ಶಬ್ದಮಣಿದರ್ಪಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೬ ನೇ ಸಾಲು:
 
==ಕೇಶಿರಾಜನ ವೈಯಕ್ತಿಕ ಪರಿಚಯ/ಇತರ ಕೃತಿಗಳು==
'''ಕೇಶಿರಾಜ'''ನ ಕಾಲ ಸುಮಾರು ಕ್ರಿ.ಶ.[[೧೨೬೦]]. ಈತನು [[ಜನ್ನ]]ನ ಸೋದರಳಿಯ.ಪ್ರಸಿದ್ಧ ಕವಿ ಹಾಗೂ ವಿದ್ವಾಂಸರ ಮನೆತನಕ್ಕೆ ಸೇರಿದವನು. ಈತನ ತಂದೆ ಹಳಗನ್ನಡ ಕಾವ್ಯ ಸಂಕಲನ ಗ್ರಂಥವಾದ "ಸೂಕ್ತಿಸುಧಾರ್ಣವ"ದ ಕರ್ತೃ ಯೋಗಿಪ್ರವರ ಚಿದಾನಂದ ಮಲ್ಲಿಕಾರ್ಜುನಮಲ್ಲಿ ಕಾರ್ಜುನ; ತಾಯಿಯ ತಂದೆ ಕವಿಯೂ ಯಾದವಕಟಕಾಚಾರ್ಯನೂ ಆಗಿದ್ದ "ಸುಮನೋಬಾಣ" ಎಂದು ಶಬ್ದಮಣಿದರ್ಪಣದ ಆದಿಯಲ್ಲಿ ಕೇಶಿರಾಜನೇ ಹೇಳಿದ್ದಾನೆ.ಸುಮನೋಬಾಣಾನು ಇಮ್ಮಡಿ ನರಸಿಂಹನ ಆಸ್ಥಾನದಲ್ಲಿದ್ದ.(೧೨೩೦) ಅವನ ಅನಂತನಾಥಪುರಾಣದಲ್ಲಿ ಅದರ ಸೂಚನೆಯಿದೆಸೂಚನೆ ಯಿದೆ. ಕೇಶಿರಾಜ ಚೋಳರಾಜನಾದ ಇಮ್ಮಡಿ ನರಸಿಂಹನ ಹಗೂ ಅವನ ಮಗ ಸೋಮೇಶ್ವರನ ಆಳಿಕೆಯಲ್ಲಿದ್ದನೆಂದು ವಿದ್ವಾಂಸರು ಹೇಳುತ್ತಾರೆ. ಇಮ್ಮಡಿ ನರಸಿಂಹನ ಆಳ್ವಿಕೆಯಕಾಲ ೧೨೨೦-೩೮. ಅಲ್ಲದೇ ಅವನ ಮಗನಾದ ಸೋಮೇಶ್ವರನ ಕಾಲ ೧೨೩೩-೬೭. ಈ ಕಾಲಘಟ್ಟದಲ್ಲಿಯೇ ಕೇಶಿರಾಜನ ಶಬ್ದಮಣಿದರ್ಪಣ ರಚನೆಯಾದದ್ದು. <br /> [[:ವರ್ಗ:ಕನ್ನಡ ವ್ಯಾಕರಣ|ವ್ಯಾಕರಣ]]ವನ್ನು ವಿವರಿಸುವ [[ಶಬ್ದಮಣಿದರ್ಪಣ]] ಈತನ ಪ್ರಖ್ಯಾತ ಕೃತಿ. <br />
 
ಕವಿ ಸುಮನೋಬಾಣನ ಯಾ<br />
-ದವಕಟಕಾಚಾರ್ಯನೆಸೆವ ದೌಹಿತ್ರನೆ ನಾಂ|<br />
Line ೩೮ ⟶ ೩೯:
* ಕಿರಾತ,
* ಸುಭದ್ರಾ ಹರಣ,
* ಶ್ರೀ ಚಿತ್ರಮಾಲೆ.- ಆದರೆ ಇವು ಯಾವುವೂ ಪ್ರಸ್ತುತ ಲಭ್ಯವಿಲ್ಲವಾಗಿವೆ.
 
==ಪೀಠಿಕೆ/ಪೂರ್ವಪ್ರಕರಣ/ಸಂಜ್ಞಾಪ್ರಕರಣ==
ಇದರಲ್ಲಿ ಮಾತಿನ ಅಧಿದೇವತೆ ವಾಗ್ದೇವಿಯನ್ನು ಸ್ತುತಿಸಲಾಗಿದೆ. ಮಾತೆಂಬ ಶಾಸ್ತ್ರದಿಂದ ಶಾರದೆಯನ್ನು ಪೂಜಿಸಿ, ನಮಸ್ಕರಿಸುತ್ತಿದ್ದೇನೆ ಎನ್ನುವಾಗ ವಾಣಿಯ ಪರಿಶುದ್ಧತೆ ಮತ್ತು ಪಾರಮಾರ್ಥಿಕ ಮಹತ್ವಗಳೆರಡೂ ರಸವತ್ತಾಗಿ ಮೂಡಿಬಂದಿವೆ. ಭಾರತೀಯ ಕಾವ್ಯ ಮೀಮಾಂಸಕರು ನನಗೆ ವ್ಯಾಕರಣಶಾಸ್ತ್ರ ಗ್ರಂಥವನ್ನು ಬರೆ ಎಂದು ಒತ್ತಾಯಿಸಿದ್ದರಿಂದ, ನಾನು ಶಬ್ದಸಾಮರ್ಥ್ಯವೆಂಬ ಗುಣವನ್ನು ಹೊಂದಿದ ಕೃತಿ ರಚಿಸಿ, ಅದಕ್ಕೆ "ಶಬ್ದಮಣಿದರ್ಪಣ"ವೆಂಬ ಹೆಸರಿಟ್ಟಿದ್ದೇನೆ. ಇದು ಲಕ್ಷಣವಾದ ವ್ಯಾಕರಣಶಾಸ್ತ್ರವಾಗಿದೆ. ಈ ಗ್ರಂಥವನ್ನು ಮೀಮಾಂಸಕರು ಕೇಳಬೇಕು. ಇದರಲ್ಲಿ 'ಅಷ್ಟ ದಶ ದೋಷ'ವೇನಾದರೂ ಇದ್ದರೆ, ಅದು ನಿಮ್ಮ ಗಮನಕ್ಕೆ ಬಂದರೆ, ಪ್ರೀತಿಯಿಂದ ತಿದ್ದಿ ಸರಿಪಡಿಸಿ. ಒಂದು ವೇಳೆ ಈ ಕೃತಿಯಲ್ಲಿ ದೋಷ ಕಂಡು ಬಂದರೆ, ಅದನ್ನು ದೊಡ್ಡದು ಮಾಡದೆ, ಗುಣದೋಷಗಳನ್ನು ಪೃಥಿಕರಿಸಿ, ಗುಣವನ್ನು ಮಾತ್ರ ಸ್ವೀಕರಿಸ ಬೇಕೆಂದು ವಿನಯ ಪೂರ್ವಕವಾಗಿ ಅರಿಕೆ ಮಾಡಿಕೊಂಡಿದ್ದಾನೆ.
 
==ಶಬ್ದಮಣಿದರ್ಪಣ - ನಲ್ನುಡಿಗನ್ನಡಿ ==
*ಶ್ರೀ ಕೇಶಿರಾಜರ ಶಬ್ದಮಣಿದರ್ಪಣಕ್ಕೆ ೯೮೫ ಪುಟದ ವಿಸ್ತೃತವಾದ ವ್ಯಾಖ್ಯಾನವನ್ನು, ಬೆಂಗಳೂರು ಸರ್ಕಾರಿ ವಾಣಿವಲಾಸ ಜೂನಿಯರ ಕಾಲೇಜಿನಲ್ಲಿ ಕನ್ನಡ ಪಂಡಿತರಾಗಿದ್ದ ಶ್ರೀ ಭುವನಹಳ್ಳಿ ಪದ್ಮನಾಭಶರ್ಮರು ೧೯೭೫/1975 ರಲ್ಲಿ ಬರೆದು ೧೯೭೬ ರಲ್ಲಿ ಪ್ರಕಟಿಸಿದ್ದಾರೆ. ಅದನ್ನು ಬಹಳಷ್ಟು ವಿದ್ವಾಂಸರು ಗಮನಿಸಿದಂತೆ ಕಾಣುವುದಿಲ್ಲ. (ಅವರೇ ಶ್ರೀಮದ್ ಭಟ್ಟಾಕಳಂಕದೇವ ವಿರಚಿತ "ಕರ್ಣಾಟಕ ಶಬ್ದಾನುಶಾಸನಕ್ಕೂಶಬ್ದಾನುಶಾಸನ"ಕ್ಕೂ ವ್ಯಾಖ್ಯಾನ ಬರೆದು, ೧೯೬೭ರಲ್ಲಿ ಪ್ರಕಟಿಸಿದ್ದಾರೆ.) ಅದರ ಬಗ್ಗೆ ಅಂದಿನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ [[ಜಿ.ನಾರಾಯಣ]], (ಮಾಜಿ ಬೆಂಗಳೂರು ಮೇಯರ್) ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು, ಅದೇ ಗ್ರಂಥದಲ್ಲಿ ಬರೆದ, ಅವರ ಅಭಿಪ್ರಾಯವನ್ನು ನೋಡಿದರೆ ಗ್ರಂಥದ ಪರಿಚಯ ಸಾಮಾನ್ಯ ಮಟ್ಟಿಗೆ ತಿಳಿಯುವುದು.
 
{| class="wikitable"
|-
|:: '''ಅಂದಿನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಶ್ರೀ [[ಜಿ.ನಾರಾಯಣ]] ಅವರ ಅಭಿಪ್ರಾಯ''' ---ಹಳಗನ್ನಡದ ಅಧಿಕೃತ ಸ್ವಭಾವವನ್ನು ಗುರುತಿಸಬೇಕಾದರೆ ಕೇಶಿರಾಜರ ಸಹಾಯವಿಲ್ಲದೆ ಆಗುವುದಿಲ್ಲ.---ಈ ಕಾರಣದಿಂದಲೇ ಭಾಷಾವಿದ್ವಾಂಸರು ಶಬ್ದಮಣಿದರ್ಪಣವನ್ನು ಅಧಿಕೃತ ಗ್ರಂಥವಾಗಿ ಉಳಿಸಿಕೊಂಡು ಬಂದಿದ್ದಾರೆ.---ಇದರ ಇನ್ನೂ ಹಲವಾರು ಪ್ರಕಟಣೆಗಳು ಈಗಾಗಲೇಬಂದಿವೆ. --- ಶ್ರೀ [[ಭುವನಹಳ್ಳಿ ಪದ್ಮನಾಭಶರ್ಮ]]ರು ಕನ್ನಡ ಪಂಡಿತರು, ವಿದ್ವಾಂಸರು, ಸಂಸ್ಕೃತಾದಿ ಹಲವು ಭಾಷೆಗಳನ್ನು ಬಲ್ಲವರು, ಅವರು ತಮ್ಮದೇ ಆದ ''' ನಲ್ನುಡಿಗನ್ನಡಿ''' ಎಂಬ ವ್ಯಾಖ್ಯಾನ ಸಹಿತವಾಗಿ ಶಬ್ದಮಣಿದರ್ಪಣದ ಹೊಸ ಆವೃತ್ತಿಯನ್ನು ತಂದಿದ್ದಾರೆ. ಅವರು ಈ ವ್ಯಾಕರಣದ ಅಭ್ಯಾಸ ಎಲ್ಲರಿಗೂ ಸುಲಭವಾಗಲಿ ಎಂದು ಸರಳವಾಗಿ ವಿಷಯಗಳನ್ನು ನಿರೂಪಿಸಿ, ಪ್ರತಿ ಸೂತ್ರಕ್ಕೆ ಪದವಿಭಾಗ, ಪದಾನ್ವಯ, ಅನ್ವಾನುಕ್ರಮವಾದ ಅರ್ಥ, ಕೇಶಿರಾಜರ ವೃತ್ತಿ, ಅದಕ್ಕೆ ಕನ್ನಡದಲ್ಲಿ ವಿವರಣಾತ್ಮಕವಾದ ಅರ್ಥ, ನಿಟ್ಟೂರು ನಂಜಯ್ಯನ ವ್ಯಾಖ್ಯಾನ, ಉದಾಹರಣೆಗಳು, ಭಾಷಾಭೂಷಣ ಇತ್ಯಾದಿ ಇತರ ವ್ಯಾಕರಣಗಳ ಸೂತ್ರಗಳ ಅನ್ವಯ, ಮತ್ತು ಕಠಿಣ ಶಬ್ದಗಳ ಅರ್ಥ, ಮತ್ತು ವಿಶೇಷ ವಿಷಯಗಳು,(ಕೊನೆಯಲ್ಲಿ ವಿಷಯ ಸೂಚಿ-ಪರಿಶಿಷ್ಟ) ಹೀಗೆ ವಿವರಣೆ --ನೀಡಿದ್ದಾರೆ . ಭೂಮಿಕೆ (ಪೀಠಿಕೆ) ಭಾಗದಲ್ಲಿ ಭಾಷೆ ಮತ್ತು-- ಅದರ ವಿಷಯಗಳ ವ್ಯಾಕರಣ ಅಭ್ಯಾಸಕ್ಕೆ ಬೇಕಾದ ಎಲ್ಲಾ ವಿಚಾರಗಳನ್ನೂ ಸಂಗ್ರಹಿಸಿ ಕೊಟ್ಟಿದ್ದಾರೆ ಇದೊಂದು ಉಪಯುಕ್ತ ಪ್ರಕಟಣೆ.:ಅಭಿಪ್ರಾಯ: (ಶ್ರೀ) ಜಿ. ನಾರಾಯಣ,(ಮಾಜಿ ಬೆಂಗಳೂರು ಮೇಯರ್) ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು ಚಾಮರಾಜಪೇಟೆ ಬೆಂಗಳೂರು; (೧೯೭೫ )
|}
 
"https://kn.wikipedia.org/wiki/ಶಬ್ದಮಣಿದರ್ಪಣ" ಇಂದ ಪಡೆಯಲ್ಪಟ್ಟಿದೆ