ಸರಸ್ವತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.7.2+) (Robot: Modifying be:Сарасваты
ಚು r2.7.3) (Robot: Adding eo:Sarasvati; cosmetic changes
೯ ನೇ ಸಾಲು:
<big>ಬೌದ್ಧ ಧರ್ಮದಲ್ಲಿ...</big>
<br />
ಬೌದ್ಧಧರ್ಮದ ‘ಕಾರಂಡವ್ಯೂಹ’ ಎಂಬ ಗ್ರಂಥದಲ್ಲಿ ದೇವತೆಗಳ ಸೃಷ್ಟಿಯನ್ನು ಕುರಿತು ಹೇಳಲಾಗಿರುವ ಪ್ರಕಾರ, ಆದಿಬುದ್ಧನ ಆದೇಶದ ಮೇರೆಗೆ ಪದ್ಮಪಾಣಿಯು ಮುಖ್ಯವಾಗಿ ಮೂರು ಗುಣ(ಕ್ರಿಯಾತತ್ವ)ಗಳನ್ನು - ಅಂದರೆ ಬ್ರಹ್ಮ (ದೇವತೆಗಳ ಮಾನವರ ಸೃಷ್ಟಿಕರ್ತ), ವಿಷ್ಣು (ರಕ್ಷಕ) ಮತ್ತು ಮಹಾದೇವ (ಲಯಕರ್ತ) ಇವರನ್ನು ಸೃಷ್ಟಿಸುತ್ತಾನೆ. ಬೋಧಿಸತ್ವನಿಂದ ವಾಯು, ಭೂಮಿ, ನೀರು, ಮಳೆ, ಸೂರ್ಯ, ಚಂದ್ರ ಮೊದಲಾದವರು ಸೃಷ್ಟಿಯಾಗುತ್ತಾರೆ. ಇವರ ಜತೆಯಲ್ಲಿಯೇ ಸಂಗೀತ ಮತ್ತು ಕಾವ್ಯದ ದೇವತೆಯಾಗಿ ಸರಸ್ವತಿ ಹಾಗೂ ಸೌಂದರ್ಯ ಮತ್ತು ಸಂಪತ್ತಿನ ದೇವತೆಯಾಗಿ ಲಕ್ಷ್ಮಿಯರು ಸೃಷ್ಟಿಯಾಗುತ್ತಾರೆ. ಆದರೆ ಬೌದ್ಧಧರ್ಮದ ಇನ್ನೊಂದು ಸೃಷ್ಟಿಪುರಾಣವಾದ ‘ಗುಣ-ಕಾರಂಡವ್ಯೂಹ’ ಪ್ರಕಾರ- ಪದ್ಮಪಾಣಿಯ ಭುಜಗಳ ನಡುವಿನಿಂದ ಬ್ರಹ್ಮ, ಆತನ ಎರಡು ಕಣ್ಣುಗಳಿಂದ ಸೂರ್ಯ ಚಂದ್ರರು, ಬಾಯಿಯಿಂದ ಗಾಳಿ, ಹಲ್ಲುಗಳಿಂದ ಸರಸ್ವತಿ, ಮಂಡಿಯಿಂದ ಲಕ್ಷ್ಮಿ, ಪಾದದಿಂದ ಭೂಮಿ, ನಾಭಿಯಿಂದ ನೀರು ಮೊದಲಾದವು ಸೃಷ್ಟಿಯಾಗುತ್ತವೆ. ಇದು ಹಿಂದೂ ಪುರಾಣಗಳಲ್ಲಿ ಬರುವ ಸರಸ್ವತಿಯ ಸೃಷ್ಟಿ ವಿಚಾರವನ್ನೇ ಅಲ್ಪಸ್ವಲ್ಪ ಹೆಲುತ್ತದೆ. ಆಸನ, ಭುಜಸಂಖ್ಯೆ, ಆಯುಧಗಳು, ಮುದ್ರೆಗಳು ಇವುಗಳನ್ನು ಆಧರಿಸಿ ವಜ್ರಸರಸ್ವತಿ, ಮಹಾಸರಸ್ವತಿ, ವಜ್ರವೀಣಾಸರಸ್ವತಿ, ವಜ್ರಶಾರದೆ, ಆರ್ಯಾಸರಸ್ವತಿ, ರಕ್ತಸರಸ್ವತಿ, ಸಿತಸರಸ್ವತಿ, ನೀಲಸರಸ್ವತಿ ಮೊದಲಾದ ಸ್ವರೂಪಗಳನ್ನು ಹೇಳಲಾಗಿದೆ.
<br />
<big>ವಿದೇಶಗಳ ಬೌದ್ಧಧರ್ಮೀಯರಲ್ಲಿ ಸರಸ್ವತಿ...</bg>
<br />
ಸರಸ್ವತಿಯನ್ನು, ಚೀನಾದ ಬೌದ್ಧಧರ್ಮೀಯರುT ಮತ್ತು Miao-yin mu ಎಂಬ ಹೆಸರುಗಳಿಂದ ಪೂಜಿಸುತ್ತಾರೆ. ಜಪಾನಿನಲ್ಲಿ Benten, ಮಂಗೋಲಿಯಾದಲ್ಲಿ Kele-yin ukin tegri ಎಂದೂ ಹಾಗೂ ಟಿಬೆಟ್‌ನಲ್ಲಿ Nag-gi-lha-mo ಮತ್ತು dByangs-can-ma (Yangchenma - English Phonetics) ಎಂಬ ಹೆಸರುಗಳಿಂದಲೂ ಆರಾಧಿಸುತ್ತಾರೆ. ಈ ಪದಗಳ ಅರ್ಥ ಸುಂದರವಾದ ಸ್ತ್ರೀ ಮತ್ತು ಸುಂದರವಾದ ಧ್ವನಿ ಅಥವಾ ಸ್ವರ ಎಂಬುದಾಗಿದೆ. ಜಪಾನಿಯರ ಪರಿಕಲ್ಪನೆಯ ಏಳುಮಂದಿ ಅದೃಷ್ಟದೇವತೆಗಳಲ್ಲಿ Benten ಒಬ್ಬಳು. ಸರಸ್ವತಿಯ ಪೂರ್ಣ ಹೆಸರು Dai-ben-Zai-ten, ಅಂದರೆ Great Divinity of Reasoning Faculty ಎಂದರ್ಥ.
<br />
<big>ಜೈನಧರ್ಮದಲ್ಲಿ...</big>
೬೯ ನೇ ಸಾಲು:
[[de:Saraswati]]
[[en:Saraswati]]
[[eo:Sarasvati]]
[[es:Sarasvati]]
[[fa:سرسوتی]]
"https://kn.wikipedia.org/wiki/ಸರಸ್ವತಿ" ಇಂದ ಪಡೆಯಲ್ಪಟ್ಟಿದೆ