ಮಧ್ಯ ಪ್ರದೇಶ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.6.4) (robot Adding: nap:Madhya Pradesh
ಚು LinkEdit ಉಪಯೋಗಿಸಿ ಕೊಂಡಿಗಳನ್ನು ಸರಿಪಡಿಸಲಾಗಿದೆ
೪೭ ನೇ ಸಾಲು:
'ಹಿಂದಿ' ಮಧ್ಯಪ್ರದೇಶದ ಪ್ರಮುಖ ಭಾಷೆ. ಆ ಭಾಷೆಯ ಜನಪದ ರೂಪಗಳೂ ಇಲ್ಲಿ ಪ್ರಚಲಿತವಾಗಿವೆ. ಮಾಲ್ವಾದ ಮಾಲ್ವಿ, ನಿಮಾರ್ ನ ನಿಮಾಡಿ, ಬುಂದೇಲ್ ಖಂಡ್ ನ ಬುಂದೇಲಿ, ಬಾಗೇಲ್ ಖಂಡ್ ನ ಬಾಗೇಲಿ ಮತ್ತು ಅವಧಿ-ಇವೆಲ್ಲಾ ಹಿಂದೀ ಭಾಷೆಯ ರೂಪಾಂತರಗಳು.ಭಿಲೋಡಿ (ಭಿಲ್ ಭಾಷೆ), ಗೊಂಡಿ, ಕೋರ್ಕು, ಕಾಲ್ಟೋ (ನಿಹಾಲಿ)- ಇವು ಮಧ್ಯಪ್ರದೇಶದ ಕೆಲವು 'ಆದಿವಾಸಿ ಭಾಷೆಗಳು'. ಮಧ್ಯ ಪ್ರದೇಶದ ಹಲವು ಭಾಗಗಳಲ್ಲಿ ಎರಡು ಶತಮಾನಕ್ಕೂ ಹೆಚ್ಚು ಕಾಲ ಮರಾಠರು ಆಡಳಿತ ನಡೆಸಿದ್ದ ಕಾರಣ 'ಮರಾಠಿ' ಮಾತಾಡುವ ಜನ ಹೆಚ್ಚಾಗಿದ್ದಾರೆ. ಭೂಪಾಲ್ ನ ಆಸುಪಾಸಿನಲ್ಲೂ 'ಆಫ್ಘಾನಿಸ್ತಾನ', ಮತ್ತು 'ವಾಯವ್ಯ ಪಾಕಿಸ್ತಾನ'ದಿಂದ ವಲಸೆಬಂದು ನೆಲೆಸಿರುವ ಸಾಕಷ್ಟು ಬುಡಕಟ್ಟಿನ ಜನರಿದ್ದಾರೆ. ಅವರು, ’ಸರ್ಯಾಕಿ’ ಮತ್ತು ’ಪಾಶ್ತೋ’ ಭಾಷೆಯನ್ನು ಆಡುತ್ತಾರೆ.
==ಸಾಹಿತ್ಯ==
ಮಧ್ಯಪ್ರದೇಶದ '[[ಉಜ್ಜಯನಿ]]'ಯಲ್ಲಿ ಪ್ರಸಿದ್ಧ ಸಂಸ್ಕೃತ ಕವಿ, '[[ಕಾಳಿದಾಸ]]'ನು ಜೀವಿಸಿದ್ದನೆಂಬ (ಕ್ರಿ.ಶ ೩೭೫ ರಿಂದ ೪೧೫ ರವರೆಗೆ) ಪ್ರತೀತಿಯಿದೆ. ಮಹಾ ಜ್ಯೋತಿಷಿ, 'ವರಾಹ ಮಿಹಿರ' ಸಹಿತ ಉಜ್ಜಯಿನಿಯಲ್ಲಿ ವಾಸಿಸಿದ್ದರು. ಧಾರಾದ ರಾಜ 'ಭೋಜರಾಜನ ಆಸ್ಥಾನ'ದಲ್ಲಿ ಕವಿಗಳಿಗೆ ವಿಶೇಷ ಮನ್ನಣೆಯನ್ನು ಕೊಟ್ಟು ಆಶ್ರಯವನ್ನು ಕೊಡಲಾಗಿತ್ತು. ರಾಜಾ ಭೋಜ್ ಸ್ವತಃ ಒಬ್ಬ ಶ್ರೇಷ್ಟ ಕವಿಯಾಗಿದ್ದರು. ಹಲವಾರು ಕೃತಿಗಳನ್ನು ರಚಿಸಿದ್ದಾರೆ. 'ಧಾರ್ ನಗರ'ದಲ್ಲಿ ಭೋಜರಾಜರು ನಿರ್ಮಿಸಿದ 'ಸಂಸ್ಕೃತ ಪಾಠಶಾಲೆ' ಇಂದಿಗೂ ಇದೆ. ಶಾಲೆಯ ಗೋಡೆಗಳ ಮೇಲೆ ಸಂಸ್ಕೃತ ಭಾಷೆಯಲ್ಲಿ ಕೆತ್ತಿದ ಹಲವಾರು ಶ್ಲೋಕಗಳಿವೆ. ಮಧ್ಯಪ್ರದೇಶ ಇನ್ನೂ ಹಲವಾರು ಖ್ಯಾತ ಪಂಡಿತರಿಗೆ ತವರುಮನೆ. ಅವರುಗಳಲ್ಲಿ ಪ್ರಮುಖರು, 'ಧನಪಾಲ', 'ಭರ್ತುಹರಿ', 'ಆಶಾಧಾರ', 'ಮನತುಂಗ', 'ಬ್ರಹ್ಮಗುಪ್ತ', 'ಭಾಸ್ಕರಾಚಾರ್ಯ', ಮುಂತಾದವರು. '[[ಚಂದ್ರಗುಪ್ತ ವಿಕ್ರಮಾದಿತ್ಯ ಮಹಾರಾಜ]]' ನ ಕಾಲದಲ್ಲಿ, '[[ಧನ್ವಂತರಿ]]', '[[ಕ್ಷಪಣಕ]]' (ಸಿದ್ಧಸೇನ) '[[ಅಮರ ಸಿಂಹ]]', '[[ಸಂಕು]]', '[[ವೇತಾಲಭಟ್ಟ]]', '[[ಘಟಕರ್ಪರ]]', '[[ಕಾಳಿದಾಸ]]', '[[ವರಾಹಮಿಹಿರ]]', ಮತ್ತು '[[ವರರುಚಿ]]' ಎಂಬ [[ನವರತ್ನ|ನವರತ್ನಗಳಿದ್ದರು]]ಗಳಿದ್ದರು. ''''ಆಧುನಿಕ ಕಾಲದ ಕೆಲವು ಹೆಸರಾಂತ ಕವಿಗಳು',''' 'ಮಾಖನ್ ಲಾಲ್', 'ಚತುರ್ವೇದಿ', 'ಶರದ್ ಜೋಶಿ', 'ಗಜಾನನ', 'ಮಾಧವ ಮುಕ್ತಿ', 'ಬೊಧ' ಮತ್ತು 'ವಿನೋದ್ ಕುಮಾರ್', 'ಶುಕ್ಲಾ' ಮುಂತಾದವರು.
 
==ನೃತ್ಯ-ಸಂಗೀತ==
"https://kn.wikipedia.org/wiki/ಮಧ್ಯ_ಪ್ರದೇಶ" ಇಂದ ಪಡೆಯಲ್ಪಟ್ಟಿದೆ