ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೩೧ ನೇ ಸಾಲು:
ಸ್ಪಾನಿಷ್ ಭಾಷೆಯಲ್ಲಿ ಹಲವಾರು ಮಹತ್ವದ ಕೃತಿಗಳನ್ನು ಬರೆದು ತಾನು ಹುಟ್ಟಿ ಬೆಳೆದ ಲ್ಯಾಟಿನ್ ಅಮೆರಿಕದ ಸರ್ಕಾರದ ನೀತಿ, ಅಸಮಾನತೆ, ಜನರ ಚಿಂತೆನೆ, ಭಾವನೆಗಳು, ಕಂದಾಚಾರದ ಆಚರಣೆಗಳನ್ನು ತಮ್ಮ ಅದ್ಭುತ ಬರವಣಿಗೆಯ ಮೂಲಕ ಜನಜಾಗೃತಿಯನ್ನು ಮೂಡಿಸುವಲ್ಲಿ ಯಶಸ್ವಿಯಾದರು.
==ಜನನ, ವಿದ್ಯಾಭ್ಯಾಸ, ಲೇಖಕನಾಗಿ==
'''ಗೇಬ್ರಿಯಲ್ ಗಾರ್ಸಿಯಾಗಾಸಿಯಾ ಮಾಕ್ರ್ವೆಜ್''' ಲ್ಯಾಟಿನ್ ಅಮೇರಿಕಾದ [[ಕೊಲಂಬಿಯಾ]]ದ ಸಣ್ಣ ಗ್ರಾಮ, 'ಅರಕಟಕ'ದಲ್ಲಿ 1928ರ192೭ರ, ಮಾರ್ಚ್, ೬ ರಂದು ಜನಿಸಿದರು. ತನ್ನ ತಾತ-ಅಜ್ಜಿ, ಹಾಗೂ ಚಿಕ್ಕಮ್ಮ ನ ಬಳಿಆರೈಕೆಯಲ್ಲಿ ಬಾಲ್ಯವನ್ನು ಕಳೆದರು. ಕೊಲಂಬಿಯಾದ 'ಸಾವಿರ ದಿನಗಳು ಯುದ್ದ'ದಲ್ಲಿ ಕರ್ನಲ್ ಆಗಿದ್ದ ತಾತ, ತನ್ನ ಯೌವನದ ಸಾಹಸ ಕತೆಗಳನ್ನು ಹೇಳುತ್ತಾ, ಹೇಳುತ್ತಾ ಇತಿಹಾಸಕ್ಕೂ ನನಗೂ ಕಳ್ಳುಬಳ್ಳಿಯಾಗಿದ್ದ ಎನ್ನುತ್ತಾನೆ ಮಾಕ್ರ್ವೆಜ್. ಅಜ್ಜಿ ಕಟ್ಟುಕತೆಗಳನ್ನು ಹೇಳುವುದರಲ್ಲಿ ನಿಷ್ಣಾತೆ. ಕುಟುಂಬದವರ ಜೀವನ ಕತೆಗಳನ್ನು ಸಹ ಅವಳ ಕನಸಿನಲ್ಲಿ ಪಡೆದ ಸಂದೇಶಗಳನ್ನು ಅನುಸರಿಸಿ ಕಟ್ಟುತ್ತಿದ್ದಳು. ವಾಸ್ತವವನ್ನು ಅಲೌಕಿಕತೆ, ಯಕ್ಷಿಣೀ ಗುಣ ಹಾಗು ಮೂಢಾಚಾರಣೆಯ ನೋಟದಿಂದ ಅರಿಯಬಹುದು, ಎಂಬ ತಿಳುವಳಿಕೆಯನ್ನು ಅವಳಿಂದಲೇ ಅವನು ಕಲಿತದ್ದು. 20ನೇ ವಯಸ್ಸಿನಲ್ಲಿ 'ಸಾಯದೆ ಬದುಕಬೇಕೆಂದರೆ ಬರೆಯಲೇ ಬೇಕು' ಎಂಬ ಹಂಬಲದಲ್ಲಿ ಮಾಕ್ರ್ವೆಜ್ ಬರವಣಿಗೆ ಶುರುಮಾಡುತ್ತಾನೆ.
ಮಾಕ್ರ್ವೆಜ್, ರಷ್ಯ, ಅಮೇರಿಕಾ ಹಾಗು ಇಂಗ್ಲೀಷ್ ಲೇಖಕರನ್ನು ತುಂಬಾ ಓದುತ್ತಾನೆ. "ನನ್ನಲ್ಲಿ ಒಳಅರಿವಿದೆ, ಸ್ವಯಂಪ್ರಕಾಶವಿದೆ ಎಂಬುದು ನಾನೇ ಸೃಷ್ಟಿಸಿರುವ ಮಿಥ್ಯ. ನನ್ನ ದಾರಿಯನ್ನು ಸಾಹಿತ್ಯದ ಮೂಲಕ ಕಟ್ಟಿಕೊಂಡೆ, ಓದುವುದು, ಬರೆಯುವುದು. ಅದೊಂದೇ ಹಾದಿ" ಎಂದು ಸಂತೋಷವಾಗಿ ಒಪ್ಪಿಕೊಳ್ಳುವ ಮಾಕ್ರ್ವೆಜ್‍ನನ್ನು ತೀವ್ರವಾಗಿ ಪ್ರಭಾವಿಸಿದವರು ಎಚಿmes ಎoಥಿಛಿe, ಏಚಿಜಿಞಚಿ, ಇಡಿsಞiಟಿe ಅಚಿಟಜತಿeಟಟ ಮತ್ತು ಊemmiಟಿgತಿಚಿಥಿ. ಆದರೆ ವಿಲಕ್ಷಣವಾದದ್ದನ್ನು ನಂಬಲಸಾಧ್ಯವಾದದ್ದನ್ನು ಓದುಗರು ನಂಬುವಂತೆ ಮಾಡುವ ಕಲೆಯನ್ನು ಮಾತ್ರ ಪತ್ರಿಕೋದ್ಯಮದಿಂದ ಕಲಿತೆ' ಎನ್ನುತ್ತಾನೆ.
"ಸೊಗಸು ಇರುವುದೇ ನೇರವಾಗಿ ಹೇಳುವುದರಲ್ಲಿ. ಪತ್ರಕರ್ತರು ಹಾಗು ಹಳ್ಳಿಗಾಡು ಮಂದಿ ಮಾತ್ರ ಹಾಗೆ ಹೇಳುತ್ತಾರೆ".
 
==ಒಂದು ನೂರು ವರ್ಷಗಳ ಏಕಾಂತ==
ಆತ್ಮಕ್ಕೆ ತಟ್ಟುವ ಸತ್ಯ, ಅನುಕಂಪ, ಕಾವ್ಯಾತ್ಮಕ ಮಾಂತ್ರಿಕತೆಯಿಂದ ತುಂಬಿ ತುಳುಕುವ ಅವನ ಪ್ರಮುಖ ಕೃತಿ, 'ಒಂದು ನೂರು ವರ್ಷಗಳ ಏಕಾಂತ' ಲ್ಯಾಟಿನ್ ಅಮೇರಿಕಾದ ಗುಡ್ಡದ ತಪ್ಪಲಿನ ಹಳ್ಳಿಯೊಂದರ ಕತೆ. ವ್ಯಸನ, ಕ್ರೌರ್ಯ, ಪ್ರೇತಗಳ ಮತ್ತು ಕನಸುಗಳ ಕಲ್ಪನಾಕಾವ್ಯ ಈ ಕಥನ. ಕಾಲದ ಜೋಕಾಲಿಯಲ್ಲಿ ಜೀಕುವ ಮಾಕ್ರ್ವೆಜ್‍ನ ಹೆಣೆಗೆಗಳು ರೀವಾಜಿನ, ಕ್ರಮಬದ್ಧವಾದ ಕಾಲಗತಿಯನ್ನು ಉಲ್ಲಂಘಿಸುತ್ತವೆ. ಅತಿಲೌಕಿಕವಾದ ಮತ್ತು ದಿನನಿತ್ಯದ ಜೀವನವೆರಡನ್ನು ಕೂಡಿಸಿ ಕಲ್ಪನೆ ಕಟ್ಟುವ ಮಾಕ್ರ್ವೆಜ್‍ನ ರೀತಿಗೆ ಇಡೀ ಪ್ರಪಂಚ ಮಾರುಹೋಯಿತು. ಕಾಳ್ಗಿಚ್ಚಿನಂತೆ 'ಮಾಂತ್ರಿಕ ವಾಸ್ತವವಾದ' (ಒಚಿgiಛಿ ಖeಚಿಟism) ಬಗ್ಗೆ ಆಸಕ್ತಿ ಮೂಡಿತು. ಮಾಕ್ವೆಜ್, ಪದಗಳ ಆಡಂಬರದ ಬಳಕೆಯಿಂದ ಸಣ್ಣ ಘಟನೆಯನ್ನು ವೈಭವೀಕರಿಸುತ್ತ, ಪವಿತ್ರವಾದದ್ದನ್ನು ಕ್ಷುಲಕವಾಗಿಸುತ್ತಾ ನಿರಂತರವಾಗಿ ಕತೆ ಹೆಣೆಯುತ್ತಾನೆ. ಸಣ್ಣ ಘಟನೆಯೊಂದು ಅವನ ಕೈಯಲ್ಲಿ ಜೀವಸೆಲೆ ಉಕ್ಕಿಸುವ ಮಹಾಕಾವ್ಯವಾಗಿ ಬದಲಾಗುತ್ತದೆ. ಅವನು ಹೆಣೆಯುವ ಕಥೆ, ಬದುಕುವ, ಮಾತಾಡುವ ರೀತಿಯಲ್ಲಿ ಹೆಚ್ಚು ವ್ಯತ್ಯಾಸಗಳಿಲ್ಲ.