ಸಂಸ್ಕೃತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು SpaceEdit ಉಪಯೋಗಿಸಿ ಲೇಖನವನ್ನು ಒಪ್ಪವಾಗಿಸಿದೆ
೨ ನೇ ಸಾಲು:
|name=ಸಂಸ್ಕೃತ
|nativename={{lang|sa|संस्कृतम्}} ''[[:en:IAST|saṃskṛtam]]''
|region=[[ಭಾರತ]], [[ಆಗ್ನೇಯ ಏಷ್ಯಾ]], [[ಹಿಂದೂ ಧರ್ಮ|ಹಿಂದೂ ಧರ್ಮದ]] [[ಧಾರ್ಮಿಕ ಭಾಷೆ]]
|speakers=೪೯,೭೩೬ ಮಾತುಗಾರರು ([[೧೯೯೧]] [[ಭಾರತದ ಜನಗಣತಿ]])
|familycolor=ಇಂಡೊ-ಯುರೋಪಿಯನ್
೧೪ ನೇ ಸಾಲು:
}}
 
'''ಸಂಸ್ಕೃತ''' ಭಾಷೆ [[ಇಂಡೋ-ಯುರೋಪಿಯನ್ ಭಾಷೆಗಳು|ಇಂಡೋ-ಯುರೋಪಿಯನ್]] [[ಭಾಷಾ ಬಳಗ|ಭಾಷಾ ಬಳಗಕ್ಕೆ]]ಕ್ಕೆ ಸೇರಿದ ಅತಿ ಪ್ರಾಚೀನ ಭಾಷೆಗಳಲ್ಲಿ ಒಂದು, ಮತ್ತು [[ಭಾರತ|ಭಾರತದ]] ಶಾಸ್ತ್ರೀಯ ಭಾಷೆ. [[ಯುರೋಪ್|ಯುರೋಪಿನಲ್ಲಿ]] [[ಲ್ಯಾಟಿನ್]] ಹಾಗೂ [[ಗ್ರೀಕ್]] ಭಾಷೆಗಳು ಹೊಂದಿರುವ ಸ್ಥಾನವನ್ನು ಭಾರತದಲ್ಲಿ ಸಂಸ್ಕೃತ ಭಾಷೆ ಹೊಂದಿದೆ.
ಇದು ಭಾರತದ ೨೨ ಅಧಿಕೃತ ಭಾಷೆಗಳಲ್ಲಿ ಒಂದು. ಪುರಾತನ ಭಾರತೀಯ ಸಂಸ್ಕೃತಿ, [[ಸಂಸ್ಕೃತ ಸಾಹಿತ್ಯ|ಸಾಹಿತ್ಯ]], [[ಪುರಾತನ ಭಾರತೀಯ ವಿಜ್ಞಾನ|ವಿಜ್ಞಾನ]] ಹಾಗೂ [[ಭಾರತೀಯ ತತ್ವಶಾಸ್ತ್ರ|ತತ್ವಶಾಸ್ತ್ರಗಳಲ್ಲಿ]] ವಿಪುಲವಾಗಿ ಉಪಯೋಗಿಸಲ್ಪಟ್ಟಿರುವ ಭಾಷೆ ಇದಾಗಿದೆ. [[ಹಿಂದೂಧರ್ಮ|ಹಿಂದೂ]], [[ಭೌದ್ಧಧರ್ಮ|ಭೌದ್ಧ]] ಹಾಗು [[ಜೈನಧರ್ಮ|ಜೈನ]] ಧರ್ಮಶಾಸ್ತ್ರಗಳ ಪಾರಂಪರಿಕ ಭಾಷೆಯೂ ಇದಾಗಿದೆ.
ಸಂಸ್ಕೃತದ ಪ್ರಥಮ ಕೃತಿ ಹಿಂದೂ ಧರ್ಮದ '[[ವೇದ]]'ಗಳಲ್ಲಿ ಒಂದಾದ [[ಋಗ್ವೇದ]]. ಇಂದು ಲಭ್ಯವಿರುವ ಬಹಳಷ್ಟು ಸಂಸ್ಕೃತ ಕೃತಿಗಳು ಪ್ರಾಚೀನ ಕಾಲದ್ದಾಗಿವೆ. ಸದ್ಯಕ್ಕೆ ಸಂಸ್ಕೃತವನ್ನು ಮಾತನಾಡುವ ಭಾಷೆಯಾಗಿ ಉಪಯೋಗಿಸಲ್ಪಡುತ್ತಿರುವುದು ತೀರಾ ಕಡಿಮೆ. ಸಂಸ್ಕೃತವನ್ನು 'ದೇವ ಭಾಷೆ' ಎಂದೂ ಕರೆಯುತ್ತಾರೆ.
 
Line ೨೬ ⟶ ೨೫:
== ಸಂಸ್ಕೃತದ ಕವಿಗಳು ==
ಜಗತ್ತಿನ ಎಲ್ಲ ಭಾಷೆಗಳಿಗೂ ಮೂಲ ಎಂದು ನಂಬಲಾಗಿರುವ ಸಂಸ್ಕೃತವನ್ನು ನೂರಾರು ಮಹಾಕವಿಗಳು, ದಾರ್ಶನಿಕರು ಸಮೃದ್ಧಗೊಳಿಸಿದ್ದಾರೆ. ಆ ಪಟ್ಟಿಯಲ್ಲಿ ಮೊದಲು ಬರುವವರು ವಾಲ್ಮೀಕಿ ಮುನಿ. ಅವರಿಂದಲೇ ಸಂಸ್ಕೃತದ ಮೊದಲ ಶ್ಲೋಕ ಹುಟ್ಟಿತು. ಅದು 'ಮಾ ನಿಷಾದ ಪ್ರತಿಷ್ಟಾಂ ತ್ವಮಗಮಃ ಶಾಶ್ವತೀ ಸಮಾಃ. ಯತ್ಕ್ರೌಂಚ ಮಿಥುನಾತ್ ಏಕಮವಧೀಹಿ ಕಾಮಮೋಹಿತಂ' ಎಂಬುದು. ಬೇಡನೊಬ್ಬ ಕಾಮಮೋಹಿತವಾಗಿದ್ದ ಕ್ರೌಂಚ ಪಕ್ಷಿಗಳ ಜೋಡಿಯಲ್ಲಿ ಒಂದನ್ನು ಕೊಂದಾಗ ಅದನ್ನು ನೋಡಿ ಸಿಟ್ಟುಗೊಂಡ ವಾಲ್ಮೀಕಿ ಮುನಿ ತಮಗೇ ಗೊತ್ತಿಲ್ಲದಂತೆ ಈ ಶ್ಲೋಕ ಹೇಳಿ ಬೇಡನಿಗೆ ಶಾಪ ಕೊಟ್ಟರು. ಶೋಕದಲ್ಲಿ ಹುಟ್ಟಿದ ಅದು ಶ್ಲೋಕವೆಂದು ಪ್ರಸಿದ್ಧಿಗೆ ಬಂತು. ಅವರ ಶಿಷ್ಯ ಭರಧ್ವಾಜ ಮುನಿ ಇದನ್ನು ದಾಖಲಿಸಿದ. ಇದೇ ವಾಲ್ಮೀಕಿ ಮುನಿಗಳು ರಾಮಾಯಣವನ್ನೂ ರಚಿಸಿದರು. ನಂತರ ವ್ಯಾಸರಿಂದ ಮಹಾಭಾರತ ರಚಿತವಾಯಿತು. ಇವರಿಬ್ಬರು ಸಂಸ್ಕೃತದ ಮೂಲ ಕವಿಗಳಾದರೆ, ಈ ಭಾಷೆಯ ಆದಿಕವಿ ಎಂದು ಹೆಸರಾದವನು ಕಾಳಿದಾಸ. ಕಾಳಿದಾಸನಿಗೆ ಭಾರತದ ಶೇಕ್ಸ್ ಪಿಯರ್ ಎಂಬ ಅಭಿದಾನವೂ ಇದೆ. ಅಭಿಜ್ಞಾನ ಶಾಕುಂತಲ ನಾಟಕ ಈತನ ಮಹತ್ವದ ಕೃತಿ. ಇದಲ್ಲದೆ ಮಾಲವಿಕಾಗ್ನಿಮಿತ್ರ, ವಿಕ್ರಮೋರ್ವಶೀಯ ಎಂಬ ನಾಟಕಗಳನ್ನೂ, ಕುಮಾರಸಂಭವ, ರಘುವಂಶ ಎಂಬ ಮಹಾಕಾವ್ಯಗಳನ್ನೂ, ಮೇಘದೂತ, ಋತುಸಂಹಾರ ಎಂಬ ಖಂಡ ಕಾವ್ಯಗಳನ್ನೂ ಕಾಳಿದಾಸ ಬರೆದಿದ್ದಾನೆ. ಈತನ ಜೊತೆಗೆ ಭಾಸ, ಭಾರವಿ, ಶ್ರೀಹರ್ಷ, ಬಾಣ ಮುಂತಾದ ಮಹತ್ವದ ಕವಿಗಳು ಸಂಸ್ಕೃತದಲ್ಲಿ ಆಗಿಹೋಗಿದ್ದಾರೆ.
 
[[ಚಿತ್ರ:Phrase sanskrit.png|thumb|right]]
== External links ==
"https://kn.wikipedia.org/wiki/ಸಂಸ್ಕೃತ" ಇಂದ ಪಡೆಯಲ್ಪಟ್ಟಿದೆ