ಕ್ರೈಸ್ಟ್ ಯೂನಿವರ್ಸಿಟಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೮ ನೇ ಸಾಲು:
ಯುಜಿಸಿ ಪ್ರಾಯೊಜಿತ ನ್ಯಾಶನಲ್ ಅಸೆಸ್ಮೆಂಟ್ ಆಂಡ್ ಅಕ್ರೆಡಿಟೇಶನ್ ಕೌಂಸಿಲ್ (ನ್ಯಾಕ್)ನಿಂದ ಅತ್ಯುತ್ತಮ ಶೈಕ್ಷಣಿಕ ಸಂಸ್ಥೆ ಎಂದು ಮಾನ್ಯತೆ ಪಡೆದ ಕರ್ನಾಟಕ ರಾಜ್ಯದ ಮೊಟ್ಟ ಮೊದಲ ಕಾಲೇಜೆಂಬ ಗರಿಮೆ ಕ್ರೈಸ್ಟ್ ಕಾಲೇಜಿಗಿದೆ. ೧೯೯೮ರಲ್ಲಿ ಮೊದಲ ಬಾರಿ ಆನಂತರ ೨೦೦೫ರಲ್ಲಿ ಮತ್ತೊಮ್ಮೆ ನ್ಯಾಕ್ ಮಾನ್ಯತೆಯನ್ನು ಈ ಸಂಸ್ಠೆ ಪಡೆದಿದೆ. ಪ್ರಸ್ತುತ ನ್ಯಾಕ್ ನಿಂದ ಏ ಪ್ಲಸ್ (A+) ಅತ್ಯುನ್ನತೆ ದರ್ಜೆಯನ್ನು ಪಡೆದಿರುವ ಶೈಕ್ಷಣಿಕ ಸಂಸ್ಥೆಯು ಇದಾಗಿದ್ದು " ಶ್ರೇಷ್ಠತೆಗೆ ಸಂಭಾವ್ಯತೆ" ಇರುವ ಕಾಲೇಜ್ ಎಂದು ಗುರುತಿಸಲ್ಪಟ್ಟಿತ್ತು.
 
ಇದಷ್ಟೆ ಅಲ್ಲದೆ ೨೦೧೪ನೇ ಇಸವಿಯಲ್ಲಿ ಜನಪ್ರಿಯ ಆಂಗ್ಲ ವಾರಪತ್ರಿಕೆ ಇಂಡಿಯಾ ಟುಡೆ-ನೀಲ್ಸ್ ಸಂಸ್ಥೆ ದೇಶಾದ್ಯಂತ ವಿದ್ಯಾಸಂಸ್ಥೆಗಳ ಶೈಕ್ಷಣಿಕ ಗುಣಮಟ್ಟಕ್ಕೆ ಸಂಬಂಧ ಪಟ್ಟಂತೆ ನಡೆಸಿದ ಜಂಟಿ ಸಮೀಕ್ಷೆಯ ಪ್ರಕಾರ ಕ್ರೈಸ್ಟ್ ಯೂನಿವರ್ಸಿಟಿಯು ಬಿಬಿಎ (BBA) ಪದವಿ ಶಿಕ್ಷಣ ನೀಡುವ ಭಾರತದ ಎಲ್ಲಾ ಸಂಸ್ಥೆಗಳ ಪೈಕಿ ಅಗ್ರಗಣ್ಯ ಎಂದು ಘೋಷಿತವಾಯಿತು. ಹಾಗೆಯೆ ೨೦೧೫ರಲ್ಲಿ ಮಲಯಾಳ ಮನೊರಮ ಪ್ರಕಾಶನದಿಂದ ಪ್ರಕಟವಾಗುವ ಪ್ರಸಿದ್ಧ ಆಂಗ್ಲ ವಾರಪತ್ರಿಕೆ "ದ ವೀಕ್" ಮತ್ತು "ಹಂಸ" ಸಂಸ್ಥೆ ದೇಶಾದ್ಯಂತ ಜಂಟಿಯಾಗಿ ನಡೆಸಿದ ಸಮೀಕ್ಷೆಯ ವರದಿ ಪ್ರಕಾರ ಕ್ರೈಸ್ಟ್ ಯೂನಿವರ್ಸಿಟಿ ಕಲಾ ಕಾಲೇಜುಗಳ ಪೈಕಿ ೯ನೇ ಸ್ಥಾನದಲ್ಲಿ, ವಾಣಿಜ್ಯ ಕಾಲೇಜುಗಳ ಪೈಕಿ ೬ನೇ ಸ್ಥಾನದಲ್ಲಿ ಹಾಗು ವಿಜ್ನಾನ ಕಾಲೇಜುಗಳ ಪೈಕಿ ೮ನೇ ಸ್ಥಾನದಲ್ಲಿದೆ. ಇದಲ್ಲದೆ ದಕ್ಷಿಣ ವಲಯದಲ್ಲಿರುವ ಖಾಸಗಿ ಕಾನೂನು ಕಾಲೇಜುಗಳ ಪೈಕಿ ಕ್ರೈಸ್ಟ್ ಯೂನಿವರ್ಸಿಟಿಯ "ಸ್ಕೂಲ್ ಆಫ್ ಲಾ" ಅಗ್ರ ಸ್ಥಾನದಲ್ಲಿದ್ದು ಖಾಸಗಿ ಹೊಟೇಲ್ ಮ್ಯಾನೆಜ್ಮೆಂಟ್ ಕಾಲೇಜುಗಳ ಪೈಕಿ ೨ನೆ ಸ್ಥಾನದಲ್ಲಿದೆ. ಅಖಿಲ ಭಾರತೀಯ ಮಟ್ಟದಲ್ಲಿ ಖಾಸಗಿ ಹೊಟೇಲ್ ಮ್ಯಾನೆಜ್ಮೆಂಟ್ ಕಾಲೇಜುಗಳ ಪೈಕಿ ಕ್ರೈಸ್ಟ್ ಯೂನಿವರ್ಸಿಟಿಯು ೪ನೇ ಸ್ಥಾನದಲ್ಲಿದೆ.
 
==ಉಪಕುಲಪತಿಗಳು==