ಮೃದಂಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩ ನೇ ಸಾಲು:
'''ಮೃದಂಗ'''ವು [[ಕರ್ನಾಟಕ ಸ೦ಗೀತ]] ಪದ್ಧತಿಯಲ್ಲಿ ಉಪಯೋಗಿಸುವ ಒಂದು ಪ್ರಮುಖ ಲಯವಾದ್ಯ. ಇದನ್ನು ತಾಳವಾದ್ಯ ಎನ್ನುವುದಕ್ಕಿಂತಲೂ ಲಯವಾದ್ಯ ಎನ್ನುವುದೇ ಹೆಚ್ಚು ಸೂಕ್ತ.
 
ಮೃದಂಗವು ಅವನದ್ಧ ವಾದ್ಯಗಳ ಗುಂಪಿಗೆ ಸೇರಿದೆ. ಇದನ್ನು ತಯಾರಿಸಲು ಬೇಕಾಗುವ ಕಚ್ಚಾ ಸಾಮಗ್ರಿಗಳು ಮರ,ಚರ್ಮ ಮತ್ತು ಕರಣೆ ಕಲ್ಲು.
ಮೃದಂಗವು ಅವನದ್ಧ ವಾದ್ಯಗಳ ಗುಂಪಿಗೆ ಸೇರಿದೆ. ಇದನ್ನು ತಯಾರಿಸಲು ಬೇಕಾಗುವ ಕಚ್ಚಾ ಸಾಮಗ್ರಿಗಳು ಮರ ಮತ್ತು ಚರ್ಮ. ಒಳಗೆ ಟೊಳ್ಳಾಗಿರುವ ಮರದ ಭಾಗಕ್ಕೆ ಹೊಳವು ಅಥವಾ ಕಳಸಿಗೆ ಎಂದು ಹೆಸರು. ಕಳಸಿಗೆಯ ಎರಡೂ ಕಡೆಯ ಮುಖಗಳ ಮೇಲೆ ಚರ್ಮದ ಮುಚ್ಚಿಗೆ ಇರುತ್ತದೆ. ಮೃದಂಗಕ್ಕೆ ಆ ಹೆಸರು ಬಂದದ್ದು "ಮೃತ್" ಮತ್ತು "ಅಂಗ" ಎಂಬ ಎರಡು ಸಂಸ್ಕೃತ ಪದಗಳಿಂದ. ಮೃತ್ ಎಂದರೆ ಮಣ್ಣು. ಪ್ರಾಚೀನ ಕಾಲದಲ್ಲಿ ಕಳಸಿಗೆಯನ್ನು ಮಣ್ಣಿನಿಂದಲೇ ತಯಾರಿಸುತ್ತಿದ್ದರು. ದೀರ್ಘ ಬಾಳಿಕೆಯ ದೃಷ್ಟಿಯಿಂದ ಈಗ ಹಲಸು, ಹೆಬ್ಬಲಸು, ಮುಂತಾದ ಮರಗಳಿಂದ ತಯಾರಿಸಲಾಗುತ್ತಿದೆ. ಮರದ ದಪ್ಪ ಸುಮಾರು ಒ೦ದು ಇ೦ಚು ಇರುವ೦ತೆ ಟೊಳ್ಳು ಮಾಡಲಾಗಿರುತ್ತದೆ. ಎರಡೂ ಕಡೆಯ ಮುಖಗಳ ಅಗಲ ಬೇರೆ ಬೇರೆಯಾಗಿರುತ್ತದೆ. ಕಡಿಮೆ ಅಗಲವಿರುವ ಮುಖದಿ೦ದ ಬರುವ ಶಬ್ದ ಹೆಚ್ಚಿನ ಸ್ಥಾಯಿಯಲ್ಲಿದ್ದು, ಇನ್ನೊ೦ದು ಕಡೆಯಿ೦ದ ಕೆಳಗಿನ ಸ್ಥಾಯಿಯ ಶಬ್ದ ಉ೦ಟಾಗುತ್ತದೆ. ಕಡಿಮೆ ಅಗಲವಿರುವ ಮುಖದ ಮಧ್ಯದಲ್ಲಿ ಪಿಷ್ಟ, ಕಬ್ಬಿಣದ ಆಕ್ಸೈಡ್ ಮೊದಲಾದ ವಸ್ತುಗಳ ಕಪ್ಪು ಮಿಶ್ರಣವನ್ನು ಲೇಪಿಸಲಾಗುತ್ತದೆ. ಇನ್ನೊ೦ದು ಮುಖದ ಮಧ್ಯದಲ್ಲಿ ರವೆಯ ಲೇಪನ ಇರುತ್ತದೆ.
 
ಒಳಗೆ ಟೊಳ್ಳಾಗಿರುವ ಮರದ ಭಾಗಕ್ಕೆ ಹೊಳವು ಅಥವಾ ಕಳಸಿಗೆ ಎಂದು ಹೆಸರು. ಮೃದಂಗಕ್ಕೆ ಆ ಹೆಸರು ಬಂದದ್ದು "ಮೃತ್" ಮತ್ತು "ಅಂಗ" ಎಂಬ ಎರಡು ಸಂಸ್ಕೃತ ಪದಗಳಿಂದ. ಮೃತ್ ಎಂದರೆ ಮಣ್ಣು. ಪ್ರಾಚೀನ ಕಾಲದಲ್ಲಿ ಕಳಸಿಗೆಯನ್ನು ಮಣ್ಣಿನಿಂದಲೇ ತಯಾರಿಸುತ್ತಿದ್ದರು. ದೀರ್ಘ ಬಾಳಿಕೆಯ ದೃಷ್ಟಿಯಿಂದ ಈಗ ಹಲಸು, ಹೆಬ್ಬಲಸು, ಸಂಪಿಗೆ, ತೇಗ, ಬೇವು ಮುಂತಾದ ಮರಗಳಿಂದ ತಯಾರಿಸಲಾಗುತ್ತಿದೆ. ಮೃದಂಗವನ್ನು ಮರದ ಒಂದೇ ತುಂಡಿನಲ್ಲಿ ಕೊರೆಯಲ್ಪಟ್ಟ ಹೊಳವಿನಿಂದ ತಯಾರಿಸುತ್ತಾರೆ. ಈ ಹೊಳವು ಒಳಗೆ ಖಾಲಿ ಇದ್ದು, ಮಧ್ಯದಲ್ಲಿ ಉಬ್ಬಿ, ಕಡೆಯ ಭಾಗಗಳಲ್ಲಿ ಚಿಕ್ಕದಾಗಿರುತ್ತದೆ. ಕಡೆಯ ಭಾಗಗಳನ್ನು ಎಡ ಮತ್ತು ಬಲ ಎಂದು ಕರೆಯುತ್ತಾರೆ. ಬಲ ಭಾಗದ ವ್ಯಾಸವು ಎಡ ಭಾಗಕ್ಕಿಂತ ಕಡಿಮೆ ಇರುತ್ತದೆ. ಉಬ್ಬಿದ ಭಾಗವನ್ನು "ಹರಡ" ಅಥವಾ "ಕಡಗ" ಎಂದು ಕರೆಯುತ್ತಾರೆ. ಹೊಳವಿನ ಉದ್ದ ಹಾಗೂ ಎರಡು ಮುಖಗಳ ವ್ಯಾಸ ನೇರವಾಗಿ ಮೃದಂಗದ ಶ್ರುತಿಗೆ ಸಂಬಂಧಿಸಿದೆ. ಉದ್ದ ಹಾಗೂ ಬಲದ ವಾಸ ಹೆಚ್ಚಿದ್ದರೆ ತಗ್ಗು ಶ್ರುತಿಗೆ ಹೊಂದಿಸಬಹುದು. ಕಡಿಮೆಯಿದ್ದರೆ ಹೆಚ್ಚು ಶ್ರುತಿಗೆ ಹೊಂದಿಸಬಹುದು.
 
ಬಲ ಮುಚ್ಚಿಗೆಗೆ ಮೇಕೆ ಹಾಗೂ ಹಸುವಿನ ಚರ್ಮ ಬೇಕಾಗುತ್ತದೆ. ಮೇಕೆ ಮತ್ತು ಹಸುವಿನ ಚರ್ಮಗಳನ್ನು ಹದಮಾಡಿ ವೃತ್ತಾಕಾರದಲ್ಲಿ ಕತ್ತರಿಸುತ್ತಾರೆ. ಬಲ ಮುಚ್ಚಿಗೆಯಲ್ಲಿ ಮೂರು ಪದರಗಳು ಇವೆ. ಮೊದಲನೆಯ ಪದರವಾದ ಮೇಕೆ ಚರ್ಮವನ್ನು "ಒತ್ತು ಚರ್ಮ"ವೆಂದು ಕರೆಯುತ್ತಾರೆ. ಎರಡನೆಯ ಪದರವಾದ ಮೇಕೆ ಚರ್ಮವನ್ನು "ಜೀವಾಳಿ" ಅಥವಾ "ಛಾಪು ಪದರ"ವೆಂದು ಕರೆಯುತ್ತಾರೆ. ಮೂರನೆಯ ಮತ್ತು ಹೊರಗಿನ ಪದರವಾದ ಹಸುವಿನ ಚರ್ಮವನ್ನು "ಮೀಟು ರೆಪ್ಪೆ" ಎಂದು ಕರೆಯುತ್ತಾರೆ. ವೃತ್ತಾಕಾರದಲ್ಲಿ ಕತ್ತರಿಸಲ್ಪಟ್ಟ ಈ ಮೂರೂ ಪದರಗಳನ್ನು ಒಂದರ ಮೇಲೊಂದಿಟ್ಟು ಹೊಳವಿನ ಬಲಭಾಗದ ಮೇಲಿರಿಸಿ, ಬಾರುಗಳ ಮೂಲಕ (leather straps) ತುದಿಗಳನ್ನು ಎಳೆದು ಬಿಗಿಯುತ್ತಾರೆ. ಚರ್ಮದ "ಬಾರ್"ಅನ್ನು ಎಮ್ಮೆಯ ಚರ್ಮದಿಂದ ತಯಾರಿಸುತ್ತಾರೆ. ಇದಾದ ಬಳಿಕ ಮುಚ್ಚಿಗೆ ಅಂಚಿನ ಸುತ್ತಲೂ ರಂಧ್ರಗಳನ್ನು ಮಾಡಿ, ಎಮ್ಮೆಯ ಚರ್ಮದಿಂದ ಹೆಣೆಯುತ್ತಾರೆ. ಇದನ್ನು "ಇಂಡಿಗೆ" ಎಂದು ಕರೆಯುತ್ತಾರೆ. ನಂತರ ಇದನ್ನು ಬಿಸಿಲಿನಲ್ಲಿ ಒಣಗಿಸಿ, ಉಳಿದ ಭಾಗಗಳನ್ನು ಕತ್ತರಿಸುತ್ತಾರೆ. ಈ ಪ್ರಕಾರವಾಗಿ ಬಲ ಮುಚ್ಚಿಗೆಯು ತಯಾರಾಗುತ್ತದೆ.
 
ಎಡ ಮುಚ್ಚಿಗೆಗೂ ಮೇಕೆ ಮತ್ತು ಹಸುವಿನ ಚರ್ಮಗಳು ಅಗತ್ಯ. ಇದರಲ್ಲಿ ಎರಡೇ ಪದರಗಳು ಇರುತ್ತವೆ. ಒಳಗಿನ ಪದರವಾದ ಮೇಕೆ ಚರ್ಮವನ್ನು "ಜೀವಾಳಿ ಚರ್ಮ" ಅಥವಾ "ತೊಪ್ಪಿ" ಎಂದು ಕರೆಯುತ್ತಾರೆ. ಹೊರಗಿನ ಪದರವಾದ ಹಸುವಿನ ಚರ್ಮವನ್ನು "ರೆಪ್ಪೆ ಚರ್ಮ"ಎಂದು ಕರೆಯುತ್ತಾರೆ. ವೃತ್ತಾಕಾರದಲ್ಲಿ ಕತ್ತರಿಸಲ್ಪಟ್ಟ ಈ ಎರಡೂ ಪದರಗಳನ್ನು ಒಂದರ ಮೇಲೊಂದಿಟ್ಟು ಹೊಳವಿನ ಎಡಭಾಗದ ಮೇಲಿರಿಸಿ, ಬಾರುಗಳ ಮೂಲಕ ತುದಿಗಳನ್ನು ಎಳೆದು ಬಿಗಿಯುತ್ತಾರೆ. ನಂತರ ಮುಚ್ಚಿಗೆ ಅಂಚಿನ ಸುತ್ತಲೂ ರಂಧ್ರಗಳನ್ನು ಮಾಡಿ, ಎಮ್ಮೆಯ ಚರ್ಮದಿಂದ ಹೆಣೆಯುತ್ತಾರೆ. ಬಿಸಿಲಿನಲ್ಲಿ ಒಣಗಿಸಿದ ನಂತರ, ಹೊರಪದರದ ಮಧ್ಯದಲ್ಲಿ ವೃತ್ತಾಕಾರವಾಗಿ ಸುಮಾರು ನಾಲ್ಕು ಅಂಗುಲ ವ್ಯಾಸದಷ್ಟು ಕತ್ತರಿಸಿ, ಮೇಕೆಯ ಚರ್ಮವನ್ನು ಒಳಗೆ ಇಂಡಿಗೆಯ ಹತ್ತಿರ ಚರ್ಮದ ಸಣ್ಣ ಪಟ್ಟಿಗಳ ಸಹಾಯದಿಂದ ಕಟ್ಟುತಾರೆ. ಈ ಪ್ರಕಾರವಾಗಿ ಎಡ ಮುಚ್ಚಿಗೆಯು ತಯಾರಾಗುತ್ತದೆ.
 
ಬಾರ್ (leather strap) ಅನ್ನು ಎಮ್ಮೆಯ ಚರ್ಮವನ್ನು ಸುಮಾರು ಕಾಲು ಅಂಗುಲ ಅಗಲ ಮತ್ತು ಇಪ್ಪತ್ತು ಮೀಟರ್ ಉದ್ದ ಕತ್ತರಿಸಿ ತಯಾರಿಸುತ್ತಾರೆ. ತಯಾರಾದ ಎಡ ಮತ್ತು ಬಲ ಮುಚ್ಚಿಗೆಗಳನ್ನು ಹೊಳವಿನ ಮೇಲೆ ಕೂಡಿಸಿ, ಇವುಗಳನ್ನು ಬಾರಿನ ಸಹಾಯದಿಂದ ಇಂಡಿಗೆಯ ಮೂಲಕ ಹಾದುಹೋಗುವಂತೆ ಬಿಗಿಯಾಗಿ ಕಟ್ಟುತ್ತಾರೆ.
 
 
 
 
"https://kn.wikipedia.org/wiki/ಮೃದಂಗ" ಇಂದ ಪಡೆಯಲ್ಪಟ್ಟಿದೆ