ಫ್ರೆಂಡ್ಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪೬ ನೇ ಸಾಲು:
 
ಫ್ರೆಂಡ್ಸ್ ಸರಣಿಯ ಪ್ರಮುಖ ನಟ ನಟಿಯರು ದೂರದರ್ಶನ ವೀಕ್ಷಕರಿಗೆ ಅವರ ಫ್ರೆಂಡ್ಸ್ ಪಾತ್ರಗಳಿಗಿಂತ ಮೊದಲೇ ಪರಿಚಿತರಾಗಿದ್ದರೂ ಅವರನ್ನು ತಾರೆಗಳೆಂದು ಪರಿಗಣಿಸಲಾಗುತ್ತಿರಲಿಲ್ಲ. ಆರಂಭದಲ್ಲಿ ಪಾತ್ರ ನಟನೆಗೆ ಆಯ್ಕೆಗೊಂಡಾಗ ಕಾಕ್ಸ್, ಪ್ರಮುಖ ನಟನಾ ವರ್ಗದಲ್ಲಿ ಅತ್ಯಂತ ಎತ್ತರದ ವೈಯಕ್ತಿಕ ವೃತ್ತಿಜೀವನವನ್ನು ಹೊಂದಿದ್ದರು. ಅವರು ಆಗಾಗಲೇ '''ಏಸ್ ವೆಂಚುರಾ: ಪೆಟ್ ಡಿಟೆಕ್ಟಿವ್''' ಹಾಗೂ '''ಫ್ಯಾಮಿಲಿ ಟೈಸ್''' ಎಂಬ ಹಲವಾರು ಸರಣಿಗಳಲ್ಲಿ ಕಾಣಿಸಿಕೊಂಡಿದ್ದರು. ಕುಡ್ರೋ ಫ್ರೆಂಡ್ಸ್ ಪೂರ್ವದಲ್ಲಿ '''ಮ್ಯಾಡ್ ಎಬೌಟ್ ಯೂ''' ಸರಣಿಯಲ್ಲಿ '''ಅರ್ಸೂಲಾ ಬುಫೆ''' ಪಾತ್ರವನ್ನು ನಿರ್ವಹಿಸಿದ್ದರು. ನಂತರ ಫ್ರೆಂಡ್ಸ್ ನಲ್ಲಿ ಅರ್ಸೂಲ ಎಂಬ ಅವಳಿ ಸಹೋದರಿಯ ದ್ವಂದ್ವ ಪಾತ್ರವನ್ನು ಹಲವಾರು ಸಂಚಿಕೆಗಳಲ್ಲಿ ಆವರ್ತ ಪಾತ್ರವಾಗಿ ನಿರ್ವಹಿಸಿದರು. ಫ್ರೆಂಡ್ಸ್ ನಲ್ಲಿ ತಮ್ಮ ಪಾತ್ರವನ್ನು ವಹಿಸಿಕೊಳ್ಳುವುದಕ್ಕಿಂತ ಮೊದಲು, ಅವರು ತಮ್ಮ ತಂದೆಯ ಕಛೇರಿ ನಿರ್ವಾಹಕಿ ಹಾಗೂ ಸಂಶೋಧಕಿಯಾಗಿದ್ದರು. ಲಬ್ಲಾಂಕ್, '''ಮ್ಯಾರೀಡ್... ವಿದ್ ಚಿಲ್ಡ್ರನ್''' ಧಾರಾವಾಹಿಯಲ್ಲಿ ಒಂದು ಕಿರು ಪಾತ್ರದಲ್ಲಿ ಹಾಗೂ ಅದರ ಆಧರಿತ ಸರಣಿಗಳಾದ '''ಟಾಪ್ ಆಫ್ ದ ಹೀಪ್''' ಹಾಗೂ '''ವಿನ್ನೀ & ಬಾಬ್ಬಿ''' ಗಳಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಫ್ರೆಂಡ್ಸ್ ನಲ್ಲಿ ಪಾತ್ರಗಲನ್ನು ಗಳಿಸುವ ಮೊದಲು ಪೆರಿ ಹಾಗೂ ಆನಿಸ್ಟನ್ ಹಲವಾರು ಧಾರಾವಾಹಿಗಳ ವಿಫಲ ಪ್ರಾಯೋಗಿಕ ಸಂಚಿಕೆಗಳಲ್ಲಿ ಕಾಣಿಸಿಕೊಂಡಿದ್ದರು. ಫ್ರೆಂಡ್ಸ್ ನಲ್ಲಿ ತಮ್ಮ ಪಾತ್ರಕ್ಕಿಂತ ಮೊದಲು ಶ್ವಿಮ್ಮರ್ '''ದ ವಂಡರ್ ಈಯರ್ಸ್''' ಹಾಗೂ '''ಎನ್.ವೈ.ಪಿ.ಡಿ ಬ್ಲೂ''' ಸರಣಿಗಳಲ್ಲಿ ಕಿರು ಪಾತ್ರಗಳನ್ನು ನಿರ್ವಹಿಸಿದ್ದರು. ಧಾರಾವಾಹಿಯ ಹತ್ತು ಸರಣಿಗಳ ಪ್ರಸಾರದ ಅವಧಿಯಲ್ಲಿ ಈ ಎಲ್ಲಾ ನಟ ನಟಿಯರು ಅಮೇರಿಕಾದ ಮನೆಮಾತಾಗಿ ಹೋದರು.
 
ಪ್ರಥಮ ಸರಣಿಯ ಮೂಲ ಒಪ್ಪಂದದ ಪ್ರಕಾರ, ನಟನಾವರ್ಗದ ಪ್ರತಿ ಸದಸ್ಯನಿಗೂ ಪ್ರತಿ ಸಂಚಿಕೆಗೆ $೨೨,೫೦೦ ವೇತನ ನೀಡಲಾಯಿತು. ಏರಡನೇ ಸರಣಿಯಲ್ಲಿ ನಟನಾವರ್ಗವು ಪ್ರತಿ ಸಂಚಿಕೆಗೆ $೨೦,೦೦೦ ದಿಂದ $೪೦,೦೦೦ ದವರೆಗೆ ಬೇರೆ ಬೇರೆ ವೇತನಗಳನ್ನು ಪಡೆಯಿತು. ತಮ್ಮ ಮೂರನೇ ಸರಣಿಯ ವೇತನ ನಿರ್ಧಾರಕ್ಕಿಂತ ಮೊದಲು, '''ವಾರ್ನರ್ ಬ್ರದರ್ಸ್'''ನ ಪ್ರತ್ಯೇಕ ವೈಯಕ್ತಿಕ ಒಪ್ಪಂದದ ಆದ್ಯತೆಯ ಬದಲಾಗಿಯೂ, ನಟನಾವರ್ಗ ಸಾಮೂಹಿಕ ವೇತನಾ ನಿರ್ಧಾರಕ್ಕೆ ಪ್ರವೇಶಿಸಲು ನಿರ್ಧರಿಸಿತು. ನಟನಾವರ್ಗಕ್ಕೆ ಅತ್ಯಂತ ಕಡಿಮೆ ಗಳಿಸುವ ಸದಸ್ಯನ ವೇತನವನ್ನು ನೀಡಲಾಯಿತು. ಅಂದರೆ ಆನಿಸ್ಟನ್ ಹಾಗೂ ಶ್ವಿಮ್ಮೆರ್ ರವರ ವೇತನಗಳು ಕಡಿಮೆಗೊಂಡವು. ನಟನಾವರ್ಗಕ್ಕೆ ಮೂರನೇ ಸರಣಿಯಲ್ಲಿ $೭೫,೦೦೦ ಪ್ರತಿ ಸಂಚಿಕೆಯಂತೆ, ನಾಲ್ಕನೇ ಸರಣಿಯಲ್ಲಿ $೮೫,೦೦೦ ಪ್ರತಿ ಸಂಚಿಕೆಯಂತೆ, ಐದನೆ ಸಂಚಿಕೆಯಲ್ಲಿ $೧,೦೦,೦೦೦ ಪ್ರತಿ ಸಂಚಿಕೆಯಂತೆ, ಆರನೇ ಸಂಚಿಕೆಯಲ್ಲಿ $೧,೨೫,೦೦೦ ಪ್ರತಿ ಸಂಚಿಕೆಯಂತೆ, ಏಳು ಹಾಗೂ ಎಂಟನೆ ಸರಣಿಗಳಲ್ಲಿ $೭,೫೦,೦೦೦ ಪ್ರತಿ ಸಂಚಿಕೆಯಂತೆ, ಒಂಭತ್ತು ಹಾಗೂ ಹತ್ತನೇ ಸರಣಿಗಳಲ್ಲಿ $೧೦,೦೦,೦೦೦ ಪ್ರತಿ ಸಂಚಿಕೆಯಂತೆ ವೇತನವನ್ನು ನೀಡಲಾಯಿತು. ಐದನೇ ಸರಣಿಯಿಂದ ನಟನಾವರ್ಗವು ಮರುಪ್ರಸಾರಣೆಯ ಗೌರವಧನವನ್ನೂ ಪಡೆಯಲಾರಂಭಿಸಿತು.
 
==ಸರಣಿ ಸಾರಾಂಶ==
"https://kn.wikipedia.org/wiki/ಫ್ರೆಂಡ್ಸ್" ಇಂದ ಪಡೆಯಲ್ಪಟ್ಟಿದೆ