ಅಕಶೇರುಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಲೇಖನ
 
ಚು added Category:ಜೀವ using HotCat
೫೬ ನೇ ಸಾಲು:
 
ಎಕೈನೊಡರ್ಮೆಟ ವಂಶ ನಕ್ಷÀತ್ರಮೀನುಗಳು, ಸಮುದ್ರದ ಅರ್ಚಿನ್ಗಳು, ಸಮುದ್ರದ ಸೌತೆ-ಇತ್ಯಾದಿ ಜೀವಿಗಳನ್ನು ಒಳಗೊಂಡಿದೆ. ಈ ಪ್ರಾಣಿಗಳು ಆರೀಯ ಸಮಾಂಗತೆಯನ್ನು ಹೊಂದಿವೆ. ಆದರೆ ಇವುಗಳ ಲಾರ್ವ ಜೀವಿಗಳು ಮಾತ್ರ ದ್ವಿಪಾಶರ್್ವಸಮಾಂಗತೆಯನ್ನು ಹೊಂದಿರುತ್ತವೆ. ಆದುದರಿಂದ ಈ ಕೇಂದ್ರ ಸೌಷ್ಠವ ಜೀವಿ ಪ್ರಬುದ್ಧಾವಸ್ಥೆಯನ್ನು ತಲುಪಿದ ಮೇಲೆ ಗಳಿಸಿಕೊಂಡದ್ದು ಎಂದು ಧಾರಾಳವಾಗಿ ಹೇಳಬಹುದು. ಎಕೈನೊಡರ್ಮೇಟ ವಂಶದ ಎಲ್ಲ ಪ್ರಾಣಿಗಳೂ ಸಮುದ್ರವಾಸಿಗಳು. ಈ ಪ್ರಾಣಿಗಳ ಪ್ರಾಚೀನ ಇತಿಹಾಸ ಕೇಂಬ್ರಿಯನ್ ಕಾಲದಿಂದಲೂ ತಿಳಿದುಬಂದಿದೆ. ಅತ್ಯಂತ ಮುಖ್ಯವಾದ ವಿಷಯವೆಂದರೆ ಈ ವಂಶದ ಜೀವಿಗಳ ಲಾರ್ವ ಜೀವಿ ಹೆಮಿಕಾರ್ಡೇಟ ವಂಶದ ಲಾರ್ವಜೀವಿಯನ್ನು ಹೋಲುತ್ತದೆ. ಈ ಗುಣದಿಂದಾಗಿ ಈ ವಂಶ ಕಶೇರುಕಗಳ ಉದಯಕ್ಕೆ ದಾರಿ ಮಾಡಿಕೊಟ್ಟಿದೆ ಎಂಬ ತೀರ್ಮಾನಕ್ಕೆ ಬರಲು ಸಹಾಯಮಾಡಿದೆ. ಏಕೆಂದರೆ ಎಕೈನೊಡರ್ಮೇಟ ವಂಶದ ಡೆಪ್ಲುರುಲ ಲಾರ್ವ, ಹೆಮಿಕಾರ್ಡೇಟ ವಂಶದ ಟಾರ್ನೆರಿಯ ಲಾರ್ವಾಕ್ಕೆ ಅತಿ ಹೆಚ್ಚಿನ ಹೋಲಿಕೆಯನ್ನು ತೋರಿಸುತ್ತದೆ. ಎಕೈನೊಡರ್ಮೇಟ ವಂಶದ ಜೀವಿಗಳ ಶರೀರ ಪಂಚ ಬಾಹುಗಳನ್ನು ಸಾಮಾನ್ಯವಾಗಿ ಹೊಂದಿರುತ್ತವೆ. ಇವುಗಳ ಶರೀರದಲ್ಲಿ ಸುಣ್ಣ ಮಿಶ್ರಿತವಾದ ತಟ್ಟೆಗಳು ರಕ್ಷಾಕವಚದಂತಿವೆ. ಆದುದರಿಂದ ಇವುಗಳನ್ನು ಕಠಿಣಚರ್ಮಿಗಳೆನ್ನುತ್ತಾರೆ.
 
[[ವರ್ಗ:ಜೀವ]]
"https://kn.wikipedia.org/wiki/ಅಕಶೇರುಕ" ಇಂದ ಪಡೆಯಲ್ಪಟ್ಟಿದೆ