ಕೈಗಾರಿಕೆಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೯ ನೇ ಸಾಲು:
[[ಚಿತ್ರ:CAM00337.jpg|thumbnail|left|ಕೃಷಿಯಲ್ಲಿ ಕೈಗಾರಿಕೋತ್ಪನ್ನಗಳು]]
# '''[[ಆಧುನೀಕರಣ]]ಕ್ಕೆ ನೆರವು''': ಸಾರಿಗೆ ಮತ್ತು ಸಂಪರ್ಕಗಳ ಬೆಳವಣಿಗೆಗೂ ಕೈಗಾರಿಕೆಗಳು ಅಗತ್ಯ. ರೈಲುಗಳು, ಹಡಗುಗಳು, ಮೋಟಾರು ವಾಹನಗಳು, ಅವುಗಳ ಬಿಡಿ ಭಾಗಗಳು ಹಾಗೂ [[ಟೆಲಿಫೋನ್]] ಮತ್ತು [[ರೇಡಿಯೋ]]ಗಳು ಸೇರಿದಂತೆ ಎಲ್ಲ ವಿಧದ ಸಾರಿಗೆ ಮತ್ತು ಸಂಪರ್ಕ ಸಾಮಗ್ರಿಗಳು [[ಕೈಗಾರಿಕೋತ್ಪನ್ನಗಳು]]. ವಸತಿ ನಿರ್ಮಾಣಕ್ಕೆ ಅವಶ್ಯಕವಿರುವ [[ಕಬ್ಬಿಣ]], [[ಉಕ್ಕು]] ಹಾಗೂ [[ಸಿಮೆಂಟ್]] ಮೊದಲಾದವು ಕೂಡ ಕೈಗಾರಿಕೋತ್ಪನ್ನ ಸರಕುಗಳು.
#'''ಉದ್ಯೋಗಾವಕಾಶಗಳ ಸೃಷ್ಟಿ''': ಕೈಗಾರಿಕೆಗಳ ಬೆಳವಣಿಗೆಯು [[ನಿರುದ್ಯೋಗ ನಿರ್ಮೂಲನ]]ಕ್ಕೆನಿರ್ಮೂಲನಕ್ಕೆ ಬಹಳಷ್ಟು ಸಹಾಯ ಮಾಡುತ್ತದೆ. [[ಭಾರತ]]ದಂತಹ ದೇಶದಲ್ಲಿ ಇದು ಬಹು ಮುಖ್ಯ ಸಂಗತಿ. ಹೊಸದೊಂದು ಕೈಗಾರಿಕೆ ಸ್ಥಾಪನೆಯಾದರೆ, ಅದು ಅದರ ಉತ್ಪಾದನ ಸಾಮರ್ಥ್ಯಕ್ಕೆ ತಕ್ಕಂತೆ ಸಾವಿರಾರು ಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವ ಶಕ್ತಿ ಹೊಂದಿರುತ್ತದೆ. ಈ ನಿರುದ್ಯೋಗಿಗಳನ್ನು ಹೀರಿಕೊಳ್ಳಲು ಕೈಗಾರಿಕೆಗಳು ಬೆಳೆಯುತ್ತಿರಬೇಕು. ಇಲ್ಲದಿದ್ದರೆ ಅವರು ಮತ್ತೆ ಕೃಷಿಯನ್ನೇ ಅವಲಂಬಿಸುವುದರಿಂದ ಅವರ ನಿರುದ್ಯೋಗದ ದಾರುಣತೆ ಹೆಚ್ಚುವುದಷ್ಟೇ ಅಲ್ಲದೇ ಕೃಷಿಯ ಪ್ರಗತಿಯೂ ಹಿಂಜರಿಯುತ್ತದೆ.
#'''ಜೀವನಮಟ್ಟ ಸುಧಾರಣೆ''': ಕೈಗಾರಿಕಾ ವಲಯವು ಉದ್ಯೋಗಿಗಳಿಗೆ ಸಾಪೇಕ್ಷವಾಗಿ ಹೆಚ್ಚು [[ಆದಾಯ]]ವನ್ನು ತಂದುಕೊಡುತ್ತದೆ. ಉದಾಹರಣೆಗೆ ಕೈಗಾರಿಕಾ ಕಾರ್ಮಿಕರ ಗಳಿಕೆ ಮತ್ತು ಜೀವನಮಟ್ಟ ಕೃಷಿ ಕಾರ್ಮಿಕರ ಗಳಿಕೆ ಮತ್ತು ಜೀವನಮಟ್ಟಕ್ಕಿಂತಲೂ ಹೆಚ್ಚಿರುತ್ತವದೆ. ಕೈಗಾರಿಕಾ ಕೇಂದ್ರಗಳು ಪಟ್ಟಣಗಳಾಗಿ ಬೆಳೆಯುವುದರಿಂದ ಅವನ್ನು ಅವಲಂಬಿಸಿರುವ ಜನರಿಗೆ ಬಾಹ್ಯ ಪ್ರಪಂಚದೊಡಣೆ ವ್ಯಾಪಕ ಸಂಪರ್ಕ ಹೊಂದಲು ಮತ್ತು [[ನಾಗರೀಕತೆ]]ಯಲ್ಲಿ ಮುನ್ನಡೆಯಲು ಸಾಧ್ಯವಾಗುತ್ತದೆ.
#'''ಆಂತರಿಕ ಮತ್ತು ಬಾಹ್ಯ ಆರ್ಥಿಕತೆಗಳ ಪ್ರಯೋಜನ''': ಕೈಗಾರಿಕೆಗಳು ಆಂತರಿಕ ಆರ್ಥಿಕತೆಗಳ ಹಾಗೂ ಬಾಹ್ಯ ಆರ್ಥಿಕತೆಗಳ ಅವಕಾಶವನ್ನು ಒದಗಿಸಿ ಕೊಡುತ್ತವೆ. ಉದಾಹರಣೆ: ಒಂದು ಪ್ರದೇಶದಲ್ಲಿ ಹೊಸದಾಗಿ ಒಂದು ಉಕ್ಕಿನ [[ಕಾರ್ಖಾನೆ]] ಸ್ಥಾಪನೆಯಾದರೆ ಅದರ ಸುತ್ತಲಿನ ಪ್ರದೇಶದಲ್ಲಿ [[ಗಣಿಗಾರಿಕೆ]], [[ಸಾರಿಗೆ]] ವ್ಯವಸ್ತೆ, ಮುಂತಾದವು ಬೆಳೆದು ಸಹಸ್ರಾರು ಜನರಿಗೆ ಉದ್ಯೋಗ ಅವಕಾಶಗಳು ಲಭಿಸುತ್ತದೆ. ಇದನ್ನು ಆಂತರಿಕ ಆರ್ಥಿಕತೆಗಳೆನ್ನುತ್ತರೆ. ಅಂತೆಯೇ ಕಾರ್ಖಾನೆಯಲ್ಲಿ ಉತ್ಪಾದನೆಯಾದ ಉಕ್ಕು ಇತರ ಅನೇಕ ದೂರದ ಪ್ರದೇಶದಲ್ಲಿ ಅನೇಕ ಕಟ್ಟಡ, ಕಾರ್ಖಾನೆ ಮುಂತಾದ ಕಾರ್ಯಗಳಿಗೆ ಬಳಸಲ್ಪಡುವುದರಿಂದ ಆರ್ಥಿಕ ಮುನ್ನಡೆ ಆಗುತ್ತದೆ.
"https://kn.wikipedia.org/wiki/ಕೈಗಾರಿಕೆಗಳು" ಇಂದ ಪಡೆಯಲ್ಪಟ್ಟಿದೆ