ಕೈಗಾರಿಕೆಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩೨ ನೇ ಸಾಲು:
 
'''ಕೈಗಾರಿಕಾ ನೀತಿ'''
ಕೈಗಾರಿಕೋದ್ಯಮದ ಬಗೆಗೆ ಸರ್ಕಾರವು ತಳೆದಿರುವ ಸಮಗ್ರ ಧೋರಣೆ,ಉದ್ಯಮಗಳ ಸ್ಥಾಪನೆ, ಅವುಗಳ ಕಾರ್ಯಾಚರಣೆ ಮತ್ತು ಆಡಳಿತ ನಿರ್ವಹಣೆಯ ವಿಷಯಹಗಳಲ್ಲಿ ಅನುಸರಿಸುವ ಸರ್ಕಾರದ ಅಧಿಕೃತ ನಿತಿಯನ್ನು 'ಕೈಗಾರಿಕ ನೀತಿ'(Industrial policy) ಎಂದು ಕರೆಯಲಾಗುತ್ತದೆ.ಕೈಗಾರಿಕಾ ಪ್ರಗತಿಯ ಬಗೆಗೆ ಸಾರ್ಕಾರದ ತಾತ್ವಿಕ ಧೋರಣೆ ಮತ್ತು ಆ ಕುರಿತು ತತ್ವ ಮತ್ತು ನೀತಿಯ ಅನುಷ್ಹಾನ ಇತ್ಯದಿ. ಕೈಗಾರಿಕಾ ನೀತಿಯ ಭಾಗಗಳಾಗಿರುತ್ತದೆ. ಸರ್ಕಾರದ ಎಂತಹ ಕೈಗಾರಿಕೆಗಳನ್ನು ಪ್ರೋತ್ಸಾಹಿಸಬೇಕು. ಅವುಗಳ ಕಾರ್ಯಾಚರಣೆ ಮತ್ತು ಆಡಳಿತದಲ್ಲಿ ಹಸ್ತಕ್ಷೇಪವಿರಬೇಕೇ ಅಥವಾ ಬೇಡವೇ, ಹಾಗೂ ಯಾವ ಸಂಗತಿಗಳ ಆದಾರದ ಮೇಲೆ ದೊಡ್ಡ ಪ್ರಮಾಣದ,ಸಣ್ಣ ಪ್ರಮಾಣದ ಮತ್ತು ಗುಡಿಕೈಗಾರಿಕೆಗಳನ್ನು ವಿಭಗಿಸಬೇಕು, ಯಾವ ವಿಧದ ಕೈಗಾರಿಕೆಗಳು ಸಾರ್ವಜನಿಕ,ಖಾಸಗಿ ಹಾಗೂ ಸಹಕಾರಿ ಕ್ಷೇತ್ರದಲ್ಲಿ ಸ್ಥಾಪಿಸಲ್ಪಡಬೇಕು-ಇವೇ ಮೊದಲಾದ ಅಂಶಗಲು ಕೈಗಾರಿಕ ನೀತಿಯಲ್ಲಿ ಉಲ್ಲೇಖವಾಗಿರುತ್ತವೆ. ಒಟ್ಟಿನಲ್ಲಿ ಸರ್ಕಾರದ ಕೈಗಾರಿಕಾ ನೀತಿಯು ವ್ಯಾಪಕವಾಗಿದ್ದು ಉದ್ಯಮ ನಿಯಂತ್ರಣ ಮತ್ತು ಕೈಗಾರಿಕಾ ರೂಪಿಕೆಯಲ್ಲಿ ಸರ್ಕಾರ ಅನುಸರಿಸುವ ನೀತಿ ನಿಯಮ ಹಾಗೂ ವಿಧಾನಗಳು ; ಹಣ ಸಂಭಂಧಿ ನೀತಿ , ಕೋಶೀಯ ನೀತಿ ಹಾಗೂ ಕಾರ್ಮಿಕ ನೀತಿ , ವಿದೇಶೀ ನೆರವಿನ ಬಗೆಗೆ ಸರ್ಕಾರದ ನಿಲುವು ಇವೇ ಮುಂತಾದ ಹಲವಾರು ವಿಷಯಗಳೂ ಸಹ ಇದರ ವ್ಯಾಪ್ತಿಗೆ ಒಳಪಡುತ್ತವೆ.
==ಕೈಗಾರಿಕಾ ನೀತಿಯ ಅವಶ್ಯಕತೆ==
 
ಭಾರತದಂತಹ ಅಭಿವೃದ್ಧಿಶೀಲ ದೇಶದಲ್ಲಿ ಕೈಗಾರಿಕಾ ನೀತಿಯ ಆವಶ್ಯಕತೆಯನ್ನು ಎಷ್ಟು ಹೇಳಿದರೂ ಸಾಲದು.
 
''ಮೊದಲನೆಯದಾಗಿ'':ಯೋಜನಾ ಬುದ್ದವಾದ ಭಾರತದ ಆರ್ಥಿಕತೆಯು ಸಮಗ್ರ ಯೋಜನೆಗೆ ತಕ್ಕಂತೆ ಕೈಗಾರಿಕಾಭಿವೃದ್ಧಿಯನ್ನು ಪ್ರೋತ್ಸಾಹಿಸಬೇಕಾಗುತ್ತದೆ.ರಾಷ್ಟ್ರಕ್ಕೆ ಅಗತ್ಯವಿರುವ ವಿವಿಧ ರೀತಿಯ ಉದ್ಯಮಗಳ ಸ್ಥಾಪನೆ,ಬಂಡವಾಳ ಹೂಡಿಕೆ,ಉತ್ಪಾದನ ವಿಧಾನ ಮೊದಲಾದ ಸಂಗತಿಗಳಿಗೆ ಸಂಭಂದಿಸಿದಂತೆ ಒಂದು ನೀತಿ ಅತ್ಯಗತ್ಯವಾಗಿರುತ್ತದೆ. ಈ ದಿಸೆಯಲ್ಲಿ ಕೈಗಾರಿಕಾ ನೀತಿಯ ಅವಶ್ಯಕತೆ ಇದೆ.
 
''ಎರಡನೆಯದಾಗಿ'':ಹಿಂದುಳಿದ ದೇಶವಾದ ಭಾರತದಲ್ಲಿ ಹಲವು ಸಂಪನ್ಮೂಲಗಳ ಕೊರತೆ ಇದೆ.ತತ್ಪರಿಣಾಮವಾಗಿ ಎಲ್ಲ ಉದ್ಯಮಗಳನ್ನೂ ಸರ್ಕಾರವೇ ಸ್ಥಾಪಿಸಿ ಬೆಳೆಸಲು ಸಾಧ್ಯ ವಾಗುವುದಿಲ್ಲ. ಸಂಪನ್ಮೂಲಗಳ ಕ್ರೋಢೀಕರಣವನ್ನು ಗಮನದಲ್ಲಿಟ್ಟುಕೋಂಡು.ಸರ್ಕಾರ ಕೆಲವು ಮೂಲ ಹಾಗೂ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸಿ,ಇತರ ಕೈಗಾರಿಕೆಗಳ ಸಂಪೂರ್ಣ ಹೊಣೆಯನ್ನು ಖಾಸಗಿ ವಲಯಕ್ಕೆ ಬಿಟ್ಟು ಕೊಡಬೇಕಾಗುತ್ತದೆ. ಇದನ್ನು ವಿಷದಪಡಿಸುವುದು ಕೈಗಾರಿಕೆ ನೀತಿಯ ಉದ್ದಿಶ್ಯವಾಗಿರುತ್ತದೆ.
 
''ಮೂರನೆಯದಾಗಿ'':ಸುಖೀರಾಜ್ಯ ಸ್ಥಾಪನೆಯನ್ನು ಆದರ್ಶವಾಗಿ ಹೊಂದಿರುವ ನಮ್ಮ ರಾಷ್ಟ್ರವು ಜನತೆಯ ಹಿತದೃಷ್ಟಿಯಿಂದ ಖಾಸಗಿ ಕ್ಷೇತ್ರವನ್ನು ನಿಯಂತ್ರಿಸಬೇಕಾಗುತ್ತದೆ.ಇಲ್ಲದಿದ್ದರೆ ಖಾಸಗಿ ವಲಯವು ಲಾಭ ಗಳಿಕೆಯನ್ನೇ ಪ್ರಮುಖ ಧ್ಯೇಯವಾಗಿಟ್ಟುಕೊಂಡು ಬೆಳೆದು, ಆರ್ಥಿಕ ಅಸಮತೆಯನ್ನು ಉಗ್ರವಾಗಿಸುತ್ತದೆ. ಆದ್ದರಿಂದ ಖಾಸಗಿ ವಲಯವನ್ನು ನಿಯಂತ್ರಿಸಲು ಮತ್ತು ಅದರ ಚಟುವಟಿಕೆಗಳನ್ನು ಉಲ್ಲೇಖರಿಸಲು ಅಧಿಕೃತ
 
 
 
 
"https://kn.wikipedia.org/wiki/ಕೈಗಾರಿಕೆಗಳು" ಇಂದ ಪಡೆಯಲ್ಪಟ್ಟಿದೆ