ಯಕೃತ್ತು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೯೫ ನೇ ಸಾಲು:
* [[ಹೆಪ್ಪುಗಟ್ಟಿಸುವ ಅಂಶ]]ಗಳಾದ [[I]] (ಫೈಬ್ರಿನೊಜೆನ್), [[II]] (ಪ್ರೊಥ್ರೋಂಬಿನ್), [[V]], [[VII]], [[IX]], [[X]] ಮತ್ತು [[XI]]- ಇವುಗಳನ್ನಷ್ಟೇ ಅಲ್ಲದೇ, [[C ಪ್ರೋಟೀನ್‌]], [[S ಪ್ರೋಟೀನ್‌]] ಮತ್ತು ಪ್ರತಿಕರಣಿಕಾರಕ (antithrombin)ಗಳನ್ನೂ ಕೂಡ ಯಕೃತ್ತು ಉತ್ಪಾದಿಸುತ್ತದೆ.
* ಮೊದಲ ಮ‌ೂರುತಿಂಗಳ [[ಭ್ರೂಣ]]ದಲ್ಲಿ [[ಕೆಂಪು ರಕ್ತಕಣ]]ಗಳ ಉತ್ಪತ್ತಿಗೆ ಯಕೃತ್ ಪ್ರಮುಖ ತಾಣವಾಗಿದೆ. [[ಗರ್ಭಧಾರಣೆ]]ಯಾದ 32ನೇ ವಾರದ ಹೊತ್ತಿಗೆ, ಈ ಕಾರ್ಯವನ್ನು [[ಅಸ್ಥಿ ಮಜ್ಜೆ]]ಯು ಬಹುಪಾಲು ಸಂಪೂರ್ಣವಾಗಿ ತೆಗೆದುಕೊಳ್ಳುತ್ತದೆ.
* ಕೊಬ್ಬಿನ ಎಮಲ್ಸೀಕರಣಕ್ಕೆಹಾಲಂದೀಕರಣಕ್ಕೆ (emulsification) ಅಗತ್ಯವಾಗಿರುವ [[ಪಿತ್ತರಸ]]ವನ್ನು (ಒಂದು ಹಸಿರು ಬಣ್ಣದ ದ್ರವ) ಯಕೃತ್ತು ಉತ್ಪತ್ತಿ ಮಾಡುತ್ತದೆ ಮತ್ತು ಸ್ರವಿಸುತ್ತದೆ. ಪಿತ್ತರಸದ ಕೆಲಭಾಗವು [[ಡ್ಯುಯೊಡಿನಮ್‌]]ನೊಳ‌ಗೆ ನೇರವಾಗಿ ಸ್ರವಿಕೆಯಾಗುತ್ತದೆ, ಹಾಗೂ ಸ್ವಲ್ಪ ಭಾಗವು [[ಪಿತ್ತಕೋಶ]]ದಲ್ಲಿ ಶೇಖರಿಸಲ್ಪಡುತ್ತದೆ.
* [[ಇನ್ಸುಲಿನ್‌-ಸದೃಶ ವರ್ಧನಾಂಶ (insulin-like growth factor-1)ವನ್ನೂ (IGF-1) ಯಕೃತ್ತು ಉತ್ಪಾದಿಸುತ್ತದೆ. ಇದು ಬಾಲ್ಯದಲ್ಲಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುವ ಹಾಗೂ ವಯಸ್ಕರಲ್ಲಿ [[ಸಂವರ್ಧನ ಕ್ರಿಯೆಯ ಪರಿಣಾಮಗಳನ್ನು]] ಬೀರುವ ಒಂದು [[ಪಾಲಿಪೆಪ್ಟೈಡ್‌]] [[ಪ್ರೋಟೀನ್‌]] ಹಾರ್ಮೋನು ಆಗಿದೆ.
*ಮುಚ್ಚಳಿಗೋತ್ಪಾದಕಗಳ (thrombopoietin) ಉತ್ಪತ್ತಿಗೆ ಯಕೃತ್ತು ಒಂದು ಪ್ರಮುಖ ತಾಣವಾಗಿದೆ. ಮುಚ್ಚಳಿಗೋತ್ಪಾದಕ ಒಂದು [[ಗ್ಲೈಕೊಪ್ರೋಟೀನ್‌]] ಹಾರ್ಮೋನು ಆಗಿದ್ದು, ಇದು [[ಅಸ್ಥಿಮಜ್ಜೆ]]ಯಿಂದ [[ಕಿರುಬಿಲ್ಲೆ]]ಗಳು ಉತ್ಪತ್ತಿಯಾಗುವುದನ್ನು ನಿಯಂತ್ರಿಸುತ್ತದೆ.
"https://kn.wikipedia.org/wiki/ಯಕೃತ್ತು" ಇಂದ ಪಡೆಯಲ್ಪಟ್ಟಿದೆ