ಖಾದ್ರಿ ಶಾಮಣ್ಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು SpaceEdit ಉಪಯೋಗಿಸಿ ಲೇಖನವನ್ನು ಒಪ್ಪವಾಗಿಸಿದೆ
೭ ನೇ ಸಾಲು:
 
==ಪತ್ರಿಕೋದ್ಯಮ==
[[ಪ್ರಜಾವಾಣಿ]] ದಿನಪತ್ರಿಕೆಯ ಆರಂಭದ ದಿನಗಳಲ್ಲಿ ಸುದ್ದಿ ಸಂಪಾದಕರಾಗಿದ್ದ ಖಾದ್ರಿ ಶಾಮಣ್ಣ, [[ಬಿ.ಪುಟ್ಟಸ್ವಾಮಯ್ಯ]]ನವರ ರಾಜೀನಾಮೆಯ ನಂತರ ತೆರವಾದ ಸಂಪಾದಕ ಸ್ಥಾನವನ್ನು ತುಂಬಿದರು. ಆದರೆ [[ಸಿ.ಜಿ.ಕೆ.ರೆಡ್ಡಿ]]ಯವರೊಂದಿಗೆ ಕಾರ್ಮಿಕ ಚಳುವಳಿಯಲ್ಲಿ ನೇರವಾಗಿ ಭಾಗಿಯಾದರೆಂಬ ಕಾರಣ, ಶಾಮಣ್ಣ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕಾಯಿತು. ಕೆಲಕಾಲ ಉಸ್ತುವಾರಿ ಸಂಪಾದಕರಾಗಿ ಕೆಲಸ ಮಾಡಿದ [[ಟಿಯೆಸ್ಸಾರ್]] ನಂತರದ ದಿನಗಳಲ್ಲಿ [[ಪ್ರಜಾವಾಣಿ]] ಸಂಪಾದಕರಾಗಿ ಅತಿ ದೀರ್ಘ ಕಾಲ ಆ ಪತ್ರಿಕೆಯ ಶ್ರೇಯೋಭಿವೃದ್ಧಿಗೆ ಶ್ರಮಿಸಿದರು. [[ಪ್ರಜಾವಾಣಿ]]ಯಿಂದ ಹೊರ ನಡೆದ ಶಾಮಣ್ಣ , [[ಎಂ.ಎಸ್.ರಾಮಯ್ಯ]] ಅವರು [[ತಾಯಿನಾಡು]] ಪತ್ರಿಕೆಯ ಮಾಲಿಕತ್ವವನ್ನು ವಹಿಸಿಕೊಂಡ ನಂತರ ಆರಂಭಿಸಿದ [[ಗೋಕುಲ]] ವಾರಪತ್ರಿಕೆಯ ಸಂಪಾದಕರಾಗಿಯೂ ಕೆಲ ವರ್ಷಗಳ ಕಾಲ ಕೆಲಸ ಮಾಡಿದರು.
ಖಾದ್ರಿ ಶಾಮಣ್ಣನವರು ‘[[ಪ್ರಜಾವಾಣಿ]]’, ‘[[ಸಂಯುಕ್ತ ಕರ್ನಾಟಕ]]’ ಹಾಗು ‘[[ಕನ್ನಡ ಪ್ರಭ]]’ ದಿನಪತ್ರಿಕೆಗಳ
 
ಸಂಪಾದಕ ಮಂಡಲಿಯಲ್ಲಿ ಅಮೂಲ್ಯ ಸೇವೆ ನೀಡಿದ್ದಾರೆ. [[ಎಂ.ಎಸ್.ರಾಮಯ್ಯ]] [[ತಾಯಿನಾಡು]] ಪತ್ರಿಕೆಯ ಮಾಲಿಕತ್ವವನ್ನು ವಹಿಸಿಕೊಂಡ ನಂತರ ಆರಂಭಿಸಿದ [[ಗೋಕುಲ]] ವಾರಪತ್ರಿಕೆಯ ಸಂಪಾದಕರಾಗಿಯೂ ಖಾ.ಶಾ. ಕೆಲಸ ಮಾಡಿದ್ದಾರೆ. ತಮ್ಮ ‘ಖಾರ’ವಾದ ಹಾಗೂ ರಾಷ್ಟ್ರೀಯ ಧೋರಣೆಯ ಸಂಪಾದಕೀಯಗಳಿಗೆ ಹೆಸರಾಗಿದ್ದರು.
ಹುಬ್ಬಳ್ಳಿಯ [[ಸಂಯುಕ್ತ ಕರ್ನಾಟಕ]] ತನ್ನ ಬೆಂಗಳೂರು ಆವೃತ್ತಿಯನ್ನು ಆರಂಭಿಸಿದ ಸಮಯದಲ್ಲಿ ಸುದ್ದಿ ಸಂಪಾದಕರಾಗಿ ಸೇರ್ಪಡೆಯಾದ ಖಾದ್ರಿ ಶಾಮಣ್ಣ, ಕೆಲ ವರ್ಷಗಳ ನಂತರ [[ಪ್ರಜಾವಾಣಿ]] ಪತ್ರಿಕೆಯ ಸುದ್ದಿ ಸಂಪಾದಕರಾಗಿ ನೇಮಕಗೊಂಡರು.
[[ದೇವರಾಜ ಅರಸು]] ಆಡಳಿತ ಸಂದರ್ಭದಲ್ಲಿ ವಿತ್ತ ಸಚಿವರಾಗಿದ್ದ [[ಎಂ.ವೈ.ಘೋರ್ಪಡೆ]] ಅವರು [[ಲೋಕ ಶಿಕ್ಷಣ ಟ್ರಸ್ಟ್]] ನಡೆಸುತ್ತಿದ್ದ [[ರಂಗನಾಥ ದಿವಾಕರ]] ಅವರಿಂದ [[ಸಂಯುಕ್ತ ಕರ್ನಾಟಕ]] ಪತ್ರಿಕಾ ಸಮೂಹವನ್ನು ಖರೀದಿಸಿದರು. ಆ ಸಂದರ್ಭದಲ್ಲಿ ಖಾದ್ರಿ ಶಾಮಣ್ಣ ಹುಬ್ಬಳ್ಳಿ-ಬೆಂಗಳೂರು ಎರಡೂ ಆವೃತ್ತಿಗಳ ಪ್ರಧಾನ ಸಂಪಾದಕರಾಗಿ ನಿಯೋಜಿತಗೊಂಡರು.
 
ಮುಂದೆ [[ಕೆ.ಎಸ್.ರಾಮಕೃಷ್ಣಮೂರ್ತಿ]]ಯವರ ಅಕಾಲ ನಿಧನದಿಂದ ತೆರವಾದ [[ಕನ್ನಡಪ್ರಭ]] ಪತ್ರಿಕೆಯ ಸಂಪಾದಕ ಖಾದ್ರಿ ಶಾಮಣ್ಣ ಹುದ್ದೆಗೆ ವಲಸೆ ಹೋದರು. ಈ ಸಮಯದಲ್ಲಿ ತಮ್ಮ ಸಹಿ ಸಹಿತ ಪ್ರಥಮ ಪುಟದ ಸಂಪಾದಕೀಯ ಲೇಖನಗಳ ಮೂಲಕ ಹೆಚ್ಚಿನ ಜನಪ್ರಿಯತೆ ಗಳಿಸಿಕೊಂಡರು. ಕರ್ನಾಟಕ ರಾಜ್ಯಕ್ಕೆ ಮೊದಲ ಕಾಂಗ್ರೆಸ್ಸೇತರ ಸರ್ಕಾರವು [[ರಾಮಕೃಷ್ಣ ಹೆಗಡೆ]] ಅವರ ನೇತೃತ್ವದಲ್ಲಿ ರಚಿತವಾಗುವಲ್ಲಿ ಖಾದ್ರಿ ಶಾಮಣ್ಣ ಅವರದು ರಾಜ ಪುರೋಹಿತ ಸ್ಥಾನ. [[ಲಂಕೇಶ್ ಪತ್ರಿಕೆ]]ಯ ಬೆಂಬಲವೂ ಹೆಗಡೆಯವರಿಗೆ ಅಧಿಕಾರ ಸೂತ್ರ ಹಿಡಿಯಲು ನೆರವಾಯಿತು.
 
ತಮ್ಮ ‘ಖಾರ’ವಾದ ಹಾಗೂ ರಾಷ್ಟ್ರೀಯ ಧೋರಣೆಯ ಸಂಪಾದಕೀಯಗಳಿಗೆ ಹೆಸರಾಗಿದ್ದರು.
 
==ಸಾಹಿತ್ಯ==
"https://kn.wikipedia.org/wiki/ಖಾದ್ರಿ_ಶಾಮಣ್ಣ" ಇಂದ ಪಡೆಯಲ್ಪಟ್ಟಿದೆ