"ರೊಮಾನಿ ಜಾನಪದ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
ರೊಮಾನಿಗಳು ಅವರು ಸಂಗೀತ ಮತ್ತು ನೃತ್ಯಕ್ಕೆ ಪ್ರಸಿದ್ದರು. ಜಿಪ್ಸಿ ಬ್ಯಾಂಡ್ ಮತ್ತು ಕಣಿ ಹೇಳುವವರಿಲ್ಲದೆ ಪೂರ್ವ ಮತ್ತು ಆಗ್ನೇಯ ಯೂರೋಪಿನ ಯಾವ ಸಂತೋಷಕೂಟವೂ ಯಶಸ್ವಿ ಯಾಗುತ್ತಿರಲಿಲ್ಲ . ತಾವು ವಾಸಿಸಿದ ಕಡೆಗಳಲ್ಲೆಲ್ಲ ಅವರು ಜನ ಯಾಗುತ್ತಿರಲ್ಲಿಲ್ಲ . ತಾವು ವಾಸಿಸಿದ ಕಡೆಗಳಲ್ಲೆಲ್ಲ ಅವರು ಜನಪದ ಗೀತೆಗಳನ್ನು ಉಳಿಸಿ , ತಮ್ಮ ಸ್ವಂತ ಲಯಕ್ಕೆ ಅವನ್ನು ಹೊಂದಿಸಿಕೊಂಡಿರುತ್ತಾರೆ .ಹಂಗೇರಿ , ರುಮಾನಿಯಾ ಮತ್ತು ಸ್ಪೇನ್ ದೇಶಗಳಲ್ಲಿ ಇದು ಹೆಚ್ಚು . ಅವರ ಸಂಗೀತದ ಭಾವನಳು ತೀವ್ರ ವಿಷಾದದಿಂದ ಉತ್ಯಾಹ ಸಂತೋಷಗಳವರೆಗೆ ಇದ್ದು , ಧಾಟಿ, ನೃತ್ಯ , ಹಾಡು ಹೀಗೆ ಜಿಪ್ಸಿಗಳು ಯಾವುದನ್ನು ಮುಟ್ಟಲಿ ಅಲ್ಲಿ ತೀವ್ರತೆ ಇರುತ್ತದೆ . ರೊಮಾನಿಗಳು ಇಸ್ಲಾಂ , ಕ್ಯಾಥೋಲಿಕ್ , ಪ್ರಾಟಿಸ್ಟೆಂಟೆ ಧರ್ಮಗಳನ್ನು ಅನೇಕ ಕಡೆ , ಅನೇಕ ಕಾಲಗಳಲ್ಲಿ ಅನುಸರಿಸಿದ್ದಾರೆ . ಜರ್ಮನಿಯ ಜಿಪ್ಸಿಗಳು ಮಗುವಿಗೆ ಸಾರ್ವಜನಿಕ ಹೆಸರನ್ನು ಇಡುವಾಗ ಕ್ರೈಸ್ತ ಬಾಪ್ಪಿಸಮ್ ಪದ್ದತಿ ಅನುಸರಿಸುತ್ತಾರೆ . ಇಂಗ್ಲೆಂಡಿನ ಜಿಪ್ಸಿಗಳು ಅನೇಕ ಬಾರಿ ಬಾಪ್ಟೈಸ್ ಮಾಡಿಸುತ್ತಾರೆ. ದಕ್ಷಿಣ ಫ್ರಾನ್ನ್ ನಲ್ಲಿರುವ ಬೋಚಸ್-ಡು-ರೋನ್ ನ ಇಲೆಡೆಲ ಕುಮಾರನೊಳಗಿರುವ ಸೈಂಟೆಸ್ ಮೇರಿಸ್ ಡಿಲಮೇರ್ನ ಚರ್ಚಿಗೆ ಮೇ ೨೩ ರಂದು ಯೂರೋಪಿನಾದ್ಯಂತ ವಾಸಿಸುವ ಜಿಪ್ಸಿಗಖು ಯಾತ್ರೆ ನಡೆಸುತ್ತಾರೆ. ಮೇರಿಯ ಸಮಾಧಿ ಈ ಚರ್ಚಿನಲ್ಲಿದೆ . ಅವರು ಎರಡು ದಿನ ಒಂದು ರಾತ್ರಿ , ಆ ಸಮಾಧಿಯನ್ನು ಎಚ್ಚರಿಕೆಯಿಂದ ಕಾದು ಮರಳುತ್ತಾರೆ.
 
ಪೂರ್ವ ಯೂರೋಪಿಯನ್ ಸ್ಲಾವ್ ಗಳ ಗ್ರೀನ್ ಜಾರ್ಜ್ ಹಬ್ಬದಲ್ಲೂ ಜಿಪ್ಸಿಗಳು ಉತ್ಯಾಹದಿಂದ ಭಾಗವಹಿಸುತ್ತಾರೆ . ಇದರಲ್ಲಿ ಸಣ್ಣ ವಿಲ್ಲೋಮರವನ್ನು ಕಡಿದುಕೊಂಡು ಬಂದು ಅದನ್ನು ಹೂವು ಎಲೆಗಳಿಂದ ಸಿಂಗರಿಸುತ್ತಾರೆ. ಗರ್ಭಿಣಿ ಹೆಂಗಸರು ಈ ಗಿಡದ ಕೆಳಗೆ ಒಂದು ಜಮಕಾನ ಹಾಸುತ್ತಾರೆ. ಬೆಳೆಗ್ಗೆ ಆಗುವುದರೊಳಗೆ ಅದರ ಮೇಲೇನಾದರೂ ಒಂದು ಎಲೆ ಉದುರಿದ್ದರೆ ಅವರಿಗೆ ಸುಖಪ್ರಸವ ಆಗುತ್ತದೆ ಎಂದು ನಂಬುತ್ತಾರೆ. ಖಾಯಿಲಿಯವರು ಮತ್ತು ಮುದುಕರು ಗಿಡದ ಮೇಲೆ ಮೂರು ಬಾರಿ ಉಗುಳಿ, ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಾರೆ. "ನಾವು ಬಾಳೊಣ" ಎಂದು ಹೇಳುತ್ತಾರೆ. ಮಾರನೇ ಬೆಳ್ಳಗ್ಗೆ ಹಸಿರು ಎಲೆಗಳಿಂದ ಮೈ ಮುಚ್ಚಿಕೊಂಡ ಹುಡಗನೊಬ್ಬ ಪ್ರಾಣಿಗಳಿಗೆ ಹುಲ್ಲು ಎಸೆಯುತ್ತಾನೆ.
 
ಜಿಪ್ಸಿ ಜನಪದ ಕಥೆಯೆಂದರೆ ಸಾಮಾನ್ಯವಾಗಿ ಯುರೊಪಿನ ಜನಪದ ಕಥೆಯೇ. ಆದರೆ ಅದರಲ್ಲಿ ಜಿಪ್ಸಿ ಸೊಗಡು ಮತ್ತು ತಿರುವುಗಳು ಇರುತ್ತವೆ.
೮೩

edits

"https://kn.wikipedia.org/wiki/ವಿಶೇಷ:MobileDiff/413678" ಇಂದ ಪಡೆಯಲ್ಪಟ್ಟಿದೆ