ಏಡ್ಸ್ ರೋಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
೧೦೮ ನೇ ಸಾಲು:
*ಸೊಳ್ಳೆ ಅಥವಾ ಇತರೆ ಕೀಟಗಳ ಕಡಿತದಿಂದ.
 
== ರೋಗನಿರ್ಣಯ ==
ಕೆಲವು ನಿರ್ಧಾರಿತ ಚಿಹ್ನೆಗಳು ಅಥವಾ ರೋಗ-ಲಕ್ಷಣಗಳ ಅಸ್ತಿತ್ವದ ಆಧಾರದ ಮೇಲೆ HIV ಸೋಂಕಿತ ವ್ಯಕ್ತಿಗೆ AIDS ಇದೆಯೇ ಎಂದು ಪರೀಕ್ಷಿಸಲಾಗುತ್ತದೆ. ಜೂನ್ 5, 1981ರಿಂದ, [[ಸೋಂಕುಶಾಸ್ತ್ರ|ಸಾಂಕ್ರಾಮಿಕ ರೋಗ]]ಗಳ ಬಗ್ಗೆ ಎಚ್ಚರದಿಂದಿರುವ ಬಗ್ಗೆ ಅನೇಕ ವ್ಯಾಖ್ಯಾನಗಳು ಬಂದಿವೆ, ಅಂತಹವುಗಳಲ್ಲಿ [[ಬಂಗುಯಿ ವ್ಯಾಖ್ಯಾನ|ಬಾಂಗುಯಿ ವ್ಯಾಖ್ಯಾನ]] ಮತ್ತು [[1994ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಏಡ್ಸ್‌ನ ವ್ಯಾಖ್ಯಾನವನ್ನು ವಿಸ್ತರಿಸಿದೆ.|1994ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ನೀಡಿದ AIDS ಪ್ರಕರಣದ ವ್ಯಾಖ್ಯಾನದ ವಿಸ್ತರಣೆ]] ಪ್ರಮುಖವಾದ್ದು. ಆದಾಗ್ಯೂ, ರೋಗಿಗಳನ್ನು ವೈದ್ಯಕೀಯ ತಪಾಸಣೆಗೊಳಪಡಿಸಿ ರೋಗಿ ಯಾವ ಹಂತದಲ್ಲಿದ್ದಾನೆಂದು ನಿರ್ಧರಿಸುವುದು ಈ ವ್ಯವಸ್ಥೆಗಳ ಉದ್ದೇಶವಾಗಿರಲಿಲ್ಲ, ಏಕೆಂದರೆ ಈ ವ್ಯವಸ್ಥೆಗಳು ಅಷ್ಟು ಸೂಕ್ಷ್ಮದ್ದೂ ಆಗಿರಲಿಲ್ಲ, ನಿರ್ದಿಷ್ಟವಾಗಿರಲೂ ಇಲ್ಲ. [[ವಿಶ್ವ ಆರೋಗ್ಯ ಸಂಸ್ಥೆ|ವಿಶ್ವ ಆರೋಗ್ಯ ಸಂಸ್ಥೆಯು]] ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಬಳಸಿದ ವೈದ್ಯಕೀಯ ಮತ್ತು ಪ್ರಯೋಗಲಾಯದ ವಿವರಗಳನ್ನು ಬಳಸಿಕೊಂಡು ಅಭಿವೃದ್ಧಿಶೀಲ ದೇಶಗಳಿಗಾಗಿ HIV ಸೋಂಕು ಮತ್ತು ರೋಗ ಮಾಪನ ವ್ಯವಸ್ಥೆಯನ್ನು ರೂಪಿಸಿತು, ಅಂತೆಯೇ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ [[ರೋಗ ತಡೆ ಮತ್ತು ನಿಯಂತ್ರಣ ಕೇಂದ್ರಗಳು|ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್]](CDC) ವಿಭಾಗ ವ್ಯವಸ್ಥೆಯನ್ನು ಬಳಸಲಾಯಿತು.
 
=== WHO ರೋಗ ಮಾಪನ ವ್ಯವಸ್ಥೆ ===
{{main|WHO Disease Staging System for HIV Infection and Disease}}
1990ರಲ್ಲಿ, [[ವಿಶ್ವ ಆರೋಗ್ಯ ಸಂಸ್ಥೆ]] (WHO)ಯು ಈ ಸೋಂಕುಗಳು ಮತ್ತು ಪರಿಸ್ಥಿತಿಗಳನ್ನು ಒಟ್ಟಿಗೆ ಸೇರಿಸಿ HIV-1 ಸೋಂಕಿತ ರೋಗಿಗಳಿಗಾಗಿ ಮಾಪನ ವ್ಯವಸ್ಥೆಯನ್ನು ಪರಿಚಯಿಸಿತು.<ref name="WHO">{{
cite journal
| author=World Health Organization
| title=Interim proposal for a WHO staging system for HIV infection and disease
| journal=WHO Wkly Epidem. Rec. | year=1990 | pages=221–228 | volume=65 | issue=29
| pmid=1974812
}}</ref> ಸೆಪ್ಟೆಂಬರ್ 2005ರಲ್ಲಿ ಇದನ್ನು ನವೀಕರಿಸಲಾಯಿತು. ಈ ಪೈಕಿ ಹೆಚ್ಚಿನ ಪರಿಸ್ಥಿತಿಗಳು [[ಅವಕಾಶವಾದಿ ಸೋಂಕು|ಅವಕಾಶವಾದಿ ಸೋಂಕುಗಳಿಂದ]] ಬಂದವುಗಳಾಗಿದ್ದು, ಆರೋಗ್ಯಕರ ಜನರಿಗೆ ಸುಲಭವಾಗಿ ಚಿಕಿತ್ಸೆ ನೀಡಬಹುದಾಗಿತ್ತು.
* ಹಂತ I: HIV ಸೋಂಕಿಗೆ [[ಯಾವುದೇ ರೋಗಲಕ್ಷಣಗಳಿಲ್ಲದ|ಯಾವುದೇ ರೋಗ-ಲಕ್ಷಣಗಳಿಲ್ಲ]] ಮತ್ತು AIDS ಎಂದು ವರ್ಗೀಕರಿಸಲಾಗಿಲ್ಲ.
* ಹಂತ II: [[ಲೋಳೆಯ ಪೊರೆ|ಚರ್ಮದ ಲೋಳೆ ಪೊರೆ]]ಯಲ್ಲಿನ ಸಣ್ಣ ಚಿಹ್ನೆಗಳು ಮತ್ತು ಪುನರಾವರ್ತಿತ [[ಮೇಲಿನ ಶ್ವಾಸಕೋಶ ವ್ಯೂಹ|ಮೇಲ್ಭಾಗದ ಶ್ವಾಸೇಂದ್ರಿಯ ಪ್ರದೇಶ]]ದ ಸೋಂಕುಗಳು ಇದರಲ್ಲಿ ಸೇರಿವೆ.
* ಹಂತ III: ವಿವರಿಸಿಲ್ಲದ ತಿಂಗಳಿಗೂ ಮೀರಿ [[ನಿರಂತರ, ಪದೇ ಪದೇ (ವೈದ್ಯಕೀಯ)|ಆಗಿಂದಾಗ್ಗೆ]] ಕಾಣಿಸಿಕೊಳ್ಳುವ [[ಅತಿಸಾರ ಭೇದಿ]], ತೀವ್ರ ಸ್ವರೂಪದ ಬ್ಯಾಕ್ಟೀರಿಯಾದ ಸೋಂಕುಗಳು ಮತ್ತು [[ಶ್ವಾಸಕೋಶ|ಶ್ವಾಸಕೋಶದ]] ಕ್ಷಯ ಇದರಲ್ಲಿ ಸೇರಿದೆ.
* ಹಂತ IV: [[ಮೆದುಳು|ಮಿದುಳಿನ]] [[ಟಾಕ್ಸೊಪ್ಲಾಸ್ಮೋಸಿಸ್|ಟೊಕ್ಸೊಪ್ಲಾಸ್ಮೋಸಿಸ್]], [[ಅನ್ನನಾಳ]] [[ಕ್ಯಾಂಡಿಡಿಯಾಸಿಸ್]], [[ಕಶೇರುಕದ ಶ್ವಾಸನಾಳ|ಶ್ವಾಸನಾಳ]]ದ ಸೋಂಕು, [[ಶ್ವಾಸನಳಿಕೆ|ಶ್ವಾಸನಳಿಕೆಯ]] ಅಥವಾ [[ಶ್ವಾಸಕೋಶ|ಶ್ವಾಸಕೋಶಗಳ]] ಸೋಂಕು ಮತ್ತು [[ಕಾಪೊಸಿಯ ಸಾರ್ಕೋಮಾ]]; ಈ ರೋಗಗಳು AIDS ಸೂಚನೆಗಳಾಗಿವೆ.
 
=== CDC ವರ್ಗೀಕರಣ ವ್ಯವಸ್ಥೆ ===
{{main|CDC Classification System for HIV Infection}}
AIDSಗೆ ಎರಡು ಪ್ರಮುಖ ವ್ಯಾಖ್ಯಾನಗಳಿದ್ದು, ಅವೆರಡನ್ನೂ [[ರೋಗ ತಡೆ ಮತ್ತು ನಿಯಂತ್ರಣ ಕೇಂದ್ರಗಳು|ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಟ್ ಪ್ರಿವೆನ್ಶನ್‌]] (CDC) ರೂಪಿಸಿದೆ.
ಮೊದಲಿನದ್ದರಲ್ಲಿ, AIDS ಜೊತೆಗೆ ಬರುವ ರೋಗಗಳನ್ನೂ ಸೇರಿಸಿಕೊಂಡು ಏಡ್ಸ್ ಕುರಿತು ವ್ಯಾಖ್ಯಾನ ನೀಡಲಾಗಿದೆ, ಉದಾಹರಣೆಗೆ HIVಯನ್ನು ಪತ್ತೆ ಹಚ್ಚಿದ ಮಂದಿಯೇ ವೈರಸ್‌ಗೆ ಮೂಲತಃ [[ಲಿಂಫಡಿನೋಪತಿ]] ರೋಗ ಎಂಬ ಹೆಸರಿಟ್ಟಿದ್ದರು.<ref name="MMWR1982a">{{cite journal
| author=Centers for Disease Control (CDC)
| title=Persistent, generalized lymphadenopathy among homosexual males.
| journal=MMWR Morb Mortal Wkly Rep. | year=1982 | pages=249–251 | volume=31| issue=19
| pmid=6808340
}}</ref><ref name="Barre">{{cite journal | author=Barré-Sinoussi F, Chermann JC, Rey F, et al. | title=Isolation of a T-lymphotropic retrovirus from a patient at risk for acquired immune deficiency syndrome (AIDS) | journal=Science | year=1983 | pages=868–871 | volume=220 | issue=4599 | pmid=6189183 | doi=10.1126/science.6189183 | format=
}}</ref> 1993ರಲ್ಲಿ, CDCಯು ರಕ್ತದ ಪ್ರತಿ µLಗೆ 200ಕ್ಕೂ ಕಡಿಮೆ CD4<sup>+</sup> T ಜೀವಕೋಶಗಳ ಸಂಖ್ಯೆ ಅಥವಾ ಒಟ್ಟು 14%ರಷ್ಟು [[ಲಿಂಫೊಸೈಟ್‌|ಲಿಂಫೋಸೈಟ್ಸ್‌]]ಗಳಿರುವ ಎಲ್ಲಾ HIV ಪಾಸಿಟಿವ್ ಹೊಂದಿರುವ ಜನರನ್ನು AIDS ವ್ಯಾಪ್ತಿಗೆ ತಂದು AIDS ಕುರಿತ ತನ್ನ ವ್ಯಾಖ್ಯಾನವನ್ನು ವಿಸ್ತರಿಸಿತು.<ref name="MMWR">{{cite web | publisher=[[Centers for Disease Control and Prevention|CDC]] | year=1992
| url=http://www.cdc.gov/mmwr/preview/mmwrhtml/00018871.htm
| title=1993 Revised Classification System for HIV Infection and Expanded Surveillance Case Definition for AIDS Among Adolescents and Adults
| accessdate = 2006-02-09
}}</ref>
[[ಮುಂದುವರಿದ ರಾಷ್ಟ್ರ|ಅಭಿವೃದ್ಧಿ ಹೊಂದಿದ ದೇಶಗಳ]]ಲ್ಲಿ ಹೆಚ್ಚಿನ ಹೊಸ AIDS ಪ್ರಕರಣಗಳನ್ನು ಈ ವ್ಯಾಖ್ಯಾನದ ಆಧಾರದಲ್ಲಿ ನಿರ್ಧರಿಸಲಾಗುತ್ತದೆ ಇಲ್ಲವೇ 1993-ಪೂರ್ವದ CDC ವ್ಯಾಖ್ಯಾನದ ಆಧಾರದಲ್ಲಿ ನಿರ್ಣಯಿಸಲಾಗುತ್ತದೆ. ಸೂಕ್ತ ಚಿಕಿತ್ಸೆಯ ಬಳಿಕ ರಕ್ತದ ಪ್ರತಿ µLಗೆ CD4<sup>+</sup> T ಜೀವಕೋಶಗಳ ಸಂಖ್ಯೆಯು 200ಕ್ಕಿಂತ ಮೇಲೆ ಏರಿದಲ್ಲಿ ಅಥವಾ AIDSಗೆ ಕಾರಣವಾಗುವ ಇತರೆ ಅನಾರೋಗ್ಯಗಳಿಂದ ಗುಣಮುಖಗೊಂಡ ಬಳಿಕವೂ ಏಡ್ಸ್ ಪರೀಕ್ಷೆಯನ್ನು ಮಾಡಲಾಗುತ್ತದೆ.
 
=== HIV ಪರೀಕ್ಷೆ ===
ತಾವು HIV ಸೋಂಕಿತರೆಂಬುದು ಹೆಚ್ಚಿನ ಜನರಿಗೆ ಗೊತ್ತಿರುವುದಿಲ್ಲ.<ref name="Kumaranayake">{{cite journal| author= Kumaranayake L, Watts C | title=Resource allocation and priority setting of HIV/AIDS interventions: addressing the generalized epidemic in sub-Saharan Africa | journal=J. Int. Dev. | year=2001 | pages=451–466 | volume=13 | issue=4 | doi=10.1002/jid.798}}</ref> ಆಫ್ರಿಕಾದ ನಗರ ನಿವಾಸಿಗಳಲ್ಲಿ ಲೈಂಗಿಕವಾಗಿ 1% ಕ್ಕಿಂತಲೂ ಕಡಿಮೆ ಕ್ರಿಯಾಶೀಲವಾಗಿರುವ ಮಂದಿಯನ್ನ್ನು HIV ಪರೀಕ್ಷೆಗೊಳಪಡಿಸಲಾಗಿದ್ದರೆ, ಈ ಪ್ರಮಾಣ ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಕಡಿಮೆಯಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, 0.5% ಗರ್ಭಿಣಿ ಮಹಿಳೆಯರು ಮಾತ್ರ ನಗರದ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಆರೋಗ್ಯ ಸಲಹೆ, ಪರೀಕ್ಷೆಗಳನ್ನು ಪಡೆದುಕೊಂಡಿದ್ದಾರೆ ಮತ್ತು ಆ ಸಂಬಂಧ ಫಲಿತಾಂಶಗಳನ್ನೂ ಪಡೆದಿದ್ದಾರೆ. ಆದರೆ ಈ ಪ್ರಮಾಣ ಗ್ರಾಮೀಣ ಪ್ರದೇಶದಲ್ಲಿನ ಆರೋಗ್ಯ ಕೇಂದ್ರಗಳಲ್ಲಿ ಕಡಿಮೆಯಿದೆ.<ref name="Kumaranayake"/> ಆದ್ದರಿಂದಲೇ, ಔಷಧಗಳು ಮತ್ತು ವೈದ್ಯಕೀಯ ಸಂಶೋಧನೆಯಲ್ಲಿ ಬಳಸಲಾಗುವ [[ದಾನಿಯ ರಕ್ತ]] ಮತ್ತು ರಕ್ತದ ಉತ್ಪನ್ನಗಳನ್ನು HIV ಪರೀಕ್ಷೆಗೊಳಪಡಿಸಲಾಗುತ್ತಿದೆ. ಸಾಮಾನ್ಯವಾಗಿ ಹೃದಯಕ್ಕೆ ರಕ್ತವನ್ನು ಹಿಂದಿರುಗಿಸುವ ರಕ್ತನಾಳದಲ್ಲಿನ ರಕ್ತವನ್ನು HIV ಪರೀಕ್ಷೆಗೊಳಪಡಿಸಲಾಗುತ್ತದೆ. ಅನೇಕ ಪ್ರಯೋಗಾಲಯಗಳು ಪ್ರತಿ-HIV ಪ್ರತಿಕಾಯ (IgG ಮತ್ತು IgM) ಮತ್ತು HIV p24 ಪ್ರತಿಜನಕಗಳನ್ನು ಪತ್ತೆ ಹಚ್ಚುವ ''ನಾಲ್ಕನೇ ತಲೆಮಾರಿನ'' ಪರೀಕ್ಷಾ ವಿಧಾನಗಳನ್ನು ಬಳಸುತ್ತಿವೆ. ರೋಗಿಗೆ ಸಂಬಂಧಿಸಿದ ಹಿಂದಿನ ಪರೀಕ್ಷಾ ವರದಿಯು ನಕರಾತ್ಮಕವಾಗಿದ್ದು, ಹೊಸದಾಗಿ ನಡೆಸಿದ ಪರೀಕ್ಷೆಯಲ್ಲಿ HIV ಪ್ರತಿಕಾಯ ಅಥವಾ ಪ್ರತಿಜನಕ ಪತ್ತೆಯಾದರೆ ಆತನಿಗೆ HIV ಸೋಂಕು ತಗುಲಿದೆ ಎಂದರ್ಥ.
ವ್ಯಕ್ತಿಗಳಿಗೆ HIV ಸೋಂಕು ತಗುಲಿರುವುದಕ್ಕೆ ಆರಂಭಿಕ ನಿರ್ದಿಷ್ಟ ಸೂಚನೆಗಳು ದೊರೆತಲ್ಲಿ, ಅದನ್ನು ದೃಢಪಡಿಸಲು ಎರಡನೇ ಬಾರಿ ರಕ್ತದ ಮಾದರಿಗಳನ್ನು ಪಡೆದು ಸತತ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಬಳಿಕ [[ಸೆರೊಕನ್ವರ್ಷನ್|ರಕ್ತ ಪರಿವರ್ತನೆ]] ನಡೆದು ಪಾಸಿಟಿವ್ ಎಂದು ಸಾಬೀತಾಗಲು 3ರಿಂದ 6 ತಿಂಗಳುಗಳು ಬೇಕಾಗುವುದರಿಂದ ಈ [[ನಿರ್ಣಾಯಕ ಅವಧಿ|ನಿರ್ಣಾಯಕ ಅವಧಿಯಲ್ಲಿ]] ವ್ಯತ್ಯಾಸಗಳಾಗಬಹುದು. ಈ ನಿರ್ಣಾಯಕ ಅವಧಿಯಲ್ಲಿ ಪಾಲಿಮೆರೇಸ್ ಚೈನ್ ರಿಯಾಕ್ಷನ್([[PCR]]) ವಿಧಾನವನ್ನು ಬಳಸಿಕೊಂಡು ವೈರಸ್‌ಅನ್ನು ಪತ್ತೆ ಹಚ್ಚುವುದು ಸಾಧ್ಯ, ಮತ್ತು ನಾಲ್ಕನೇ ತಲೆಮಾರಿನ EIA ಪರೀಕ್ಷಾ ವಿಧಾನವನ್ನು ಬಳಸುವುದಕ್ಕಿಂತಲೂ ಮೊದಲೇ ಸೋಂಕನ್ನು ಆಗಿಂದಾಗ್ಗೆ ಪತ್ತೆ ಹಚ್ಚಲು ಸಾಧ್ಯವಿರುವುದಾಗಿ ಸಾಕ್ಷ್ಯಗಳು ಹೇಳುತ್ತವೆ.
"https://kn.wikipedia.org/wiki/ಏಡ್ಸ್_ರೋಗ" ಇಂದ ಪಡೆಯಲ್ಪಟ್ಟಿದೆ