ಮಕ್ಕಳ ಸಾಹಿತ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೬೩ ನೇ ಸಾಲು:
=== ಮಕ್ಕಳ ನಾಟಕ ===
ಹಿಂದಿನ ಕಾಲದಲ್ಲಿ ಮಕ್ಕಳಿಗೆ ಮೂಲವಾದ ಮನೋರಂಜನೆ ಎಂದರೆ ನಾಟಕ.ನಾಟಕಗಳಿಂದ ಮಕ್ಕಳು ಜೀವನದ ಮೌಲ್ಯಗಳನ್ನು ಕಲಿಯುತ್ತಿದರು ಹಾಗು ಸರಿ ತಪ್ಪು ವಿನ ವ್ಯತ್ಯಾಸವನು ತಿಳಿಯುತ್ತಿದರು.ನಾಟಕಗಳಿಂದ ಮಕ್ಕಳ ವರ್ತನೆಗಳು ಬದಲಾದವು.ಮಕ್ಕಳ ಮನಸ್ಸು ಸೂಕ್ಷಮವಾದ್ದುದು,ಆದರಿಂದ ನಾಟಕ ಮಕ್ಕಳ ಮನಸ್ಸಿನಲ್ಲಿ ಪ್ರಮೂಕವಾದ ಸ್ಥಾನವನ್ನು ನಿಡಲು,ನಾಟಕಗಾರರು ಬಿನ್ನವಾದ ಪಾತ್ರಗಳನ್ನು ಪ್ರರಂಭಿಸುತ್ತಿದರು.ಅವುಗಳಲ್ಲಿ ಹಾಸ್ಯ,ಗೀತೆ,ಭಯಕರವಾದ ಪಾತ್ರಗಳು ಮತ್ತು ಬಿನ್ನವಾದ ಪ್ರಾಣಿಗಳ ವೇಶಗಳನ್ನು ದರಿಸಿ ಮಕ್ಕಳ ಮನಸ್ಸನ್ನು ಮುಟುತ್ತಿದ್ದರು.ನಾಟಕವು ಬಹಳ ಅದ್ಭುತವಾಗಿ ಮೂಡಿಸಲು ನಾಟಕಗಾರರು ತರತರದ ಉಡುಪುಗಳನ್ನು ದರಿಸಿ,ಪಾತ್ರದ ತಕ್ಕವಾಗಿ ಅಲಂಕಾರವನ್ನು ಮಾಡಿಕೋಳುತ್ತಿದರು.
ತುಂಬ ಪ್ರಮುಖವಾದ ಮಕ್ಕಳ ನಾಟಕಗಳು ಎಂದರೆ ಕುವೆಂಪುರವರ[[ಕುವೆಂಪು]]ರವರ ನನ್ನ ಗೋಪಾಲ,ಮೋಡಣ್ಣನ ತಮ್ಮ.ಇನೂಂದು ಪ್ರಮುಖವಾದ ನಾಟಕ ಎಂದರೆ ರುದ್ರ ನಾಟಕ,ಪಾಶ್ಚಾತ್ಯ ಸಾಹಿತ್ಯದಲ್ಲಿ ಟ್ರಾಜೆಡಿ ಎಂಬ ನಾಟಕ ಪ್ರಕಾರಕ್ಕೆ ಕನ್ನಡದಲ್ಲಿ ರುದ್ರನಾಟಕ ಎಂಬುದು ರೂಢಿಯ ಹೆಸರು;ಪರ್ಯಾಯವಾಗಿ ದುರಂತನಾಟಕ,ದುಃಖಾಂತ ನಾಟಕ,ವಿಷಾದಾಂತ ನಾಟಕ,ಗಂಭೀರ ನಾಟಕ,ಆವಿದ್ಧ ನಾಟಕ-ಎಂದೂ ಹೇಳುವುದುಂಟು.ನಾಯಕನ ಅಥವಾ ನಾಯಕನನ್ನೂ ಒಳಗೊಂಡು ಕೆಲವರ ಸಾವುನೋವುಗಳಿಂದ ನಾಟಕ ಮುಗಿಯುವುದು ಇದರ ಸಾಮಾನ್ಯ ಲಕ್ಷಣ.
ಮಕ್ಕಳ ನಾಟಕಕ್ಕೆ ಕತೆ ಅಥವ ಕವನಗಳಿಗಿರುವ ಇತಿಹಾಸವಿಲ್ಲ .ಕತೆಗಳಿಗೆ ೨೦೦೦ ವರ್ಷಗಳಿಗೂ ಮಿಕ್ಕ ಇತಿಹಾಸವಿದ್ದರೆ ಜಾನಪದ ಮೂಲದಿಂದ ಬರುವ ಮಕ್ಕಳ ಕವನಗಳಿಗೆ ಎ‍‌‌ಷ್ಟು ವರ್ಷದ ಇತಿಹಾಸವಿದೆ ಎಂದು ಹೇಳಲು ಸಾಧ್ಯವಿಲ್ಲ.'ಕಾವ್ಯ ಭಾರತದಲ್ಲಿ ಅತ್ಯಂತ ವುರಾತನಾದುದು ಎನ್ನುವುದು ನಿರ್ವಿವಾದ.ಕಾವ್ಯ ಎನ್ನುವ ಪ್ರಕಾರವೆ ಅತ್ಯಂತ ವುರಾತನದುದು. ಯುರೋಪಿನ (ಗ್ರೀಕ್ ದೇಶ ಒಂದನ್ನು ಬಿಟ್ಟರೆ) ಬೇರಾವ ದೇಶದಲ್ಲೂ ಕಾವ್ಯ ಇಷ್ಟು ಪುರಾತನವಾದುದಲ್ಲ.೨೦೦೦ ವರ್ಷಗಳ ಹಿಂದೆ ಇಂಗ್ಲಿಷ್ ಭಾಷೆಯೇ ಇರಲಿಲ್ಲ ಎನ್ನುವುದು ಚಾರಿತ್ರಿಕ ಸತ್ಯ.ಇನ್ನು ಸಾಹಿತ್ಯ ಬೆಳೆಯುವುದು ದೂರವೆ ಉಳಿಯಿತು.ಈ ಪರಂಪರೆಯ ಎದುರಿಗೆ ನಾಟಕ ಇತ್ತೀಚಿನದು.ಇದರಲ್ಲಿ ಇನ್ನೂ ಒಂದು ಸಮಸ್ಯೆ ಅಡ್ದ ಬರುತ್ತದೆ.ನಾಟಕ ದೃಶ್ಯ ಮಾಧ್ಯಮ.ಮಕ್ಕಳು ಇದನ್ನು ಓದುವುದಕ್ಕಿಂತ ರಂಗದ ಮೇಲೆ ನೋಡಿದರೆ ಹೆಚ್ಚು ಆನಂದ ಪಡುತ್ತಾರೆ.ಆದರೆ ಮಕ್ಕಳ ನಾಟಕಗಳನ್ನು ರಂಗದ ಮೇಲೆ ತರುವ ನಾಟಕದ ತಂಡಗಳು ನಮಲ್ಲಿ ಹೆಚ್ಚು ಇಲ್ಲ.ಬೆಂಗಳೂರಿನ ವಿಜಯನಗರದ ಬಡಾವಣಿಯಲ್ಲಿ ಎ.ಎಸ್.ಮೂರ್ತಿ ಅವರು ನಡೆಸುತ್ತಿರುವ ಚಿತ್ರ ನಾಟಕ ತಂಡದ ಮಕ್ಕಳ ರಂಗಭೂಮಿ ಮತ್ತು ಸಾಗರ ತಾಲ್ಲೂಕಿನಲ್ಲಿ ತಮರಿಯಂಥ ಒಂದು ಕುಗ್ರಾಮದಲ್ಲಿ ಕೆ.ಜಿ.ಕೃಷ್ಣಮೂರ್ತಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಕಿನ್ನರ ಮೇಳ ಮಕ್ಕಳ ರಂಗಭೂಮಿ ಮಕ್ಕಳಿಗಾಗಿ ಮೀಸಲಾಗಿರುವ ತಂಡ. 'ಈ ಮೇಳ ಕಳೆದ ೧೦ವರ್ಷಗಳಲ್ಲಿ ಸುಮಾರು ೨೫ಕ್ಕೂ ಹೆಚ್ಚು ನಾಟಕಗಳನ್ನು ರಂಗದ ಮೇಲೆ ತಂದಿವೆ.'ಎಂದು ನಾಟಕ ಮಾಸ ಪತ್ರಿಕೆ ೨೦೦೧ನೆ ಜನವರಿ ತಿಂಗಳ ಸಂಚಿಕೆಯಲ್ಲಿ ದಾಖಲು ಮಾಡಿದೆ.ಇತ್ತೀಚಿನ ವರ್ಷಗಳಲ್ಲಿ ನಾಟಕ ಮತ್ತು ರಂಗಭೂಮಿಯನ್ನು ಮಕ್ಕಳಿಗೆ ಹೆಚ್ಚು ಪರಿಚಯಿಸುವ ಪ್ರಯತ್ನ ನಡೆದಿದೆ.
=== ಮಕ್ಕಳ ಕತೆಗಳು ===
"https://kn.wikipedia.org/wiki/ಮಕ್ಕಳ_ಸಾಹಿತ್ಯ" ಇಂದ ಪಡೆಯಲ್ಪಟ್ಟಿದೆ