ತಿರುವಾಂಕೂರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Visakham.JPG ಹೆಸರಿನ ಫೈಲು Jameslwoodwardರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾ
ಚು Swathi_thirunal10.jpg ಹೆಸರಿನ ಫೈಲು Jameslwoodwardರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾ
೬೮ ನೇ ಸಾಲು:
 
ಬಲರಾಮ ವರ್ಮರ ಉತ್ತರಾಧಿಕಾರಿಯಾಗಿ 1810–1815ರ ಅವಧಿಯಲ್ಲಿ ರಾಣಿ ಗೌರಿ ಲಕ್ಷ್ಮಿ ಬಾಯಿಯು ಬ್ರಿಟಿಷರ ಸಹಕಾರದೊಂದಿಗೆ ಅಧಿಕಾರವನ್ನು ಪಡೆದುಕೊಂಡಿದ್ದಳು. 1813ರಲ್ಲಿ ಆಕೆಗೆ ಒಬ್ಬ ಪುತ್ರ ಹುಟ್ಟಿದಾಗ, ಆ ಮಗುವನ್ನೇ ರಾಜನನ್ನಾಗಿ ಘೋಷಿಸಲಾಯಿತಾದರೂ, ರಾಜಪ್ರತಿನಿಧಿಯಾಗಿ ರಾಣಿಯು ಆಡಳಿತವನ್ನು ಮುಂದುವರೆಸಿದಳು. ಬ್ರಿಟಿಷ್‌‌ ಸೇನಾಧಿಕಾರಿ/ಕರ್ನಲ್‌‌ ಮುನ್ರೋ ಆಕೆಯ ದಿವಾನರಾಗಿ ಸೇವೆ ಸಲ್ಲಿಸಿದರು. 1815ರಲ್ಲಿ ರಾಣಿ ಗೌರಿ ಲಕ್ಷ್ಮಿ ಬಾಯಿಯು ಸಾವನ್ನಪ್ಪಿದಾಗ, ರಾಜಪ್ರತಿನಿಧಿಯಾಗಿ ಮಹಾರಾಣಿ ಗೌರಿ ಪಾರ್ವತಿ ಬಾಯಿಯು ಆಕೆಯ ಉತ್ತರಾಧಿಕಾರತ್ವವನ್ನು ವಹಿಸಿಕೊಂಡಳು. ಈ ಇಬ್ಬರೂ ರಾಜಪ್ರತಿನಿಧಿಗಳ ಆಡಳಿತಾವಧಿಯಲ್ಲಿ ಸಾಮಾಜಿಕ ವ್ಯವಸ್ಥೆ ಹಾಗೂ ಶಿಕ್ಷಣ ಕ್ಷೇತ್ರಗಳು ಉತ್ತಮ ಅಭಿವೃದ್ಧಿಯನ್ನು ಕಂಡವು. ಸ್ವಾತಿ ತಿರುನಾಳ್‌/ಲ್‌‌‌ ರಾಮ ವರ್ಮಾ 1829ರಲ್ಲಿ ರಾಜ್ಯಭಾರವನ್ನು ವಹಿಸಿಕೊಂಡರು. ಅವರು [[ಕರ್ನಾಟಕ ಸಂಗೀತ|ಕರ್ನಾಟಕ ಸಂಗೀತ]] ಮತ್ತು ಹಿಂದೂಸ್ತಾನಿ ಸಂಗೀತಗಳ ಪ್ರಖ್ಯಾತ ಗಾಯಕರಾಗಿದ್ದರು. ಇವರು ಅನೇಕ ಅನಗತ್ಯ ತೆರಿಗೆಗಳನ್ನು ರದ್ದುಗೊಳಿಸಿದರಲ್ಲದೇ ಆಂಗ್ಲ ಶಾಲೆ ಮತ್ತು ದತ್ತಿಯಿಂದ ನಡೆಯುವ ಆಸ್ಪತ್ರೆಯೊಂದನ್ನು ಟ್ರಿವೇಂಡ್ರಮ್‌‌ನಲ್ಲಿ 1834ರಲ್ಲಿ ಆರಂಭಿಸಿದರು.
 
[[File:Swathi thirunal10.jpg|thumb|right|300px|ಮಹಾರಾಜಾ ಸ್ವಾತಿ ತಿರುನಾಳ್‌‌/ಲ್‌‌ ರಾಮ ವರ್ಮಾ]]
 
AD 1847–1860ರ ಅವಧಿಯಲ್ಲಿ ಆಳ್ವಿಕೆ ನಡೆಸಿದ ಮುಂದಿನ ಅರಸ ಮಹಾರಾಜಾ ಉತ್ತರಮ್‌‌ ತಿರುನಾಳ್‌/ಲ್‌‌‌ ಮಾರ್ತಾಂಡ ವರ್ಮರು C.M.S. ಮತ್ತು L.M.S. ಸಂಘಗಳ <ref>Prof. A. ಶ್ರೀಧರ ಮೆನನ್‌‌, ''A ಸರ್ವೆ ಆಫ್‌ ಕೇರಳ ಹಿಸ್ಟರಿ'' , 1996, S. ವಿಶ್ವನಾಥನ್‌‌ ಪ್ರಿಂಟರ್ಸ್‌‌ ಅಂಡ್‌ ಪಬ್ಲಿಷರ್ಸ್‌‌, pp 396.</ref> ಪ್ರೊಟೆಸ್ಟೆಂಟ್‌ ಕ್ರೈಸ್ತ ಪಾದ್ರಿಗಳ ಶಿಫಾರಸುಗಳನ್ನು ಪಾಲಿಸುತ್ತಾ 1855ನೇ ಇಸವಿಯಲ್ಲಿ ಸಾಮ್ರಾಜ್ಯದಲ್ಲಿ ಜೀತಪದ್ಧತಿ/ಗುಲಾಮಗಿರಿಯನ್ನು ನಿಷೇಧಿಸಿದರಲ್ಲದೇ ಕೆಲ ನಿರ್ದಿಷ್ಟ ಜಾತಿಗಳವರ ಮೇಲೆ ಹೇರಿದ್ದ ವಸ್ತ್ರಸಂಹಿತೆಯ ಕಟ್ಟುಪಾಡುಗಳನ್ನು ಕೂಡಾ 1859ರಲ್ಲಿ ನಿಷೇಧಿಸಿದ್ದರು. ಈ ತರಹದ ಸಾಮಾಜಿಕ ವ್ಯವಸ್ಥೆಗಳ ಮೇಲೆ ಆತ ಕೈಗೊಂಡ ಕ್ರಮವು ಮೆಚ್ಚುಗೆಯನ್ನು ಗಳಿಸಿಕೊಟ್ಟಿತಲ್ಲದೇ, ಈ ಮೇಲ್ಪಂಕ್ತಿಯನ್ನು ನೆರೆಯ ಕೊಚಿನ್‌‌/ಕೊಚ್ಚಿನ್‌‌ ರಾಜ್ಯವೂ ಕೂಡಾ ಅನುಸರಿಸಿತು. ಮಹಾರಾಜರು 1857ರಲ್ಲಿ ಅಂಚೆ ವ್ಯವಸ್ಥೆಯನ್ನು ಆರಂಭಿಸಿದರು ಹಾಗೂ 1859ರಲ್ಲಿ ಬಾಲಕಿಯರಿಗೇ ಪ್ರತ್ಯೇಕವಾದ ಶಾಲೆಯನ್ನು ಆರಂಭಿಸಿದರು. 1860–1880ರ ಅವಧಿಯಲ್ಲಿ ಆಡಳಿತ ನಡೆಸಿದ ಅಯಿಲ್ಯಮ್‌‌‌ ತಿರುನಾಳ್‌/ಲ್‌‌‌ರು ಆತನ ಉತ್ತರಾಧಿಕಾರಿಯಾಗಿದ್ದು, ಅವರ ಆಳ್ವಿಕೆಯಡಿಯಲ್ಲಿ ಕೃಷಿ, ನೀರಾವರಿ ಚಟುವಟಿಕೆಗಳು ಮತ್ತು ರಸ್ತೆ ಮಾರ್ಗಗಳ ನಿರ್ಮಾಣಗಳಿಗೆ ಉತ್ತೇಜನವನ್ನು ನೀಡಲಾಗಿತ್ತು. 1861ರಲ್ಲಿ ನಾಗರಿಕರ ಕಾನೂನು ಸಂಹಿತೆಯನ್ನು ಜಾರಿಗೆ ತರಲಾಯಿತಲ್ಲದೇ 1866ರಲ್ಲಿ ಕಾಲೇಜು/ಮಹಾವಿದ್ಯಾಲಯವನ್ನು ಸ್ಥಾಪಿಸಿದರು. ಅವರು ಮನೋರೋಗಿಗಳ ಚಿಕಿತ್ಸಾಲಯವೂ ಸೇರಿದಂತೆ ಅನೇಕ ದತ್ತಿಯಿಂದ ನಡೆಯುವ ಆಸ್ಪತ್ರೆಗಳನ್ನು ಕೂಡಾ ನಿರ್ಮಿಸಿದರು. ಮೇ 18, 1875ರಂದು ಟ್ರಾವಂಕೂರು/ತಿರುವಾಂಕೂರಿನಲ್ಲಿ ಪ್ರಪ್ರಥಮವಾಗಿ ಸುವ್ಯವಸ್ಥಿತ ಜನಗಣತಿಯನ್ನು ಕೈಗೊಳ್ಳಲಾಯಿತು. ಇವರು ತಮ್ಮ ದೇಶದಲ್ಲಿ ಚುಚ್ಚುಮದ್ದು ಹಾಕಿಸುವುದನ್ನು ಕೂಡಾ ಪರಿಚಯಿಸಿದರು. ರಾಮ ವರ್ಮಾ ವಿಸಾಖಮ್‌ ತಿರುನಾಳ್‌/ಲ್‌‌‌‌ರು 1880–1885ರ ಅವಧಿಯಲ್ಲಿ ಆಡಳಿತ ನಡೆಸಿದರು. ಅವರು ವೈಸ್‌ರಾಯ್‌ರ ಕಾರ್ಯಕಾರಿ ಸಮಿತಿಯಲ್ಲಿ ಸ್ಥಾನವನ್ನು ಗಳಿಸಿಕೊಂಡ ಪ್ರಥಮ ಭಾರತೀಯ ರಾಜಕುಮಾರರೂ ಆದರಲ್ಲದೇ ಅನೇಕ ಗ್ರಂಥಗಳನ್ನು ಹಾಗೂ ಪ್ರಬಂಧಗಳನ್ನು ಕೂಡಾ ರಚಿಸಿದ್ದರು. ಅವರು ಆರಕ್ಷಕ ಪಡೆಯನ್ನು ಮರುಸಂಘಟಿಸಿದರಲ್ಲದೇ, ಅನೇಕ ದುರ್ಭರ ತೆರಿಗೆಗಳನ್ನು ರದ್ದುಗೊಳಿಸಿದರು.
"https://kn.wikipedia.org/wiki/ತಿರುವಾಂಕೂರು" ಇಂದ ಪಡೆಯಲ್ಪಟ್ಟಿದೆ