ಬೂದಿಕೋಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Reverted edits by 65.255.37.226 (talk) to last revision by 59.92.129.78
೩ ನೇ ಸಾಲು:
== '''ಚರಿತ್ರೆ''' ==
 
ಬೂದಿಕೋಟೆಯು ೧೭ ನೇ ಶತಮಾನದಲ್ಲಿ ಶಿರಾ ಸುಭೇದಾರನ ಕೆಳೆಗೆ ಪೌಜುದಾರನಾಗಿದ್ದ ಫತೇಮಹಮ್ಮದನ ಜಹಗೀರಿಯಾಗಿತ್ತು. ಫತೇಮಹಮ್ಮದನ ಮಗ [[ಮೈಸೂರು ಹುಲಿ]] [[ಟಿಪ್ಪು ಸುಲ್ತಾನ್]] ರ ತಂದೆ ಮೈಸೂರು ಚರಿತ್ರೆಯಲ್ಲಿ ಕಾಣಿಸಿಕೊಳ್ಳುವ [[ಹೈದರಾಲಿ]]ಯ ಜನ್ಮಸ್ಠಳ ಇವರು 1970 ರಲ್ಲಿ ಇಲ್ಲಿ ಜನಿಸಿದರು.
 
ಬೂದಿಕೋಟೆಯಲ್ಲಿ ಶಿಥಿಲವಾದ ಕೋಟೆಗಳ ಅವಶೇಷಗಳಿವೆ. ಕೋಟೆಯೊಳಗೆ ಅನೇಕ ದೇವಾಲಯಗಳು ಸಹ ಇವೆ. ಮಳೆಗಾಲದಲ್ಲಿ ಮಾರ್ಕಂಡೇಯ ನದಿಯನೀರು ಕೋಟೆಯನ್ನು ಸುತ್ತುವರೆದು ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ. ಈ ಕೋಟೆ ಓಂದರ್ಥದಲ್ಲಿ ನಿಸರ್ಗ ನಿರ್ಮಿಸಿದ ಕಲಾಶಾಲೆ. ಇಲ್ಲಿ ಕಾಣುವ ಪ್ರತಿಯೊಂದು ಕಲ್ಲಿಗೂ ಸಹ ಒಂದೊಂದು ಆಕಾರವಿದೆ. ಕೇಂದ್ರ ಪ್ರಾಚ್ಯವಸ್ತು ಇಲಾಖೆಯ ಉಸ್ತುವಾರಿಯಲ್ಲಿರುವ ಬೂದಿಕೋಟೆಯ ಕೋಟೆಯೊಳಗೆ ಕಲ್ಲಿನಲ್ಲಿ ಕೆತ್ತಿದಂತಹ ಆಂಜನೇಯ ಸ್ವಾಮಿಯ ದೇವಾಲಯ ಮತ್ತು ಕೋಟೆವೇಣುಗೋಪಾಲಸ್ವಾಮಿಯ ಆಲಯವಿದೆ ಇದು ಶಿಥಿಲವಾಗಿದ್ದು ಇತ್ತೀಚೆಗೆ ಊರಿನ ಗ್ರಾಮಸ್ಥರು ಸುಂದರಗೊಳಿಸಿದ್ದಾರೆ. ಹೈದರಾಲಿಯ ಜನ್ಮಸ್ಥಳದಲ್ಲಿ ಸ್ಮಾರಕವೊಂದಿದೆ.
೧೩ ನೇ ಸಾಲು:
 
ಬೂದಿಕೋಟೆಯಿಂದ ಸುಮಾರು ೫ ಕಿ.ಮೀ ಸಾಗಿದರೆ ಮೈಸೂರು ಅರಸರ ಆಳ್ವಿಕೆಯಲ್ಲಿ ನಿರ್ಮಾಣಗೊಂಡ ಮಾರ್ಕಂಡೆಯ ಜಲಾಶಯ ವಿಹಾರ ತಾಣವಾಗಿ ತುಂಬಾ ಪ್ರಸಿದ್ದಿಯಾಗಿದೆ. ಜೊತೆಗೆ [[ಕೋಲಾರ]] ಜಿಲ್ಲೆಯ ಮಿನಿ [[ಕೆ ಆರ್ ಎಸ್]] ಎಂದೇ ಪ್ರಸಿದ್ದಿಯಾಗಿದೆ ಈ ಮಾರ್ಕಂಡೆಯ ಕೆರೆ .
Periyanna.T
 
== ನಮ್ಮಧ್ವನಿ ==
 
ನಮ್ಮಧ್ವನಿಯನ್ನು ಸಮುದಾಯ ರೆಡಿಯೋ ಕೇಂದ್ರ ಬೂದಿಕೋಟೆಯಲ್ಲಿ 2002 ರಲ್ಲಿ ಪ್ರಾರಂಭಿಸಿದರು. ಇಲ್ಲಿ ಪ್ರಾರಂಭಿಸಲು ಕಾರಣವೇನಂದ್ರೆ ಬೂದಿಕೋಟೆ ಕರ್ನಾಟಕ, ಅಂದ್ರಪ್ರದೇಶ ಮತ್ತು ತಮಿಳುನಾಡಿನ ಗಡಿಭಾಗದಲ್ಲಿದ್ದು, ಇಲ್ಲಿ ಅವಿಧ್ಯಾವಂತರು ಮತ್ತು ಕೂಲಿಕಾರ್ಮಿಕರು ಜಾಸ್ತಿ ಇದ್ದು, ಇವರಿಗೆ ಸರಿಯಾದ ಸಮಯಕ್ಕೆ ಸರಿಯಾದ ಮಾಹಿತಿ ಸಿಗುತ್ತಿರಲಿಲ್ಲ ಆದ್ದರಿಂದ ಇಲ್ಲಿ ನಮ್ಮಧ್ವನಿಯನ್ನು [[ಯುನೆಸ್ಕೋ]] ಸಹಕಾರದಿಂದ ಪ್ರಾರಂಭಿಸಿದರು. ನಮ್ಮ ಧ್ವನಿಗೆ ಸಹಕಾರವನ್ನು ಬೆಂಗಳೂರುನಲ್ಲಿರುವ [http://www.voicesindia.org/ ವಾಯ್ಸಸ್] ಸಂಸ್ಥೆಯು ತಾಂತ್ರಿಕ ಸಹಾಯವನ್ನು ಮಾಡುತ್ತಿದ್ದು, [http://www.myrada.org/ ಮೈರಾಡ] ಸಂಸ್ಥೆಯು ಸ್ಥಳೀಯ ಮಟ್ಟದಲ್ಲಿ ಜವಾಬ್ದಾರಿಯನ್ನು ವಹಿಸುಕೊಂಡಿದೆ. [http://en.wikipedia.org/wiki/Unesco ಯುನೆಸ್ಕೋ] ಸಂಸ್ಥೆಯು ನಮ್ಮಧ್ವನಿಗೆ ಬೇಕಾದ ಎಲ್ಲಾ ಉಪಕರಣಗಳನ್ನು ನೀಡಿದೆ.
ನಮ್ಮಧ್ವನಿ ಮುಖಾಂತರ ಹಲವಾರು ವಿಧಾನಗಳಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತಿದೆ. ಈ ಎಲ್ಲಾ ಕಾರ್ಯಕ್ರಮಗಳು 90.4 ತರಂಗಗಳಲ್ಲಿ ಕ್ರಾರ್ಯಕ್ರಮ ಪ್ರಸಾರವಾಗುತ್ತಿದೆ..
 
[[ವರ್ಗ:ಕೋಲಾರ ಜಿಲ್ಲೆ]]
"https://kn.wikipedia.org/wiki/ಬೂದಿಕೋಟೆ" ಇಂದ ಪಡೆಯಲ್ಪಟ್ಟಿದೆ