ದ್ರೌಪದಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಲೇಖನಕ್ಕೆ ಮತ್ತಷ್ಟು ವಿಷಯವನ್ನು ಸೇರಿಸಲಾಗಿದೆ.
ಲೇಖನಕ್ಕೆ ಮತ್ತಷ್ಟು ವಿಷಯವನ್ನು ಸೇರಿಸಲಾಗಿದೆ.
೩೬ ನೇ ಸಾಲು:
ಯುಧಿಷ್ಠಿರ ದ್ಯೂತದಲ್ಲಿ ದ್ರೌಪದಿಯನ್ನು ಸೋತಾಗ ದುರ್ಯೋದನ ರಾಜಸಭೆಗೆ ಬರುವಂತೆ ಆಗ್ರಹಿಸಿ ಅವಳನ್ನು ಕರೆತರಲು ಪ್ರತಿಕಾಮಿಯೆಂಬ ದೂತನನ್ನು ಕಳುಹಿಸುತ್ತಾರೆ. ಆಗ ದ್ರೌಪದಿ ಇಡೀ ಸಭೆಯ ಉದ್ದೇಶವನ್ನು ಪ್ರಶ್ನಿಸುತ್ತಾಳೆ. ಅವಳು ಕೇಳುವ ಪ್ರಶ್ನೆ ಮಾರ್ಮಿಕವಾದುದು. ಮೊದಲು ಪಾಂಡವರೆಲ್ಲ ಸೋತು, ನಂತರ ನನ್ನನ್ನು ಪಣವಾಗಿಟ್ಟರೋ? ಇಲ್ಲವೆ ಮೊದಲೆ ನನ್ನನ್ನು ಪಣವಾಗಿಟ್ಟು ಸೋತರೋ? ಅವರಿಂದ ಉತ್ತರವನ್ನು ಕೇಳಿಕೊಂಡು ಬಾ ಎಂದು ವಾಪಾಸು ಕಳುಹಿಸುತ್ತಾಳೆ. ಅವಳ ಪ್ರಶ್ನೆಗೆ ಉತ್ತರ ಹೇಳುವ ವ್ಯವಧಾನ, ಸಹನೆ ಅಲ್ಲಿರುವ ಯಾರಿಗೂ ಇರದೇ ಹೋದುದರಿಂದ, ದುಶ್ಯಾಸನ ದ್ರೌಪದಿಯನ್ನು ಕರೆತರಲು ಬರುತ್ತಾನೆ. ಆಗ ದ್ರೌಪದಿ ತಾನು ಋತುಮತಿಯಾಗಿರುವುದರಿಂದ ರಾಜಸಭೆಗೆ ಬರುವುದು ತರವಲ್ಲ ಎಂದು ಮೈದುನನಾದ ದುಶ್ಯಾಸನನಿಗೆ ಹೇಳಿದಾಗ, ಅವನು ಕೌರವನ ಆಸ್ಥಾನದಲ್ಲಿ ಫಲವತಿಯಾಗು ನಡೆ ಎಂದು ಬಲವಂತವಾಗಿ ಅವಳನ್ನು ಎಳೆತರುತ್ತಾನೆ. ಇದರಿಂದ ಆಕ್ರೋಶಗೊಂಡ ದ್ರೌಪದಿ ಗಂಡಂದಿರಿಗೆ ರಾಜಸಭೆಯಲ್ಲೇ ಛೀಮಾರಿ ಹಾಕುತ್ತಾಳೆ. ಗಂಡರೈವರು ಒಬ್ಬಳನಾಳಲಾರಿರಿ? ನೀವು ಗಂಡರೋ ಇಲ್ಲ ಭಂಡರೋ? ಎಂದು ಹಂಗಿಸಿ ಪ್ರತಿಭಟಿಸುತ್ತಾಳೆ. ತನ್ನ ವಾಕ್ ಪ್ರಹಾರದಿಂದ ಭೀಷ್ಮ, ದ್ರೋಣಾದಿಗಳನ್ನು ತರಾಟೆಗೆ ತೆಗೆದು ಕೊಳ್ಳತ್ತಾಳೆ. ರಾಜಸಭೆಯಲ್ಲಿ ದುಶ್ಯಾಸನ ದ್ರೌಪದಿಯ ಸೀರೆಯನ್ನು ರಳೆಯ ತೊಡಗಿದಾಗ ಪಾಂಡವರು, ಭೀಷ್ಮ, ದ್ರೋಣಾದಿಗಳು ಅಸಹಾಕರಾಗಿ ತಲೆ ತಗ್ಗಿಸುತ್ತಾರೆ. ಕಡೆಗೆ ಶ್ರೀಕೃಷ್ಣ ದ್ರೌಪದಿಯ ಮಾನವನ್ನು ಕಾಪಾಡುತ್ತಾನೆ. ಈ ಘಟನೆಯ ನಂತರ ಪಾಂಡವರೊಂದಿಗೆ ದ್ರೌಪದಿ ವನವಾಸಕ್ಕೆ ಹೋಗಬೇಕಾಗಿ ಬರುತ್ತದೆ.
 
==ಕುಮಾರವ್ಯಾಸ ಬಣ್ಣನೆ==
ಪಾಂಚಾಲ ದೇಶದ ಅರಮನೆಯಲ್ಲಿ ದ್ರೌಪದಿಯ ಸ್ವಯಂವರ ನಡೆಯುತ್ತಿದೆ. ನಾನಾ ದೇಶದ ಅರಸುಗಳು ನೆರೆದಿದ್ದಾರೆ. ಕಿಕ್ಕಿರಿದ ಅರಮನೆಯ ಸಭಾಂಗಣದಲ್ಲಿ ನಡೆದು ಬರುವ ಕೃಷ್ಣೆಯ ರೂಪನ್ನು ಕುಮಾರವ್ಯಾಸ ಬಣ್ಣಿಸುವ ಬಗೆ ಹೀಗಿದೆ:
<poem>
ಮೊಲೆಗಳಲಿ ಸಿಲುಕಿದೊಡೆ ನೋಟಕೆ
ಬಳಿಕ ಪುನರಾವರ್ತಿಯೇ ಕಂ
ಗಳಿಗೆ ಕಾಮಿಸಿದರೆಯು ನಿಮಿಷಕೆ ಸಮಯವೆಲ್ಲಿಹುದು
ಲಲಿತ ಮೈಕಾಂತಿಗಳೊಳದ್ದರೆ
ಮುಳುಗಿ ತೆಗೆವವರಾರು ಜಘನ
ಸ್ಥಳಕೆ ಮುರಿದರೆ ಮರಳದಲೆ ಕಂಗಳಿಗೆ ಹುಸಿಯೆಂದ
 
ಅಸಿಯ ನಡುವಿನ ನಿಮ್ನ ನಾಭಿಯ
ಮಸುಳ ಬಾಸೆಯ ತೋರ ಮೊಲೆಗಳ
ಮಿಸುಪ ತೊಡೆಗಳ ಚಾರು ಜಂಘೆಯ ಚರಣಪಲ್ಲವದ
ಎಸಳುಗಂಗಳ ತೊಳಗಿ ಬೆಳಗುವ
ಮುಸುಡ ಕಾಂತಿಯ ಮುರಿದ ಕುರುಳಿನ
ಬಿಸಜ ಗಂಧಿಯ ರೂಪನಭಿವರ್ಣಿಸುವಡಿರೆಂದ
 
ದ್ರೌಪದಿಯೊಂದಿಗಿರುವ ಸಖಿಯರಾದರೂ ಅಲ್ಪಸುಂದರಿಯರೇ? ಊಹುಂ!
 
ತೋರ ಮೊಲೆಗಳ ನಲಿವನಡು ಪೊರ
ವಾರಗಳ ನುಣ್ದೊಡೆಯ ಕಿರುದೊಡೆ
ಯೋರಣದ ಹಾವುಗೆಯ ಹೆಜ್ಜೆಯ ಹಂಸೆಗಳ ಗತಿಯ
ನೀರೆಯರ ಮೈಗಂಪುಗಳ ತನಿ
ಸೂರೆಗೆಳಸುವ ತುಂಬಿಗಳ ಕೈ
ವಾರಗಳ ಕಡು ಗರುವೆಯರ ನೆರೆದುದು ಸಖೀನಿವಹ
 
ತೋರ ಮೊಲೆಗಳ ದಂತಿ ಘಟೆಗಳ
ಚಾರು ಜಘನದ ಜೋಡಿಸಿದ ಹೊಂ
ದೇರುಗಳ ಸುಳಿಗುರುಳುಗಳ ಝಲ್ಲರಿಗಳ ಝಾಡಿಗಳ
ಚಾರುನಯನದ ಚಪಲಗತಿಗಳ
ವಾರುವಂಗಳ ಮೇಲುವಸನದ
ಸಾರಸಿಂಧದ ಸೇನೆ ನಡೆದುದು ಸತಿಯ ಬಳಸಿನಲಿ
</poem>
ಇಂತಹ ಸುಂದರಿಯನ್ನು ಅರ್ಜುನ ಗೆಲ್ಲುತ್ತಾನೆ. ದ್ರೌಪದಿ ವೀರ ಪಾಂಡವರ ಸತಿಯಾಗುತ್ತಾಳಾದರೂ ಜೀವಿತದುದ್ದಕ್ಕೂ ಕೊರಗುಗಳನ್ನನುಭವಿಸುತ್ತಿರುತ್ತಾಳೆ. ಮೊದಲೇ ಐವರು ಪತಿಯರನ್ನು ಸಂಭಾಳಿಸಬೇಕಾದ ಕಷ್ಟ. ಅರ್ಜುನನ ಮೇಲೆ ಅವಳಿಗೆ ಹೆಚ್ಚಿನ ಅನುರಕ್ತಿಯಿದ್ದರೂ ಅರ್ಜುನನ ಪ್ರೀತಿ ಮತ್ತೀರ್ವರು ಸತಿಯರಿಗೆ ಹಂಚಿಹೋಗಿದೆ. ಭೀಮನಿಗೂ ಸಾಲಕಟಂಕಟಿಯೆಂಬ ಮತ್ತೊಬ್ಬ ಹೆಂಡತಿ. ದ್ಯೂತದಲ್ಲಿ ಸೋತ ಗಂಡನಿಂದಾಗಿ ದ್ರೌಪದಿ ಕುರುಸಭಾಮಧ್ಯದಲ್ಲಿ ಬೆತ್ತಲಾಗಬೇಕಾಗುತ್ತದೆ. "ಐವರಿಗೆ ಹೆಂಡತಿಯಾದವಳು ನಮಗೂ ಆಗಲಾರೆಯಾ?" ಎಂಬಂತಹ ಕೌರವರ ಕುಹಕದ ಮಾತುಗಳಿಗೆ ಕಿವಿಯಾಗಬೇಕಾಗುತ್ತದೆ. ನಂತರ ಗಂಡಂದಿರೊಂದಿಗೆ ವನವಾಸ-ಅಜ್ಞಾತವಾಸಗಳನ್ನನುಭವಿಸಬೇಕಾಗಿ ಬರುತ್ತದೆ.
== [[ಸದಸ್ಯ:Bschandrasgr/ಪರಿಚಯ|ನೋಡಿ]] ==
[[ಚರ್ಚೆಪುಟ:ದ್ರೌಪದಿ|ಚರ್ಚೆ]]
"https://kn.wikipedia.org/wiki/ದ್ರೌಪದಿ" ಇಂದ ಪಡೆಯಲ್ಪಟ್ಟಿದೆ