ನಿರ್ವಹಣೆ ಪರಿಚಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೧ ನೇ ಸಾಲು:
ನಿರ್ವಹಣೆಯು ಈ ಕೆಳಕಂಡ ಗುಣಲಕ್ಷಣಗಳನ್ನು ಹೊಂದಿದೆ.
1)ನಿರ್ವಹಣೆಯು ಉದ್ದೇಶಗಳನ್ನು ಸಾಧಿಸುವ ಪ್ರಕ್ರಿಯೆಯಾಗಿದೆ(Management is goal oriented):ಪ್ರತಿಯೊಂದು ಸಂಘಟನೆಯನ್ನು ನಿರ್ದಿಷ್ಟ ಉದ್ದೇಶಗಳ ಸಾಧನೆಗಾಗಿ ಸ್ಥಾಪಿಸಲಾಗಿರುತ್ತದೆ. ಸಂಘಟನೆಯ ಸ್ವರೂಪದ ಆಧಾರದ ಮೇಲೆ, ವಿವಿಧ ಸಂಘಟನೆಗಳು ವಿವಿಧ ಉದ್ದೇಶಗಳನ್ನು ಹೊಂದಿರುತ್ತದೆ.ಈ ಉದ್ದೇಶಗಳು ಸರಳ ಮತ್ತು ಸ್ಪಷ್ಟವಾಗಿರಬೇಕು. ನಿರ್ವಹಣೆಯು ವಿವಿಧ ಜನರ ಪರಿಶ್ರಮವನ್ನು ಒಂದುಗೂಡಿಸುವ ಮೂಲಕ ಸಂಘಟನೆಯ ಉದ್ದೇಶಗಳನ್ನು ಸಾಧಿಸುವುದಾಗಿದೆ.
 
2)ನಿರ್ವಹಣೆಯು ಸಾರ್ವತ್ರಿಕವಾಗಿದೆ(Management is all pervasive):ನಿರ್ವಹಣೆಯ ಚಟುವಟಿಕೆಗಳು ಕೇವಲ ವ್ಯವಹಾರ್ ಸಂಸ್ಥೆಗಳಿಗೆ ಮಾತ್ರವಲ್ಲದೆ ಸಾರ್ವತ್ರಿಕವಾಗಿ ಎಲ್ಲಾ ರೀತಿಯ ಸಂಘಟನೆಗಳಿಗೂ ಅನ್ವಯಿಸುತ್ತವೆ.ಈ ಸಂಘಟನೆಗಳು ಆರ್ಥಿಕ, ಸಾಮಾಜಿಕ, ದತ್ತಿ, ಧಾರ್ಮಿಕ ಅಥವಾ ರಾಜಕೀಯ ಸಂಘಟನೆಗಳಾಗಿರಬಹುದು.ಆದುದರಿಂದ ನಿರ್ವಹಣೆಯ ಅನ್ವಯಿಸುವಿಕೆಯನ್ನು ಎಲ್ಲಾ ಸಂಘಟನೆಗಳಲ್ಲಿ ಕಾಣಬಹುದು.
 
3)ನಿರ್ವಹಣೆಯು ವಿವಿಧ ಆಯಾಮಗಳನ್ನು ಹೊಂದಿದೆ(Management is multi dimensional):ನಿರ್ವಹಣೆಯ ಪ್ರಕ್ರಿಯೆಯು ಸಂಕೀರ್ಣವಾಗಿದ್ದು,ಕೆಳಕಂಡ ಮೂರು ಆಯಾಮಗಳನ್ನು ಹೊಂದಿದೆ.a)ಕೆಲಸದ ನಿರ್ವಹಣೆ,b)ವ್ಯಕ್ತಿಗಳ ನಿರ್ವಹಣೆ c)ಕಾರ್ಯಚಟುವಟಿಕೆಗಳ ನಿರ್ವಹಣೆ.
 
Line ೨೯ ⟶ ೩೧:
 
4)ನಿರ್ವಹಣೆಯು ನಿರಂತರ ಪ್ರಕ್ರಿಯೆಯಾಗಿದೆ: ನಿರ್ವಹಣೆಯು ಒಂದು ನಿರಂತರ ಪ್ರಕ್ರಿಯೆಯಾಗಿ ಯೋಜನೆಗಳನ್ನು ತಯಾರಿಸುವ, ಸಂಘಟಿಸುವ, ಸಿಬ್ಬಂದಿ ನೇಮಕಾತಿ ಮಾಡುವ ಹಾಗೂ ನಿಯಂತ್ರಣ ಮಾಡುವ ಕಾರ್ಯಗಳನ್ನು ಒಳಗೊಂಡಿದೆ.ಎಲ್ಲಾ ವ್ಯವಸ್ಥಾಪಕರು ಈ ಕಾರ್ಯಗಳನ್ನು ನಿರಂತರವಾಗಿ ನಿರ್ವಹಿಸಬೇಕಾಗುತ್ತದೆ. ಈ ನಿರ್ವಹಣಾ ಕಾರ್ಯಗಳು ಸಂಸ್ಥೆಯು ಅಸ್ತಿತ್ವದಲ್ಲಿರುವವರೆಗೂ ನಿರಂತರವಾಗಿ ನಡೆಯುತ್ತಲೇ ಇರುತ್ತದೆ.
 
5)ನಿರ್ವಹಣೆಯು ಗುಂಪು ಚಟುವಟಿಕೆಯಾಗಿದೆ:ಪ್ರತಿಯೊಂದು ಸಂಘಟನೆಯು ವಿವಿಧ ಅಗತ್ಯಗಳನ್ನು ಹೊಂದಿದ ಹಲವಾರು ವ್ಯಕ್ತಿಗಳ ಗುಂಪಾಗಿದೆ.ಈ ಗುಂಪಿನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯೂ ವಿವಿಧ ಉದ್ದೇಶಗಳಿಂದ ಸಂಘಟನೆಯನ್ನು ಪ್ರವೇಶಿಸುತ್ತಾನೆ. ಸಂಘಟನೆಯ ವ್ಯಕ್ತಿಯೂ ಇತರರೊಂದಿಗೆ ಸಂವಹನ ಮತ್ತು ಸಮನ್ವಯದಿಂದ ಸಂಘಟನೆಯ ಸಾಮಾನ್ಯ ಉದ್ದೇಶಗಳ ಸಾಧನೆಗೆ ಕೈಜೋಡಿಸುವುದಾಗಿದೆ. ಆದುದರಿಂದ ನಿರ್ವಹಣೆಯು ಒಂದು ಗುಂಪು ಚಟುವಟಿಕೆಯಾಗಿದೆ.
 
6)ನಿರ್ವಹಣೆಯು ಚಲನಶೀಲ ಕಾರ್ಯವಾಗಿದೆ:ಪ್ರತಿಯೊಂದು ಸಂಘಟನೆಯು ಬದಲಾಗುತ್ತಿರುವ ಪರಿಸರದಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತದೆ.ಪರಿಸರ ಯಾವಾಗಲೂ ಬದಲಾಗುತ್ತಿರುವುದರಿಂದ ಅವಶ್ಯಕತೆಗಳಿಗೆ ಅನುಗುಣವಾಗಿ ನಿರ್ವಹಣೆಯಲ್ಲಿ ಬದಲಾವಣೆಗಳನ್ನು ಮಾಡಿಕೊಂಡು ಕಾರ್ಯ ನಿರ್ವಹಿಸಬೇಕು. ಆದುದರಿಂದ ನಿರ್ವಹಣೆಯು ಒಂದು ಚಲನಶೀಲ ಕಾರ್ಯವಾಗಿದೆ.
 
7)ನಿರ್ವಹಣೆಯು ಅಗೋಚರ ಶಕ್ತಿಯಾಗಿದೆ: ನಿರ್ವಹಣೆಯು ಅದೃಶ್ಯವಾಗಿದ್ದು, ಅದರ ಇರುವಿಕೆಯನ್ನು ಸಂಘಟನೆಯ ಕಾರ್ಯದಲ್ಲಿ ಗಮನಿಸಬಹುದಾಗಿದೆ. ನಿರ್ವಹಣೆಯ ಪರಿಣಾಮಗಳನ್ನು ಉತ್ಪಾದನೆಯ ಗುರಿ ಸಾಧನೆ, ನೌಕರರ ಸಂತೃಪ್ತಿ ಮುಂತಾದವುಗಳಲ್ಲಿ ಕಾಣಬಹುದಾಗಿದೆ. ಆದುದರಿಂದ ನಿರ್ವಹಣೆಯು ಅಗೋಚರವಾಗಿದ್ದು ವ್ಯಕ್ತಿಗಳ ಒಟ್ಟು ಕಾರ್ಯದ ಮೇಲೆ ತನ್ನ ಪರಿಣಾಮವನ್ನು ಪ್ರತಿಫಲಿಸುತ್ತವೆ.
 
'''ನಿರ್ವಹಣೆಯ ಉದ್ದೇಶಗಳು'''
ಪ್ರತಿಯೊಂದು ಸಂಘಟನೆಯನ್ನು ನಿರ್ದಿಷ್ಟ ಉದ್ದೇಶಗಳ ಸಾಧನೆಗಾಗಿ ಸ್ಥಾಪಿಸಲಾಗುತ್ತದೆ.ವಿವಿಧ ಸಂಘಟನೆಗಳೂ ವಿವಿಧ ಉದ್ದೇಶಗಳನ್ನು ಹೊಂದಿರುತ್ತವೆ. ನಿರ್ವಹಣೆಯು ಆ ಉದ್ದೇಶಗಳನ್ನು ಪರಿಣಾಮಕಾರಿಯಾಗಿ ಹಾಗೂ ದಕ್ಷತೆಯಿಂದ ಸಾಧಿಸಬೇಕು. ಈ ಉದ್ದೇಶಗಳನ್ನು ಸಂಘಟನಾತ್ಮಕ ಉದ್ದೇಶಗಳು, ಸಾಮಾಜಿಕ ಉದ್ದೇಶಗಳು,ಹಾಗೂ ವೈಯಕ್ತಿಕ ಉದ್ದೇಶಗಳೆಂದು ವಿಂಗಡಿಸಬಹುದು.
 
1)ಸಂಘಟನಾತ್ಮಕ ಉದ್ದೇಶಗಳು:ಪ್ರತಿಯೊಂದು ಸಂಘಟನೆಯ ಮುಖ್ಯ ಧ್ಯೇಯವು ಆರ್ಥಿಕ ಉದ್ದೇಶಗಳನ್ನು ಈಡೇರಿಸುವುದಾಗಿದೆ.ಇದು ಮಾನವ ಸಂಪನ್ಮೂಲ ಮತ್ತು ಭೌತಿಕ ಸಂಪನ್ಮೂಲಗಳನ್ನು ಉಪಯೋಗಿಸುವುದರ ಮೂಲಕ ಅಧಿಕ ಪ್ರಮಾಣದ ಪ್ರಯೋಜನ ಪಡೆದುಕೊಳ್ಳುವುದಕ್ಕೆ ಸಂಬಂಧಿಸಿರುತ್ತದೆ. ನಿರ್ವಹಣೆಯು ಸಂಘಟನೆಯ ಶೇರುದಾರ, ಸಿಬ್ಬಂದಿ, ವರ್ಗ, ಬಳಕೆದಾರ ಹಾಗೂ ಸರ್ಕಾರದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ಉದ್ದೇಶಗಳನ್ನು ಸಾಧಿಸುವುದಾಗಿರುತ್ತದೆ.
ಆರ್ಥಿಕ ಉದ್ದೇಶಗಳು ಈ ಕೆಳಗಿನಂತಿವೆ:
Line ೪೦ ⟶ ೪೬:
b)ಲಾಭ: ವ್ಯವಹಾರ ಸಂಘಟನೆಯ ಉದ್ದೇಶ ಕೇವಲ ಅಸ್ತಿತ್ವದಲ್ಲಿರುವುದಲ್ಲ. ಸಂಘಟನೆಯ ವೆಚ್ಚಗಳನ್ನು ಭರಿಸಿಕೊಂಡು ಅಧಿಕ ಲಾಭ ಸಂಪಾದಿಸುವ ಮೂಲಕ ಯಶಸ್ವಿಯಾಗಿ ನಿರಂತರ ಅಸ್ತಿತ್ವ ಹೊಂದಲು ಸಾಧ್ಯವಾಗುತ್ತದೆ. ಆದುದರಿಂದ ನಿರ್ವಹಣೆಯು ಸಂಘಟನೆಯ ವೆಚ್ಚ ಮತ್ತು ನಷ್ಟಭಯವನ್ನು ಎದುರಿಸಲು ಸಾಧ್ಯವಾಗುವ ಪ್ರಮಾಣದ ಲಾಭವನ್ನು ಸಂಪಾದಿಸುವುದನ್ನು ಖಚಿತಪಡಿಸಿಕೊಳ್ಳಬೇಕು.
c)ಬೆಳವಣಿಗೆ: ಸಂಘಟನೆಯು ದೀರ್ಘ ಕಾಲ ಅಸ್ತಿತ್ವದಲ್ಲಿರಲು ಅದರ ಬೆಳವಣಿಗೆ ಮತ್ತು ಅಭಿವೃದ್ದಿಗೆ ಪೂರಕವಾದ ಎಲ್ಲಾ ಸದಾವಕಾಶಗಳನ್ನು ನಿರ್ವಹಣೆಯು ಸೂಕ್ಷ್ಮವಾಗಿ ಅವಲೋಕಿಸಿ ಉಪಯೋಗಿಸಿಕೊಳ್ಳಬೇಕು. ಸಂಘಟನೆಯ ಬೆಳವಣಿಗೆಯನ್ನು ಹೆಚ್ಚಳ, ವಿವಿಧ ಬಗೆಯ ವಸ್ತುಗಳ ಉತ್ಪಾದನೆ ಹಾಗೂ ಸಿಬ್ಬಂದಿಯ ಸಂಖ್ಯೆಯಲ್ಲಿ ಹೆಚ್ಚಳ ಮುಂತಾದವುಗಳಲ್ಲಿ ಕಾಣಬಹುದಾಗಿದೆ.
 
2)ಸಾಮಾಜಿಕ ಉದ್ದೇಶಗಳು:ಪ್ರತಿಯೊಂದು ಸಂಘಟನೆಯು ಸಮಾಜದ ಒಂದು ಭಾಗವಾಗಿರುವುದರಿಂದ, ಅವುಗಳು ಸಮಾಜಕ್ಕೆ ಹಲವು ರೀತಿಯಲ್ಲಿ ಹೊಣೆಯಾಗಿರುತ್ತವೆ. ಆ ಸಂಘಟನೆಗಳು ವ್ಯಾಪಾರ ಅಥವಾ ವ್ಯಾಪಾರೇತರ ಸಂಸ್ಥೆಯಾಗಿರಬಹುದು.
ಕೆಳಕಂಡವು ಸಾಮಾಜಿಕ ಹೊಣೆಯಾಗಿರುತ್ತವೆ.
Line ೫೬ ⟶ ೬೩:
ನಿರ್ವಹಣೆಯು ಸಾರ್ವತ್ರಿಕ ಕಾರ್ಯಚಟುವಟಿಕೆಯಾಗಿ ಸಂಘಟನೆಯ ಅವಿಭಾಜ್ಯ ಅಂಗವಾಗಿದೆ.ನಿರ್ವಹಣೆಯು ಕೆಳಗಿನ ಕಾರಣಗಳಿಂದ ಎಲ್ಲಾ ರೀತಿಯಲ್ಲಿ ಪ್ರಾಮುಖ್ಯತೆಯನ್ನು ಪಡೆದಿರುತ್ತದೆ.
1)ನಿರ್ವಹಣೆಯು ಗುಂಪುಗಳ ಉದ್ದೇಶಗಳನ್ನು ಸಾಧಿಸಲು ಸಹಾಯಕವಾಗುತ್ತದೆ: ನಿರ್ವಹಣೆಯು ಗುಂಪುಗಳ ಉದ್ದೇಶಗಳನ್ನು ಸಾಧಿಸಲು ಸಹಾಯಕವಾಗುತ್ತದೆ. ನಿರ್ವಹಣೆಯು ವೈಯಕ್ತಿಕ ಪರಿಶ್ರಮವನ್ನು ಒಗ್ಗೂಡಿಸುವುದರ ಮೂಲಕ ಸಂಘಟನೆಯ ಉದ್ದೇಶಗಳನ್ನು ಸಾಧಿಸಲು ಸಹಾಯ ಮಾಡುತ್ತವೆ.
 
2)ನಿರ್ವಹಣೆಯು ದಕ್ಷತೆಯನ್ನು ಹೆಚ್ಚಿಸುತ್ತದೆ: ಪ್ರತಿಯೊಬ್ಬ ವ್ಯವಸ್ಥಾಪಕನೂ ಸಂಸ್ಥೆಯ ದಕ್ಷತೆಯನ್ನು ಹೆಚ್ಚಿಸಲು ಕಡಿಮೆ ವೆಚ್ಚದಲ್ಲಿ, ಪ್ರಮಾಣದಲ್ಲಿ ಉತ್ಪಾದಿಸುವ ಗುರಿಯನ್ನು ಹೊಂದಿರುತ್ತಾನೆ. ಇದನ್ನು ಉತ್ತಮ ಯೋಜನೆಗಳನ್ನು ರೂಪಿಸುವ, ಸಂಘಟಿಸುವ, ಸಿಬ್ಬಂದಿ ನೇಮಕಾತಿ ಮಾಡುವ, ನಿರ್ದೇಶಿಸುವ ಹಾಗೂ ನಿಯಂತ್ರಿಸುವ ಮೂಲಕ ಸಾಧಿಸಬಹುದಾಗಿದೆ.
 
3)ನಿರ್ವಹಣೆಯು ಚಲನಶೀಲ ಸಂಘಟನೆಯನ್ನು ಸೃಷ್ಟಿಸುತ್ತದೆ: ಪ್ರತಿಯೊಂದು ಸಂಘಟನೆಯು ನಿರಂತರವಾಗಿ ಬದಲಾಗುತ್ತಿರುವ ಪರಿಸರದಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಸಾಮಾನ್ಯವಾಗಿ ಸಂಘಟನೆಯಲ್ಲಿರುವ ವ್ಯಕ್ತಿಗಳು ಬದಲಾವಣೆಯನ್ನು ವಿರೋಧಿಸುತ್ತಾರೆ. ಒಂದು ಪರಿಣಾಮಕಾರಿ ನಿರ್ವಹಣೆಯು ಸ್ಪರ್ಧಾತ್ಮಕ ಕಾರ್ಯ ನಿರ್ವಹಿಸುವ ದೃಷ್ಟಿಯಿಂದ ಸಿಬ್ಬಂದಿವರ್ಗವನ್ನು ಬದಲಾವಣೆಗೆ ಹೊಂದಿಕೊಳ್ಳುವಂತೆ ಮಾಡುತ್ತದೆ.ಆ ಮೂಲಕ ಸಂಘಟನೆಯ ಸ್ಪರ್ಧೆಯನ್ನು ಎದುರಿಸುವ ಸಾಮರ್ಥ್ಯವನ್ನು ಕಾಪಾಡಿಕೊಳ್ಳಬಹುದು. ಈ ಕಾರ್ಯಗಳು ಸಂಘಟನೆಯ ನಿರ್ವಹಣೆಗೆ ಚಲನಶೀಲತೆಯನ್ನು ಒದಗಿಸುತ್ತದೆ.
 
4)ನಿರ್ವಹಣೆಯು ವೈಯಕ್ತಿಕ ಉದ್ದೇಶಗಳನ್ನು ಸಾಧಿಸಲು ಸಹಾಯ ಮಾಡುತ್ತವೆ:ನಿರ್ವಹಣೆಯು ಸಂಘಟನೆಯಲ್ಲಿರುವ ವ್ಯಕ್ತಿಗಳನ್ನು ಉತ್ತೇಜಿಸುವ ಮೂಲಕ ವೈಯಕ್ತಿಕ ಗುರಿಗಳನ್ನು ಸಾಧಿಸಲು ಸಹಾಯ ಮಾಡಬೇಕು. ನಿರ್ವಹಣೆಯು ಸಿಬ್ಬಂದಿವರ್ಗದಲ್ಲಿ ಸಹಕಾರ, ಬದ್ದತೆ, ತಂಡಸ್ಫೂರ್ತಿಯನ್ನು ಹೆಚ್ಚಿಸುತ್ತದೆ.
 
5)ನಿರ್ವಹಣೆಯು ಸಮಾಜದ ಅಭಿವೃದ್ದಿಗೆ ಸಹಕಾರಿಯಾಗಿದೆ: ಸಂಘಟನೆಯ ಅಭಿವೃದ್ದಿಗೆ ಸಮಾಜದ ವಿವಿಧ ವರ್ಗಗಳು ಕಾರಣವಾಗಿರುವುದರಿಂದ ನಿರ್ವಹಣೆಯು ಅವರ ಹಿತಾಸಕ್ತಿಗಳನ್ನು ಕಾಪಾಡುವ ಹೊಣೆಗಾರಿಕೆಯನ್ನು ಹೊಂದಿದೆ. ಒಂದು ಪರಿಣಾಮಕಾರಿ ನಿರ್ವಹಣೆಯು ಕಾರ್ಮಿಕರ ,ಹೂಡಿಕೆದಾರರ , ಗ್ರಾಹಕರ, ಸಾರ್ವಜನಿಕರ ಬಗ್ಗೆ ಇರುವ ಬದ್ದತೆಯನ್ನು ಒಪ್ಪಿಕೊಳ್ಳುವುದರ ಮೂಲಕ ಸಮಾಜದ ಬೆಳವಣಿಗೆ ಮತ್ತು ಅಭಿವೃದ್ದಿಗೆ ಸಹಕರಿಸುತ್ತದೆ. ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ಸರಕು ಮತ್ತು ಸೇವೆಗಳನ್ನು ಪೊರೈಸುವ, ಉದ್ಯೋಗವಕಾಶಗಳನ್ನು ಸೃಷ್ಟಿಸುವ, ಆಧುನಿಕ ತಂತ್ರಜ್ಞಾನವನ್ನು ಅಳವಡಿಸುವುದರ ಮೂಲಕ ಸಮಾಜದ ಯೋಗಕ್ಷೇಮವನ್ನು ರಕ್ಷಿಸುತ್ತಾ, ಬೆಳವಣಿಗೆ ಮತ್ತು ಅಭಿವೃದ್ದಿಯ ಮಾರ್ಗವನ್ನು ನಿರ್ವಹಣೆಯು ಅನುಸರಿಸುತ್ತದೆ.
 
'''ನಿರ್ವಹಣೆಯು ಕಲೆ, ವಿಜ್ಞಾನ ಹಾಗೂ ವೃತ್ತಿಯಾಗಿ'''
ನಿರ್ವಹಣೆಯು ನಾಗರೀಕತೆಯಷ್ಟೇ ಪುರಾತನವಾದದು. ಇದು ಕಾಲಕ್ರಮೇಣ ಚಲನಾತ್ಮಕ ವಿಷಯವಾಗಿ ಬೆಳೆದು ಪ್ರಾಮುಖ್ಯತೆಯನ್ನು ಹೆಚ್ಚಿಸಿಕೊಂಡಿದೆ.
"https://kn.wikipedia.org/wiki/ನಿರ್ವಹಣೆ_ಪರಿಚಯ" ಇಂದ ಪಡೆಯಲ್ಪಟ್ಟಿದೆ