ಶಬ್ದಮಣಿದರ್ಪಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೦ ನೇ ಸಾಲು:
*ಶಬ್ದಮಣಿದರ್ಪಣದಲ್ಲಿ 'ಸಂಧಿ ಪ್ರಕರಣ' 'ನಾಮಪ್ರಕರಣ', 'ಸಮಾಸ ಪ್ರಕರಣ' 'ತದ್ಧಿತಪ್ರಕರಣ' 'ಆಖ್ಯಾತಪ್ರಕರಣ' 'ಧಾತುಪ್ರಕರಣ' 'ಅಪಭ್ರಂಶ ಪ್ರಕರಣ' 'ಅವ್ಯಯಪ್ರಕರಣ' ಎಂಬ ಹೆಸರಿನ ಎಂಟು ಅಧ್ಯಾಯಗಳಿವೆ. ಇಲ್ಲಿ ಅಧ್ಯಾಯಗಳಿಗೆ "ಪ್ರಕರಣ" ಎನ್ನಲಾಗುತ್ತದೆ. ಕಂದಪದ್ಯಗಳಿಗೆ 'ಸೂತ್ರ'ವೆಂದೂ, ಗದ್ಯರೂಪದ ವಿವರಣೆಗೆ 'ವೃತ್ತಿ'ಯೆಂದೂ, ವ್ಯಾಕರಣದ ಉದಾಹರಣೆಗಳಿಗೆ 'ಪ್ರಯೋಗ'ವೆಂದು ಕರೆದು, ತನ್ನ ಗ್ರಂಥಕ್ಕೆ ೨ನೇ ನಾಗವರ್ಮನ "ಶಬ್ದಸ್ಪೃತಿ ಮತ್ತು ಕಾವ್ಯಾವಲೋಕನ" ಗ್ರಂಥಗಳ 'ಸೂತ್ರ', 'ವೃತ್ತಿ' ಮತ್ತು 'ಪ್ರಯೋಗ'ಗಳನ್ನು ಆಧರಿಸಿದ್ದಾನೆ.

ಸೂತ್ರಂ|| ಕ್ರಮದಿಂದೆ ಸಂಧಿ ನಾಮಂ

ಸಮಾಸಮಾ ತದ್ಧಿತಂ ಪೊದಳ್ದಾಖ್ಯಾತಂ|

ಸಮುದಿತ ಧಾತುವಪಭ್ರಂ

ಶಮವ್ಯಯಂ ಸಂಧಿ ಶಬ್ದಮಣಿದರ್ಪಣದೊಳ್||

(ಶಬ್ದಮಣಿದರ್ಪಣ-ಪೀಠಿಕೆ-೮)

ಈತನ ಮೇಲೆ ಸಂಸ್ಕೃತ ವೈಯಾಕರಣರ ಪ್ರಭಾವ ಅಪಾರವಾಗಿದೆ. ಒಟ್ಟು ಗ್ರಂಥವನ್ನು ನಾಲ್ಕು ಪಾದಗಳಾಗಿ ವಿಂಗಡಿಸಿಕೊಂಡಿದ್ದಾನೆ.
"https://kn.wikipedia.org/wiki/ಶಬ್ದಮಣಿದರ್ಪಣ" ಇಂದ ಪಡೆಯಲ್ಪಟ್ಟಿದೆ