ಜಯದೇವಿತಾಯಿ ಲಿಗಾಡೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೯ ನೇ ಸಾಲು:
ವೀರಶೈವ ಮಹಾಸಭೆಗಳಲ್ಲಿ ಜಯದೇವಿಯವರ ಭಾಷಣಗಳನ್ನು ಕೇಳಿದ ಬ್ರಿಟಿಷರು ‘ಲಿಂಗಾಯತ ಬಟಾಲಿಯನ್’ಗಾಗಿ ಭಾಷಣಮಾಡಲು ಕೇಳಿಕೊಂಡಾಗ ತಾಯಿಯವರು ನಿರಾಕರಿಸಿದರು. ಇದರಿಂದ ಮನೆಯಲ್ಲಿ ವಿರಸವುಂಟಾದರೂ ಅವರು ಒಪ್ಪಲಿಲ್ಲ. ಬರಬರುತ್ತಾ ‘ಮಹಿಳಾ ಜ್ಞಾನಮಂದಿರ’ಕ್ಕೆ ಅನಿವಾರ್ಯವೆನಿಸುವಷ್ಟು ಅದರ ಕಾರ್ಯ ಕಲಾಪಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಹೈದರಾಬಾದಿನಲ್ಲಿ ರಜಾಕಾರರ ಆಕ್ರಮಣದಿಂದ ಅನಾಥರಾದವರಿಗೆ ನಿರಾಶ್ರಿತರಾದವರಿಗೆ ಪ್ರೀತಿಯ ಆಶ್ರಯ ನೀಡಿದ ಜಯದೇವಿಯವರು ತಮ್ಮ ಸೇವಾ ಕಾರ್ಯದಿಂದಲೇ ‘ತಾಯಿ’ ಎನಿಸಿಕೊಂಡು ಆಗಿನಿಂದ ಜಯದೇವಿತಾಯಿಯಾದರು. ಅವರ ಸಮಾಜಸೇವೆ, ಹಲವಾರು ಕ್ಷೇತ್ರಗಳಲ್ಲಿ ಅವರ ದುಡಿಮೆಯನ್ನು ಗರಿಮೆಯನ್ನು ಗೌರವಿಸುವಂತಾಯಿತು.
 
ಸೊಲ್ಲಾಪುರದಲ್ಲಿ ಒಮ್ಮೆ ಕಾಲರಾ ದಾಳಿ ಮಾಡಿದಾಗ ಜಯದೇವಿ ತಾಯಿಯವರು ಅಲ್ಲಲ್ಲಿ ನಾಗರಿಕರ ಸಭೆ ಕರೆದು ಭಾಷಣಗಳ ಮೂಲಕ ಜನರಲ್ಲಿ ಧೈರ್ಯತುಂಬಿ ಅಗತ್ಯಸೇವೆಯನ್ನು ಒದಗಿಸಿದರು. ಗಾಂಧೀಜಿಯವರ ತತ್ವಗಳಿಗೆ ಮಾರುಹೋಗಿ ನೂಲುವ, ಸ್ವದೇಶಿ ಬಟ್ಟೆಯನ್ನು ತೊಡುವ ವ್ರತತೊಟ್ಟು ಜ್ಞಾನಮಂದಿರದಲ್ಲೂ ಅದನ್ನು ಕಾರ್ಯರೂಪಕ್ಕೆ ತಂದರು. ಹಿಂದೂ ಮುಸಲ್ಮಾನ ಬಂಧುಗಳನ್ನೆಲ್ಲಾ ಒಂದೇ ರೀತಿಯಲ್ಲಿ ಕಾಣುತ್ತಿದ್ದ ಹೃದಯವಂತಿಗೆ ಮೆರೆದರು.
 
==ಸ್ತ್ರೀ ಶಿಕ್ಷಣ ಕ್ಷೇತ್ರದಲ್ಲಿ==