ಸದಸ್ಯ:Keerthi 340/sandbox: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೪೩ ನೇ ಸಾಲು:
ಉಷ್ಣ ಮತ್ತು ಕೆಲಸ ; ಉಷ್ಣಗತಿವಿಜ್ಞಾನದ ( ) ಮೊದಲನೇ ನಿಯಮ ; ಉಷ್ಣಶಕ್ತಿ ಹಾಗೂ ಯಾಂತ್ರಿಕಶಕ್ತಿ ( ) ಅಂತರಪರಿವರ್ತನೆ ಯಾಗುತ್ತವೆ.
 
ಚಲನೆಯಂತೆ ಉಷ್ಣವೂ ಶಕ್ತಿಯ ಒಂದು ರೂಪ ಪ್ರಾನ್ಸಿನಲ್ಲಿ ಚಲಾವಣೆಯಲ್ಲಿರುವ ಹಣ ಫ್ರಾಂಕ್ ಭಾರತದಲ್ಲಿ ಅದು ರೂಪಾಯಿ ಅದೇ ರೀತಿ ಒಂದೊಂದು ಮಾನಗಳಿವೆ (units)ಉಷ್ಣಶಕ್ತಿ ಅಳೆಯಲು ಕೆಲೊರಿ ಯಾಂತ್ರಿಕಶಕ್ತಿ (ಚಲನಶಕ್ತಿ ಪೊಟೆನ್ಶಲ್ ಎನರ್ಜಿ ) ಅಳೆಯಲು ಜೌಲ್ (joul) . ಅಂಗೈಗಳನ್ನು ಒಂದಕ್ಕೊದು ಉಜ್ಜಿಕೊಂಡರೆ ಶಾಖ ಉತ್ಪತ್ತಿಯಾಗುತ್ತದೆಂಬುದು ಪುರಾತನ ಕಾಲದಲ್ಲೇ ತಿಳಿದಿತ್ತು .ಆದರೆ ,ಉಷ್ಣಶಕ್ತಿ ಮತ್ತು ಯಾಂತ್ರಿಕಶಕ್ತಿಗಳ ನಡುವೆ ಒಂದು ಸಮಾನತೆ ಇದೆಯೆಂಬುದು ಈಚಿನ ಅರಿವು . ನಾವು ಮೊದಲೇ ನೋಡಿದಂತೆ , ಪ್ರತಿ ಶಕ್ತಿಪರಿವರ್ತನೆಯಲ್ಲಿಯೂ ಒಟ್ಟು ಶಕ್ತಿಮೊತ್ತ ಬದಲಾಗುವುದಿಲ್ಲ ; ಮೊದಲಿನಷ್ಟೇ ಇರುತ್ತದೆ . ಅದನ್ನು ಒಬ್ಬ ವ್ಯಕ್ತಿಯ ಒಟ್ಟು ಸಂಪತ್ತಿಗೆ ಹೋಲಿಸಬಹುದು ; ಸ್ವಲ್ಪ ಭಾಗ ನಗದಿನ ರೂಪದಲ್ಲಿರಬಹುದು . ಸ್ವಲ್ಪ ಭಾಗ ಸ್ಥಿರ ಆಸ್ತಿಯ ರೂಪದಲ್ಲಿರಬಹುದು . ಹಣವನ್ನು ಬಳಸಿ ಆಸ್ತಿಯನ್ನು ಕೊಳ್ಳಬಹುದು , ಆಸ್ತಿಯನ್ನು ಮಾರಿ ಹಣ ಮತ್ತು ಆಸ್ತಿಯ ನಡವಿನ ಸಮಾನತೆ ಕಾಲಕಾಲಕ್ಕೆ ಬದಲಾಯಿಸಬಹುದು .ಆದರೆ ಶಕ್ತಿಪರಿವರ್ತನೆಯಲ್ಲಿ ಹಾಗಲ್ಲ . ವಿವಿಧ ಶಕ್ತಿಗಳ ನಡುವಿನ ಸಮಾನತೆ ಯಾವಾಗಲೂ ಸ್ಥಿರ . ಯಾವುದೇ ವ್ಯವಸ್ಥೆಯಲ್ಲಿ ಹೊರಗಿನಿಂದ ಶಕ್ತಿ ಪ್ರವೇಶಿಸದೆ ಅಥವಾ ಒಳಗಿನಿಂದ ಶಕ್ತಿ ಹೊರಹೋಗದೆ ಶಕ್ತಿಪರಿವರ್ತನೆಯಾದಾಗ ನಿವ್ವಳಶಕ್ತಿಯ ರಕ್ಷಣೆ ಹಾಗೂ ಶಕ್ತಿರೂಪಗಳ ನಡುವಿನ ಸಮಾನತೆಯನ್ನು "ಶಕ್ತಿ ಸಂರಕ್ಷಣೆಯ ತತ್ವ " (principle of conservation of energy ) ಎನ್ನುತ್ತಾರೆ .
 
ಮೇಲು ನೋಟಕ್ಕೆ ಇದೊಂದು ಸರಳ ಪರಿಕಲ್ಪನೆ ಎನಿಸಿದರೂ ಇದರ ಮಹತ್ವ ಅರಿವಾಗಬೇಕಾದರೆ ಬಹಳ ಕಾಲವೇ ಬೇಕಾಯಿತು . ನಿಸರ್ಗದ ಎಲ್ಲ ವಿದ್ಯಮಾನಗಳಲ್ಲಿಯೂ , ಚಲನೆಯ ನಿಯಮಗಳು ತೋರಿಬರುವಂತೆ, ಶಕ್ತಿಸಂರಕ್ಷಣೆಯೂ ತೋರಿಬರುತ್ತದೆ . ನಾವು ಬಳಸುವ ಪ್ರತಿ ಉಪಕರಣವನ್ನೂ ಅದು ನಿಯಂತ್ರಿಸುತ್ತದೆ -ಇಷ್ಟು ವಿದ್ಯುತ್ ಅಂದರೆ ಇಷ್ಟು ಉಷ್ಣ ಮತ್ತು ಬೆಳಕಿನ ಸಮ , ಇಷ್ಟ ಪೆಟ್ರೋಲಿನ ರಾಸಾಯನಿಕ ಶಕ್ತಿ ಕಾರಿನ ಇಷ್ಟು ಚಲನಶಕ್ತಿಯಾಅಗುತ್ತದೆ, ಹೀಗೆ .
 
ಉಷ್ಣ ಚಲನ ಸಿದ್ಧಾಂತ (kinetic theory of heat); ಉಷ್ಣಶಕ್ತಿಯು ಅಣು , ಪರಮಾಣುಗಳ ಯಾದೃಚ್ಛಿಕ (random)ಚಲನಶಕ್ತಿಯನ್ನು ಪ್ರತಿಬಿಂಬಿಸುತ್ತದೆ .
 
ಉಷ್ಣ ಎಂದರೆ ಒಂದು ಕಾಯದಿಂದ ಮತ್ತೊಂದು . ಕಾಯಕ್ಕೆ ಹರಿಯುವ ಒಂದು ರೀತಿಯ ಸೂಕ್ಷ್ಮ ದ್ರವ ಎಂದು ಭಾವನೆ ಒಂದು ಕಾಲದಲ್ಲಿ ಇತ್ತು. ಕೆಲವರು ಅಂತಹ ದ್ರವದ ತೂಕ ನಿರ್ಧರಿಸಲು ಪ್ರಯೋಗಗಳನ್ನು ಮಾಡಿದರು . ಆದ್ರವಕ್ಕೆ ಸ್ಥಳಾವಕಾಶ ಬೇಕಾದ್ದರಿಂದ ಬಿಸಿಯದ ಕಾಯ ಉಬ್ಬುತ್ತದೆ ಎಂದು ಅಂದಿನ ನಂಬಿಕೆಯಾಗಿತ್ತು ! ಅಣು , ಪರಮಾಣುಗಳ ಚಲನಶಕ್ತಿ ಹಾಗೂ ಅವುಗಳನ್ನು ಒಳಗೊಂಡ ಕಾಯದ ಉಷ್ಣ ಗುಣಗಳ ನಡುವಿನ ಸಂಬಂಧವನ್ನು ವಿವರಿಸುವ ಭೌತವಿಜ್ಞಾನದ ಒಂದು ಪ್ರಮುಖ ಶಾಖೆಯೇ ಉಷ್ಣ ಚಲನ ಸಿದ್ಧಾಂತ . ಈ ಸಿದ್ಧಾಂತದ ಮೂಲ ತತ್ವಗಳು ಬಹಳ ಸರಳ . ತಮ್ಮ ನಿರಂತರ ಅಲುಗಾಟದಿಂದ ಅಣು , ಪರಮಾಣುಗಳು ಚಲನಶಕ್ತಿಯನ್ನು ಹೊಂದಿರುತ್ತವೆ . ಇದೇ ಕಾಯದ ಆಂತರಿಕ ಶಕ್ತಿ ಹಾಗಾಗಿ ಕಾಯದ ತಾಪ ಏರಿದಷ್ಟೂ ಅದರಲ್ಲಿ ಅಣು, ಪರಮಾಣುಗಳ ಸರಾಸರಿ ಚಲನಶಕ್ತಿಯೂ ಅಧಿಕವಗುತ್ತದೆ. ಘನ ವಸ್ತು ಗಳಲ್ಲಿ ಅಣು , ಪರಮಾಣುಗಳು ಕಂಪಿಸುತ್ತಿರುತ್ತವೆ; ದ್ರವ ವಸ್ತುವಿನಲ್ಲಿ ಅವು ಚಕ್ರಾಕಾರದಲ್ಲಿ ಸುತ್ತುತ್ತಿರುತ್ತವೆ; ಅನಿಲದಲ್ಲಿ ಅವು ಒಂದು ಸ್ಥಳದಿಂದ ಮತೋಂದು ಸ್ಥಳಕ್ಕೆ ತೊಯ್ದಾಡುತ್ತಿರುತ್ತವೆ.
 
ಈ ರೀತಿಯ ಯಾದೃಚ್ಛಿಕ ಚಲನಶಕ್ತಿಯ ವರ್ಗಾವಣೆಯನ್ನೇ ಉಷ್ಣ ಎಂದು ಹೇಳುವುದು.
"https://kn.wikipedia.org/wiki/ಸದಸ್ಯ:Keerthi_340/sandbox" ಇಂದ ಪಡೆಯಲ್ಪಟ್ಟಿದೆ