ನಿರ್ವಹಣೆ ಪರಿಚಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೬೦ ನೇ ಸಾಲು:
೪)ನಿರ್ವಹಣೆಯು ವೈಯಕ್ತಿಕ ಉದ್ದೇಶಗಳನ್ನು ಸಾಧಿಸಲು ಸಹಾಯ ಮಾಡುತ್ತವೆ:ನಿರ್ವಹಣೆಯು ಸಂಘಟನೆಯಲ್ಲಿರುವ ವ್ಯಕ್ತಿಗಳನ್ನು ಉತ್ತೇಜಿಸುವ ಮೂಲಕ ವೈಯಕ್ತಿಕ ಗುರಿಗಳನ್ನು ಸಾಧಿಸಲು ಸಹಾಯ ಮಾಡಬೇಕು. ನಿರ್ವಹಣೆಯು ಸಿಬ್ಬಂದಿವರ್ಗದಲ್ಲಿ ಸಹಕಾರ, ಬದ್ದತೆ, ತಂಡಸ್ಫೂರ್ತಿಯನ್ನು ಹೆಚ್ಚಿಸುತ್ತದೆ.
೫)ನಿರ್ವಹಣೆಯು ಸಮಾಜದ ಅಭಿವೃದ್ದಿಗೆ ಸಹಕಾರಿಯಾಗಿದೆ: ಸಂಘಟನೆಯ ಅಭಿವೃದ್ದಿಗೆ ಸಮಾಜದ ವಿವಿಧ ವರ್ಗಗಳು ಕಾರಣವಾಗಿರುವುದರಿಂದ ನಿರ್ವಹಣೆಯು ಅವರ ಹಿತಾಸಕ್ತಿಗಳನ್ನು ಕಾಪಾಡುವ ಹೊಣೆಗಾರಿಕೆಯನ್ನು ಹೊಂದಿದೆ. ಒಂದು ಪರಿಣಾಮಕಾರಿ ನಿರ್ವಹಣೆಯು ಕಾರ್ಮಿಕರ ,ಹೂಡಿಕೆದಾರರ , ಗ್ರಾಹಕರ, ಸಾರ್ವಜನಿಕರ ಬಗ್ಗೆ ಇರುವ ಬದ್ದತೆಯನ್ನು ಒಪ್ಪಿಕೊಳ್ಳುವುದರ ಮೂಲಕ ಸಮಾಜದ ಬೆಳವಣಿಗೆ ಮತ್ತು ಅಭಿವೃದ್ದಿಗೆ ಸಹಕರಿಸುತ್ತದೆ. ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ಸರಕು ಮತ್ತು ಸೇವೆಗಳನ್ನು ಪೊರೈಸುವ, ಉದ್ಯೋಗವಕಾಶಗಳನ್ನು ಸೃಷ್ಟಿಸುವ, ಆಧುನಿಕ ತಂತ್ರಜ್ಞಾನವನ್ನು ಅಳವಡಿಸುವುದರ ಮೂಲಕ ಸಮಾಜದ ಯೋಗಕ್ಷೇಮವನ್ನು ರಕ್ಷಿಸುತ್ತಾ, ಬೆಳವಣಿಗೆ ಮತ್ತು ಅಭಿವೃದ್ದಿಯ ಮಾರ್ಗವನ್ನು ನಿರ್ವಹಣೆಯು ಅನುಸರಿಸುತ್ತದೆ.
'''ನಿರ್ವಹಣೆಯು ಕಲೆ, ವಿಜ್ಞಾನ ಹಾಗೂ ವೃತ್ತಿಯಾಗಿ'''
ನಿರ್ವಹಣೆಯು ನಾಗರೀಕತೆಯಷ್ಟೇ ಪುರಾತನವಾದದು. ಇದು ಕಾಲಕ್ರಮೇಣ ಚಲನಾತ್ಮಕ ವಿಷಯವಾಗಿ ಬೆಳೆದು ಪ್ರಾಮುಖ್ಯತೆಯನ್ನು ಹೆಚ್ಚಿಸಿಕೊಂಡಿದೆ.
ನಿರ್ವಹಣೆಯು ಕಲೆಯಾಗಿ:ನಿರ್ವಹಣೆಯು ಒಂದು ಕಲೆಯಾಗಿದ್ದು ಸಾಮಾನ್ಯ ಸೈದ್ಧಾಂತಿಕ ತತ್ವಗಳನ್ನು ವೈಯಕ್ತಿಕವಾಗಿ ಆಚರಿಸುವ ಮೂಲಕ ಸಾಧ್ಯವಾದ ಉತ್ತಮ ಫಲಿತಾಂಶ ಸಾಧಿಸುವುದಾಗಿದೆ. ಕಲೆಯು ಕೆಳಕಂಡ ಲಕ್ಷಣಗಳನ್ನು ಹೊಂದಿರುತ್ತದೆ.
೧)ಪ್ರಾಯೋಗಿಕ ಜ್ಞಾನ: ಪ್ರತಿಯೊಂದು ಕಲೆಗೂ ಪ್ರಾಯೋಗಿಕ ಜ್ಞಾನ ಅವಶ್ಯಕ. ಅದು ಸಿದ್ಧಾಂತಗಳನ್ನು ಕಲಿಯುವುದರಿಂದ ಸಾಧ್ಯವಾಗುವುದಿಲ್ಲ. ಸೈದ್ಧಾಂತಿಕ ತತ್ವಗಳನ್ನು ಪ್ರಾಯೋಗಿಕವಾಗಿ ಆಚರಣೆಗೆ ತರುವುದು ಅತ್ಯವಶ್ಯಕ. ವ್ಯವಸ್ಥಾಪಕನು ಅನೇಕ ಸೈದ್ಧಾಂತಿಕ ತತ್ವಗಳನ್ನು ವಾಸ್ತವಿಕವಾಗಿ ಆಚರಿಸುವ ಜ್ಞಾನ ಕಾರ್ಯ ನಿರ್ವಹಿಸಬೇಕು.
"https://kn.wikipedia.org/wiki/ನಿರ್ವಹಣೆ_ಪರಿಚಯ" ಇಂದ ಪಡೆಯಲ್ಪಟ್ಟಿದೆ