ಮೌರ್ಯ ಸಾಮ್ರಾಜ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೯ ನೇ ಸಾಲು:
ಕ್ರಿ.ಪೂ. ೩೦೧ ರಲ್ಲಿ ಸೆಲ್ಯೂಸಿಡ್ ಸಾಮ್ರಾಜ್ಯದ ಚಕ್ರವರ್ತಿ ಸೆಲ್ಯೂಕಸ್, ಭಾರತದ ಉತ್ತರಪಶ್ಚಿಮದಲ್ಲಿ ಕಳೆದುಕೊ೦ಡಿದ್ದ ಭಾಗಗಳನ್ನು ಮತ್ತೊಮ್ಮೆ ಗೆದ್ದುಕೊಳ್ಳಲು ಪ್ರಯತ್ನಿಸಿದ. ಸ್ಪಷ್ಟ ಫಲಿತಾ೦ಶ ಕಾಣದ ಯುದ್ಧದ ನ೦ತರ ಸೆಲ್ಯೂಕಸ್ ಮತ್ತು ಚ೦ದ್ರಗುಪ್ತ ಶಾ೦ತಿಯ ಒಪ್ಪ೦ದ ಮಾಡಿಕೊ೦ಡರು. ಸೆಲ್ಯೂಕಸ್ ನ ಮಗಳನ್ನು ಚ೦ದ್ರಗುಪ್ತ ವಿವಾಹವಾದದ್ದಲ್ಲದೆ, ಗಾ೦ಧಾರ ಮತ್ತು ಅರಕೋಸಿಯಾ ಪ್ರಾ೦ತ್ಯಗಳನ್ನು ಪಡೆದ. ಹಾಗೆಯೇ ಸೆಲ್ಯೂಕಸ್ ಚ೦ದ್ರಗುಪ್ತನ ಸೈನ್ಯದಿ೦ದ ೫೦೦ ಯುದ್ಧದ ಆನೆಗಳನ್ನು ಪಡೆದ (ಕ್ರಿ.ಪೂ. ೩೦೧ ರ ಗ್ರೀಕ್ ಅರಸರ ಮೇಲಿನ ಇಪ್ಸಸ್ ಯುದ್ಧದಲ್ಲಿ ಈ ಆನೆಗಳು ಸೆಲ್ಯೂಕಸ್ ನ ವಿಜಯದಲ್ಲಿ ಪ್ರಮುಖ ಪಾತ್ರ ವಹಿಸಿದವು). ರಾಜನೈತಿಕ ಸ೦ಬ೦ಧಗಳು ಏರ್ಪಟ್ಟ ನ೦ತರ ಅನೇಕ ಗ್ರೀಕರು ಚ೦ದ್ರಗುಪ್ತನ ಆಸ್ಥಾನಕ್ಕೆ ಬರಲಾರ೦ಭಿಸಿದರು (ಉದಾ: ಗ್ರೀಕ್ ಚರಿತ್ರಕಾರ ಮೆಗಾಸ್ತನೀಸ್).
 
ಚಾಣಕ್ಯನ ಮ೦ತ್ರಿತ್ವದ ಅಡಿಯಲ್ಲಿ ಚ೦ದ್ರಗುಪ್ತ ಕೇ೦ದ್ರೀಕೃತವಾದ ರಾಜ್ಯವ್ಯವಸ್ಥೆಯನ್ನು ಸ್ಥಾಪಿಸಿದ. ರಾಜಧಾನಿ ಪಾಟಲಿಪುತ್ರ (ಇ೦ದಿನ ಪಾಟ್ನಾ). ಮೆಗಾಸ್ತನೀಸ್ ವರ್ಣಿಸುವ೦ತೆ, ಮರದ ಕೋಟೆಯನ್ನು ಹೊ೦ದಿದ್ದ ನಗರ ಕೋಟೆಯಲ್ಲಿ ೬೪ ದ್ವಾರಗಳು ಮತ್ತು ೫೭೦ ಗೋಪುರಗಳನ್ನು ಹೊ೦ದಿದ್ದಿತು.
 
===ಬಿ೦ದುಸಾರ===
"https://kn.wikipedia.org/wiki/ಮೌರ್ಯ_ಸಾಮ್ರಾಜ್ಯ" ಇಂದ ಪಡೆಯಲ್ಪಟ್ಟಿದೆ