ಕರ್ವಾಲೋ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Reverted to revision 273150 by Pisumathu: vand. (ಟ್ವಿಂ)
No edit summary
೬ ನೇ ಸಾಲು:
 
ಅತ್ಯಂತ ಸ್ಪಷ್ಟ ಭಾಷೆಯಲ್ಲಿ ಮುಗ್ಧ ಕುತೂಹಲದಿಂದ ಹೇಳಲಾಗಿರುವ ಈ ಕತೆ ಸಮಾಜದ ನಿರ್ಲಕ್ಷ್ಯದಿಂದ ನಾಶವಾಗುತ್ತಿರುವ ಮಂದಣ್ಣಗಳು, ಕ್ರಮೇಣ ಇಲ್ಲವಾಗುತ್ತಿರುವ ಸೃಜನಶೀಲ ಕರ್ವಾಲೋಗಳು ಮತ್ತು ನಾಗರೀಕತೆಯ ತುಳಿತಕ್ಕೆ ಧ್ವಂಸಗೊಂಡು ಮಾಯವಾಗುತ್ತಿರುವ ಅರಣ್ಯ ಮತ್ತು ಜೀವರಾಶಿ - ಈ ಎಲ್ಲವನ್ನೂ, ಎಲ್ಲರನ್ನೂ ಕುರಿತದ್ದು.
 
ಈ ಕೃತಿಯನ್ನು ಎಲ್ಲರೂ ಖಂಡಿತ ಓದಲೇ ಬೇಕು. ಎಷ್ಟು ಚೆನ್ನಾಗಿದೆ ಎಂದರೇ ನಕ್ಕು ನಕ್ಕೂ ಸಾಕಾಗುತ್ತದೆ. ಪ್ಯಾರ, ಕಿವಿ, ಮಂದಣ್ಣ, ಕರಿಯಪ್ಪ, ಎಂಗ್ಟ , ಪ್ರಭಾಕರ ನಿಮ್ಮನ್ನು ನಗಿಸಿ ನಗಿಸಿ ಇಡುತ್ತಾರೆ. ನೀವು ದಟ್ಟ ಕಾಡು ನೋಡಿಲ್ಲವೇ? ಹಾಗಾದರೇ ಕರ್ವಾಲೋ ಪುಸ್ತಕ ಕೈಗೆತ್ತಿಕೊಳ್ಳಿ. ದಟ್ಟ ಕಾಡಿನೊಳಕ್ಕೆ ತೇಜಸ್ವಿ ನಿಮ್ಮನ್ನು ಎಳೆದೊಯ್ಯುತ್ತಾರೆ.ಮೊದಲನೇ ಪುಟದಿಂದ ಕೊನೆಯ ಪುಟದವರೆಗೆ ಓದಿಸಿಕೊಂಡು ಹೋಗುತ್ತದೆ. ಇಲ್ಲಿ ಬರೀ ಪುರುಷ ಪಾತ್ರಗಳೆ ಎಂದು ಹೇಳುವಾಗ ನನಗೂ ಬೇಸರ. ಇರೋದು ಒಂದೇ ಮಹಿಳಾ ಪಾತ್ರ ಅದು ನಿರೂಪಕರ ಹೆಂಡತಿಯದು ಅದು ಒಂದೆರಡು ದೃಶ್ಯಗಳಲ್ಲಿ. ಆದರೂ ಆ ದೃಶ್ಯದಲ್ಲಿ ನಿರೂಪಕರಿಗೆ ದಾರಿ ತೋರಿಸುವ ಪರಿ ಅದ್ಬುತವಾಗಿದೆ. ಕರ್ವಾಲೋ ಒಬ್ಬ ದೊಡ್ಡ ವಿಗ್ನಾನಿ. ಅಂಥವರು ಕೋರ್ಟಿಗೆ ಬಂದು ಸಾಕ್ಷಿ ಹೇಳೋದು ಹೇಗೆ ಎಂದು ನಿರೂಪಕ ಚಿಂತೆ ಮಾಡುತ್ತಿರುವಾಗ ಅವರ ಹೆಂಡತಿ ಮಂದಣ್ಣ ನಿರಪರಾಧಿಯೇ ಆಗಿದ್ದರೇ ಕರ್ವಾಲೋ ಕೋರ್ಟಿಗೆ ಬಂದು ಸಾಕ್ಷ್ಯಹೇಳುವುದರಲ್ಲಿ ತಪ್ಪೇನಿದೆ ಎಂದು ಕೇಳುತ್ತಾರೆ. ಆಗ ನಿರೂಪಕರಿಗೆ ದಾರಿ ನಿಚ್ಚಳವಾಗುತ್ತದೆ. ಆದರೂ ತೇಜಸ್ವಿಯವರೇ ಕಾಡೊಳಗೆ ನಮ್ಮನ್ನೂ ಕರೆದೊಯ್ಯಬಹುದಿತ್ತು.
 
{{ಪೂರ್ಣಚಂದ್ರ ತೇಜಸ್ವಿಯವರ ಕೃತಿಗಳು}}
"https://kn.wikipedia.org/wiki/ಕರ್ವಾಲೋ" ಇಂದ ಪಡೆಯಲ್ಪಟ್ಟಿದೆ