ತೈತ್ತಿರೀಯೋಪನಿಷತ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Modifying: sa:तैत्तिरीयोपनिषत्; cosmetic changes
೧ ನೇ ಸಾಲು:
{{ಹಿಂದೂ ಧರ್ಮಗ್ರಂಥಗಳು}}
'''ತೈತ್ತಿರೀಯೋಪನಿಷತ್'''ಇದು [[ಕೃಷ್ಣ ಯಜುರ್ವೇದ]]ದ [[ತೈತ್ತಿರೀಯ ಆರಣ್ಯಕ]]ಕ್ಕೆ ಸೇರಿದೆ.ಇದರಲ್ಲಿ [[ಶಿಕ್ಷಾ ವಲ್ಲಿ]],[[ಬ್ರಹ್ಮಾನಂದ ವಲ್ಲಿ]],[[ಭೃಗುವಲ್ಲಿ]] ಎಂಬ ಮೂರು ಅಧ್ಯಾಯಗಳಿವೆ.[[ಬ್ರಹ್ಮ ]] ಎಂದರೇನು ಎಂಬ ಪ್ರಶ್ನೆಗೆ ನಿರ್ದಿಷ್ಟವಾದ ಉತ್ತರವನ್ನು ಕಂಡುಕೊಳ್ಳುವುದು ಈ ಉಪನಿಷತ್ತಿನ ಹಿರಿಮೆಯಾಗಿದೆ.ಮಾನವನು ಜೀವ ಜಗತ್ತು,[[ಆತ್ಮ ]] ಇವುಗಳ ಬಗ್ಗೆ,ಇವುಗಳ ನಡುವಿನ ಸಂಬಂಧದ ಬಗ್ಗೆ ಇಂದು ಕೂಡಾ ಸಂಶೋಧನೆಗಳನ್ನು ನಡೆಸುತ್ತಿದ್ದಾನೆ.[[ಪರತತ್ವ]]ವೇ ಬ್ರಹ್ಮ ಎಂದು ಹೇಳಿ ಬ್ರಹ್ಮದಿಂದ ಜೀವ ಜಗತ್ತು,ಅನ್ನ,ಅಂತಃಕರಣ,[[ಜ್ಞಾನ]] ಇವುಗಳಲ್ಲಾ ಹುಟ್ಟಿ ಎಲ್ಲವೂ ಬ್ರಹ್ಮ ಎಂದು ಈ ಉಪನಿಷತ್ತು ಘೋಷಿಸುತ್ತದೆ.ಬ್ರಹ್ಮವೇ ಆನಂದ,ಆನಂದವೇ ಬ್ರಹ್ಮ ಎಂಬ ಸಿದ್ಧಾಂತವನ್ನು ಸ್ಪಷ್ಟೀಕರಿಸಿದ ವಿವರಣೆಗಳನ್ನು ಕೂಡಾ ಇದರಲ್ಲಿ ಕಾಣ ಬಹುದಾಗಿದೆ.
 
ಈ ಉಪನಿಷತ್ತಿನಲ್ಲಿ ಕಂಡು ಬರುವ ಇನ್ನೊಂದು ಮುಖ್ಯ ಅಂಶವೆಂದರೆ ಶಿಕ್ಷಣ ಮುಗಿಸಿ ಮನೆಗೆ ಮರಳುವ ಸ್ನಾತಕನಿಗೆ ನೀಡುವ ಜೀವನೋಪದೇಶವಾಗಿದೆ.ಇದರ ಮೊದಲನೆಯ [[ಅನುವಾಕ]] ಈ ರೀತಿ ಇದೆ.
 
ಹರಿ ಓಮ್|| ಶಂ ನೋ ಮಿತ್ರಃ ಶಂ ವರುಣಃ|ಶಂ ನೋ ಭವತ್ವರ್ಯಮಾ|ಶಂ ನ ಇಂದ್ರೋ ಬೃಹಸ್ಪತಿಃ|ಶಂ ನೋ ವಿಷ್ಣುರುರುಕ್ರಮಃ|ನಮೋ ಬ್ರಹ್ಮಣೇ|ನಮಸ್ತೇ ವಾಯೋ|ತ್ವಮೇವ ಪ್ರತ್ಯಕ್ಷಂ ಬ್ರಹ್ಮಾಸಿ|ತ್ವಾಮೇವ ಪ್ರತ್ಯಕ್ಷಂ ಬ್ರಹ್ಮ ವದಿಷ್ಯಾಮಿ|ಋತಂ ವದಿಷ್ಯಾಮಿ|ಸತ್ಯಂ ವದಿಷ್ಯಾಮಿ|ತನ್ಮಾಮವತು|ತದ್ವಕ್ತಾರಮವತು|ಅವತು ಮಾಮ್| ಅವತು ವಕ್ತಾರಮ್||ಓಂ ಶಾಂತಿಃ ಶಾಂತಿಃ ಶಾಂತಿಃ||
 
[[ಮಿತ್ರ]]ನು ನಮಗೆ ಸುಖವನ್ನುಂಟುಮಾಡಲಿ.[[ವರುಣ]]ನು ನಮಗೆ ಸುಖವನ್ನುಂಟುಮಾಡಲಿ.ಆರ್ಯಮನು ನಮಗೆ ಸುಖವನ್ನುಂಟುಮಾಡಲಿ.[[ಉರುಕ್ರಮ]]ನಾದ [[ವಿಷ್ಣು]]ವು ನಮಗೆ ಸುಖವನ್ನುಂಟುಮಾಡಲಿ.(ಪರೋಕ್ಷರೂಪನಾದ)[[ವಾಯು]]ವಿಗೆ ನಮಸ್ಕಾರ! ಹೇ ವಾಯುವೆ,(ಪ್ರತ್ಯಕ್ಷನಾದ)ನಿನಗೆ ನಮಸ್ಕಾರ!ನೀನೆ ಪ್ರತ್ಯಕ್ಷ ಬ್ರಹ್ಮವಾಗಿರುತ್ತೀಯೆ.ನಿನ್ನನ್ನೇ ಪ್ರತ್ಯಕ್ಷ ಬ್ರಹ್ಮವೆಂದು ಹೇಳುತ್ತೇನೆ.(ನಿನ್ನನ್ನೇ)ಋತವೆಂದು ಹೇಳುತ್ತೇನೆ.(ನಿನ್ನನ್ನೇ)ಸತ್ಯವೆಂದು ಹೇಳುತ್ತೇನೆ.ಅದು ನನ್ನನ್ನು ಕಾಪಾಡಲಿ!ಅದು ಆಚಾರ್ಯನನ್ನು ಕಾಪಾಡಲಿ!ನನ್ನನ್ನು ಕಾಪಾಡಲಿ.ಆಚಾರ್ಯನನ್ನು ಕಾಪಾಡಲಿ! ಓಂ ಶಾಂತಿಃ ಶಾಂತಿಃ ಶಾಂತಿಃ.,<ref>ತೈತ್ತಿರೀಯೋಪನಿಷತ್:ಸ್ವಾಮೀ ಆದಿದೇವಾನಂದ</ref>
೧೩ ನೇ ಸಾಲು:
* ಪ್ರತಿಷ್ಠೆಯನ್ನು ಉಪಾಸಿಸುವವನು ಪ್ರತಿಷ್ಠಾವಂತನಾಗುವನು. ಮಹತ್ತನ್ನು ಉಪಾಸಿಸುವವನು ಮಹಾನ್ ವ್ಯಕ್ತಿಯಾಗುವನು. ಮನಸ್ಸನ್ನು ಉಪಾಸಿಸುವವನು ಮಾನವನಾಗುವನು.
 
== ಆಧಾರ ==
೧.ಈಶಾವಾಸ್ಯೋಪನಿಷತ್:ಸ್ವಾಮೀ ಆದಿದೇವಾನಂದ
 
೨.ಹಿಂದೂ ಧರ್ಮದ ಪರಿಚಯ:ಎ.ಕೆ.ಶಂಕರನಾರಾಯಣ ಭಟ್
 
== ಬಾಹ್ಯ ಸಂಪರ್ಕಗಳು ==
* [http://www.sanskritdocuments.org/all_pdf/tait.pdf text]
* [http://www.sanskritdocuments.org/all_pdf/taitaccent.pdf text with with Vedic accents ]
* [http://www.bharatadesam.com/spiritual/upanishads/Taithreeya_upanishad.php Taittireeya Upanishad]
 
[[ವರ್ಗ:ಹಿಂದೂ ಧರ್ಮ]]
[[ವರ್ಗ:ಉಪನಿಷತ್ತುಗಳು]]
Line ೨೯ ⟶ ೩೦:
[[ml:തൈത്തിരീയോപനിഷത്ത്]]
[[ru:Тайттирия-упанишада]]
[[sa:तैत्तिरीयोपनिषत्]]
[[sa:तैत्तिरीयॊपनिषत्]]
[[te:తైత్తిరీయోపనిషత్తు]]
[[uk:Тайттірія-упанішада]]
"https://kn.wikipedia.org/wiki/ತೈತ್ತಿರೀಯೋಪನಿಷತ್" ಇಂದ ಪಡೆಯಲ್ಪಟ್ಟಿದೆ