ರೊಮಾನಿ ಜಾನಪದ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೬ ನೇ ಸಾಲು:
ದೆಹವನ್ನು ಸುದುವವರೆಗೂ ಅದರಲ್ಲಿ ಆತ್ಮ ಇರುತ್ತದೆ ಎಂದು ಜಿಪ್ಸಿಗಳು ನಂಬುತ್ತಾರೆ. ಸತ್ತವರನ್ನು ಕಡೆಗಣೆಸಿದರೆ ಅವರು ವಾಪಸ್ಸು ಬಂದು ಜೀವಂತವಾಗಿರುವವರನ್ನು ಕಾಡುತ್ತಾರೆ. ಯುದ್ದ ಕಾಲದಲ್ಲಿ ಕೂಡು ಜಿಪ್ಸಿಗಳು ಯೋಧರ ಹೆಣ ಹುಡುಕಿ ಕೊಂಡು ಸುಡುತ್ತಿದರು . ಎಷ್ಟೇ ಶಿಕ್ಷೆ ವಿಧಿಸುವ ಬೆದರಿಕೆ ಹಾಕಿದರೂ ಅವರು ಈ ಕೆಲಸ ನಡೆಸಿಯೇ ತೀರುತ್ತಿದ್ದರು . ಸ್ಥಳೀಯ ವ್ಯತ್ಯಾಸಗಳು ಇದ್ದರೂ ಜಿಪ್ಸಿಗಳ ಶವಸಂಸ್ಕಾರ ವಿಧಿಗಳು ಎಲ್ಲ ಕಡೆಯೂ ಒಂದೇ ರೀತಿ ಇದೆ ಎಂದು ವಿದ್ವಾಂಸರು ಹೇಳುತ್ತಾರೆ.ಒಂದೇ ಪ್ರದೇಶಕ್ಕೆ ಅವರು ಅಂಟಿಕೊಳ್ಳುವವರಲ್ಲವಾದ್ದರಿಂದ , ಕಡಿಮೆ ಉಪಕರಣಗಳನ್ನು ಬಯಸುವ ವೃತ್ತಿಗಳನ್ನು ಅವರು ಕರಗತಮಾಡಿಕೊಂಡಿದ್ದಾರೆ. ಸಾಮಾನ್ಯವಾಗಿ ಜಿಪ್ಸಿ ಗಂಡಸರು , ಕುಂಬಾರರೋ ಲೋಹದ ಕೆಲಸಗಾರರೋ ಆಗಿರುತ್ತಾರೆ. ಪೂರ್ವಯೂರೋಪಿನಲ್ಲಿ ಅವರು ಸಂಗೀತಗಾರರಾಗಿ , ಹಾಡುಗಾರರಾಗಿ, ನರ್ತಕರಾಗಿ , ಬೊಂಬೆಯಾಟದವರಾಗಿ ಪ್ರಸಿದ್ಧರಾಗಿದ್ದಾರೆ . ಕುದುರೆ ಮತ್ತು ಹಂದಿ ಮಾರಾಟಗಾರರಾಗಿಯೂ ಅವರು ಖ್ಯಾತರಾಗಿದ್ದಾರೆ . ಅವರಿಗೆ ಕುದುರೆ ಕಂಡರೆ ಬಹಳ ಪ್ರೀತಿ ಇರುವುದರಿಂದ ಕುದುರೆಯ ಭಾಷೆಯನ್ನು ಅರ್ಥಮಾಡಿಕೊಳ್ಳುತ್ತರಂತೆ . ಕುದುರೆಗಳ ಮದುವೆ ಮಾಡುತ್ತಾರೆ . ಅದಕ್ಕೆ ವೈದ್ಯವನ್ನೂ ಅವರು ತಿಳಿದಿದ್ದಾರೆ. ಆದರೆ ಈಗೀಗ ಈ ಜ್ಞಾನ ಅವರಲ್ಲಿ ನಶಿಸಿ ಹೋಗುತ್ತಿದೆ . ಜಿಪ್ಸಿಗಳ ಪ್ರಯಾಣದ ವೇಗವನ್ನು ವಾಹನಗಳ ಬಳಕೆ ಒಂದಿಷ್ಟೂ ತಗ್ಗಿಸಿಲ್ಲ . ಜಿಪ್ಸಿಗಳ ಕುದುರೆ ಗಾಡಿಗಳ ಹಾಗೆಯೇ ಅವರ ಕ್ಯಾರವಾನ್ ಕೂಡ ವರ್ಣರಂಜಿತವಾದದ್ದು . ಹೆಂಗಸರು ಕಸೂತಿ ಕೆಲಸ . ಕಣಿ ಹೇಳುವುದರಲ್ಲಿ ಪ್ರವೀಣರು . ಅವರು ಬೇರೆ ಹೆಂಗಸರ ಬಂಜೆತನವನ್ನು ನಿವಾರಿಸುವ ಮಾಂತ್ರಿಕ ಶಕ್ತಿಯನ್ನು ಪಡೆದುಕೊಂಡಿರುತ್ತಾರತೆ . ಓಡಿಹೋದ ಗಂಡಂದಿರನ್ನು ವಾಪಸು ಬರಿಸುವ , ಒಲ್ಲದ ಪ್ರೇಮಿಗಳನ್ನು ಹೆಂಗಸರ ಬಳಿ ತರಿಸುವ ಶಕ್ತಿಯನ್ನೂ ಅವರು ಪಡೆದಿರುತ್ತಾರಂತೆ.
 
ಕೊಲೆ ಬಿಟ್ಟರೆ ಮಿಕ್ಕೆಲ್ಲ ಅಪರಾಧಗಳನ್ನು ಅವರು ಮಾಡುತ್ತಾರೆಂದು ರೊಮಾನಿಗಳ ಬಗ್ಗೆ ಬರೆದಿರುವವರು ಹೇಳಿದ್ದಾರೆ . ಜಿಪ್ಸಿಗಳು ರಕ್ತ ಚೆಲುವುದಿಲ್ಲವಾದ್ದರಿಂದ ಕೊಲೆಯನ್ನು ಅವರು ಮಾಡುವುದಿಲ್ಲ . ವರ್ಜಿನ್ ಮೇರಿ ಜೇಸೆಫ್ ಮತ್ತು ಕ್ರಿಸ್ತ ಶಿಶುವಿಗೆ ಆದರ ನೀಡಲು ನಿರಾಕರಿಸಿದ್ದರಿಂದ ಜಿಪ್ಸಿಗಳು ಅಲೆಮಾರಿಗಳಾಗಬೇಕಾಯಿತೆಂದು ಕಥೆಯಿದೆ . ಕ್ರಿಸ್ತನ ಶಿಲುಬೆಗೆ ಜಿಪ್ಸಿ ಕುಮ್ಮಾರನೊಬ್ಬನು ಮೊಲೆಗಳನ್ನುಮೊಳೆಗಳನ್ನು ತಯಾರಿಸದ್ದರಿಮ್ದ ಅವರಿಗೆ ಶಾಪ ತಗುಲಿದೆಯೆಂದು ರುಮಾನಿಯಾದಲ್ಲಿ ಕಥೆಯಿದೆ . ಆದರೆ ಜಿಪ್ಸಿ ಕುಮ್ಮಾರನು ಕಡಿಮೆ ನೋವಾಗುವಂಥೆ ತೆಳ್ಳನೆ ಮೊಳೆಗಳನ್ನು ತಯಾರಿಸಿಕೊಟ್ಟನೆಂದು ಜಿಪ್ಸಿಗಳು ಇದಕ್ಕೆ ಪ್ರತಿಕಥೆ ಹೇಳುತ್ತಾರೆ . ಇದರಿಂದ ಮೇರಿಯು ಅವರನ್ನು ಹರಸಿ , ಅವರು ಕೆಲಸ ಹಗುರವಾಗಿ . ಲಾಭ ಹೆಚ್ಚಾಗಿರುವಂತೆ ಮಾಡಿದಳೆಂದು ಹೇಳುತ್ತಾರೆ . ಜಿಪ್ಸಿ
ಹೆಂಗಸೊಬ್ಬಳು , ಶಿಲುಬೆಗೇರಿಸುವುದನ್ನು ತಡೆಯಲು ಮೊಳೆಗಳನ್ನು ಕದಿಯಲು ನೋಡಿದಳು . ಆದರೆ ಒಂದೇ ಮೊಳೆ ಕದಿಯಲು ಸ್ಯಾಧ್ಯವಾದದ್ದು . ಇದರಿಂದ ಕ್ರಿಸ್ತನ ಶಿಲುಬೆಗೆ ಕೈಗಳಿಗೆರಡು , ಕಾಲಿಗೊಂದು ಹೀಗೆ ಮೂರೇ ಹೊಡೆಯಲಾಯಿತು ಎಂಬ ಕಥೆಯಿದೆ .
"https://kn.wikipedia.org/wiki/ರೊಮಾನಿ_ಜಾನಪದ" ಇಂದ ಪಡೆಯಲ್ಪಟ್ಟಿದೆ