿಗೆ ಬಂದ ಶಕುಂತಲೆಯನ್ನೂ ಕಾಣುತ್ತಾನೆ. ಮಾರೀಚಮಹರ್ಷಿಗಳ ಸಮ್ಮುಖದಲ್ಲಿ ದುಷ್ಯಂತ ಶಕುಂತಲೆಯರ ಪುನಸ್ಸಮಾಗಮವಾಗುತ್ತದೆ.
 
 
Line ೧೨೯ ⟶ ೧೩೩:
===ಕತೆಯ ಮೂಲ===
 
*ಸಂಸ್ಕೃತ ಮಹಾಭಾರತದ[[ಮಹಾಭಾರತ]]ದ ಆದಿಪರ್ವದ[[ಆದಿಪರ್ವ]]ದ ಮೊದಲಲ್ಲಿ ಬರುವ ಶಕುಂತಳೋಪಾಖ್ಯಾನವು ಸುಕ್ತಂಕರ್ ಪರಿಷ್ಕರಣದಲ್ಲಿ ಎಂಟು ಅಧ್ಯಾಯಗಳ ಮುನ್ನೂರೈದು ಶ್ಲೋಕಗಳಲ್ಲಿ ನಿರೂಪಿತವಾಗಿದೆ<ref> ಅವಲೋಕನ, ಪುಟ ೮, ಎಚ್ ಎಮ್ ಶಂಕರನಾರಾಯಣರಾವ್, ಬಸವಪ್ಪಶಾಸ್ತ್ರೀ ವಿರಚಿತ ಕರ್ಣಾಟಕ ಶಾಕುಂತಲ ನಾಟಕಂ, ಪ್ರಕಾಶಕ: ಶಾರದಾ ಮಂದಿರ, ರಾಮಾ ಅಯ್ಯರ್ ರಸ್ತೆ, ಮೈಸೂರು, ಸಂಪಾದಿತ ಕೃತಿಯ ಮೊದಲ ಪ್ರಕಾಶನ: ೧೯೭೩</ref>. ಇದೇ ಕಾಳಿದಾಸನ ಅಭಿಜ್ಞಾನ ಶಾಕುಂತಲಕ್ಕೆ ಮೂಲವೆಂದು ಸಾಮಾನ್ಯ ಅಭಿಪ್ರಾಯ.
 
 
*<ref>ಕಾವ್ಯ ಸಮೀಕ್ಷೆ, ಪುಟಗಳು ೪೩ ಮತ್ತು ೪೪, ಪ್ರೊ ತೀ ನಂ ಶ್ರೀಕಂಠಯ್ಯ, ಪ್ರ: ಕಾವ್ಯಾಲಯ, ಮೈಸೂರು, ಮೂರನೆಯ ಪ್ರಕಾಶನ: ೧೯೬೮</ref>ಬಂಗಾಲದಲ್ಲಿ ಪ್ರಚುರವಾಗಿರುವ ‘ಪದ್ಮಪುರಾಣ’ದ ಮಾತೃಕೆಗಳಲ್ಲಿ ಶಾಕುಂತಲೋಪಾಖ್ಯಾನದ ಬೇರೊಂದು ಪಾಠ ದೊರೆಯುತ್ತದೆ. ಇದರ ಕಥೆಗೂ ಕಾಳಿದಾಸನ ನಾಟಕಕ್ಕೂ ತುಂಬ ಸಾಮ್ಯ ಉದ್ದಕ್ಕೂ ಕಾಣಬರುತ್ತದೆ. ಅವುಗಳಲ್ಲಿ ಬಹು ಮುಖ್ಯವಾದದ್ದು ದುರ್ವಾಸರ ಶಾಪ.ಇದರಲವಾಗಿಯೇಇದರ ಫಲವಾಗಿಯೇ ಶಕುಂತಲೆಯ ನಿರಾಕರಣೆ. ಬೆಸ್ತನಿಂದಲೇ ಉಂಗುರ ದೊರೆಯುತ್ತದೆ. ಮಾರೀಚಾಶ್ರಮದಲ್ಲೇ, ಭರತನ[[ಭರತ]]ನ ಮೂಲಕವೇ ದಂಪತಿಗಳ ಸಮಾಗಮ.ಪ್ರಿಯಂವದೆ, ಶಾರ್ಙ್ಗರವ (ಸಂಗಿವರ), ಶಾರದ್ವತಾದಿಗಳೂ ಇಲ್ಲಿದ್ದಾರೆ. ಇನ್ನೂ ಹಲವು ಸಾಮ್ಯಗಳಿವೆ. ಈ ಕತೆಯೇ ಕಾಳಿದಾಸನಿಗೆ ಮೂಲವಸ್ತುವಾಗಿರಬೇಕೆಂದು ಪ್ರೊ ಹರದತ್ತ ಶರ್ಮಾ ಎಂಬವರು ಅಭಿಪ್ರಾಯಪಡುತ್ತಾರೆ. ಅವರ ಗುರುಗಳಾದ ಡಾ ವಿಂಟರ್ನಿಟ್ಸ್<ref>A History of Indian Literature, vol 1, p376 by Dr Moritz Winternitz</ref> ಅವರೂ ಹೀಗೆಯೇ ಅಭಿಪ್ರಾಯಪಡುತ್ತಾರೆ.
 
ಈ ಅಭಿಪ್ರಾಯದ ಬಗ್ಗೆ ತೀ ನಂ ಶ್ರೀಕಂಠಯ್ಯನವರು ತಮ್ಮ 'ಕಾವ್ಯ ಸಮೀಕ್ಷೆ'ಯಲ್ಲಿ, ಪದ್ಮಪುರಾಣದ ಕಾಲವು ಅನಿಶ್ಚಿತವೆಂಬುದು ನಿಜವಾದರೂ, ಈ ಕಥೆ ಕಾಳಿದಾಸನಿಗೆ ಮಾತೃಕೆಯಾಗುವಷ್ಟು ಪ್ರಾಚೀನವಲ್ಲವೆಂದು ತೋರುತ್ತದೆ, ಎನ್ನುತ್ತಾರೆ.
Line ೧೪೬ ⟶ ೧೫೦:
*ಕರ್ನಾಟಕ ಶಾಕುಂತಲ ನಾಟಕಂ, ಅನುವಾದಕ: [[ಬಸವಪ್ಪಶಾಸ್ತ್ರೀ]], ಸಂಪಾದಕ: ಎಚ್ ಎಮ್ ಶಂಕರನಾರಾಯಣರಾವ್, ಪ್ರಕಾಶಕ: ಶಾರದಾ ಮಂದಿರ, ರಾಮಾ ಅಯ್ಯರ್ ರಸ್ತೆ, ಮೈಸೂರು, ಸಂಪಾದಿತ ಕೃತಿಯ ಮೊದಲ ಪ್ರಕಾಶನ: ೧೯೭೩.
 
*ಕನ್ನಡ ಅಭಿಜ್ಞಾನ ಶಾಕುಂತಳ, ಅನುವಾದಕ: [[ಎಸ್ .ವಿ .ಪರಮೇಶ್ವರ ಭಟ್ಟ]], ಪ್ರಕಾಶಕ: ಗೀತಾ ಬುಕ್ ಹೌಸ್,ಕೃಷ್ಣರಾಜೇಂದ್ರ ವೃತ್ತ, ಮೈಸೂರು, ಮೊದಲ ಪ್ರಕಾಶನ: ೧೯೫೮.
 
*ಅಭಿಜ್ಞಾನ ಶಾಕುಂತಲಮ್, ಅನುವಾದಕ: [[ಚುರಮರಿ ಶೇಷಗಿರಿರಾಯರು]], ೧೮೭೦
Line ೧೫೭ ⟶ ೧೬೧:
*ಬಂಗಾಲಿಯಲ್ಲಿ: ೧) ಶಕುಂತಲ - ಈಶ್ವರ ಚಂದ್ರ ವಿದ್ಯಾಸಾಗರ್ - ೧೮೫೪
 
* ೨) ಶಕುಂತಲ - ಅಬನೀಂದ್ರನಾಥ ಟಾಗೋರ್ - ೧೮೯೫
 
* ೩) ಅಭಿಜ್ಞಾನ್ ಶಾಕುಂತಲ್ - ಅಮುಲ್ಯ ಚಂದ್ರ ಸೆನ್ - ೧೯೬೦
 
*ಹಿಂದಿಯಲ್ಲಿ: ಅಭಿಜ್ಞಾನ್ ಶಾಕುನ್ತಲಮ್ - ಅಶೊಕ್ ಕೌಶಿಕ್ - ಪ್ರ: ಡೈಮಂಡ್ ಬುಕ್ಸ್, - ೨೦೧೦