ರಾಜಸುಲೋಚನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
(ಜನನ :-ಮರಣ : ೨೦೧೩, ಮಾರ್ಚ್, ೫, ಮಂಗಳವಾರ)
 
[[ಚಿತ್ರ:RS1.jpg|thumb|right|250px|'ರಾಜಸುಲೋಚನ,ಆ ಕಾಲದ ಬೆಡಗಿಯೆಂದು ಹೆಸರಾಗಿದ್ದರು']]
ದಕ್ಷಿಣ ಭಾರತದ 'ರಾಜಸುಲೋಚನ' ಎಂಬ ಅಭಿನೇತ್ರಿ, ಒಳ್ಳೆಯ ನೃತ್ಯಪಟುವಾಗಿ ಹೆಸರುಮಾಡಿದ್ದರು.ಅವರು ಜನಿಸಿದ್ದು ಆಂಧ್ರ ಪ್ರದೇಶದ ವಿಜಯವಾಡದಲ್ಲಿ.ಅವರ ವಿದ್ಯಾಭ್ಯಾಸ,ಮತ್ತು ವೃತ್ತಿಜೀವನವೆಲ್ಲಾ ತಮಿಳು ನಾಡಿನ ಚೆನ್ನೈ ನಗರದಲ್ಲಾಯಿತು.ಮೈಸೂರಿನ ಕನ್ನಡ ಚಿತ್ರರಂಗದಲ್ಲೂ ಅತಿ ಹೆಸರುಗಳಿಸಿದ್ದ'ರಾಜಸುಲೋಚನ',ಸನ್.೧೯೫೩ ರಲ್ಲಿ'[[ಗುಣಸಾಗರಿ]]', ಯೆಂಬ ಚಲನಚಿತ್ರದಲ್ಲಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆಮಾಡಿದ್ದರು. ಅವರ ಜೊತೆ ನಾಯಕ ನಟ,'ಹೊನ್ನಪ್ಪ ಭಾಗವತ'ರು ಅಭಿನಯಿಸಿದ್ದರು.'ಬಭ್ರುವಾಹನ', ಶ್ರೀ ಕಾಳಹಸ್ತಿ ಮಹಿಮೆ', ಮೊದಲಾದ ಸುಮಾರು ೨೭೪ ಚಲನಚಿತ್ರಗಳಲ್ಲಿ ನಟಿಸಿರುವ ಅವರು, ಕನ್ನಡವಲ್ಲದೆ, ಹಿಂದಿ, ಮಲೆಯಾಳಂ, ತೆಲುಗು ಮತ್ತು ತಮಿಳು ಚಿತ್ರಗಳಲ್ಲೂ ಉತ್ತಮ ಅಭಿನಯ ನೀಡಿದ್ದಾರೆ.ರಾಜಸುಲೋಚನರವರ ಜೊತೆ ನಾಯಕನಟರಾಗಿ ಅಭಿನಯಿಸಿದವರು,[[ಎಂ.ಜಿ.ಆರ್]]'[[ಶಿವಾಜಿ ಗಣೇಶನ್]],[[ರಾಜ್ಕುಮಾರ್]],[[ಏನ್.ಟಿ.ಆರ್]],[[ಎ.ನಾಗೇಶ್ವರ ರಾವ್]],[[ಎಸ್.ಎಸ್.ರಾಜೇಂದ್ರನ್]],[[ಎ.ಪಿ.ನಾಗಾರ್ಜುನ]],[[ಎಂ.ಏನ್.ನಂಬಿಯಾರ್]] ಮೊದಲಾದವರು.ರಾಜಸುಲೋಚನ, ಕೂಚಿಪುಡಿ, ಹಾಗೂ ಭರತನಾಟ್ಯ ಕಲಾಪ್ರಕಾರಗಳನ್ನು ಶಾಸ್ತ್ರೀಯವಾಗಿ ಕಲಿತಿದ್ದರು.'ರಾಜಸುಲೋಚನ'ರವರು,ಸನ್.೧೯೬೧ ರಲ್ಲಿ 'ಪುಷ್ಪಾಂಜಲಿ ನೃತ್ಯಕಲಾ ಕೇಂದ್ರ'ವೆಂಬ ನೃತ್ಯಶಾಲೆಯನ್ನು ಆರಂಭಿಸಿ,ಹಲವಾರು ನೃತ್ಯಪಟುಗಳನ್ನು ತಯಾರಿಸಿ ನಾಡಿಗೆ ನೀಡಿದ್ದಾರೆ.ಸನ್.೧೯೯೫ ರಲ್ಲಿ 'ಜಯಸುಧ'ಮತ್ತು '[[ಮಾಲಾಶ್ರೀ]]'ಜೊತೆಯಲ್ಲಿ ಅಭಿನಯಿಸಿದ'[[ತೋಡಿ ಕೊಡಳ್ಳು]]'ಎಂಬ ಚಿತ್ರವೇ,ಕೊನೆಯದು.
"https://kn.wikipedia.org/wiki/ರಾಜಸುಲೋಚನ" ಇಂದ ಪಡೆಯಲ್ಪಟ್ಟಿದೆ