ವೈರಾಣು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ನಿರ್ಮಾಣ, ಬ್ಯಾಕ್ಟೀರಿಯೋಫಾಜ್
No edit summary
೩ ನೇ ಸಾಲು:
'''ವೈರಾಣು'''ವು (ಲ್ಯಾಟಿನ್‌ನಲ್ಲಿ ''ವೈರಸ್'' ಎಂದರೆ ''[[ಟಾಕ್ಸಿನ್]]'' - ಜೀವಾಣುವಿನಲ್ಲಿ ಉತ್ಪನ್ನವಾಗುವ ವಿಷ ಅಥವಾ ''[[ವಿಷ]]'') ಬೇರೆಯೊಂದು ಜೀವಿಯ ಜೀವಕೋಶಗಳೊಳಗೆ ಮಾತ್ರ ಸಂತಾನೋತ್ಪತ್ತಿ ಮಾಡಬಲ್ಲ ಒಂದು ಚಿಕ್ಕದಾದ [[ರೋಗಕಾರಕ|ಸೋಂಕುಂಟುಮಾಡುವ ಸೂಕ್ಷ್ಮಜೀವಿ]]. ವೈರಾಣುಗಳು [[ದ್ಯುತಿಸೂಕ್ಷ್ಮದರ್ಶಕ]]ದಿಂದ ಪ್ರತ್ಯಕ್ಷವಾಗಿ ಕಾಣದಷ್ಟು ಚಿಕ್ಕದಾಗಿರುತ್ತವೆ. ವೈರಾಣುಗಳು [[ಪ್ರಾಣಿ]]ಗಳು ಮತ್ತು [[ಸಸ್ಯ]]ಗಳ ಜೊತೆಗೆ [[ಬ್ಯಾಕ್ಟೀರಿಯಾ]] ಮತ್ತು [[ಆರ್ಕೀಯಾ]]ದ ವರೆಗಿನ ಎಲ್ಲ ಬಗೆಯ ಜೀವಿಗಳಲ್ಲಿ ಸೋಂಕು ಉಂಟು ಮಾಡುತ್ತವೆ. ಇವುಗ ಡಿ.ಎನ್.ಎ ಅಥವಾ ಆರ್.ಎನ್.ಎ ಎಳೆಗಳನ್ನು ಪ್ರೂಟೀನುಗಳು ಆವರಿಸಿಕೊಂಡಿರುವ ಕಣಗಳಾಗಿವೆ. ಇವುಗಳು [[ಜೀವಕೋಶಗಳು]] ಅಲ್ಲ ಎಂಬುದನ್ನು '''''ರುಡಾಲ್ಫ್ ವರ್ಛೊ''''' ಅವರು ಹೊರಡಿಸಿದ ''ಸೆಲ್ ಥಿಯರಿ''ಯ ಮೂಲಕ ವ್ಯಕ್ತ ಪಡಿಸಲಾಗಿದೆ. ಆದರು ಇವುಗಳು ಜೀವಿಗಳ ಒಳಗಡೆ ಇದ್ದಾಗ ಜೀವ ತುಂಬಿದಂತೆ ಕಾಣುವುದು. ಇದರಿಂದಾಗಿ ವೈರಾಣುಗಳು ಜೀವಿಗಳ ಹಾಗು ನಿರ್ಜೀವ ಲೋಕದ ಮಧ್ಯೆ ಇರುವ ಒಂದು ಸೇತುವೆ ಆಗಿದೆ. ಇವುಗಳು ಹಲವಾರು ರೋಗಗಳನ್ನು ಹೊರಡಿಸುತ್ತದೆ. ಇದರಿಂದಾಗಿ ನಮ್ಮ ವಿಜ್ಞಾನಿಗಳು ಇವುಗಳ ಬಗ್ಗೆ ತಿಳಿದು, ಜೀವಿಗಳಲ್ಲಿ ರೋಗಗಳನ್ನು ಉಂಟುಮಾಡುವ ರೀತಿಯನ್ನು ಕುರಿತು ಹೆಚ್ಚು ಮಾಹಿತಿಯನ್ನು ಸಂಗ್ರಹಿಸಿರುವರು. ಜೊತೆಗೆ ಇವುಗಳನ್ನು ಮಾನವನ ಹಾಗು ಪರಿಸರದ ಉಪಯೋಗಕ್ಕಾಗಿಯೂ ಇಂದು ಬಳಸಲಾಗಿದೆ.
ವೈರಾಣುಗಳು ಆಕ್ರುತಿಯಲ್ಲಿಯೂ ಗಾತ್ರದಲ್ಲಿಯೂ ವ್ಯತ್ಯಾಸವನ್ನು ತೋರಿಸುವುದು. ಇವುಗಳಲ್ಲಿ ಕೇವಲ ೧೭ ರಿಂದ ೧೦೦೦ ನಾನೋಮೀಟರುಗಳ ವ್ಯಾಸವನ್ನು ನೋಡಬಹುದು.
{{ಚುಟುಕು}}
 
[[ವರ್ಗ:ಸೂಕ್ಷ್ಮಜೀವ ವಿಜ್ಞಾನ]]
"https://kn.wikipedia.org/wiki/ವೈರಾಣು" ಇಂದ ಪಡೆಯಲ್ಪಟ್ಟಿದೆ