ಗರುಡ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ವಿಸ್ತರಣೆ
೧ ನೇ ಸಾಲು:
[[Image:Garuda_by_Hyougushi_in_Delhi.jpg|thumb|right|250px| ಗರುಡ ದೇವತೆ]]
 
ಗರುಡನು ಹಿಂದೂಧರ್ಮದಲ್ಲಿ ವಿಷ್ಣುವಿನ[[ವಿಷ್ಣು]]ವಿನ ವಾಹನವಾದ ದೇವತೆ. ಇವನು [[ವಿನತೆ]]ಯ ಮಗ.
 
== ಮಹಾಭಾರತದಲ್ಲಿ ಗರುಡ ==
ಭಾರತದಲ್ಲಿ ಗರುಡನಿಗೆ ಸಂಬಂಧಿಸಿದಂತೆ ಹಲವು ಪೌರಾಣಿಕ ಕಥೆಗಳಿವೆ. ಗರುಡ ಪಕ್ಷಿಗಳ ರಾಜ. ಗರುಡನ ಶಕ್ತಿ ಸಾಮರ್ಥ್ಯವನ್ನು ಮೆಚ್ಚಿದ [[ಮಹಾವಿಷ್ಣು]] ಅದನ್ನು ತನ್ನ ವಾಹನವನ್ನಾಗಿ ಮಾಡಿಕೊಂಡಿದ್ದಾನೆ. [[ಶಿಲ್ಪಕಲೆ]]ಯಲ್ಲಿ ಗರುಡನ ಆಕೃತಿ ಮನುಷ್ಯನಂತಿದ್ದು ಬಾಗಿದ ಕೊಕ್ಕು ಮತ್ತು ರೆಕ್ಕೆಗಳಿಂದ ಕೂಡಿರುತ್ತದೆ. ಇಂಥ ವಿಗ್ರಹಗಳನ್ನು ಹಲವು ವೈಷ್ಣವ ದೇವಾಲಯಗಳಲ್ಲಿ ಕಾಣಬಹುದು. ಗರುಡನಿಗೂ [[ನಾಗರಹಾವು]]ಗಳಿಗೂ ಇರುವ ಬದ್ಧ ದ್ವೇಷಕ್ಕೆ ಸಂಬಂಧಿಸಿದ ಕಥೆಗಳೂ ಉಂಟು. ಗರುಡ ಮತ್ತು [[ಸೂರ್ಯ]]ನ ಸಾರಥಿಯಾದ ಅರುಣ ಎಂಬುವರು [[ಕಶ್ಯಪ]]ಮುನಿ ಮತ್ತು ವಿನತೆಯರ ಮಕ್ಕಳು. ಇವರ ಮಲತಾಯಿ ಕದ್ರು, ಸರ್ಪಗಳ ತಾಯಿ. ಕಾರಣಾಂತರದಿಂದ ವಿನತೆ ಕದ್ರುವಿನ ದಾಸಿಯಾಗಿರಬೇಕಾದ ಸಂದರ್ಭ ಒದಗಿತು. ನಾಗರಾಜನು ಗರುಡನ ಬೆನ್ನುಹತ್ತಿ ಸವಾರಿ ಮಾಡಲು ಪ್ರಾರಂಭಿಸಿದ. ಇದರಿಂದ ಗರುಡನಿಗೆ ತುಂಬಾ ಅವಮಾನವಾದಂತಾಯಿತು. ತಾಯಿಯ ದಾಸ್ಯವನ್ನು ತೊಡೆದುಹಾಕಲು ಮಾರ್ಗವೇನೆಂದು ವಿಚಾರಿಸಿದ. [[ಸ್ವರ್ಗ]]ಲೋಕದಿಂದ [[ಅಮೃತ]]ವನ್ನು ಕದ್ರುವಿಗೆ ತಂದು ಕೊಟ್ಟರೆ ತಾಯಿಯ ದಾಸ್ಯ ನಿವಾರಣೆಯಾಗುವುದು ಎಂದು ತಿಳಿದುಬಂತು. ಆಗ ಗರುಡ ಸ್ವರ್ಗಲೋಕಕ್ಕೆ ಹೋಗಿ ಅಲ್ಲಿ ಅಮೃತ ಕಲಶದ ರಕ್ಷಕರಾದ [[ಗಂಧರ್ವ]]ರನ್ನು ಕೊಂದು, ಘಟಸರ್ಪಗಳನ್ನು ಸಂಹರಿಸಿ, [[ಇಂದ್ರ]]ನೊಡನೆ ಹೋರಾಡಿ ಕೊನೆಗೆ ಅಮೃತ ಕುಂಭವನ್ನು ತಂದು ಮಲತಾಯಿಗೆ ಕೊಟ್ಟು ದಾಸ್ಯ ಸಂಕಲೆಯಿಂದ ತಾಯಿಯನ್ನು ಬಿಡಿಸಿದ. ಇವನ ಪರಾಕ್ರಮಕ್ಕೆ ಮೆಚ್ಚಿ ಇಂದ್ರ ಇವನಿಗೆ ಸರ್ಪಗಳು ಆಹಾರವಾಗಿರುವಂತೆ ವರವನ್ನಿತ್ತ. ವಿಷ್ಣು ಇವನ ಸಾಹಸ ಸಾಮರ್ಥ್ಯಗಳಿಗೆ ಮಾರುಹೋಗಿ ಇವನಿಗೆ ಸಂಪರ್ಣನೆಂದು ಬಿರುದು ಕೊಟ್ಟು ತನ್ನ ವಾಹನವನ್ನಾಗಿ ಮಾಡಿಕೊಂಡುದಲ್ಲದೇ ತನ್ನ ಧ್ವಜದಲ್ಲಿ [[ಲಾಂಛನ]]ವನ್ನಾಗಿರಿಸಿಕೊಂಡ.[[ಮಹಾಭಾರತ]]ದ [[ಆದಿಪರ್ವ]]ದಲ್ಲಿ ಈ ಕತೆ ಬಹು ವಿಸ್ತಾರವಾಗಿ ಬಂದಿದೆ.
 
 
[[ವರ್ಗ: ಹಿಂದೂ ದೇವತೆಗಳು]]
ಮಹಾಭಾರತದಲ್ಲಿ ಭಗವಾನ ಮಹಾವಿಷ್ಣುವಿನ ವಾಹನ ಗರುಡ . ಹಾಗೂ
"https://kn.wikipedia.org/wiki/ಗರುಡ" ಇಂದ ಪಡೆಯಲ್ಪಟ್ಟಿದೆ