ವಿಜಯ ದಶಮಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಕೊಂಚ ತಿದ್ದಿ, ಸೇರಿಸಿದೆ
೧ ನೇ ಸಾಲು:
'''ವಿಜಯ ದಶಮಿ''' - [[ನವರಾತ್ರಿ]] ಉತ್ಸವದ ಕಡೆಯ ದಿನ. ಈ ದಿನದಂದು [[ಪಾಂಡವರು]] ಶತ್ರುಗಳ ಮೇಲೆ ಜಯ ಸಾಧಿಸಿದ ದಿನವೆಂದು ಹೇಳಲಾಗುತ್ತದೆ. ಹೆಸರೇ ಹೇಳುವಂತೆ ಇದು ದಶಮಿ - ಹತ್ತನೆಯ ದಿನ ಅಂದರೆ ದಸರಾ ಉತ್ಸವದ ಹತ್ತನೆಯ ದಿನ. 'ದಶ ಅಹರ್' ‍-> ದಶಹರ -> ದಶರಾ -> ದಸರಾ ಎಂದೇ ಪ್ರಸಿದ್ಧವಾಗಿರುವ ಶಕ್ತಿಪೂಜೆಯ ಶರನ್ನವರಾತ್ರಿಗಳ ನಂತರದ ವಿಜಯೋತ್ಸವದ ದಿನ. [[ಚಾಂದ್ರಮಾನ]]ರೀತಿಯಲ್ಲಿ ಹೇಳುವುದಾದರೆ ಶರದೃತುವಿನ ಆಶ್ವಯುಜ ಮಾಸ ಶುಕ್ಲಪಕ್ಷದ ಹತ್ತನೆಯ ದಿನ. 'ದಶಹರ'ದಂದು ದಶಕಂಠ [[ರಾವಣ]]ನನ್ನು ಶ್ರೀರಾಮನು ಸಂಹರಿಸಿದ ವಿಜಯೋತ್ಸವವೆಂದೂ ಪ್ರತೀತಿಯಿದೆ. ಉತ್ತರಭಾರತದ ಕೆಲವೆಡೆ ಈ ದಿನವನ್ನು ಹೊಸವರ್ಷದ ದಿನವೆಂದು ಆಚರಿಸುವ ಪದ್ಧತಿಯೂ ಇದೆ.
 
==ಪ್ರಾಮುಖ್ಯತೆ==
೧೦ ನೇ ಸಾಲು:
ಕರಿಷ್ಯಮಾಣಯಾತ್ರಾಯಾ ಯಥಾಕಾಲಂ ಸುಖಂ ಮಯಾ |<br>
ತತ್ರನಿರ್ವಿಘ್ನಕರ್ತ್ರೀತ್ವಂ ಭವ ಶ್ರೀರಾಮಪೂಜಿತಾ ||<br>
 
 
==ವಿಜಯದ '''ಶಮೀ'''==
ಜಯವು ಸಿದ್ಧವೆಂದು ನಂಬಿ ವಿಜಯದಶಮಿಯಂದು ಹಿಂದಿನ ಅರಸರು ದಂಡಯಾತ್ರೆಗೆ ಹೊರಡುತ್ತಿದ್ದರು; ಇನ್ನೂ ರಾಜವಂಶದವರಲ್ಲಿ ಆ ಪದ್ಧತಿ ಉಳಿದುಕೊಂಡಿದ್ದು, ಸಾಂಕೇತಿಕವಾಗಿ ತಮ್ಮ [[ಚತುರಂಗ]] ಸಮೇತವಾಗಿ ರಾಜ್ಯದ ಗಡಿಯನ್ನು ದಾಟಿದಂತೆ ಮಾಡಿ, ಹಿಂದಿರುಗುತ್ತಾರೆ. [[ವಿಜಯನಗರ]]ಸಾಮ್ರಾಜ್ಯದ ಕಾಲದಲ್ಲಿ ಆರಂಭವಾದ ಈ [[ಸೀಮೋಲ್ಲಂಘನ]] ಮೈಸೂರಿನ [[ಒಡೆಯರು|ಒಡೆಯರ]] ಕಾಲದಲ್ಲಿ ಮುಂದುವರೆಯಿತು. ಶಮೀವೃಕ್ಷವನ್ನು ಕನ್ನಡದಲ್ಲಿ [[ಬನ್ನಿಮರ]] ಎನ್ನುತ್ತಾರೆ. ಈಗಲೂ ವಿಜಯದಶಮಿಯಂದು ಒಡೆಯರ ವಂಶಜರು ಸಾಂಕೇತಿಕವಾಗಿ ಮೈಸೂರಿನಲ್ಲಿ [[ಬನ್ನಿಮಂಟಪ]]ಕ್ಕೆ ಮೆರವಣಿಗೆ ಸಮೇತ ಹೋಗಿ ಪೂಜೆ ಸಲ್ಲಿಸಿ ಬರುತ್ತಾರೆ. ಹೀಗೆ ಬನ್ನಿ ಅಥವಾ ಶಮೀ ಮರವು ವಿಜಯದ ಸಂಕೇತವಾದ್ದರಿಂದ ಕನ್ನಡದಲ್ಲಿ ವಿಜಯದಶಮಿಯನ್ನು ವಿಜಯ-'''ದಶಮೀ''' ಹಾಗೂ ವಿಜಯದ-'''ಶಮೀ''' ಎಂದು ಕನ್ನಡಿಗರು ಕೊಂಡಾಡುತ್ತಾರೆ.
 
 
==ಹೊರಗಿನ ಸಂಪರ್ಕಗಳು==
"https://kn.wikipedia.org/wiki/ವಿಜಯ_ದಶಮಿ" ಇಂದ ಪಡೆಯಲ್ಪಟ್ಟಿದೆ