ಅಂಚೆ ವ್ಯವಸ್ಥೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು VASANTH S.N. ಅಂಚೆ ವೈವಸ್ಥೆ ಪುಟವನ್ನು ಅಂಚೆ ವ್ಯವಸ್ಥೆ ಕ್ಕೆ ಸರಿಸಿದ್ದಾರೆ: ಕಾಗುಣಿತ ಸರಿಪಡಿಸುವಿಕೆ
No edit summary
೭ ನೇ ಸಾಲು:
 
=='''ಪೆನ್ನಿ ಪೋಸ್ಟ್'''==
[[File:Postal sorting office at Sion.JPG|300px|thumb|Postal wagons at the postal sorting facility in [[Sion, Switzerland]]. Mail between regional cities is transported by rail, to be delivered by postal bus, vans and cycles at a local level.]]
 
*1680 ರಲ್ಲಿ ಲಂಡನ್ನಿನಲ್ಲಿ ಜನ್ಮವೆತ್ತಿದ ಪೆನ್ನಿ ಅಂಚೆ ಎಂಬ ವ್ಯವಸ್ಥೆ ಅಂಚೆ ಇತಿಹಾಸದಲ್ಲಿ ಒಂದು ಕ್ರಾಂತಿಯನ್ನೇ ತಂದಿತು. ಇದಕ್ಕೆ ಮುಂಚೆ ಫ್ರಾನ್ಸಿನ 14ನೆಯ ಲೂಯಿ ದೊರೆ ಮಿತಪ್ರಮಾಣದಲ್ಲಿ ಇಂಥ ಕ್ರಮವೊಂದನ್ನು ಪ್ರಯೋಗಿಸಿದ್ದ. ಲಂಡನ್ನಿನ ವಿಲಿಯಂ ಡಾಕ್ರಾ ಎಂಬ ವ್ಯಾಪಾರಿ ಫ್ರಾನ್ಸಿನ ಪ್ರಯೋಗದಿಂದ ಸ್ಫೂರ್ತಿಪಡೆದು ಈ ಪೆನ್ನಿ ಅಂಚೆಯನ್ನು ಸ್ಥಾಪಿಸಿದ. ಲಂಡನ್ನಿನಲ್ಲಿ ಒಂದು ಎಡೆಯಿಂದ ಇನ್ನೊಂದು ಎಡೆಗೆ ಸಾಗಿಸಬೇಕಾದ ಒಂದು ಪೌಂಡ್ ತೂಕದವರೆಗಿನ ಎಲ್ಲ ಲಕೋಟೆಗಳ ಮೇಲೆಯೂ ಒಂದು ಪೆನ್ನಿಯ ದರದ ಶುಲ್ಕ ವಿಧಿಸಿದ.
*ಈ ಶುಲ್ಕವನ್ನು ಮೊದಲೇ ಕೊಡಬೇಕಾಗಿತ್ತು. ಹತ್ತು ಪೌಂಡ್ ಮೌಲ್ಯದವರೆಗೆ ಲಕೋಟೆಗಳನ್ನು ವಿಮೆ ಮಾಡಿಸಬಹುದಾಗಿತ್ತು. ಲಂಡನ್ನಿನ ಹಲವು ಕಡೆಗಳಲ್ಲಿ ಪತ್ರಗಳನ್ನು ಸಂಗ್ರಹಿಸಲು ನೂರಾರು ಕೇಂದ್ರಗಳು ತೆರೆಯಲ್ಪಟ್ಟವು. ಇವುಗಳನ್ನು ವಿಂಗಡಿಸಿ, ಇವುಗಳ ಮೇಲೆ ತಾರೀಖಿನ ಮುದ್ರೆ ಒತ್ತುವುದಕ್ಕಾಗಿಯೇ ಆರು ಕೇಂದ್ರಗಳು ಸ್ಥಾಪಿತವಾದುವು. ಲಂಡನ್ ನಗರದೊಳಗೆ ದಿನಕ್ಕೆ 4-12ರವರೆಗೆ ಬಟವಾಡೆಗಳಾಗುತ್ತಿದ್ದವು. ಲಂಡನ್ನಿನಿಂದ ಆಚೆಗೂ ಹತ್ತು ಹದಿನೈದು ಮೈಲಿಗಳ ಫಾಸಲೆಯಲ್ಲಿ ದಿನಕ್ಕೆ ಒಂದು ಸಾರಿ ಬಟವಾಡೆಯ ಸೌಲಭ್ಯವೇರ್ಪಟ್ಟಿತು.
Line ೧೨ ⟶ ೧೪:
 
=='''ಮಜಲುಗಾಡಿ, ರೈಲು ಅಂಚೆ'''==
 
*18ನೆಯ ಶತಮಾನದಲ್ಲಿ ಅಂಚೆ ವ್ಯವಸ್ಥೆ ಬಹಳವಾಗಿ ಪ್ರಗತಿ ಹೊಂದಿತು. ರಸ್ತೆಗಳು ಅಭಿವೃದ್ಧಿ ಹೊಂದಿದವು. ವೇಗವಾಗಿ ಚಲಿಸುವ ಮಜಲುಗಾಡಿ (ಸ್ಟೇಜ್ಕೋಚ್) ಪ್ರಚಾರಕ್ಕೆ ಬಂತು. ಮೊದಮೊದಲು ಅಂಚೆ ಸಾಮಗ್ರಿಗಳನ್ನು ಸಾಗಿಸಲು ಅಂಚೆ ಸಿಬ್ಬಂದಿಯನ್ನೇ ಬಳಸಿಕೊಳ್ಳಲಾಗುತ್ತಿತ್ತು. ಮಜಲು ಗಾಡಿಗಳ ಮೂಲಕವಾಗಿ ಕಳ್ಳತನದಲ್ಲಿ ಪತ್ರಗಳು ಸಾಗಲಾರಂಭವಾಗಿ, ಅಂಚೆ ಕಚೇರಿಯ ವರಮಾನ ಬಹಳಮಟ್ಟಿಗೆ ತಗ್ಗಿತು. ಆಗ ಅಂಚೆ ಕಚೇರಿಯೂ ಕೂಡ ಮಜಲುಗಾಡಿಯ ಪ್ರಯೋಜನವನ್ನು ಪಡೆಯಲಾರಂಭಿಸಿತು.
*18ನೆಯ ಶತಮಾನದ ಕೊನೆಯ ವೇಳೆಗೆ ಮಜಲುಗಾಡಿಯ ಉಪಯುಕ್ತತೆ ತುಂಬ ಮನದಟ್ಟಾಯಿತಲ್ಲದೆ, ಅದು ಬಹಳವಾಗಿ ಪ್ರಚಾರಕ್ಕೆ ಬಂದಿತು. 19ನೆಯ ಶತಮಾನದ ದೊಡ್ಡ ಬೆಳೆವಣಿಗೆಯೆಂದರೆ ರೈಲ್ವೆ ಅಂಚೆ ವ್ಯವಸ್ಥೆ. 1830ರಲ್ಲಿ ಇಂಗ್ಲೆಂಡಿನಲ್ಲಿ ರೈಲು ಓಡಾಟದ ವ್ಯವಸ್ಥೆಯ ಆರಂಭವಾಯಿತು. ರೈಲಿನ ಮೂಲಕ ಅಂಚೆಯನ್ನು ಸಾಗಿಸುವ ಪದ್ಧತಿ ಬಳಕೆಗೆ ಬಂದಿತು. 1830ರಲ್ಲಿ ಈ ಬಗ್ಗೆ ಒಂದು ಶಾಸನ ಜಾರಿಗೆ ಬಂದಿತು. ಅಂಚೆಯ ಅಧಿಕಾರಿಗಳ ಅಪೇಕ್ಷೆಯಂತೆ ಅಂಚೆಯ ಪದಾರ್ಥಗಳನ್ನು ಸಾಗಿಸಲು ಎಲ್ಲ ರೈಲುಗಾಡಿಗಳಲ್ಲೂ ಸೌಲಭ್ಯವನ್ನೊದಗಿಸಿ ಕೊಡುವುದಲ್ಲದೆ, ಅಗತ್ಯವಾದಲ್ಲಿ ಪತ್ರಗಳ ವಿಂಗಡಣೆಗಾಗಿ ಒಂದು ಇಡಿಯ ಗಾಡಿಯನ್ನೇ ಮೀಸಲಾಗಿಡಬೇಕೆಂಬುದಾಗಿಯೂ ಈ ಶಾಸನದಲ್ಲಿ ವಿಧಿಸಲಾಯಿತು.
Line ೧೭ ⟶ ೨೦:
 
=='''ವಿಮಾನ ಸೌಲಭ್ಯ'''==
[[File:Watermark elephant head.jpg|left|framed|Early stamps of [[India]] were [[watermark]]ed with an elephant's head.]]
 
*19ನೆಯ ಶತಮಾನದ ಆರಂಭದಲ್ಲಿ ಜನ್ಮ ತಳೆದ ಉಗಿ ಜಹಜುಗಳೂ 20 ಶತಮಾನದ ಎರಡನೆಯ ದಶಕದಲ್ಲಿ ಬಂದ ವಿಮಾನ ವ್ಯವಸ್ಥೆಯೂ ಅಂಚೆಯ ಸೌಕರ್ಯವನ್ನು ಹೆಚ್ಚಿಸಲು ಬಹಳ ಮಟ್ಟಿಗೆ ನೆರವಾದುವು. ವಿಮಾನ ಸಂಚಾರಗಳು ಮೊದಮೊದಲು ಅಷ್ಟೇನೂ ಕ್ರಮಬದ್ಧವಾಗಿ ಇರಲಿಲ್ಲ. ಆದರೆ ಮೊದಲನೆಯ ಮಹಾಯುದ್ಧದ ಕಾಲದಲ್ಲಿ ವಿಮಾನ ವ್ಯವಸ್ಥೆ ತುಂಬ ಅಭಿವೃದ್ಧಿ ಹೊಂದಿದುದರ ಫಲವಾಗಿ ಯುದ್ಧಾನಂತರದ ಕಾಲದಲ್ಲಿ ವಿಮಾನದ ಅಂಚೆ ಹೆಚ್ಚಾಗಿ ಬೆಳೆಯಿತು. ಯುರೋಪ್ ಏಷ್ಯ ಅಮೆರಿಕಗಳಲ್ಲೆಲ್ಲ ಈ ವ್ಯವಸ್ಥೆ ವಿಸ್ತರಿಸಿತು.
*ಖಂಡಾಂತರ ವಿಮಾನ ಸಂಚಾರದಿಂದ ಅಂತಾರಾಷ್ಟ್ರೀಯ ಅಂಚೆ ವ್ಯವಸ್ಥೆಯ ಬೆಳೆವಣಿಗೆಗೆ ಅನುಕೂಲವಾಯಿತು. ಈಚಿನ ವರ್ಷಗಳಲ್ಲಿ ವಿಮಾನ ವ್ಯವಸ್ಥೆಯಲ್ಲಾಗಿರುವ ಕ್ರಾಂತಿಕಾರಕ ಪ್ರಗತಿಗಳಿಂದ ಇಂದು ವಿಮಾನ ಅಂಚೆ ಬಹಳ ಮಟ್ಟಿಗೆ ಪ್ರಚಾರಕ್ಕೆ ಬಂದಿದೆ. ಹಗುರವಾದ ಪತ್ರಗಳನ್ನೇ ಅಲ್ಲದೆ, ಲಕೋಟೆಗಳನ್ನೂ ಭಾಂಗಿಗಳನ್ನೂ ವಿಮಾನದಲ್ಲಿ ಸಾಗಿಸುವುದು ಹೆಚ್ಚು ಹೆಚ್ಚು ಸಾಧ್ಯವಾಗುತ್ತಿದೆ. ಎಲ್ಲೆಲ್ಲಿ ಶೀಘ್ರಸೇವೆಯೇ ಮುಖ್ಯವೋ ಅಲ್ಲೆಲ್ಲ ವಿಮಾನದ ಸೌಲಭ್ಯವನ್ನು ಹೆಚ್ಚು ಹೆಚ್ಚಾಗಿ ಪಡೆದುಕೊಳ್ಳಲಾಗುತ್ತಿದೆ.
"https://kn.wikipedia.org/wiki/ಅಂಚೆ_ವ್ಯವಸ್ಥೆ" ಇಂದ ಪಡೆಯಲ್ಪಟ್ಟಿದೆ