ಕೋಟಿಲಿಂಗೇಶ್ವರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಕೋಲಾರ ಜಿಲ್ಲೆಯ ಬಂಗಾರಪೇಟೆಗೆ ೧೨ ಕಿಲೋ ಮೀಟರ್ ದೂರದಲ್ಲಿರುವ ಕಮ್ಮಸಂದ್ರ ಇ...
 
No edit summary
೬ ನೇ ಸಾಲು:
 
ದೇವಾಲಯದ ಪ್ರಾಂಗಣ ಪ್ರವೇಶಿಸಿದ ಬಳಿಕ ಪ್ರಧಾನ ಶಿವದೇವಾಲಯ, ಬ್ರಹ್ಮ, ವಿಷ್ಣು, ಮಹೇಶ್ವರ, ವಿನಾಯಕ, ಅಯ್ಯಪ್ಪ, ಆಂಜನೇಯ, ಕನಿಕಾ ಪರಮೇಶ್ವರಿ, ಪಾರ್ವತಿ, ಲಕ್ಷ್ಮೀ, ನವಗ್ರಹ, ಸತ್ಯನಾರಾಯಣಸ್ವಾಮಿ, ಸುಬ್ರಹ್ಮಣ್ಯ, ವೆಂಕಟೇಶ್ವರ, ಪಂಚಮುಖಿ ಆಂಜನೇಯ, ಸಂತೋಷಿಮಾತಾ, ಮಂಜುನಾಥೇಶ್ವರ ಸ್ವಾಮಿ ದರ್ಶನಭಾಗ್ಯ ಲಭಿಸುತ್ತದೆ. ಪಕ್ಕದಲ್ಲೇ ಸುಂದರವಾದ ಬೃಂದಾವನವೂ ಇದೆ.
 
ಆಲಯದಲ್ಲಿರುವ ಗಣೇಶ ದೇವಾಲಯದ ಎದುರು ಹರಕೆಯ ಬಿಲ್ವಪತ್ರೆ ಮರ ಹಾಗೂ ನಾಗಲಿಂದ ವೃಕ್ಷಗಳಿವೆ. ದೇವಾಲಯದಲ್ಲಿ ಪೂಜಿಸಿದ ಪವಿತ್ರ ದಾರವನ್ನು ಈ ಮರಗಳಿಗೆ ಕಟ್ಟಿದರೆ ಇಷ್ಟಾರ್ಥ ಈಡೇರುತ್ತದೆ ಎಂಬುದು ಜನರ ನಂಬಿಕೆ.
 
ನಿತ್ಯವೂ ಇಲ್ಲಿಗೆ ನೂರಾರು ಭಕ್ತರು ಆಗಮಿಸುತ್ತಾರೆ. ದೇವಾಲಯಗಳಲ್ಲಿ ನಿತ್ಯಸೇವೆ, ಅನ್ನದಾನ, ಬಡವರಿಗೆ ವಸ್ತ್ರದಾನ ನಡೆಯುತ್ತದೆ. ಕ್ಷೇತ್ರದಲ್ಲಿ ಸಾಮೂಹಿಕ ವಿವಾಹ ಮಹೋತ್ಸವವೂ ಜರುಗುತ್ತದೆ. ಬರುವ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ವಸತಿ ಸೌಕರ್ಯವನ್ನೂ ಕಲ್ಪಿಸಲಾಗಿದೆ.
 
ಪ್ರತಿವರ್ಷ ಆಶ್ವಯುಜ ಮಾಸದಲ್ಲಿ ದಸರೆಯ ಸಂದರ್ಭದಲ್ಲಿ ಇಲ್ಲಿ ರಥೋತ್ಸವ ಹಾಗೂ ಜಾತ್ರೆ ನಡೆಯುತ್ತದೆ.
"https://kn.wikipedia.org/wiki/ಕೋಟಿಲಿಂಗೇಶ್ವರ" ಇಂದ ಪಡೆಯಲ್ಪಟ್ಟಿದೆ