ಈರುಳ್ಳಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
{{WPCU}}
 
{{ICCU}}
[[ಚಿತ್ರ:Onions.jpg|200px|thumb|right|ಈರುಳ್ಳಿ]]
[[File:ARS red onion.jpg|thumb|ಬೇರು.,ಎಲೆಗಳು ಮತ್ತು ಬೆಳೆಯುತ್ತಿರುವ ಈರುಳ್ಳಿ]]
Line ೫ ⟶ ೮:
 
 
'''ಈರುಳ್ಳಿ'''ಯು (''ಆಲಿಯಮ್ ಕೆಪಾ'' ಜಾತಿ [[ಆಲಿಯಮ್]]) ಒಂದು ತರಕಾರಿಯಾಗಿ ಬಳಸಲಾಗುವ ಬೆಳೆ. ಅದು ಸಸ್ಯದ ನೆಲದಡಿಯಲ್ಲಿ ಆಹಾರ ಸಂಗ್ರಹಕ್ಕಾಗಿ ಬಳಕೆಯಾಗುವ ಒಂದು ಲಂಬವಾದ ಕುಡಿಯಾಗಿ ಬೆಳೆಯುತ್ತದೆ, ಹಾಗಾಗಿ ಇದನ್ನು ಒಂದು [[ಗೆಡ್ಡೆ]]ಯೆಂದು ತಪ್ಪಾಗಿ ತಿಳಿಯಬಹುದು, ಆದರೆ ಇದು ಗೆಡ್ಡೆಯಲ್ಲ. ''ಆಲಿಯಮ್ ಕೆಪಾ'' ಸಾಗುವಳಿಯಲ್ಲಿ ಮಾತ್ರ ಪರಿಚಿತವಾಗಿದೆ ಆದರೆ ಸಂಬಂಧಿತ ಕಾಡು ಜಾತಿಗಳು ಮಧ್ಯ ಏಷ್ಯಾದಲ್ಲಿ ಕಾಣುತ್ತವೆ. ಅತ್ಯಂತ ಹಳೆಯ [[ತರಕಾರಿ]]ಗಳ ಪೈಕಿ ಒಂದಾದ ಈರುಳ್ಳಿಗಳು, ಬಹುತೇಕ ವಿಶ್ವದ ಎಲ್ಲ ಸಂಸ್ಕೃತಿಗಳಿಗೆ ವ್ಯಾಪಿಸುವ ಹೆಚ್ಚಿನ ಸಂಖ್ಯೆಯ ಪಾಕಗಳು ಮತ್ತು ಅಡುಗೆಗಳಲ್ಲಿ ಕಾಣುತ್ತವೆ.ಇದರಲ್ಲಿ ೩೦೦ ಪ್ರಭೇದಗಳಿವೆ.ಕೆಲವು ಕೆಲವೇ ತಿಂಗಳಲ್ಲಿ ಬೆಳೆದು ಮುದುಡಿ ಹೋಗುವ ಗಿಡಗಳಾದರೆ ಮತ್ತೆ ಕೆಲವು ಬಹುವಾಷಿಕ ಸಸ್ಯಗಳು. ಈರುಳ್ಳಿಯ ಗೆಡ್ಡೆಯಲ್ಲಿ ಅನೇಕ ಸಾವಯವ ಗಂಧಕ ಸಂಯುಕ್ತ ವಸ್ತುಗಲಿವೆ. ಇವು ಸಂಕೀಣ್ರ್ರ ರೂಪದಿಂದ ಸರಳ ರೂಪಕ್ಕೆ ಬದಲಾಗುವಾಗ ಈರುಳ್ಳಿಯ ಪರಿಮಳವು ಹೊರಹೊಮೂಮ್ಮುತ್ತದೆ. ಈರುಳ್ಳಿಯನ್ನು ಶೀತಲೀಕರಿಸಿದಾಗ ಅಥವಾ ಹುರಿದಾಗ ಅದರ ರಾಸಾಯನಿಕ ರಚನೆ ಬದಲಾಗುತ್ತದೆ. ಅದು ಹಸಿ ಇದ್ದಗ ಕಿಣ್ವಗಳ ಪ್ರಕ್ರಿಯೆಯನ್ನು ಮಾಡುತ್ತಿದ್ದು ನಿಂತು ಹೋಗುತ್ತದೆ. ಈ ಕಾರಣದಿಂದಲೇ ಹುರಿದಾಗ ಅಥವಾ ಬೇಯಿಸಿದಾಗ ಈರುಳ್ಳಿಯ ರುಚಿ ಬೇರೆಯಾಹಿರುತ್ತೆ. ಈರುಳ್ಳಿಯಲ್ಲಿರುವ ಕ್ವೆಸ್ರೆಟಿನ್ ಎನ್ನುವ ರಾಸಾಯ್ನಿಕವು ಒಂದು ಪ್ರಬಲ ಯ್ಯಂಟಿ ಆಕ್ಸಿಡೆಂಟ್ ಆಗಿದ್ದು, ನಮ್ಮ ಆರೋಗ್ಯ ರಕ್ಷಣೆಯನ್ನು ಮಡುತ್ತದೆ. ಈರುಳ್ಳಿ ಗಿಡ ೨-೩ ಅಡಿಯಷ್ಟು ಎತ್ತರಕ್ಕೆ ಬೆಳೆಯುತ್ತದೆ.ಎಲೆಗಳು ಉದ್ದಕ್ಕಿರುತ್ತವೆ. ಒಳಗಡೆ ಟೊಳ್ಳಾಗಿರುತ್ತವೆ. ಕೊಳವೆಯಾಕಾರದಲ್ಲಿರುತ್ತವೆ. ಹಸಿರು ಬಣ್ಣದಲ್ಲಿ ಎಲೆಯ್ ತುದಿಯಲ್ಲಿ ಬಿಳಿ ಬಣ್ಣದ ಹೂವು ಇರುತ್ತದೆ.ಹೂವು ಫಲಿತವಾಗಿ ಹಣ್ಣಾದಗ ಒಳಗೆ ಮೂರು ಕೋಶಗಳಲ್ಲಿ ತಲಾ ಒಂದರಂತೆ ಬೀಜಗಳಿರುತ್ತವೆ.ಈರುಳ್ಳಿಯ ಗೆಡ್ಡೆ, ಎಲೆ,ಹೂವು ಮತ್ತು ಬೀಜ -ಇವಿಷ್ಟನ್ನು ನಮ್ಮ ದೇಶದಲ್ಲಿ ಬೇರೆ ಬೇರೆ ಬಗೆಯ ಅಡುಗೆಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಇವು ಕೇವಲ ಅಡುಗೆ ತಯಾರಿಕೆಯಲ್ಲಷ್ಟೆ ಅಲ್ಲದೇ ಹಲವು ಬಗೆಯ ದೈಹಿಕ ಸಮಸ್ಯೆಗಳ ಪರಿಹಾರಕ್ಕೂ ಬಳಕೆಯಾಗುತ್ತಿವೆ. ಈರುಳ್ಳಿಯ ಮೂಲಸ್ಥಳದ ಬಗ್ಗೆ ವಿಜ್ಞಾನಿಗಳಲ್ಲಿ ಒಮ್ಮತವಿಲ್ಲ.
"https://kn.wikipedia.org/wiki/ಈರುಳ್ಳಿ" ಇಂದ ಪಡೆಯಲ್ಪಟ್ಟಿದೆ