ಪ್ರಗತಿಶೀಲ ಭಾರತದಲ್ಲಿ ಶಿಕ್ಷಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೦ ನೇ ಸಾಲು:
ಕಾಲಕ್ರಮೇಣ ಗುರುಕುಲಗಳಲ್ಲಿ ಶಿಕ್ಷಣ ವ್ಯವಸ್ಥೆ ಮರೆಯಾಗುತ್ತಾ ಬಂದಿತು. ಬದಲಿಗೆ ಕೂಲಿ ಮಠಗಳಲ್ಲಿ ಶಿಕ್ಷಣ ಪ್ರಸಾರ ಕಂಡುಬಂದಿತು. ನಂತರ ಕಾಲಕ್ರಮೇಣ ಮನುಷ್ಯನ ಸಾಹಸ ಪ್ರಯತ್ನಗಳಿಂದ, ಜನ ಸಂಖ್ಯೆ ಏರಿಕೆಯಿಂಲು ನಾನಾ ಅವಿಷ್ಕಾರಗಳು,ಹೊಸ ಹೊಸ ಬೇಡಿಕೆಗಳು ಸಮಸ್ಯೆಗಳು ಕಂಡು ಬಂದುದರ ಪರಿಣಾಮವಾಗಿ ಕೂಲಿ ಮಠದ ಶಿಕ್ಷಣವು ಕಣ್ಮರೆಯಾಯಿತು. ಕಾಲಾನಂತರ ಸಾಂಪ್ರದಾಯಿಕ ಶಿಕ್ಷಣವು ಜಾರಿಗೆ ಬಂದಿತು.
ಸಾಂಪ್ರದಾಯಕ ಶಿಕ್ಷಣವೆಂದರೆ ಈಗ ಪ್ರಸ್ತುತ ಸಮಾಜದಲ್ಲಿ ಕಂಡುಬರುತ್ತಿರುವ ಶಿಕ್ಷಣ.ಅಂದರೆ ನಾಲ್ಕು ಗೋಡೆಗಳ ನಡುವೆ ಶಿಕ್ಷಕ ಮತ್ತು ವಿದ್ಯಾರ್ಥಿಗಳೊಡಗೂಡಿ ನಡೆಯುವ ಶಿಕ್ಷಣ ವ್ಯವಸ್ಥೆ . ಈ ಶಿಕ್ಷಣಕ್ಕೆ ಸೂಕ್ತವಾದ, ಉತ್ತಮವಾದ ಗಾಳಿ ಬೆಳಕಿನಿಂದ ಪ್ರಶಾಂತವಾತವರಣದಲ್ಲಿ ಒಂದೇ ಕಟ್ಟಡವಿರಬೇಕು, ಆ ಕಟ್ಟಡಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು,ವಿಷಯ ಬೋಧಿಸುವ ಮತ್ತು ಮಾರ್ಗದರ್ಶನ ಬೋದಕ ವೃಂದ, ಹಾಗೂ ಪಾಠಪೀಠೋಪಕರಣಗಳು ಅಗತ್ಯವಾಗಿರಬೇಕು. ಈ ಎಲ್ಲದರ ಔಪಚಾರಿಕ ಶಿಕ್ಷಣದ ಉಸ್ತುವಾರಿ ಮತ್ತು ಮೇಲ್ವಿಚಾರಣೆ ನೋಡಿಕೊಳ್ಳಲು ಮುಖ್ಯೋಪಾಧ್ಯಾಯ ಹಾಗೂ ಮೇಲ್ವಿಚಾರಣೆಯ ಆಡಳಿತ ವರ್ಗಬೇಕು.
ಹೀಗೆ ಗುರುಕುಲಗಳಲ್ಲಿ, ಮಸೀದಿ, ಮಠಗಳಲ್ಲಿ ನಡೆಯುತ್ತಿದ್ದ ಶಿಕ್ಷಣವು ವಿಕಾಸ ಹೊಂದುತ್ತಾ ಇಂದು ಸಾರ್ವಜನಿಕ ಸ್ಥಳಗಳಲ್ಲಿ ಸರ್ವರಿಗು ಲಭ್ಯವಾಗುವಂತೆ ಮತ್ತು ಸಂವಿಧಾನಾತ್ಮಕವಾಗಿ ಶಿಕ್ಷಣ ಕೇಳುವ ಮತ್ತು ಪಡೆಯುವ ಹಕ್ಕು ಇಂದಿನ ಪ್ರಗತಿಶೀಲ ಭಾರತದಲ್ಲಿ ಕಾಣುತ್ತಿದ್ದೇವೆ. ಚರಿತ್ರೆಯ ಪೂರ್ವದಿನಗಳಿಂದ ಆಧುನಿಕ ಕಾಲಾವಧಿಯವರೆಗೆ ವಿವಿಧ ಕಲೆಗಳು ಬೆಳೆದುಬಂದಿವೆ. ಕಲೆಗಳು ಬದುಕಿನ ವಿವಿಧ ಮಜಲುಗಳನ್ನು ಪ್ರತಿಬಿಂಬಿಸುತ್ತಿವೆ. ನರ್ತನ ಗಾಯನ, ಚಿತ್ರಣ ಎಲ್ಲರಿಗು ಇಷ್ಟ, ಹಾಗೆಯೇ ಕಲೆಯೂ ಅಷ್ಟೇ, ಕಲೆಗಳಿಲ್ಲದ ದೇಶವಿಲ್ಲ, ಸಾಹಿತ್ಯವಿಲ್ಲದ, ಭಾಷೆಯಿಲ್ಲ. ನರ್ತನ ಸಂಗೀತ ಚಿತ್ರಕಲೆ ಮುಂತಾದ ಸಂಗೀತಸಾಹಿತ್ಯಕಲೆಗೆ ಜಾನಪದವೇ ಮೂಲ. ಭಾರತೀಯ ಜನಜೀವನದಲ್ಲಿ ಕಲೆ ಸಾಹಿತ್ಯ, ಸಂಗೀತ ಒಂದಂಗವಾಗಿ ರೂಪುಗೊಂಡವು.ಪ್ರಾರಂಭದಲ್ಲಿ ಮಾನವ ಬೆಂಕಿ, ಮಳೆ ಇದನನ್ನು ಕಂಡು ಕಣಿದುಕುಪ್ಪಳಿಸಿದ. ತನ್ನ ದುಡಿಮೆಯ ಉಪಕರಣಗಳನ್ನು ಪೂಜಿಸಿ ಹಾಡಿಕುಣಿದು ಕುಪ್ಪಳಿಸಿ ಈ ಎಲ್ಲದರ ಪರಿಣಾಮವಾಗಿ ಜನಸಮುದಾಯದಿಂದ ಸಂಸ್ಕೃತಿ ಬೆಳೆಯಿತು. ಹಾಗೆ ಪೀಳಿಗೆಯಿಂದ ಪೀಳಿಗೆಗೆ ಬೆಳೆಯುತ್ತಾ ಬಳುವಳಿಯಾಗಿ ಬಂದಿತು. ಜಾನಪದರು ಆಯಾಸದರಿವಿಲ್ಲದೆ ತಮ್ಮ ನಿತ್ಯ ಕಾಯಗಳಲ್ಲಿ ಹಲವಾರು ಹಾಡುಗಳನ್ನು ಹಾಡಿಕೊಳ್ಳುತ್ತಿದ್ದರು. ಬೀಸುವಾಗ. ಕಟ್ಟುವಾಗ, ಮದುವೆಯಾಗುವಾಗ ಕಳೇಕೀಳುವಾಗ, ನಾಟಿ ಹಾಕುವಾಗ ಸುಗ್ಗಿಮಾಡುವಾಗ ಹೀಗೆ ಹಲವು ಸಂದಾರ್ಭದಲ್ಲಿ ಜಾನಪದರ ಭಾವನೆಯು ತ್ರಿಪದಿಗಳಲ್ಲಿ ವ್ಯಕ್ತವಾಗುತ್ತಿತ್ತು. ಕ್ರಮೇಣ ಈ ಕಲೆ ಆಧುನೀಕರಣಗೊಂಡಂತಹ ಸಮಾಜದಲ್ಲಿ ಭಿನ್ನವಾದ ರೂಪವನ್ನು ಪಡೆಯುತ್ತಾ ಬಂದಿತು. ಜೊತೆಗೆ ಹೊಸ ಹೊಸ ಆವಿಷ್ಕಾರಗಲುಬಂದುಆವಿಷ್ಕಾರಗಳು ಬಂದು ಶಾಸ್ತ್ರೀಯ ನೃತ್ಯಗಳಾದ ಭರತನಾಟ್ಯ ಕಥಕ್ಕಳಿ ಕುಚುಪುಡಿ, ಒಡಿಸ್ಸೆ, ಮಣಿಪುರಿ ಮುಂತಾದವುಗಳ ಜೊತೆಗೆ ಸಂಗೀತವೂ ಕೂಡ ವಿಶಿಷ್ಟವಾಗಿ ಬೆಳೆಯಿತು. ಈ ಸಾಂಸ್ಕ್ರತಿಕ ಕಲೆಗೆ ಶಿಕ್ಷಣದ ಅಗತ್ಯವಿದೆ. ಆದರೆ ಆದಿಮಾನವನ ಮತ್ತು ಜಾನಪದಕಲೆಗಳಲ್ಲಿ ಶಿಕ್ಷಣದ ಅಗತ್ಯವಿರಲಿಲ್ಲ. ಅದು ಮೌಖಿಕವಾಗಿ ಹರಿದುಬಂದ ವಿಶಿಷ್ಟ ವರ್ಗದ ಕಲೆ. ಆದರೆ ಇಂದಿನ ಕಲೆಗಳು ಮೌಖಿಕತೆಗಿಂತ ಲಿಖಿತ ರೂಪಕ್ಕೆ ಹೆಚ್ಚು ಫ್ರಮುಖ್ಯತೆ ಇತ್ತಿವೆಯಾದ್ದರಿಂದ ಶಿಕ್ಷಣದ ಮಹತ್ವವು ಆಧಿಕವಾಗಿದೆ. ಪ್ರಗತಿಶೀಲವಾಗುತ್ತಿರುವ ಭಾರತದ ಶಿಕ್ಷಣದಲ್ಲಿ ಭಾರತಿಯ ಸಂಸ್ಕೃತಿಗೆ ಸಂಬಂಧಪಟ್ಟ ಪದವಿಗಳು ಸಂಶೋಧನೆಗಳು ವಿಶ್ವವಿದ್ಯಾಲಯಗಳಲ್ಲಿ ಅಭ್ಯಾಸಮಾಡಲು ವಿಶೇಷ ಪ್ರಾಮುಖ್ಯತೆಯನ್ನು ನೀಡಿರುವುದನ್ನು ಕಾಣಬಹುದು.