ಸದಸ್ಯ:Keerthi 340/sandbox: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨ ನೇ ಸಾಲು:
ಪ್ರಪಂಚದ ಕೆಲವು ಪ್ರದೇಶಗಳಲ್ಲಿ ಬೇಸಿಗೆಯ ಸೆಖೆ ಅಸಹನೀಯವಾಗಿರುತ್ತದೆ . ನಿಷ್ಟುರ ಸೂರ್ಯ ಉಗ್ರ ಕಿರಣಗಳನ್ನು ಉಗುಳುತ್ತಿರುತ್ತಾನೆ .ನಾವು ಬೆವರು ಸುರಿಸುತ್ತಾ ನೆರಳಿನೆಡೆಗೆ ಓಡುತ್ತೇವೆ. ಆದರೆ , ಅಂತಹ ಪ್ರದೇಶಗಳಲ್ಲಿಯೂ ಜನ ವಾಸ ಮಾಡುತ್ತಾರೆ.
 
ಆದರೆ, ಎಲ್ಲಿ ಬೆಚ್ಚಗಿನ ಬಿಸಿಲು ಇಲ್ಲವೋ ಅಲ್ಲಿ ಕೊರೆಯುವ ಚಳಿಯಿಂದ ಮೈ ನಡುಗುತ್ತಾ ಜಡ್ದುಗಟ್ಟುತ್ತದೆ. ಆದ್ದರಿಂದಲ್ಲೇ ಸದಾಕಾಲವೂ ಹಿಮ , ಮಂಜಿನಿಂದ ಆ ತವಾಗಿರುವಆವೃತವಾಗಿರುವ ಪ್ರದೇಶಗಳಲ್ಲಿ ಜನವಸತಿ ಇರುವುದಿಲ್ಲ . ಅಷ್ಟೇ ಏಕೆ . ಆ ಭೀಕರ ವಾತಾವರಣದಲ್ಲಿ ಗಿಡಮರಗಳೂ ಬೆಳೆಯಲಾರವು.
 
ನಮ್ಮ ಬದುಕಿಗೆ ಉಷ್ಣ ಎಷ್ಟು ಮುಖ್ಯ ಎಂಬುದು ಇದರಿಂದ ಅರಿವಾಗುತ್ತವೆ . ಅಡುಗೆ ಮಾಡಲೂ ಶಾಖ ಬೇಕು . ಬೆಚ್ಚಗಿದ್ದಾಗ ಬಹಳ ಹಿತ ಹಾಗೂ ನೆಮ್ಮದಿಯಾಗಿರುತ್ತದೆ. ಚಳಿಗಾಲದಲ್ಲಿ ಒಲೆಯ ಮುಂದೆ ಕುಳಿತು ಅಥವಾ ದಪ್ಪ ಕಂಬಳಿ ಹೊದ್ದು ಬೆಚ್ಚಗಿರುವುದು ಅತ್ಯಂತ ಮುದ ನೀಡುತ್ತದಲ್ಲವೆ?
೧೦ ನೇ ಸಾಲು:
ಮನುಷ್ಯನ ದೇಹದ ಸಾಮಾನ್ಯ ಚಟುವಟಿಕೆಗಳಿಗೆ ಉಷ್ಣ ಅವಶ್ಯಕ ಉಷ್ಣವೇ ಜೀವನದ ಮೂಲ .ಈ ಸತ್ಯದ ಅರಿವು ಬಹಳ ಹಿಂದೆಯೇ ಉಂಟಾಗಿತ್ತು . ಊಟ ,ಊಸಿರಟ , ಅಷ್ಟೇ ಏಕೆ ಸಂತಾನೋತ್ಪತ್ತಿಯಲ್ಲಿಯೂ ಉಷ್ಣದ ಪಾತ್ರ ತೋರಿಬರುತ್ತದೆ .
 
ಉಷ್ಣ , ಶೀತ ಇವುಗಳನ್ನು ಅನುಭವಿಸುವುದರಿಂದಷ್ಣೇ ನಮಗೆ ತೃಪ್ತಿ ಇಲ್ಲ . ಈ ಸಂವೇದನೆಗಳ ಮೂಲವೇನು ಎಂಬುದನ್ನೂ ನಾವು ತಿಳಿಯಬೇಕು . ವಾಸ್ತವ ಜಗತ್ತಿನ ಈ ಸತ್ಯವನ್ನು ಮತ್ತಷ್ಟು ಶೋಧಿಸಬೇಕೆಂದು ಬಯಸುತ್ತೇವೆ.
 
ಉಷ್ಣ ಕಿರಣ : ಉಷ್ಣ ಕಿರಣಗಳು ಮತ್ತು ಬೆಳಕಿನ ಕಿರಣಗಳು ಎರಡು ಒಂದೇ ಬಗೆ.
೧೭ ನೇ ಸಾಲು:
 
 
ಹರ್ಷೆಲ್ ನ ಆ ಪ್ರಯೋಗಗಳು ಬಹಳ ಸ್ವಾರಸ್ಯಕರವಾಗಿತ್ತು . ಸೂರ್ಯನ ಬೆಳಕು ಕಾಮನಬಿಲ್ಲಿನ ಏಳು ಬಣ್ಣದ ಬೆಳಕುಗಳಿಂದ ಸಂಯೋಜಿತವಾಗಿದೆ ಯಷ್ಟೆ. ಆ ಪ್ರತಿಯೊದು ಬಣ್ಣದ ಬೆಳಕಿನಲ್ಲಿಯೂ ಎಷ್ಟು ಶಾಖವಿರುತ್ತದೆ ಎಂದು ಆತ ತಿಳಿಯಬಯಸಿದ. ಅದಕ್ಕಾಗಿ ಸೂರ್ಯನ ಬೆಳಕನ್ನು ಒಂದು ಪ್ರಿಸ್ಮ್ ಮೂಲಕ ಹಾಯಿಸಿ ಹೊರಬರುವ ಒಂದೊಂದು ನೀಲಿಯಿಂದ ಕೆಂಪು ಬಣ್ಣದ ವರೆಗೆ ಶಾಖ ಹೆಚ್ಚುತ್ತದೆಂದು ತೋರಿತು.
"https://kn.wikipedia.org/wiki/ಸದಸ್ಯ:Keerthi_340/sandbox" ಇಂದ ಪಡೆಯಲ್ಪಟ್ಟಿದೆ