ದೇವೇಂದ್ರ ಜಿ. ಫಡ್ನವಿಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೪ ನೇ ಸಾಲು:
===ಜನನ,ಬಾಲ್ಯ,ವಿದ್ಯಾಭ್ಯಾಸ ವೃತ್ತಿಜೀವನ===
'ದೇವೇಂದ್ರ', ಮಹಾರಾಷ್ಟ್ರ ರಾಜ್ಯದ 'ದೇಶಸ್ಥ ಬ್ರಾಹ್ಮಣರ ಮನೆತನ'ದಲ್ಲಿ ಜನಿಸಿದರು. ತಂದೆ 'ಗಂಗಾಧರ್ ಫಡ್ನವಿಸ್'. ಮಹಾರಾಷ್ಟ್ರದ ನಾಗಪುರ ಲೆಜಿಸ್ಲೇಟೀವ್ ಕೌನ್ಸಿಲ್ ಗೆ ೨ ಬಾರಿ ಆರಿಸಿಬಂದಿದ್ದರು. (ಮೊದಲು ಜನಸಂಘದಿಂದ, ನಂತರ ಜನತ ಪಕ್ಷ, ಹಾಗೂ ಮುಂದೆ, ಬಿಜೆಪಿ ಪಕ್ಷದಿಂದ) ತಾಯಿ, 'ಸರಿತ ಫಡ್ನವಿಸ್', ಗೃಹಸ್ತೆ. 'ವಿಧರ್ಭ ಹೌಸಿಂಗ್ ಕ್ರೆಡಿಟ್ ಸೊಸೈಟಿಯ ನಿರ್ದೇಶಕಿ'. ಅಣ್ಣ, 'ಅಶಿಶ್ ಫಡ್ನವಿಸ್', ಅಖಿಲಭಾರತೀಯ ವಿದ್ಯಾರ್ಥಿ ಪರಿಶದ್ (ABVP) ನಲ್ಲಿ ಸಕ್ರಿಯ ಕಾರ್ಯಕರ್ತರಾಗಿ ಕೆಲಸಮಾಡುತ್ತಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಫಡ್ನವಿಸ್ ಬೆಳೆದರು. ದೇವೇಂದ್ರನ ಚಿಕ್ಕಮ್ಮ, 'ಶೋಭಾತಾಯಿ ಫಡ್ನವಿಸ್' ಈಗಿನ 'ಸ್ಟೇಟ್ ಲೆಜಿಸ್ಲೇಟೀವ್ ಸದಸ್ಯೆ' ; ಹಿಂದೆ ೧೯೯೫ ರಲ್ಲಿ ಶಿವಸೇನೆ-ಬಿಜೆಪಿ ಸಹಯೋಗದ ಸರಕಾರದಲ್ಲಿ ಮಂತ್ರಿಯಾಗಿದ್ದರು. ನಾಗಪುರದಿಂದ ೧೪೩ ಕಿ.ಮೀ ದೂರದ ಚಂದ್ರಪುರ ಜಿಲ್ಲೆಯ ಮೂಲ್ ಟೌನ್' ನಲ್ಲಿ ಫಡ್ನಿವಿಸ್ ಮನೆತನದ ಪೂರ್ವಜರು ವಾಸಿಸುತ್ತಿದ್ದಾರೆ. ಅವರೆಲ್ಲಾ ಮೂಲತಃ ಜಮೀನುದಾರರು ಮತ್ತು ಕೃಷಿಕರು. ಕಾಲಾನುಕ್ರಮದಲ್ಲಿ ರಾಜಕೀಯದಲ್ಲಿ ಆಸಕ್ತಿವಹಿಸಿದರು. ಬಹಳ ಹಿಂದೆ ಪೂರ್ವಜರು 'ಸತಾರ ಜಿಲ್ಲೆ'ಯ 'ವೈ'ನಲ್ಲಿ ವಾಸಿಸುತ್ತಿದ್ದು, ಪೇಷ್ವೆಗಳ ಆಡಳಿತಾವಧಿಯಲ್ಲಿ, ಚಂದ್ರಪುರದ 'ಸಾವಲಿ'ಯಲ್ಲಿ ಜಹಗೀರು ದೊರೆಯಿತು. ಹಾಗೆಯೇ ಮುಂದುವರೆದ ಅವರ ವಂಶಜರಿಗೆ 'ಮೂಲ್ ಗ್ರಾಮ'ದಲ್ಲಿ 'ವಾತಂದರಿ' ದೊರೆತಮೇಲೆ ಅಲ್ಲಿ ನೆಲೆಸಲು ಪ್ರಾರಂಭಿಸಿದರು.
ಬಾಲಕ, ದೇವೇಂದ್ರ, ಮಾಜಿ ಪ್ರಧಾನಿ, ಇಂದಿರಾ ಗಾಂಧಿಯವರ ಹೆಸರಿನ ’ಇಂದಿರಾ ಕಾನ್ವೆಂಟ್’ ಗೆ ಕಲಿಯಲು ಹೋಗುತ್ತಿದ್ದರು. ಜನಸಂಘದ ಕಾರ್ಯಕರ್ತರಾಗಿದ್ದ ಗಂಗಾಧರ ಫಡ್ನವಿಸ್ ರನ್ನು, ’ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ತಂದೆಯವರನ್ನು ಜೈಲಿಗೆ ಕಳಿಸಿದರು. ಇದರಿಂದಾಗಿ ದೇವೇಂದ್ರನನ್ನು ಸರಸ್ವತಿ ವಿದ್ಯಾಲಯಕ್ಕೆ ಸೇರಿಸಲಾಯಿತು. ಅಲ್ಲಿ ಎಸ್.ಎಸ್.ಸಿ.ಪರೀಕ್ಷೆಯನ್ನು ಮುಗಿಸಿದರು.೧೯೮೬೮೭ ರಲ್ಲಿ ಧರಮ್ ಪೆಟ್ ಜೂನಿಯರ್ ಕಾಲೇಜಿಗೆ ಸೇರಿ, ಮುಂದೆ ಲಾ ಕಾಲೇಜ್ ನಾಗ್ಪುರ್ ನಿಂದ ಪದವಿ ಗಳಿಸಿದರು. ಮೊದಲಿನಿಂದಲೂ ಆಭ್ಫ್ ಯ ಸಕ್ರಿಯ ಕಾರ್ಯಕರ್ತನಾಗಿ ದುಡಿದಿದ್ದರು. ಕೆಲಸ ಶುರುಮಾಡಿದರು. ಗೋಡೆಗೆ ಬಣ್ಣ ಬಳಿಯುವುದು,ರಾಜಕೀಯಪಟುಗಳ ಬಗ್ಗೆ ಮುದ್ರಿಸಲಾದ ಭಿತ್ತಿಪತ್ರಗಳನ್ನು ನಗರದ ಗೋಡೆಗಳ ಮೇಲೆ ಅಂಟಿಸುವ ಕೆಲಸ ಇತ್ಯಾದಿ
ಬರ್ಲಿನ್ ಜರ್ಮನ್ ಫೌಂಡೇಶನ್ ಫಾರ್ ಇಂಟರ್ನ್ಯಾಷನಲ್ ಡೆವೆಲೊಪ್ಮೆಂಟ್(ಡ್ಶೇ) ನ ವತಿಯಿಂದ, ಬಿಜಿನೆಸ್ ಮ್ಯಾನೇಜ್ಮೆಂಟ್ ನಲ್ಲಿ ಸ್ನಾತಕೋತ್ತರ ಪದವಿ, ಹಾಗೂ ಡಿಪ್ಲೊಮಾ ಇನ್ ಮೆಥಡ್ಸ್ ಅಂಡ್ ಟೆಕ್ನಿಕ್ಸ್ ಆಫ್ ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಗಳಿಸಿದರು.
==ಪರಿವಾರ ಮತ್ತು ವೈಯಕ್ತಿಕ ಜೀವನ==
'ದೇವೇಂದ್ರ' ೨೦೦೬ 'ಅಮೃತ ರಾನಡೆ'ಯನ್ನು ಮದುವೆಯಾದರು. 'ಅಮೃತ', 'ನಾಗ್ಪುರ್ ಶಾಖೆಯ ಆಕ್ಸಿಸ್ ಬ್ಯಾಂಕಿನ ಉಪ ಅಧ್ಯಕ್ಷೆ'ಯಾಗಿ ಕೆಲದಮಾಡುತ್ತಿದ್ದಾರೆ. ತಂದೆ ತಾಯಿ ಇಬ್ಬರೂ ವೈದ್ಯರು. ಅಮೃತಾ, ಮನೆಯ ಯಾವ ಸದಸ್ಯರೂ ರಾಜಕೀಯದಲ್ಲಿಲ್ಲ. ದೇವೇಂದ್ರ, ಅಮೃತ ದಂಪತಿಗಳಿಗೆ 'ದಿವಿಜ' ಎಂಬ ೫ ವರ್ಷದ ಮಗಳಿದ್ದಾಳೆ. ದಿವಿಜ 'ಭವನ್ಸ್ ನ ಭಗವಾನ್ ದಾಸ್ ಪುರೋಹಿತ್ ವಿದ್ಯಾ ಮಂದಿರ್' ನಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುತ್ತಿದ್ದಾಳೆ. 'ದೇವೇಂದ್ರ ಫಡ್ನವಿಸ್', ತಂತ್ರಜ್ಞಾನದ ಪುಸ್ತಕ ಪ್ರಿಯ, ಎನರ್ಜಿ, ಟ್ಯಾಕ್ಸ್, ಎಕೊನೊಮಿಕ್ಸ್ ಮುಂತಾದ ವಿಶಯಗಳ ಬಗ್ಗೆ ವಿಶೇಶ ಆಸಕ್ತಿ. ಐ ಫೋನ್ ಮತ್ತ್ ಐ ಪ್ಯಾಡ್ ಎಲ್ಲೆಡೆ ಒಯ್ಯುತ್ತಾರೆ. ಹಳೆಯ ಹಿಂದಿ ಸಿನೆಮಾದ ಹಾಡುಗಳು, ಮತ್ತು ಹಿಂದಿ ಚಿತ್ರಗಳ ಸಂಭಾಷಣೆಗಳು ಅವರಿಗೆ ಬಲು ಪ್ರಿಯ.
 
೨೦೦೬ ರಲ್ಲಿ 'ಫಡ್ನವಿಸ್' ನಾಗ್ಪುರದ 'ಅಂಬಿಕ ಪುರುಷರ ಉಡುಪಿನ ಜಾಹಿರಾತಿಗೆ ಮಾಡೆಲ್' ಆಗಿ ಕೆಲಸಮಾಡಿದ್ದರು. ಫೋಟೋಗ್ರಾಫರ್ ಗೆಳೆಯ, 'ವಿವೇಕ್ ರಾನಡೆ'ಗೆ ಉಚಿತವಾಗಿ, ಪಶ್ಚಿಮ ನಾಗ್ಪುರದ ಮಾರುಕಟ್ಟೆ ವಲಯದಲ್ಲಿ ೫ ಭಾರಿ ಹೋರ್ಡಿಂಗ್ ಗಳನ್ನು ನಿರ್ಮಿಸಿ ಸ್ಥಾಪಿಸಲು ಸಹಾಯಮಾಡಿದರು.
 
 
 
 
 
 
==ಉಲ್ಲೇಖಗಳು==