ಅ.ನಾ.ಪ್ರಹ್ಲಾದರಾವ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೪೪ ನೇ ಸಾಲು:
ಕನ್ನಡದಲ್ಲಿ ಹೆಚ್ಚು ಪದಬಂಧಗಳನ್ನು ರಚಿಸಿರುವ ಅ.ನಾ.ಪ್ರಹ್ಲಾದರಾವ್ ಕೋಲಾರ ಜಿಲ್ಲೆಯ ಅಬ್ಬಣಿ ಗ್ರಾಮದಲ್ಲಿ 1953ರ ಜುಲೆ 24ರಂದು ಜನಿಸಿದರು. ತಂದೆ ಎ.ಆರ್.ನಾರಾಯಣರಾವ್, ತಾಯಿ ಕಾವೇರಮ್ಮ. ಅಬ್ಬಣಿ, ಬೆಂಗಳೂರು, ಕೋಲಾರದಲ್ಲಿ ವ್ಯಾಸಂಗ ಮುಗಿಸಿ, ವಿಜ್ಞಾನ ಪದವೀಧರರಾದರು. ಮುಕ್ತ ವಿಶ್ವವಿದ್ಯಾಲಯದಿಂದ ಸಮಾಜಶಾಸ್ತದಲ್ಲಿ ಎಂ.ಎ ಸ್ನಾತಕೋತ್ತರ ಪದವಿಯನ್ನು ಗಳಿಸಿದರು. ಕೋಲಾರದಿದ ಪ್ರಕಟಗೊಳ್ಳುವ ಕೋಲಾರಪತ್ರಿಕೆ ದೈನಿಕದಲ್ಲಿ ಪತ್ರಕರ್ತರಾಗಿ (1975) ವೃತ್ತಿ ಆರಂಭಿಸಿದರು. ಕೋಲಾರದಿಂದ ಪ್ರಕಟಗೊಳ್ಳುತ್ತಿರುವ ಹೊನ್ನುಡಿ ದಿನಪತ್ರಿಕೆಯ ಸ್ಥಾಪಕ ಸಂಪಾದಕರಾಗಿ (1979) ಮೂರು ವರ್ಷ ಕಾಲ ಆ ಪತ್ರಿಕೆಯನ್ನು ಮುನ್ನೆಡೆಸಿದರು. ಜಿಲ್ಲಾ ಮಟ್ಟದಲ್ಲಿ ಪ್ರಕಟಗೊಳ್ಳುವ ದೈನಿಕಗಳಲ್ಲಿ ಪ್ರತಿ ನಿತ್ಯ ಸಂಪಾದಕೀಯ ಲೇಖನ ಬರೆದ ಹೆಗ್ಗಳಿಕೆಗೆ `ಹೊನ್ನುಡಿ` ಪಾತ್ರವಾಯಿತು.
1983ರಲ್ಲಿ ವಾರ್ತಾ ಇಲಾಖೆ ಸೇರ್ಪಡೆಗೊಂಡು, ಸುದ್ದಿ ಮತ್ತು ಪತ್ರಿಕಾ ಶಾಖೆಯಲ್ಲಿ ಕಾರ್ಯನಿರ್ವಹಿಸಿದರು. 1988ರಿಂದ 1990ರವರೆಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಲಿಯಲ್ಲಿ ಸಹಾಯಕ ಸಂಪರ್ಕ ಅಧಿಕಾರಿಯಾಗಿ, 1990ರಲ್ಲಿ ಹಾಸನ ಜಿಲ್ಲಾ ವಾರ್ತಾ ಮತ್ತು ಪ್ರಚಾರ ಕಛೇರಿಯಲ್ಲಿ ವಾರ್ತಾ ಸಹಾಯಕರಾಗಿ ಕಾರ್ಯ ನಿರ್ವಹಿಸಿದರು. 1992ರಿ0ದ 1996ರವರೆಗೆ ಮುಖ್ಯಮಂತ್ರಿಗಳ ಪತ್ರಿಕಾ ಕಾರ್ಯಾಲಯದಲ್ಲಿ ಕೆಲಸ ಮಾಡಿ ಅನುಭವಹೊಂದಿದರು. 1996ರಿಂದ 2000ರವರೆವಿಗೂ ಮಂಡ್ಯ ಜಿಲ್ಲಾ ವಾರ್ತಾ ಮತ್ತು ಪ್ರಚಾರ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು. 2000ರಿ0ದ 2003 ರವರೆವಿಗೂ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು. 2003ರಿಂದ ಬೆಂಗಳೂರಿನಲ್ಲಿ ವಾರ್ತಾ ಇಲಾಖೆಯ ಸುದ್ದಿ ಶಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸಿ, 2004ರ ನವೆಂಬರ್ನಿಂದ 2011ರ ಆಗಸ್ಟ್ ತಿಂಗಳವರೆಗೆ ಸುಮಾರು ಏಳು ವರ್ಷಗಳ ಕಾಲ ಬೆಂಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಲಿಯಲ್ಲಿ ಸಾರ್ವಜನಿಕ ಸಂಪಕರ್À ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಪ್ರಸ್ತುತ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಲಿಯಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
 
ಕನ್ನಡ ಪತ್ರಿಕೆಗಳಿಗೆ ಕಳೆದ 25 ವರ್ಷಗಳಿಂದ ನಿರಂತರವಾಗಿ ಪದಬಂಧ ಸಿದ್ದಪಡಿಸುತ್ತಿದ್ದು, ಇಲ್ಲಿಯವರೆವಿಗೂ 40,000 ಪದಬಂಧಗಳನ್ನು ರಚಿಸಿದ್ದಾರೆ. ಕನ್ನಡ ಪತ್ರಿಕೆಗಳಲ್ಲಿ ಪ್ರತಿ ನಿತ್ಯ ಪ್ರಕಟಗೊಳ್ಳುವ ನಿತ್ಯ ಪದಬಂಧಗಳಲ್ಲಿ ಬಹುಪಾಲು ಪ್ರಹ್ಲಾದ್ ಅವರದೆ. ದಿನ ಪತ್ರಿಕೆಗಳ ಪುರವಣಿಗಳಲ್ಲಿ ಹಾಗೂ ನಿಯತಕಾಲಿಕೆಗಳಲ್ಲಿ ಇವರ ಪದಬಂಧಗಳು ಪ್ರಕಟಗೊಳ್ಳುತ್ತಿವೆ. ಸಾಮಾನ್ಯ ಬಂಧಗಳೊಂದಿಗೆ, ಸಿನಿಮಾ, ಸಾಹಿತ್ಯ, ಅಪರಾಧ, ವಿಜ್ಞಾನ, ಪುರಾಣ, ತಿಂಡಿ-ತಿನಿಸು, ಕ್ರೀಡೆ ಮುಂತಾದ ಕ್ಷೇತ್ರಗಳಿಗೆ ಸಂಬಂಧಿಸಿದ ಪದಬಂಧಗಳನ್ನು ಇವರು ರಚಿಸಿದ್ದಾರೆ. ಇದುವರೆವಿಗೂ 8 ಸಾವಿರ ಸಿನಿಮಾ ಪದಬಂಧಗಳು ಸೇರಿದಂತೆ 40 ಸಾವಿರಕ್ಕೂ ಮಿಗಿಲು ಪದಬಂಧಗಳು ಇವರಿಂದ ರಚಿತಗೊಂಡಿವೆ. ಇದಕ್ಕಾಗಿ ಪ್ರಹ್ಲಾದ್ ಅವರು ಸುಮಾರು 12 ಲಕ್ಷ ಸುಳುಹುಗಳನ್ನು ಬರೆದಿದ್ದಾರೆ.
ಪ್ರತಿನಿತ್ಯ `ವಿಜಯಕರ್ನಾಟಕ`, `ಕನ್ನಡಪ್ರಭ`, `ಸಂಯುಕ್ತಕರ್ನಾಟಕ` ಪತ್ರಿಕೆಗಳಲ್ಲಿ ಇವರು ನಿತ್ಯ ಪದಬಂಧ ರಚಿಸಿದ್ದಾರೆ. ಪ್ರತಿ ನಿತ್ಯ ಪದಬಂಧ ಪ್ರಕಟಿಸಲಾರಂಭಿಸಿದ ಹೆಗ್ಗಳಿಕೆ ವೈ.ಎನ್.ಕೆ ಸಾರಥ್ಯದ `ಕನ್ನಡಪ್ರಭ` ಪತ್ರಿಕೆಯದಾದರೆ, ಈ ಪತ್ರಿಕೆಗಾಗಿ ಮೊದಲು ಪದಬಂಧ ಬರಯಲಾರಂಭಿಸಿದವರು ಅ.ನಾ.ಪ್ರಹ್ಲಾದರಾವ್. `ಪ್ರಜಾವಾಣಿ` ಸಿನಿಮಾರಂಜನೆ ಪುರವಣಿಯಲ್ಲಿ ಸುಮಾರು 15 ವರ್ಷಗಳ ಕಾಲ ಪ್ರತಿ ಶುಕ್ರವಾರ ಇವರ ಸಿನಿಮಾ ಪದಬಂಧ ಪ್ರಕಟಗೊಂಡಿದೆ. `ಮಂಗಳ` ವಾರ ಪತ್ರಿಕೆಯಲ್ಲಿ ಕಳೆದ 25 ವರ್ಷಗಳಿಂದ ಪ್ರತಿವಾರ ಪದಬಂಧ ಹಾಗೂ ಪದಾನ್ವೇಷಣೆ ಕ್ವಿಜ್ ಪ್ರಕಟವಾಗುತ್ತಿವೆ. `ಬಾಲಮಂಗಳ` ಪಾಕ್ಷಿಕ ಪತ್ರಿಕೆಯಲ್ಲಿ ಕನ್ನಡ ಸುಳಿವುಗಳ ಮೂಲಕ ಇಂಗ್ಲಿಷ್ ಪದಗಳನ್ನು ತುಂಬಿಸುವ ವಿಶಿಷ್ಟ ಪದಬಂಧ ಹಾಗೂ ಸಾಮಾನ್ ಜ್ಞಾನ ಕ್ವಿಜ್ ಪ್ರಕಟಗೊಂಡಿದೆ. `ಪ್ರಿಯಾಂಕ` ಮಾಸ ಪತ್ರಿಕೆಗಾಗಿ ಸುಮಾರು 12 ವರ್ಷಗಳಿಂದ ಪದಬಂಧ ಸಿದ್ಧಪಡಿಸಿಕೊಡುತ್ತಿದ್ದಾರೆ. ರವಿ ಬೆಳಗೆರೆ ಸಂಪಾದಕತ್ವದಲ್ಲಿ ಪುನರಾರಂಭಗೊಂಡ `ಕರ್ಮವೀರ` ವಾರಪತ್ರಿಕೆಗಾಗಿ ಮೊದಲ ಸಂಚಿಕೆಯಿಂದ ಪದಸಂಪದ ಬರೆದುಕೊಟ್ಟ ಖ್ಯಾತಿಯೂ ಪ್ರಹ್ಲಾದ್ ಅವರದೆ. `ಕರ್ಮವೀರ` ಸಾಪ್ತಾಹಿಕಕ್ಕಾಗಿ ಚರ್ವಿತಚರ್ವಣ ಹಾಗೂ ಒಳಗುಟ್ಟು ಹೆಸರಿನ ವಿಶೇಷ ಫಜಲ್ ರಚಿಸಿದ್ದಾರೆ. ಕರ್ನಾಟಕ ಸರ್ಕಾರ ಪ್ರಕಟಿಸುತ್ತಿರುವ `ಕಂದಾಯ ವಾರ್ತೆ` ಮಾಸ ಪತ್ರಿಕೆಗಾಗಿ ಕಂದಾಯ ಇಲಾಖೆಗೆ ಪ್ರಸ್ತುತವೆನಿಸುವ ಪದಬಂಧ ರಚಿಸುತ್ತಿದ್ದಾರೆ. ಚಲನಚಿತ್ರ ಮಾಸಿಕ `ಚಿತ್ರ` ಪತ್ರಿಕೆಗಾಗಿ ಪದಬಂಧ ಹಾಗೂ ಸಿನಿಮಾ ಕ್ವಿಜ್ ಬರೆದುಕೊಡುತ್ತಿದ್ದಾರೆ. `ಈಸಂಜೆ` ಪತ್ರಿಕೆಗಾಗಿ ಪ್ರತಿವಾರ ಚಲನಚಿತ್ರ ಪದಬಂಧಗಳನ್ನು ರಚಿಸಿದ್ದಾರೆ. ಕನ್ನಡದ ಏಕಮೇವ ಸಿನಿಮಾ ಸಾಪ್ತಾಹಿಕ `ಅರಗಿಣಿ` ಮೊದಲ ಸಂಚಿಕೆಯಿಂದ ಇವರ ಗಿಣಿಬಂಧ ಪ್ರಕಟಿಸುತ್ತಾ ಬಂದಿದೆ.
` ಸಿಲ್ಲಿಲಲ್ಲಿ` ಹಾಗೂ `ಪಾಪಪಾಂಡು` ಧಾರಾವಾಹಿಗಳನ್ನು ಆಧರಿಸಿದ ಪದಬಂಧ ಪ್ರತಿ ಭಾನುವಾರ `ವಿಜಯಕರ್ನಾಟಕ` ಪತ್ರಿಕೆಯಲ್ಲಿ ಪ್ರಕಟಗೊಂಡಿದೆ. `ಜನವಾಹಿನಿ` ದಿನ ಪತ್ರಿಕೆ ಪ್ರತಿ ಭಾನುವಾರ ಇವರ ಪದವಾಹಿನಿ ಪ್ರಕಟಿಸಿದೆ. ಸಂಯುಕ್ತಕರ್ನಾಟಕ ಪ್ರತಿ ಭಾನುವಾರ ಇವರ ಪೋಣಿಸುಪದವ ಬಂಧವನ್ನು 15 ವರ್ಷಗಳ ಕಾಲ ಪ್ರಕಟಿಸಿದೆ. `ಮಂಗಳ` ವಾರಪತ್ರಿಕೆಗಾಗಿ ಒಂದು ವರ್ಷ ಕಾಲ ಕನ್ನಡದ ಖ್ಯಾತ ಬರಹಗಾರರ ಕಾದಂಬರಿಗಳನ್ನು ಆಧರಿಸಿ ಸಾಹಿತ್ಯ ಪದಬಂಧ ರಚಿಸಿದ್ದಾರೆ. ಹಂಪೆಯ ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸುತ್ತಿದ್ದ ಜನಪ್ರಿಯ ವಿಜ್ಞಾನ ಪತ್ರಿಕೆ `ವಿಜ್ಞಾನಸಂಗಾತಿ`ಗಾಗಿ ಮೂರು ವರ್ಷ ಕಾಲ ವಿಜ್ಞಾನ ಪದಬಂಧ ಹಾಗೂ ವಿಜ್ಞಾನಕ್ಕೆ ಸಬಂಧಿಸಿದಂತೆ ಕ್ವಿಜ್ ಸಿದ್ಧಪಡಿಸಿಕೊಟ್ಟಿದ್ದಾರೆ. ಸಕಾಂರದ ಪ್ರಕಟಣೆಗಳಾದ `ಜನಪದ`, `ಯುವಕರ್ನಾಟಕ`, `ಮಾರ್ಚ್ಆಫ್ ಕರ್ನಾಟಕ` ಪತ್ರಿಕೆಗಳಿಗೂ ಇವರು ಪದಬಂಧ ರಚಿಸಿದ್ದಾರೆ. `ಸಂಚು`, `ಪಲೀಸ್ಫೈಲ್`, `ಪೊಲೀಸ್ ನ್ಯೂಸ್` ಪತ್ರಿಕೆಗಳಿಗಾಗಿ ಅಪರಾಧ ಪದಬಂಧಗಳನ್ನು ರಚಿಸಿದ್ದಾರೆ. `ಹೋಟೆಲ್ಪತ್ರಿಕೆ`ಗಾಗಿ ತಿಂಡಿ ತಿನಿಸು ಪದಬಂಧ ಇವರಿಂದ ಸಿದ್ದಗೊಂಡಿದೆ. ಮುಂಬೈನಿಂದ ಪ್ರಕಟಗೊಳ್ಳುತ್ತಿದ್ದ `ಉದಯರಾಗ` ಹಾಗೂ ನವದೆಹಲಿಯಿಂದ ಪ್ರಕಟಗೊಳ್ಳುತ್ತಿರುವ `ದೆಹಲಿ ವಾರ್ತೆ` ದಿನ ಪತ್ರಿಕೆಗಳಿಗಾಗಿ ನಿತ್ಯ ಪದಬಂಧ ರಚಿಸಿದ್ದಾರೆ. ಮದರಾಸಿನಿಂದ ಪ್ರಕಟಗೊಳ್ಳುತ್ತಿದ್ದ ಚಂದಮಾಮ ಅವರ ಜನಪ್ರಿಯ ಮಾಸಿಕಗಳಾದ `ವಿಜಯಚಿತ್ರ` ಹಾಗು `ವನಿತಾ` ಪತ್ರಿಕೆಗಳಿಗಾಗಿ ಹಲವಾರು ವರ್ಷ ಪದಬಂಧಗಳನ್ನು ರಚಿಸಿದ್ದಾರೆ. ಕನ್ನಡದ ಮೊದಲ ಕನ್ನಡ ಸುದ್ದಿಜಾಲ `ಕರ್ನಾಟಕ ನ್ಯೂಸ್ ನೆಟ್`ಗಾಗಿ ಇವರು ಸಿದ್ದಪಡಿಸಿಕೊಡುತ್ತಿದ್ದ ಪದಬಂಧ ರಾಜ್ಯದ ಹಲವಾರು ಜಿಲ್ಲಾ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಅಭಿಮಾನಿ ಪ್ರಕಾಶನ ಹೊರ ತರುತ್ತಿದ್ದ `ಅಭಿಮಾನಿ`, `ಅಭಿಮಾನ` ದಿನ ಪತ್ರಿಕೆ, `ತಾಯಿ`, `ಕ್ರೀಡಾಭಿಮಾನಿ` ಪತ್ರಿಕೆಗಳಿಗೆ ಹಲವು ವರ್ಷ ಕಾಲ ಪದಬಂಧಗಳನ್ನು ಬರೆದುಕೊಟ್ಟಿದ್ದಾರೆ. ಕನ್ನಡದ ಮೊದಲ ಪದಬಂಧಗಳಿಗೇ ಮೀಸಲಾಗಿ ಹೊರ ಬಂದ `ಶೃತಿ` ಪತ್ರಿಕೆಗಾಗಿ ಹಲವು ತಿಂಗಳು ಪ್ರತಿ ಬಾರಿಗೆ 50ರ0ತೆ ಪದಬಂಧಗಳನ್ನು ರಚಿಸಿದ್ದಾರೆ. ಚಲನಚಿತ್ರ ಪತ್ರಿಕೆಗಳಾದ `ರಂಗವಲ್ಲಿ`, `ಸ್ಟಾರ್`, `ಸಿನಿಮಾ ಮಕರಂದ` ಪತ್ರಿಕೆಗಳಿಗಾಗಿ ಚಲನಚಿತ್ರ ಪದಬಂಧಗಳನ್ನು ರಚಿಸಿದ್ದಾರೆ. ಕನ್ನಡದಲ್ಲಿ ಪ್ರಯೋಗಗೊಂಡ ಹಲವು ಪತ್ರಿಕೆಗಳ ಮೊದಲ ಸಂಚಿಕೆಗಳಲ್ಲ್ಲೇ ಇವರ ಪದಬಂಧ ಅಂಕಣ ಇತ್ತೆಂಬುದು ಗಮನಾರ್ಹ.
ಪದಬಂಧಗಳಷ್ಟೇ ಅಲ್ಲದೇ ಚಲನಚಿತ್ರ ಲೇಖನಗಳನ್ನು ಬರೆದಿದ್ದಾರೆ. `ಅರಗಿಣಿ` ಪತ್ರಿಕೆಗಾಗಿ ಸ್ಮರಣೀಯ ಚಿತ್ರಗಳು, ಕರ್ಮವೀರಕ್ಕಾಗಿ ಗತವೈಭವ, ಮಂಗಳ ಪತ್ರಿಕೆಗಾಗಿ ಚಲನಚಿತ್ರ ಇತಿಹಾಸ ಲೇಖನ ಮಾಲೆ ಹಲವಾರು ವರ್ಷ ಕಾಲ ನಿರಂತರವಾಗಿ ಪ್ರಕಟಗೊಂಡಿದೆ. ಕರ್ನಾಟಕ ವಿಶ್ವವಿದ್ಯಾಲಯ ಹೊರ ತಂದಿರುವ ಕಿರಿಯರ ಕರ್ನಾಟಕ ಹಾಗೂ ಚಲನಚಿತ್ರ ಇತಿಹಾಸ ಗ್ರಂಥಗಳಿಗೆ ಮತ್ತು ಉದಯಬಾನು ಕಲಾಸಂಘ ಹೊರ ತಂದಿರುವ ಬೃಹತ್ ಕೃತಿ ಬೆಂಗಳೂರುದರ್ಶನಕ್ಕಾಗಿ ಮಾಹಿತಿ ಲೇಖನಗಳನ್ನು ಬರೆದಿದ್ದಾರೆ. ಮಂಗಳ, ಬಾಲಮಂಗಳ, ಕರ್ಮವೀರ, ಅರಗಿಣಿ, ಸ್ಟಾರ್, ಸಂಯುಕ್ತಕರ್ನಾಟಕ, ಸಿನಿಮಾಮಕರಂದ, ಬೆಳ್ಳಿತೆರೆ ವಿಡಿಯೋ ಮ್ಯಾಗ್ಜೆನ್ಗಾಗಿ ಕ್ವಿಜ್ ರಚಿಸಿದ್ದಾರೆ. ವಾರ್ತ ಇಲಾಖೆ ಸಾದರ ಪಡಿಸುತ್ತಿದ್ದ ಕರ್ನಾಟಕ ವಾರ್ತಾಚಿತ್ರ, ಅವಲೋಕನಕ್ಕಾಗಿ ನಿರೂಪಣಾ ಸಾಹಿತ್ಯ ರಚಿಸಿದ್ದಾರೆ. ಸರ್ಕಾರ ಪ್ರಕಟಿಸುತ್ತಿರುವ ಜನಪದ, ಕರ್ನಾಟಕವಿಕಾಸ, ಸಹಕಾರ ಪತ್ರಿಕೆಗಳಿಗಾಗಿ ಅಭಿವೃದ್ದಿ ಲೇಖನಗಳನ್ನು ಬರೆದಿದ್ದಾರೆ. 1996ರಲ್ಲಿ ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಕ್ರೀಡೆಗಳ ಸಂದರ್ಭದಲ್ಲಿ ಹೊರತಂದ `ನಂದೂಸ್ಪೀಕ್ಸ್` ಪತ್ರಿಕೆ ಒಂದು ತಿಂಗಳ ಕಾಲ ಪ್ರಕಟಗೊಳ್ಳಲು ಸಂಪಾದಕೀಯ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಹಲವಾರು ಲೇಖನಗಳು, ಕಥೆ, ಕವನಗಳು ಮಲ್ಲಿಗೆ, ವಾರಪತ್ರಿಕೆ, ತರಂಗ, ರೂಪತಾರ, ಸುಧಾ, ಚಿತ್ರ, ಪ್ರಿಯಾಂಕ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಕವಿ ದೊಡ್ಡರಂಗೇಗೌಡರ ಅಭಿನಂದನ ಗ್ರಂಥ `ಜಾನಪದಜಂಗಮ`ಕ್ಕಾಗಿ ಜಾನಪದ ಸೊಗಡಿನ ಜೋಪಾನಕಾರ ಲೇಖನ ಬರೆದಿದ್ದಾರೆ.ಡಿ.ಎಸ್.ವೀರಯ್ಯನವರ ಅಭಿನಂದನ ಗ್ರಂಥ ಹೋರಾಟದ ಹೆಜ್ಜೆಗಳು ಕೃತಿಗಾಗಿ `ಕನ್ನಡ ಚಲನಚಿತ್ರ: ದಲಿತ ಸಂವೇದನೆ` ಲೇಖನ ರಚಿಸಿದ್ದಾರೆ. ಕರ್ನಾಟಕ ಸರ್ಕಾರ ಪ್ರಕಟಿಸಿರುವ ಕೋಲಾರ ಜಿಲ್ಲೆ ಗೆಜೆಟಿಯರ್ನಲ್ಲಿ ಮೂರು ಕಡೆ ಇವರ ಹೆಸರು ಉಲ್ಲೇಖಗೊಂಡಿದೆ. ಕರ್ನಾಟಕ ಗೆಜೆಟಿಯರ್ನಲ್ಲಿ ಇವರ ಹೆಸರನ್ನು ಉಲ್ಲೇಖಿಸಲಾಗಿದೆ. ಸಿ.ಎಸ್.ನಂಜುಂಡಯ್ಯ ಅವರ `ಅಮ್ಮ ಪಂಡರಿಬಾಯಿ` ಹಾಗೂ `ಅಭಿನಯ ಸವ್ಯಸಾಚಿ ಹೆಚ್.ಎಲ್.ಎನ್.ಸಿಂಹ ಕೃತಿಗಳಲ್ಲಿ ಇವರ ಹೆಸರನ್ನು ಉಲ್ಲ್ಲೇಖಿಸಲಾಗಿದೆ. ಕವಿ ಕೆ.ಎಸ್.ನಿಸಾರ್ ಅಹಮದ್ ಅವರ ಅಭಿನಂದನಗ್ರಂಥ `ನಿಸಾರ್ ನಿಮಗಿದೋ ನಮನ` ಹೆಬ್ಬೊತ್ತಿಗೆಯಲ್ಲಿ ಡಾ.ರಾಜಕುಮಾರ್ ಹಾಗೂ ನಿಸಾರ್ ಕುರಿತ ಲೇಖನ ಬರೆದಿದ್ದಾರೆ. ಚಿಂತಾಮಣಿಯ ವೆ.ಎಸ್.ಗುಂಡಪ್ಪನವರ ಸ್ಮರಣಸಂಚಿಕೆ ಸೇರಿದಂತೆ ಹಲವಾರು ಸ್ಮರಣಸಂಚಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ.
ಉದಯ ಟಿವಿ ಪರಿಚಯ ಕಾರ್ಯಕ್ರಮದಲ್ಲಿ ಶ್ರೀಮತಿ ಶೈಲಜಾ ಸಂತೋಷ್ ಅವರು ನಡೆಸಿದ ಸಂದರ್ಶನ ಬಿತ್ತರಗೊಂಡಿದೆ. ದೂರದರ್ಶನ ಚಂದನ ವಾಹಿನಿಯ ಬೆಳಗು ಕಾರ್ಯಕ್ರಮದಲ್ಲಿ ಶ್ರೀ ಶಿವರಾಂ ಅವರು ನೇರ ಸಂದರ್ಶನ ನಡೆಸಿದ್ದಾರೆ. ಇನ್ ಬೆಂಗಳೂರು ವಾಹಿನಿಯಲ್ಲಿ ನೇರ ಸಂದರ್ಶನ ಪ್ರಸಾರವಾಗಿದೆ. ಡಾ.ರಾಜಕುಮಾರ್ ಜನ್ಮ ದಿನಾಚರಣೆ ಸಂದರ್ಭದಲ್ಲಿ ದೂರದರ್ಶನ ಚಂದನ ವಾಹಿನಿಯ `ಹಲೋ ಗೆಳೆಯರೆ` ಕಾರ್ಯಕ್ರಮದಲ್ಲಿ 2007ರ ಏಪ್ರಿಲ್ 23ರಂದು ಹಾಗೂ ಜಿ ಟಿವಿ ಕನ್ನಡದಲ್ಲಿ 2007ರ ಏಪ್ರಿಲ್ 24ರಂದು ನೇರ ಸಂದರ್ಶನ ಪ್ರಸಾರವಾಯಿತು. ಬ್ಯುಜಿನೆಸ್ ಲೈನ್, ದಿ ಹಿಂದೂ, ದಿ ಟೈಂಸ್ ಆಫ್ ಇಂಡಿಯಾ, ಇಂಡಿಯನ್ ಎಕ್ಸ್ಪ್ರೆಸ್, ವಿಜಯಟೈಂಸ್, ವಿಜಯ ಕರ್ನಾಟಕ, ಜ್ವಾಲಾಮುಖಿ, ಕೊಳಲು, ಜನವಾಹಿನಿ, ಉಷಾಕಿರಣ ಮುಂತಾದ ಪತ್ರಿಕೆಗಳಲ್ಲಿ ಇವರ ಪರಿಚಯ ಲೇಖನಗಳು ಪ್ರಕಟಗೊಂಡಿವೆ.
2005ರ ಜುಲೆನಲ್ಲಿ ಡಾ.ರಾಜಕುಮಾರ್ ಅಭಿನಯದ ಐವತ್ತು ವರ್ಷಗಳ ಚಿನ್ನದ ಹಬ್ಬದ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ಬೆಂಗಳೂರಿನಲಿ ಏರ್ಪಡಿಸಿದ್ದ `ಸಾರ್ಥಕಸುವರ್ಣ` ಸಮಾರಂಭದಲ್ಲಿ ಡಾ.ರಾಜಕುಮಾರ್ ಜೀವನ ಸಾಧನೆ ಕುರಿತು ಇವರು ಬರೆದ `ಬಂಗಾರದಮನುಷ್ಯ` ಕೃತಿ ಬಿಡುಗಡೆ ಆಯಿತು. ಈ ಪುಸ್ತಕ ಪ್ರಕಟಗೊಂಡ ಹಲವಾರು ವಾರಗಳು ಹಾಗೂ ಡಾ.ರಾಜಕುಮಾರ್ ನಿಧನಾನಂತರದ ಕೆಲವು ವಾರಗಳು ಪ್ರಮುಖ ಪುಸ್ತಕ ಮಳಿಗೆಗಳಲ್ಲಿ ಮಾರಟದದಲ್ಲಿ ಮೊದಲನೆ ಸ್ಥಾನ ಗಳಿಸಿಕೊಳ್ಳುವ ಮೂಲಕ ಜನಪ್ರಿಯಗೊಂಡಿತು. ಸ್ವತಃ ಡಾ.ರಾಜಕುಮಾರ್ ಹಾಗೂ ಶ್ರೀಮತಿ ಪಾರ್ವತಮ್ಮ ರಾಜಕುಮಾರ್ ಈ ಪುಸ್ತಕವನ್ನು ಮಾಹಿತಿಪೂರ್ಣ ಕೃತಿ ಎಂದು ಶ್ಲಾಘಿಸಿದ್ದಾರೆ. ಪ್ರಜಾವಾಣಿ, ಕನ್ನಡಪ್ರಭ, ಸಂಯುಕ್ತಕರ್ನಾಟಕ, ಕರ್ಮವೀರ, ಅರಗಿಣಿ ಮುಂತಾದ ಪತ್ರಿಕೆಗಳು `ಬಂಗಾರದ ಮನುಷ್ಯ` ಪುಸ್ತಕದ ಬಗ್ಗೆ ವಿಮರ್ಶೆ ಬರೆದು ಉತ್ತಮ ಕೃತಿ ಎಂದು ಹೇಳಿವೆ. ನಾಡಿನ ಖ್ಯಾತ ಬರಹಗಾರರಾದ ವ್ಯಾಸರಾಯ ಬಲ್ಲಾಳ, ನಾಡೋಜ ಕವಿ ಪ್ರೊ.ಕೆ.ಎಸ್. ನಿಸಾರ್ ಅಹಮದ್, ಡಾ.ರಾಜಕುಮಾರ್ ಅವರ ಆತ್ಮೀಯ ಮಿತ್ರರಾದ ರಾಮಸ್ವಾಮಿ, ಪತ್ರಕರ್ತ ರವಿ ಬೆಳಗೆರೆ, ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್, ಖ್ಯಾತ ಹಿನ್ನಲೆ ಗಾಯಕಿ ಚಂದ್ರಿಕಾ ಗುರುರಾಜ್ ರಾಜ್ಯ ಪ್ರಶಸ್ತಿ ವಿಜೇತ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ, ಲೇಖಕ ಮಹಾಬಲೇಶ್ವರಭಟ್ಟ ಮುಂತಾದವರು ಬಂಗಾರದ ಮನುಷ್ಯ ಅತ್ಯುತ್ತಮ ಕೃತಿ ಎ0ದಿದ್ದಾರೆ. ಈ ಕೃತಿ ಅಮೆರಿಕಾದ ವಾಷಿಂಗ್ಟನ್ ಡಿಸಿ ನಗರದಲ್ಲಿ ನಡೆದ ಅಕ್ಕ ಸಮ್ಮೇಳನ, ಕುವೈತ್ ಕನ್ನಡ ಸಂಘ, ಲಂಡನ್ ಕನ್ನಡ ಸಂಘ ಹಾಗೂ ನ್ಯೂಜರ್ಸಿ ಕನ್ನಡ ಸಂಘಗಳಲ್ಲಿ ಬಿಡುಗಡೆಗೊಂಡಿದೆ. ಕನ್ನಡ ಚಲನಚಿತ್ರ ಕ್ಷೇತ್ರಕ್ಕೆ ಸೇವೆ ಸಲ್ಲಿಸಿದ 115 ಮಂದಿ ಮಹಾನುಭಾವರ ಪರಿಚಯ ಲೇಖನಗಳನ್ನೊಳಗೊಂಡ `ಬೆಳ್ಳಿತೆರೆ ಬೆಳಗಿದವರು` ಕೃತಿ 2007ರ ಮೇ ತಿಂಗಳಿನಲ್ಲಿ ಲೋಕಾರ್ಪಣೆಗೊಂಡಿತು. ಕನ್ನಡದಲ್ಲಿ ಪ್ರಪ್ರಥಮ ಬಾರಿಗೆ ಇವರು ರಚಿಸಿದ ಪದಬಂಧಗಳ 5 ಪುಸ್ತಕಗಳು 2008ರಲ್ಲಿ ಬಿಡುಗಡೆಗೊಂಡಿತು. 2008ರ ಮೆ ತಿಂಗಳಿನಲ್ಲಿ `ಬಂಗಾರದಮನುಷ್ಯ` ಕೃತಿಯ ಇಂಗ್ಲಿಷ್ ಭಾಷಾಂತರ 'ದಿ ಇನ್ಮಿಟಬಲ್ ಆಕ್ಟರ್ ವಿತ್ ಗೋಲ್ಡನ್ ವಾಯ್ಸ್' ಅಮೆರಿಕದ ನ್ಯೂಜರ್ಸಿ ಕನ್ನಡ ಸಂಘ `ಬೃಂದಾವನ` ಲೋಕಾರ್ಪಣೆ ಮಾಡಿದ ಸಂದರ್ಭದಲ್ಲಿ ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅ.ನಾ.ಪ್ರಹ್ಲಾದರಾವ್ ಮತ್ತು ಅವರ ಪತ್ನಿ ಶ್ರೀಮತಿ ಎಂ.ಬಿ.ಮಲ್ಲಿಕಾ ಪಾಲ್ಗೊಂಡಿದ್ದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿ ವಜ್ರಮಹೋತ್ಸವ ಅಂಗವಾಗಿ ಡಾ.ಬರಗೂರು ರಾಮಚಂದ್ರಪ್ಪ ಻ವರ ಸಂಪಾದಕತ್ವದಲ್ಲಿ ಹೊರ ತಂದ 75 ಪುಸ್ತಕಗಳಲ್ಲಿ ಡಾ.ರಾಜಕುಮಾರ್ ಹಾಗೂ ಕರಿಬಸಯ್ಯನವರ ಬಗ್ಗೆ 2 ಪುಸ್ತಕಗಳನ್ನು ರಚಿಸಿದ್ದಾರೆ. ಅ.ನಾ.ಪ್ರಹ್ಲಾದರಾವ್ ರಚಿಸಿದ ಭಾವಗೀತೆಗಳ ಸಾಂದ್ರಿಕೆ ವಸಂತ ಮಲ್ಲಿಕಾ 2009ರಲ್ಲಿ ಬಿಡುಗಡೆಗೊಂಡಿತು. ಪುತ್ತೂರು ನರಸಿಂಹ ನಾಯಕ್ ಸಂಗೀತ ನೀಡಿರುವ ಈ ಗೀತೆಗಳನ್ನು ಅಮೆರಿಕದಲ್ಲಿ ನೆಲೆಸಿರುವ ಗಾಯಕಿ ಶ್ರೀಮತಿ ವಸಂತ ಶಶಿ ಹಾಡಿದ್ದಾರೆ. ವೆಬ್ಸೈಟ್ನಲ್ಲಿ ಅಡಕಗೊಂಡಿರುವ `ವಿಕಿಪಿಡಿಯಾ` ಎನ್ಸೆಕ್ಲೋಪಿಡಿಯಾದಲ್ಲಿ ಇವರ ಬಗ್ಗೆ ಲೇಖನವನ್ನು ಅಳವಡಿಸಲಾಗಿದೆ. 2008ರ ಮೆ ತಿಂಗಳಿನಲ್ಲಿ ಇವರು ರಚಿಸಿದ ಬಂಗಾರದಮನುಷ್ಯ ಕೃತಿಯ ಇಂಗ್ಲಿಷ್ ಭಾಷಾಂತರ 'ದಿ ಇನ್ಮಿಟಬಲ್ ಆಕ್ಟರ್ ವಿತ್ ಗೋಲ್ಡನ್ ವಾಯ್ಸ್' ಅಮೆರಿಕದ ನ್ಯೂಜರ್ಸಿ ನಗರದಲ್ಲಿ ಬಿಡುಗಡೆಗೊಂಡ ಸಂದರ್ಭದಲ್ಲಿ ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರಲ್ಲದೆ ಮಡದಿ ಮಲ್ಲಿಕಾ ಅವರೊಂದಿಗೆ ಒಂದು ತಿಂಗಳ ಕಾಲ ಅಮೆರಿಕಾ ಪ್ರವಾಸ ಮಾಡಿದರು. ಸಿಂಗಪುರ, ಮಲೇಷಿಯಾ, ಫಿಲಿಫೈನ್ಸ್ ದೇಶಗಳಲ್ಲಿ ಅಧ್ಯಯನ ಪ್ರವಾಸ ಮಾಡಿದ್ದಾರೆ.
 
ಬೆಂಗಳೂರು, ಮಂಡ್ಯ ಹಾಗೂ ಕೋಲಾರದಲ್ಲಿ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿ `ಪ್ರಜಾರತ್ನ`, `ಪದಬಂಧಬ್ರಹ್ಮ`, `ಪದಬಂಧಸಾಮ್ರಾಟ್` ಮುಂತಾದ ಬಿರುದುಗಳನ್ನು ನೀಡಿವೆ. `ವಿಶ್ವೇಶ್ವರಯ್ಯಪ್ರಶಸ್ತಿ`, `ಕರುನಾಭೂಷಣ` `ಕರ್ನಾಟಕ ವಿಭೂಷಣ` ಮಂಡ್ಯ ಕರ್ನಾಟಕ ಸಂಘ ಪ್ರಶಸ್ತಿಗಳೇ ಅಲ್ಲದೆ ಪ್ರತಿಷ್ಠಿತ `ಆರ್ಯಭಟ`, ಬೆಂಗಳೂರು ಮಹಾನಗರಪಾಲಿಕೆ ಕೊಡಮಾಡುವ `ಕೆಂಪೇಗೌಡ ಪ್ರಶಸ್ತಿ` `ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಸದ್ಬಾವನ ಪ್ರಶಸ್ತಿ, `ಶ್ರೀಕಾಣ್ವಶ್ರೀ`, `ಶಿಂಷಾಶ್ರೀ` `ಬೆಂಗಳೂರು ರತ್ನ`, `ಹಂಸರತ್ನ` ಮುಂತಾದ ಪ್ರಶಸ್ತಿಗಳು ಸಂದಿವೆ.
"https://kn.wikipedia.org/wiki/ಅ.ನಾ.ಪ್ರಹ್ಲಾದರಾವ್" ಇಂದ ಪಡೆಯಲ್ಪಟ್ಟಿದೆ