ನಿರ್ವಹಣೆ ಪರಿಚಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೮ ನೇ ಸಾಲು:
ನಿರ್ವಹಣೆಯು ಎಲ್ಲಾ ಸಂಸ್ಥೆಗಳಿಗೂ ಅವಶ್ಯಕ. ಅವುಗಳು ದೊಡ್ದ ಅಥವಾ ಸಣ್ಣ ಲಾಭ ಸಂಪಾದಿಸುವ ಅಥವಾ ಸಂಪಾದಿಸದೇ ಇರುವ ಹಾಗೂ ಉತ್ಪಾದನಾ ಮತ್ತು ಸೇವಾ ಚಟುವಟಿಕೆಯಲ್ಲಿ ತೊಡಗಿರುವ ಸಂಸ್ಥೆಗಳಾಗಿರಬಹುದು.ನಿರ್ವಹಣೆಯಲ್ಲಿ ಒಂದಾದ ನಂತರ ಮತ್ತೊಂದಂರಂತೆ ಪರಸ್ಪರ ಅವಲಂಬಿತ ನಿರ್ವಹಣಾ ಕಾರ್ಯಗಳಾಗಿರುತ್ತವೆ.ಈ ಎಲ್ಲಾ ಕಾರ್ಯಗಳನ್ನು ವ್ಯವಸ್ಥಾಪಕರು ನಿರ್ವಹಿಸುತ್ತಾರೆ.ಸಂಘಟನೆಯ ಬೇರೆ ಬೇರೆ ಹಂತಗಳಲ್ಲಿ ಬೇರೆ ಬೇರೆಯಾದ ನಿರ್ವಹಣಾ ಕಾರ್ಯಗಳನ್ನು ವ್ಯವಸ್ಥಾಪಕರು ನಿರ್ವಹಿಸಬೇಕಾಗುತ್ತದೆ. ಕೈಗಾರಿಕಾ ಕ್ರಾಂತಿಯ ಪರಿಣಾಮದಿಂದ ಉಂಟಾದ ಉತ್ಪಾದನಾ ವಿಧಾನದ ಬದಲಾವಣೆ, ವ್ಯವಹಾರದ ಪ್ರಮಾಣದ ಹೆಚ್ಚಳ,ಸಾರಿಗೆ, ಸಂಪರ್ಕ, ಹಾಗೂ ತಂತ್ರಜ್ಞಾನ,ಕ್ಷೇತ್ರದ ಬದಲಾವಣೆಗಳು ವಿಶೇಷವಾಗಿ ನಿರ್ವಹಣೆಯ ಪ್ರಾಮುಖ್ಯತೆಯನ್ನು ಹೆಚ್ಚಿಸಿರುತ್ತವೆ.
 
'==''ನಿರ್ವಹಣೆಯ ಅರ್ಥ'''(Meaning of Management) ==
ನಿರ್ವಹಣೆ (Manage)ಎಂಬ ಕ್ರಿಯಾಪದವು ಇಟಲಿ ಭಾಷೆಯ 'Maneggiare (ಮ್ಯಾನೇಜರ್) ಎಂಬ ಪದದಿಂದ ಬಂದಿದೆ.'ಮ್ಯಾನೇಜರೇ' ಎಂದರೆ ಕೈಯಿಂದ ನಿರ್ವಹಿಸು,ವಿಶೇಷವಾಗಿ ಉಪಕರಣಗಳನ್ನು ನಿರ್ವಹಿಸುವುದು ಎಂದರ್ಥ.ಆಕ್ಸ್ ಫರ್ಡ್ ನಿಘಂಟಿನ ಪ್ರಕಾರ ನಿರ್ವಹಣೆಯು ವ್ಯಕ್ತಿ
ಮತ್ತು ಸಂಪನ್ಮೂಲಗಳೊಂದಿಗೆ ವ್ಯವಹರಿಸುವ ಹಾಗೂ ನಿಯಂತ್ರಿಸುವ ಪ್ರಕ್ರಿಯೆಯಾಗಿದೆ.ನಿರ್ವಹಣೆಯು ಸಂಸ್ಥೆಯ ನಿರ್ದಿಷ್ಟ ಉದ್ದೇಶಗಳನ್ನು ಸಾಧಿಸುವುದಕ್ಕೆ ಇತರ ವ್ಯಕ್ತಿಗಳಿಂದ ಅಥವಾ ಅವರ ಸಹಾಯದಿಂದ ಕಾರ್ಯ ಮಾಡಿಸಿಕೊಳ್ಳುವ ಕಲೆಯಾಗಿದೆ.
 
=='''ನಿರ್ವಹಣೆಯ ವ್ಯಾಖ್ಯೆ''': (Definition of Management) ==
ಹೆರಾಲ್ಡ್ ಕೂಂಟ್ಜ್ ಮತ್ತು ಹೆಂಝ್ ವ್ಹೀರಿಚ್ ರವರ ಪ್ರಕಾರ "ನಿರ್ವಹಣೆಯು ನಿಗದಿಪಡಿಸಿದ ಗುರಿಗಳನ್ನು ದಕ್ಷತೆಯಿಂದ ಸಾಧಿಸಲು ವ್ಯಕ್ತಿಗಳನ್ನು ಗುಂಪುಗಳಲ್ಲಿ ಒಟ್ಟಾಗಿಸಿ ಕಾರ್ಯ ನಿರ್ವಹಿಸುವುದಕ್ಕೆ ಸೂಕ್ತ ಪರಿಸರವನ್ನು ರೂಪಿಸುವ ಪ್ರಕ್ರಿಯೆಯಾಗಿದೆ".
ರಾಬರ್ಟ್ ಟ್ರೆವೆಲ್ಲಿ ಮತ್ತು ಎಂ. ಜೀನ್ ನ್ಯೂಪೋರ್ಟ್ ರವರ ಪ್ರಕಾರ "ನಿರ್ವಹಣೆಯು ಸಂಘಟನೆಯ ಚಟುವಟಿಕೆಗಳನ್ನು ಯೋಜಿಸಿ, ಸಂಘಟಿಸಿ, ಪ್ರೇರೇಪಿಸಿ ಮತ್ತು ನಿಯಂತ್ರಿಸುವ ಮೂಲಕ ಮಾನವ ಮತ್ತು ಇತರೆ ಸಂಪನ್ಮೂಲಗಳಲ್ಲಿ ಸಮನ್ವತೆಯಿಂದ ಸಂಘಟನೆಯ ಉದ್ದೇಶಗಳನ್ನು ಪರಿಣಾಮಕಾರಿಯಾಗಿ ಹಾಗೂ ದಕ್ಷತೆಯಿಂದ ಸಾಧಿಸುವ ಪ್ರಕ್ರಿಯೆಯಾಗಿದೆ".
೧೮ ನೇ ಸಾಲು:
ಮೇಲಿನ ವ್ಯಾಖ್ಯೆಗಳಿಂದ ಸ್ಪಷ್ಟವಾಗುವುದೇನೆಂದರೆ, ಸಂಸ್ಥೆಯ ಉದ್ದೇಶಗಳನ್ನು ಸಾಧಿಸಲು ಯೋಜಿಸುವ, ಧೋರಣೆಗಳನ್ನು ರೂಪಿಸುವ ಹಾಗೂ ಅಗತ್ಯವಾದ ಹಣಕಾಸು,ಸಾಮಾಗ್ರಿ, ಯಂತ್ರೋಪಕರಣ ಮುಂತಾದ ಸಂಪನ್ಮೂಲಗಳನ್ನು ಕ್ರೋಢೀಕರಿಸುವ ಎಲ್ಲಾ ಕಾರ್ಯಗಳನ್ನು ನಿರ್ವಹಣೆ ಒಳಗೊಂಡಿದೆ.ಇದರೊಂದಿಗೆ ನಿರ್ವಹಣೆಯು ಈ ಎಲ್ಲಾ ಸಂಪನ್ಮೂಲಗಳನ್ನು ಸಂಸ್ಥೆಯ ಉತ್ಪಾದಕ ಚಟುವಟಿಕೆಯಲ್ಲಿ ತೊಡಗಿಸಿ, ಅವುಗಳ ಬಳಕೆಯು ಸಾಮಾನ್ಯವಾಗಿ ಸಮಾಜಕ್ಕೆ ಮತ್ತು ವಿಶೇಷವಾಗಿ ಸಂಸ್ಥೆಯ ನೌಕರರುಗಳಿಗೆ ದೊರೆಯಬಹುದಾದ ಪ್ರಯೋಜನಗಳು ಲಭ್ಯವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುಲು ಮೇಲ್ವಿಚಾರಿಸುವ ಮತ್ತು ಪರಿಶೀಲಿಸುವ ಕಾರ್ಯಗಳನ್ನು ಸಹಾ ಒಳಗೊಂಡಿರುತ್ತದೆ.
 
''=='ನಿರ್ವಹಣೆಯ ಲಕ್ಷಣಗಳು''': (features of management)==
ನಿರ್ವಹಣೆಯು ಈ ಕೆಳಕಂಡ ಗುಣಲಕ್ಷಣಗಳನ್ನು ಹೊಂದಿದೆ.
1)ನಿರ್ವಹಣೆಯು ಉದ್ದೇಶಗಳನ್ನು ಸಾಧಿಸುವ ಪ್ರಕ್ರಿಯೆಯಾಗಿದೆ(Management is goal oriented):ಪ್ರತಿಯೊಂದು ಸಂಘಟನೆಯನ್ನು ನಿರ್ದಿಷ್ಟ ಉದ್ದೇಶಗಳ ಸಾಧನೆಗಾಗಿ ಸ್ಥಾಪಿಸಲಾಗಿರುತ್ತದೆ. ಸಂಘಟನೆಯ ಸ್ವರೂಪದ ಆಧಾರದ ಮೇಲೆ, ವಿವಿಧ ಸಂಘಟನೆಗಳು ವಿವಿಧ ಉದ್ದೇಶಗಳನ್ನು ಹೊಂದಿರುತ್ತದೆ.ಈ ಉದ್ದೇಶಗಳು ಸರಳ ಮತ್ತು ಸ್ಪಷ್ಟವಾಗಿರಬೇಕು. ನಿರ್ವಹಣೆಯು ವಿವಿಧ ಜನರ ಪರಿಶ್ರಮವನ್ನು ಒಂದುಗೂಡಿಸುವ ಮೂಲಕ ಸಂಘಟನೆಯ ಉದ್ದೇಶಗಳನ್ನು ಸಾಧಿಸುವುದಾಗಿದೆ.
೩೮ ನೇ ಸಾಲು:
7)ನಿರ್ವಹಣೆಯು ಅಗೋಚರ ಶಕ್ತಿಯಾಗಿದೆ: ನಿರ್ವಹಣೆಯು ಅದೃಶ್ಯವಾಗಿದ್ದು, ಅದರ ಇರುವಿಕೆಯನ್ನು ಸಂಘಟನೆಯ ಕಾರ್ಯದಲ್ಲಿ ಗಮನಿಸಬಹುದಾಗಿದೆ. ನಿರ್ವಹಣೆಯ ಪರಿಣಾಮಗಳನ್ನು ಉತ್ಪಾದನೆಯ ಗುರಿ ಸಾಧನೆ, ನೌಕರರ ಸಂತೃಪ್ತಿ ಮುಂತಾದವುಗಳಲ್ಲಿ ಕಾಣಬಹುದಾಗಿದೆ. ಆದುದರಿಂದ ನಿರ್ವಹಣೆಯು ಅಗೋಚರವಾಗಿದ್ದು ವ್ಯಕ್ತಿಗಳ ಒಟ್ಟು ಕಾರ್ಯದ ಮೇಲೆ ತನ್ನ ಪರಿಣಾಮವನ್ನು ಪ್ರತಿಫಲಿಸುತ್ತವೆ.
 
'''ನಿರ್ವಹಣೆಯ ಉದ್ದೇಶಗಳು'''
ಪ್ರತಿಯೊಂದು ಸಂಘಟನೆಯನ್ನು ನಿರ್ದಿಷ್ಟ ಉದ್ದೇಶಗಳ ಸಾಧನೆಗಾಗಿ ಸ್ಥಾಪಿಸಲಾಗುತ್ತದೆ.ವಿವಿಧ ಸಂಘಟನೆಗಳೂ ವಿವಿಧ ಉದ್ದೇಶಗಳನ್ನು ಹೊಂದಿರುತ್ತವೆ. ನಿರ್ವಹಣೆಯು ಆ ಉದ್ದೇಶಗಳನ್ನು ಪರಿಣಾಮಕಾರಿಯಾಗಿ ಹಾಗೂ ದಕ್ಷತೆಯಿಂದ ಸಾಧಿಸಬೇಕು. ಈ ಉದ್ದೇಶಗಳನ್ನು ಸಂಘಟನಾತ್ಮಕ ಉದ್ದೇಶಗಳು, ಸಾಮಾಜಿಕ ಉದ್ದೇಶಗಳು,ಹಾಗೂ ವೈಯಕ್ತಿಕ ಉದ್ದೇಶಗಳೆಂದು ವಿಂಗಡಿಸಬಹುದು.
 
೭೨ ನೇ ಸಾಲು:
5)ನಿರ್ವಹಣೆಯು ಸಮಾಜದ ಅಭಿವೃದ್ದಿಗೆ ಸಹಕಾರಿಯಾಗಿದೆ: ಸಂಘಟನೆಯ ಅಭಿವೃದ್ದಿಗೆ ಸಮಾಜದ ವಿವಿಧ ವರ್ಗಗಳು ಕಾರಣವಾಗಿರುವುದರಿಂದ ನಿರ್ವಹಣೆಯು ಅವರ ಹಿತಾಸಕ್ತಿಗಳನ್ನು ಕಾಪಾಡುವ ಹೊಣೆಗಾರಿಕೆಯನ್ನು ಹೊಂದಿದೆ. ಒಂದು ಪರಿಣಾಮಕಾರಿ ನಿರ್ವಹಣೆಯು ಕಾರ್ಮಿಕರ ,ಹೂಡಿಕೆದಾರರ , ಗ್ರಾಹಕರ, ಸಾರ್ವಜನಿಕರ ಬಗ್ಗೆ ಇರುವ ಬದ್ದತೆಯನ್ನು ಒಪ್ಪಿಕೊಳ್ಳುವುದರ ಮೂಲಕ ಸಮಾಜದ ಬೆಳವಣಿಗೆ ಮತ್ತು ಅಭಿವೃದ್ದಿಗೆ ಸಹಕರಿಸುತ್ತದೆ. ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ಸರಕು ಮತ್ತು ಸೇವೆಗಳನ್ನು ಪೊರೈಸುವ, ಉದ್ಯೋಗವಕಾಶಗಳನ್ನು ಸೃಷ್ಟಿಸುವ, ಆಧುನಿಕ ತಂತ್ರಜ್ಞಾನವನ್ನು ಅಳವಡಿಸುವುದರ ಮೂಲಕ ಸಮಾಜದ ಯೋಗಕ್ಷೇಮವನ್ನು ರಕ್ಷಿಸುತ್ತಾ, ಬೆಳವಣಿಗೆ ಮತ್ತು ಅಭಿವೃದ್ದಿಯ ಮಾರ್ಗವನ್ನು ನಿರ್ವಹಣೆಯು ಅನುಸರಿಸುತ್ತದೆ.
 
'''ನಿರ್ವಹಣೆಯು ಕಲೆ, ವಿಜ್ಞಾನ ಹಾಗೂ ವೃತ್ತಿಯಾಗಿ'''
 
ನಿರ್ವಹಣೆಯು ನಾಗರೀಕತೆಯಷ್ಟೇ ಪುರಾತನವಾದದು. ಇದು ಕಾಲಕ್ರಮೇಣ ಚಲನಾತ್ಮಕ ವಿಷಯವಾಗಿ ಬೆಳೆದು ಪ್ರಾಮುಖ್ಯತೆಯನ್ನು ಹೆಚ್ಚಿಸಿಕೊಂಡಿದೆ.
"https://kn.wikipedia.org/wiki/ನಿರ್ವಹಣೆ_ಪರಿಚಯ" ಇಂದ ಪಡೆಯಲ್ಪಟ್ಟಿದೆ