ಹೆಲೆನ್ ಕೆಲರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೫ ನೇ ಸಾಲು:
ಹೆಲೆನ್ ಆಡಮ್ಸ್ ಕೆಲ್ಲರ್ ಅವರು ಜೂನ್ ೨೭, ೧೮೮೦ರ ವರ್ಷದಲ್ಲಿ ಅಮೆರಿಕದ ಅಲಬಾಮಾದ ಟುಸ್ಕುಂಬಿಯಾ ಎಂಬಲ್ಲಿ ಜನಿಸಿದರು. ಅವರ ತಂದೆ ಅರ್ಥರ್ ಎಚ್. ಕೆಲ್ಲರ್ ಕೆಲಕಾಲ ಸೈನ್ಯದ ಅಧಿಕಾರಿಯಾಗಿಯೂ, ಪತ್ರಕರ್ತರಾಗಿಯೂ ಕೆಲಸ ನಿರ್ವಹಿಸಿದ್ದರು. ಅವರ ತಾಯಿ ಕೇಟ್ ಆಡಮ್ಸ್. ಹೆಲೆನ್ ಕೆಲ್ಲರ್ ಹುಟ್ಟಿದ್ದಾಗ ಕಣ್ಣು ಮತ್ತು ಕಿವಿಗಳು ಸ್ವಾಭಾವಿಕವಾಗಿ ಚೆನ್ನಾಗಿಯೇ ಇದ್ದವು. ಮಗುವಿಗೆ ಹತ್ತೊಂಬತ್ತು ತಿಂಗಳಾಗಿದ್ದಾಗ ಸ್ಕಾರ್ಲೆಟ್ ಫೀವರ್ ಅಥವಾ ಮೆನಿಂಗಿಟಿಸ್ ಕಾಯಿಲೆಯ ಪರಿಣಾಮದಿಂದಾಗಿ ಕುರುಡು ಮತ್ತು ಕಿವುಡುತನಗಳು ಒಮ್ಮೆಲೆ ಆವರಿಸಿದವು. ಆ ಸಮಯದಲ್ಲಿ ಆಕೆ ಅವರ ಮನೆಯಲ್ಲಿ ಅಡುಗೆ ಕೆಲಸದವಳ ಮಗಳಾಗಿದ್ದ ಮಾರ್ಥಾ ವಾಷಿಂಗ್ಟನ್ ಎಂಬ ಆರು ವರ್ಷದ ಹುಡುಗಿಯೊಡನೆ ಕೆಲವೊಂದು ಸಂಜ್ಞೆಗಳ ಮೂಲಕ ಸಂಭಾಷಿಸುತ್ತಿದ್ದಳು. ಏಳು ವರ್ಷದವಳಾದಾಗ ಹೆಲೆನ್ ಕೆಲ್ಲರ್ ತನ್ನ ಕುಟುಂಬದವರೊಡನೆ ಸುಮಾರು ೬೦ ರೀತಿಯ ಸಂಜ್ಞೆಗಳಲ್ಲಿ ಸಂಭಾಷಿಸುತ್ತಿದ್ದಳು.
 
೧೮೮೬ರ ವರ್ಷದಲ್ಲಿ ಕೆಲ್ಲರ್ ಅವರ ತಾಯಿ ಚಾರ್ಲ್ಸ್ ಡಿಕನ್ಸ್ ಅವರ ‘ಅಮೆರಿಕನ್ ನೋಟ್ಸ್’ ಬರಹದಲ್ಲಿ ಉಲ್ಲೇಖಿತಗೊಂಡಿರುವ ಲಾರಾ ಬ್ರಿಡ್ಜ್ ಮಾನ್ ಎಂಬಾಕೆಯ ಕುರಿತು ಉತ್ತೇಜಿತಗೊಂಡು ತಮ್ಮ ಮಗಳನ್ನು ಜೆ ಜುಲಿಯನ್ ಚಿಸೋಲ್ಮ್ ಎಂಬ ವೈದ್ಯರ ಬಳಿಗೆ ಕಳುಹಿಸಿಕೊಟ್ಟರು. ಚಿಸೋಲ್ಮ್ ಅವರು ಕೆಲ್ಲರಳನ್ನು ಅಂದಿನ ದಿನಗಳಲ್ಲಿ ಕಿವುಡು ಮಕ್ಕಳೊಡನೆ ಕಾರ್ಯ ನಿರ್ವಹಿಸುತ್ತಿದ್ದ ಅಲೆಗ್ಸಾಂಡರ್ ಗ್ರಾಹಂ ಬೆಲ್ ಅವರ ಬಳಿ ಹೋಗಲು ತಿಳಿಸಿದರು. ಬೆಲ್ ಅವರು ಪೆರ್ಕಿನ್ಸ್ ಇನ್ಸ್ಟಿಟ್ಯೂಟ್ ಫಾರ್ ದಿ ಬ್ಲೈಂಡ್ ಎಂಬಲ್ಲಿಗೆ ಮಾರ್ಗದರ್ಶನ ಮಾಡಿದರು. ಅಲ್ಲಿನ ನಿರ್ದೇಶಕರಾದ ಮೈಕೇಲ್ ಆಂಗಾನಾಸ್ ಅವರು ತಮ್ಮ ಹಳೆಯ ವಿದ್ಯಾರ್ಥಿಯಾಗಿದ್ದ ಇಪ್ಪತ್ತು ವರ್ಷದ ಸ್ವಯಂ ಕಿವುಡುತನ ಅನುಭವಿಸುತ್ತಿದ್ದ ಆನ್ ಸುಲಿವಾನ್ಸುಲ್ಲಿವನ್ ಅವರನ್ನು ಹೆಲೆನ್ ಕೆಲ್ಲರ್ ಅವರಿಗೆ ಮಾರ್ಗದರ್ಶನ ಮಾಡಬೇಕೆಂದು ಕೇಳಿಕೊಂಡರು. ಇದು ಆನ್ ಸುಲಿವಾನ್ ಮತ್ತು ಹೆಲೆನ್ ಕೆಲ್ಲರ್ ಅವರ 49 ವರ್ಷಗಳ ಸುದೀರ್ಘ ಪಯಣಕ್ಕೆ ನಾಂದಿ ಹಾಡಿತು.
 
==ಮಹತ್ವದ ಶಿಕ್ಷಕಿ==
ಆನ್ ಸುಲಿವಾನ್ಸುಲ್ಲಿವನ್ ಅವರು ಕೆಲ್ಲರ್ ಅವರ ಮನೆಗೆ ಮಾರ್ಚ್ ೧೮೮೭ರಲ್ಲಿ ಆಗಮಿಸಿದರು. ಹಾಗೆ ಬರುವಾಗ ಅವರು ಹೆಲೆನ್ ಕೆಲ್ಲರ್ ಅವರಿಗೆ ಒಂದು ಬೊಂಬೆಯನ್ನು ಉಡುಗೊರೆಯಾಗಿ ತಂದಿದ್ದರು. ಅವರು ಹೆಲೆನ್ ಕೆಲ್ಲರ್ ಕೈಯಲ್ಲಿ ಬೊಂಬೆಯನ್ನಿಟ್ಟು ತನ್ನ ಕೈ ಸ್ಪರ್ಶದ ಮೂಲಕ ‘d-o-l-l‘ ಪದದಿಂದ ತಮ್ಮ ಶಿಕ್ಷಣವನ್ನು ಪ್ರಾರಂಭಿಸಿದರಂತೆ. ಕಣ್ಣು ಮತ್ತು ಕಿವಿ ಎರಡೂ ಕೆಲಸ ಮಾಡದಿದ್ದ ಕೆಲ್ಲರ್ ಅವರಿಗೆ ಪ್ರಾರಂಭದಲ್ಲಿ ಪ್ರತಿಯೊಂದು ವಸ್ತುವಿಗೂ ಪ್ರತ್ಯೇಕ ಹೆಸರುಗಳಿವೆ ಎಂದು ಅರ್ಥೈಸಿಕೊಂಡು ಅದನ್ನು ಗುರುತಿಸುವ ವಿಚಾರದಲ್ಲಿ ಉಂಟಾಗುತ್ತಿದ್ದ ಅಸಹಾಯಕತೆಯಿಂದ ತುಂಬಾ ಜಿಗುಪ್ಸೆಯಾಗುತ್ತಿತ್ತು. ಆನ್ ಸುಲಿವಾನ್ಸುಲ್ಲಿವನ್ ಅವರು ‘mug’ ಎಂಬುದನ್ನು ಹೇಳಿಕೊಡುವಾಗ ಕೆಲ್ಲರ್ ಎಷ್ಟು ಉದ್ವಿಗ್ನಗೊಂಡಿದ್ದಳೆಂದರೆ ತನ್ನ ಬೊಂಬೆಯನ್ನೇ ಮುರಿದುಬಿಟ್ಟಳಂತೆ. ಆದರೆ ಕೆಲ್ಲರ್ ಮುಂದಿನ ಒಂದು ತಿಂಗಳಲ್ಲಿ ಮಹತ್ವದ ಪಾಠವನ್ನು ಅರ್ಥೈಸಿಕೊಂಡಿದ್ದಳು. ಒಂದು ಕೈಯಲ್ಲಿ ತನ್ನ ಅಧ್ಯಾಪಕಿ ಆನ್, ತನ್ನ ಕೈಯನ್ನು ಸ್ಪರ್ಶಿಸುತ್ತಾ ಮತ್ತೊಂದು ಕೈಯ ಮೇಲೆ ನೀರು ಹರಿಯುವಂತೆ ಮಾಡಿದಾಗ ಅದು ನೀರು ಎಂಬ ಅನುಭಾವ ಉಂಟಾಯಿತು. ಮುಂದೆ ಹೆಲೆನ್ ಕೆಲ್ಲರ್ ಸ್ವಯಂ ತಾನೇ ತನ್ನ ಗುರು ಆನ್ ಸುಲಿವಾನ್ಸುಲ್ಲಿವನ್ ಅವರನ್ನು ತನಗೆ ಗೊತ್ತಿರುವ ಪ್ರತಿಯೊಂದು ವಸ್ತುವನ್ನೂ ತನಗರ್ಥವಾಗುವಂತೆ ತಿಳಿಸಿಕೊಡುವಂತೆ ದುಂಬಾಲುಬೀಳುತ್ತಾ ಸುಸ್ತು ಮಾಡಿಸಿಬಿಡುತ್ತಿದ್ದಳು.
 
==ವ್ಯವಸ್ಥಿತ ಶಿಕ್ಷಣ==
೧೮೮೮ರ ವರ್ಷದಿಂದ ಪ್ರಾರಂಭಗೊಂಡಂತೆ ಹೆಲೆನ್ ಕೆಲ್ಲರ್ ಪರ್ಕಿನ್ಸ್ ಇನ್ಸ್ಟಿಟ್ಯೂಟ್ ಫಾರ್ ದಿ ಬ್ಲೈಂಡ್ ಸೇರಿದಳು. ೧೮೯೪ರಲ್ಲಿ ಹೆಲೆನ್ ಕೆಲ್ಲರ್ ಮತ್ತು ಆನ್ ಸುಲಿವಾನ್ಸುಲ್ಲಿವನ್ ನ್ಯೂಯಾರ್ಕಿನ ರೈಟ್ ಹುಮಾಸನ್ ಸ್ಕೂಲ್ ಫಾರ್ ದಿ ಡೆಫ್ ಸೇರಿದರು. ೧೮೯೬ರಲ್ಲಿ ಹೆಲೆನ್ ಕೆಲ್ಲರ್ ದಿ ಕೇಂಬ್ರಿಡ್ಜ್ ಸ್ಕೂಲ್ ಫಾರ್ ಯಂಗ್ ಲೇಡೀಸ್ ಶಾಲೆಯಲ್ಲಿ ಪ್ರವೇಶ ಪಡೆದರು. ೧೯೦೦ರ ವರ್ಷದಲ್ಲಿ ಅವರು ರಾಡ್ ಕ್ಲಿಫ್ ಕಾಲೇಜಿಗೆ ಪ್ರವೇಶ ಪಡೆದು ೧೯೦೪ರ ವರ್ಷದಲ್ಲಿ ಕಲಾ ವಿಭಾಗದಲ್ಲಿ ಪದವಿ ಪಡೆದ ಪ್ರಥಮ ಕಿವುಡು ಅಂಧ ವಿದ್ಯಾರ್ಥಿ ಎಂಬ ಕೀರ್ತಿಗೆ ಪಾತ್ರರಾದರು. ಈ ಸಮಯದಲ್ಲಿ ಹೆಲೆನ್ ಕೆಲರ್ ಅವರ ಅಭಿಮಾನಿಯಾಗಿದ್ದ ಪ್ರಖ್ಯಾತ ಬರಹಗಾರ ಮಾರ್ಕ್ ಟ್ವೈನ್ ಅವರು ಅವರನ್ನು ಒಬ್ಬ ಶ್ರೀಮಂತ ದಂಪತಿಗಳಿಗೆ ಪರಿಚಯಿಸಿದ್ದು ಆ ದಂಪತಿಗಳು ಹೆಲೆನ್ ಕೆಲ್ಲರ್ ಅವರ ಶಿಕ್ಷಣದ ಖರ್ಚನ್ನು ವಹಿಸಿಕೊಂಡಿದ್ದರು. ಈ ದಿನಗಳಲ್ಲಿ ಹೆಲೆನ್ ಕೆಲ್ಲರ್ ಅವರು ಆಸ್ಟ್ರಿಯನ್ ತತ್ವಜ್ಞಾನಿಯಾಗಿದ್ದ ಪೆಡಗಾಗ್ ವಿಲ್ಹೆಲ್ಮ್ ಜೆರುಸಲೇಮ್ ಅವರೊಂದಿಗೆ ನಿರಂತರವಾಗಿ ಪತ್ರವ್ಯವಹಾರ ನಡೆಸುತ್ತಿದ್ದು, ಈ ಮಹನೀಯರು ಹೆಲೆನ್ ಕೆಲ್ಲರ್ ಅವರಲ್ಲಿ ಬರಹದಲ್ಲಿರುವ ಅಪಾರ ಶಕ್ತಿಯನ್ನು ಗುರುತಿಸಿದವರಲ್ಲಿ ಮೊದಲಿಗರಾಗಿದ್ದಾರೆ.
 
==ಜೀವನದಲ್ಲಿ ಜೊತೆಯಾದವರು==
ಇತರರೊಂದಿಗೂ ಸಹಜವಾಗಿ ಸಂಭಾಷಿಸುವುದನ್ನು ಅಭ್ಯಾಸ ಮಾಡುವುದರ ಕುರಿತು ಅಪಾರ ಶ್ರದ್ಧೆ ಹೊಂದಿದ್ದ ಹೆಲೆನ್ ಕೆಲ್ಲರ್, ಮಾತನಾಡುವುದನ್ನು ಶ್ರಮವಹಿಸಿ ಕಲಿತು ತಮ್ಮ ಹೆಚ್ಚಿನ ಸಮಯವನ್ನು ಬಾಷಣ ಮಾಡುವುದಕ್ಕಾಗಿ ಮತ್ತು ಉಪನ್ಯಾಸ ಮಾಡುವುದಕ್ಕೆ ವಿನಿಯೋಗಿಸಿದರು. ಮತ್ತೊಬ್ಬರು ಮಾತನಾಡುವುದನ್ನು ಅವರ ತುಟಿಗಳ ಚಲನೆಯ ಮೇಲೆ ತನ್ನ ಕೈ ಸ್ಪರ್ಶದ ಮೂಲಕ ಅವರು ಗ್ರಹಿಸುತ್ತಿದ್ದರು. ಅವರ ಕೈ ಸ್ಪರ್ಶವು ಅತ್ಯಂತ ನವುರಾಗಿಯೂ ಸೂಕ್ಷ್ಮಗ್ರಾಹಿಯೂ ಆಗಿತ್ತು. ಬ್ರೈಲ್ ಲಿಪಿಯನ್ನು ಉಪಗಿಸುವುದರಲ್ಲಿ ಮತ್ತು ಕೈಯನ್ನು ಉಪಯೋಗಿಸುವ ಸಂಜ್ಞೆ ಭಾಷೆಯಲ್ಲಿ ಅವರು ಪ್ರಾವೀಣ್ಯತೆಯನ್ನು ಸಾಧಿಸಿದ್ದರು. ಸೋಲೆನರ್ ಕ್ವಾರ್ಟೆಟ್ ಎಂಬುವರ ಸಹಾಯದ ಮೂಲಕ ಮೇಜಿನ ಮೇಲಿನ ಹಿತಸ್ಪರ್ಶದ ಮೂಲಕ ಅವರು ಹತ್ತಿರದಲ್ಲಿ ನುಡಿಸುವ ಸಂಗೀತವನ್ನು ಕೂಡಾ ಆಸ್ವಾದಿಸುವುದನ್ನು ಅಭ್ಯಾಸ ಮಾಡಿದ್ದರು.
 
ಆನ್ ಸುಲಿವಾನ್ಸುಲ್ಲಿವನ್ ಅವರು ಹೆಲೆನ್ ಕೆಲ್ಲರ್ ಜೊತೆಗಾತಿಯಾಗಿ ಕಲಿಕೆಯ ನಂತರದ ದಿನಗಳಲ್ಲೂ ಅವರೊಂದಿಗಿದ್ದರು. ೧೯೦೫ರ ವರ್ಷದಲ್ಲಿ ಆನ್ ಅವರು ಜಾನ್ ಮ್ಯಾಸಿ ಎಂಬುವರನ್ನು ವಿವಾಹವಾದರು. ೧೯೧೪ರ ವೇಳೆಗೆ ಅವರ ಆರೋಗ್ಯ ಕ್ಷೀಣಿಸತೊಡಗಿತ್ತು. ಪಾಲಿ ಥಾಮ್ಸನ್ ಎಂಬುವರನ್ನು ಹೆಲೆನ್ ಕೆಲರ್ ಅವರ ಮನೆಯ ಕೆಲಸಕ್ಕಾಗಿ ನೇಮಿಸಲಾಗಿತ್ತು. ಪಾಲಿ ಥಾಮ್ಸನ್ ಅವರಿಗೆ ಕಿವುಡು ಮತ್ತು ಕುರುಡರ ಜೊತೆ ಬದುಕುವುದಕ್ಕೆ ಯಾವುದೇ ಅನುಭವ ಇಲ್ಲದಿದ್ದಾಗ್ಯೂ ಕ್ರಮೇಣದಲ್ಲಿ ಅವರು ಹೆಲೆನ್ ಕೆಲ್ಲರ್ ಅವರ ಕಾರ್ಯದರ್ಶಿಯೂ ಆಗಿ ಬಹಳ ವರ್ಷಗಳ ಕಾಲದವರೆಗೆ ಅವರ ಒಡನಾಡಿಯಾಗಿದ್ದರು.
 
ಕೆಲ್ಲರ್ ಅವರು ಮುಂದೆ ಆನ್ ಕುಟುಂಬದೊಂದಿಗೆ ಕ್ವೀನ್ಸ್ ಪ್ರದೇಶದ ಫಾರೆಸ್ಟ್ ಹಿಲ್ಸ್ ಎಂಬಲ್ಲಿಗೆ ವಾಸ್ತವ್ಯ ಬದಲಾಯಿಸಿದರು. ಅದು ಮುಂದೆ ಅಮೆರಿಕನ್ ಫೌಂಡೆಶನ್ ಫಾರ್ ದಿ ಬ್ಲೈಂಡ್ ಚಟುವಟಿಕೆಗಳಿಗೆ ಬುನಾದಿಯಾದ ಕೇಂದ್ರವಾಯಿತು. ೧೯೩೬ರ ವರ್ಷದಲ್ಲಿ ಆನ್ ಸುಲಿವಾನ್ಸುಲ್ಲಿವನ್ ಅವರು ನಿಧನರಾದರು. ಕೆಲ್ಲರ್ ಅವರು ಪಾಲಿ ಥಾಮ್ಸನ್ ಜೊತೆ ಕನ್ನೆಕ್ಟಿಕಟ್ ಪ್ರದೇಶಕ್ಕೆ ಬಂದರು. ಅವರು ವಿಶ್ವದಾದ್ಯಂತ ಸಂಚರಿಸಿ ಕುರುಡರ ಹಿತರಕ್ಷಣೆಗಾಗಿ ನಿಧಿ ಸಂಗ್ರಹಿಸಿದರು. ೧೯೬೦ರ ವರ್ಷದಲ್ಲಿ ಥಾಮ್ಸನ್ ಅವರು ನಿಧನರಾದರು. ಮುಂದೆ ವಿನ್ನಿ ಕೊರ್ಬಾಲಿ ಎಂಬ ನರ್ಸ್ ಒಬ್ಬರು ಕೆಲ್ಲರ್ ಅವರ ಉಳಿದ ಜೀವನ ಪೂರ್ತಿಯವರೆಗೆ ಸಂಗಾತಿಯಾಗಿದ್ದರು.
 
==ಸಾಮಾಜಿಕ ಚಿಂತನೆ==
"https://kn.wikipedia.org/wiki/ಹೆಲೆನ್_ಕೆಲರ್" ಇಂದ ಪಡೆಯಲ್ಪಟ್ಟಿದೆ