ಕೆಫೀನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಇನ್ನಷ್ಟು ಮಾಹಿತಿ
೧೩ ನೇ ಸಾಲು:
ಕೆಫೀನ್ ಮುಖ್ಯವಾಗಿ ಸಸ್ಯಗಳಲ್ಲಿ ಕಂಡುಬರುವ "ಆಲ್ಕಲಾಯ್ಡ್" ಗುಂಪಿಗೆ ಸೇರಿದ ರಾಸಾಯನಿಕ ವಸ್ತು. ಅತಿ ಹೆಚ್ಚು ಕೆಫೀನ್ ಹೊಂದಿರುವ ಸಸ್ಯಗಳೆಂದರೆ ಕಾಫಿ, ಚಹಾ ಮತ್ತು ಕೋಕೋ. ಇದಲ್ಲದೆ, ಯೆರ್ಬಾ ಮೇಟ್, ಗ್ವರಾನಾ ಮೊದಲಾದ ಸಸ್ಯಗಳಲ್ಲೂ ಕೆಫೀನ್ ಕಂಡುಬರುತ್ತದೆ.
 
ಕೆಫೀನ್ ಮಾನವರ ದೇಹವನ್ನು ಸೇರುವುದು ಪ್ರಮುಖವಾಗಿ ಹುರಿದ ಕಾಫಿ ಬೀಜಗಳ ಮೂಲಕ. ಕಾಫಿ ಬೀಜಗಳಲ್ಲಿನ ಕೆಫೀನ್ ಪ್ರಮಾಣ ಕಾಫಿ ಗಿಡದ ಪ್ರಭೇದ ಮತ್ತು ಬೀಜಗಳನ್ನು ಸಂಸ್ಕರಿಸುವ ವಿಧಾನವನ್ನು ಅವಲಂಬಿಸಿರುತ್ತದೆ. ಸಾಮಾನ್ಯವಾಗಿ ಮನೆಗಳಲ್ಲಿ ಕುಡಿಯುವ ಒಂದು ಲೋಟ ಕಾಫಿಯಲ್ಲಿ ೪೦-೧೦೦ ಮಿಲಿಗ್ರಾಮ್ ಗಳಷ್ಟು ಕೆಫೀನ್ ಇರುತ್ತದೆ. ಕಾಫಿ ಗಿಡಗಳ ಮುಖ್ಯ ಪ್ರಭೇದಗಳಾದ ಅರಾಬಿಕ ಮತ್ತು ರೋಬಸ್ರೋಬಸ್ಟ ತಳಿಗಳಲ್ಲಿ ರೋಬಸ್ಟ ಬೀಜಗಳು ಹೆಚ್ಚು ಕೆಫೀನ್ ಅನ್ನು ಹೊಂದಿರುತ್ತವೆ.
 
ಕೆಫೀನ್ ನ ಇನ್ನೊಂದು ಸಾಮಾನ್ಯ ಆಕರ ಚಹಾ ಗಿಡಗಳು. ಚಹಾ ದಲ್ಲಿ ಕಾಫಿಯಲ್ಲಿರುವ ಪ್ರಮಾಣದ ಸುಮಾರು ಅರ್ಧದಷ್ಟು ಕೆಫೀನ್ ಮಾತ್ರ ಇರುತ್ತದೆ. ಚಹಾ ಗಿಡಗಳಲ್ಲೂ ವಿವಿಧ ತಳಿಗಳಲ್ಲಿ ಕೆಫೀನ್ ಪ್ರಮಾಣದಲ್ಲಿ ವ್ಯತ್ಯಾಸ ಇರುತ್ತದೆ. ಚಹಾ ಅನ್ನು ಮನೆಯಲ್ಲಿ ತಯಾರಿಸುವ ವಿಧಾನ ಕೆಫೀನ್ ಪ್ರಮಾಣದ ಮೇಲೆ ಮುಖ್ಯ ಪ್ರಭಾವ ಹೊಂದಿರುತ್ತದೆ.
೧೯ ನೇ ಸಾಲು:
ಕೋಕೋ ಗಿಡಗಳು, ಮತ್ತು ಕೋಕೋ ದಿಂದ ತಯಾರಿಸಲಾಗುವ ಚಾಕೊಲೇಟ್ ಗಳಲ್ಲಿ ಸಹ ಅಲ್ಪ ಪ್ರಮಾಣದಲ್ಲಿ ಕೆಫೀನ್ ದೊರಕುತ್ತದೆ. ಇದಲ್ಲದೆ, ಕೋಕಾ ಕೋಲಾ ದಂತಹ ತಂಪು ಪಾನೀಯಗಳಲ್ಲೂ ಕೆಫೀನ್ ಇರುತ್ತದೆ.
 
[[Category:ರಸಾಯನ ಶಾಸ್ತ್ರರಸಾಯನಶಾಸ್ತ್ರ]]
"https://kn.wikipedia.org/wiki/ಕೆಫೀನ್" ಇಂದ ಪಡೆಯಲ್ಪಟ್ಟಿದೆ