ಮದಕರಿ ನಾಯಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
numberEdit ಉಪಯೋಗಿಸಿ ಇಂಗ್ಲಿಷ್ ಅಂಕೆಗಳನ್ನು ಕನ್ನಡಕ್ಕೆ ಅನುವಾದಿಸಲಾಗಿದೆ
LinkEdit ಉಪಯೋಗಿಸಿ ಕೊಂಡಿಗಳನ್ನು ಸರಿಪಡಿಸಲಾಗಿದೆ
೬ ನೇ ಸಾಲು:
}}
 
'''ಮದಕರಿ ನಾಯಕ''' , [[ಭಾರತ|ಭಾರತ]] ದೇಶದಲ್ಲಿದ್ದ ಹಲವು ಸಂಸ್ಥಾನಗಳಲ್ಲಿ ಒಂದಾದ [[ಚಿತ್ರದುರ್ಗ ನಗರ|ಚಿತ್ರದುರ್ಗ]]ದ ಕೊನೆಯ ಆಳರಸನಾಗಿದ್ದ.<ref>https://netfiles.uiuc.edu/blewis/www/chitradurga.htm</ref> [[ಹೈದರಾಲಿ|ಹೈದರ್ ಅಲಿ]]ಯ [[ಮೈಸೂರು|ಮೈಸೂರಿನ]] ಸೇನೆ ಮುತ್ತಿಗೆ ಹಾಕಿದ ಸಂದರ್ಭದಲ್ಲಿ ನಾಯಕ ಸೋಲನ್ನಪ್ಪಿ ಚಿತ್ರದುರ್ಗ ಹೈದರ್‌ ಅಲಿಯ ಪಾಲಾಗುತ್ತದೆ. ಅಲ್ಲದೇ ನಾಯಕ ಅಲಿಯ ಪುತ್ರ [[ಟಿಪ್ಪು ಸುಲ್ತಾನ್|ಟಿಪ್ಪು ಸುಲ್ತಾನ]]ನಿಂದ ಹತನಾಗುತ್ತಾನೆ.
 
ಮದಕರಿಯ ಆಳ್ವಿಕೆಯಲ್ಲಿದ್ದ ಚಿತ್ರದುರ್ಗದ ಕೋಟೆಯನ್ನು ಹೈದರ್‌ ಅಲಿಯ ಸೇನೆ ಮುತ್ತಿಗೆ ಹಾಕುತ್ತದೆ. ಹೀಗೆ ಹೈದರ್ ಅಲಿ ಚಿತ್ರದುರ್ಗದ ಕೋಟೆಯನ್ನು ಸುತ್ತುವರಿದಾಗ ಅಲ್ಲಿನ ಹೆಂಗಸೊಬ್ಬಳು ಬಂಡೆಗಳ ನಡುವಿನ ಕಿಂಡಿಯ ಮೂಲಕ ಪ್ರವೇಶಿಸಿದ್ದನ್ನು ಗುರುತಿಸಿ, ತನ್ನ ಸೈನಿಕರನ್ನು ಆ ಮಾರ್ಗದ ಮೂಲಕ ಕಳುಹಿಸಿರುತ್ತಾನೆ. ಆ ಕಿಂಡಿಯ ಸಮೀಪ ಕಾವಲು ಕಾಯುತ್ತಿದ್ದ ಕೋಟೆಯ ಸೈನಿಕ ಊಟಮಾಡಲು ಮನೆಗೆ ಹೋಗಿರುತ್ತಾನೆ. ಆಕೆ, ಆ ಕಿಂಡಿಯ ಮೂಲಕ ಬರುತ್ತಿದ್ದ ಸೈನಿಕರನ್ನು ಗಮನಿಸುತ್ತಾಳೆ. ಕೂಡಲೇ ಜಾಗೃತಳಾಗಿ ತನ್ನ ''ಒನಕೆ'' ಯನ್ನು(ಭತ್ತ ಕುಟ್ಟಲು ಬಳಸುವ ಒಕ್ಕುಗೋಲು) ಬಳಸಿ ಅವರನ್ನು ಕೊಲ್ಲುತ್ತಾಳೆ. ಊಟ ಮುಗಿಸಿ ಹಿಂದಿರುಗಿದ ಬಳಿಕ, ಓಬವ್ವನ ರಕ್ತಸಿಕ್ತಗೊಂಡಿದ್ದ ಒನಕೆಯನ್ನು ನೋಡಿ ಆಕೆಯ ಪತಿಗೆ ಆಘಾತವಾಗುತ್ತದೆ. ಜೊತೆಗೆ ಅವಳಿಂದ ಹತರಾದ ನೂರಾರು ಸೈನಿಕರು ಅವಳೆದುರು ಶವವಾಗಿದ್ದನ್ನು ನೋಡುತ್ತಾನೆ. ತಣ್ಣೀರು ದೋಣಿಯ ಪಕ್ಕದಲ್ಲಿರುವ ಈ ಕಿಂಡಿಯು ಈ ಕಥೆಯ ಹೆಗ್ಗುರುತಾಗಿ ಈಗಲೂ ಉಳಿದುಕೊಂಡಿದೆ. ತಣ್ಣೀರು ದೋಣಿಯು ಒಂದು ಸಣ್ಣ ನೀರಿನ ಮೂಲವಾಗಿದ್ದು ವರ್ಷಪೂರ್ತಿ ಇಲ್ಲಿನ ನೀರು ತಂಪಾಗಿರುತ್ತದೆ. ಹೈದರ್ ಅಲಿ ೧೭೯೯ರಲ್ಲಿ ಮತ್ತೊಮ್ಮೆ ಆಕ್ರಮಣ ನಡೆಸಿ, ಕೋಟೆಯನ್ನು ತನ್ನ ವಶ ಮಾಡಿಕೊಳ್ಳುತ್ತಾನೆ. ಈ ಸ್ಥಳವು ತನ್ನ ಸುತ್ತಲಿನ ''ಕಲ್ಲಿನ ಕೋಟೆ''ಗೆ ಪ್ರಸಿದ್ಧವಾಗಿದೆ.("ಕಲ್ಲಿನ ಕೋಟೆ ಇರುವ ಸ್ಥಳ") ಹಾಗು ಇದು ''ಏಳು ಸುತ್ತಿನ ಕೋಟೆ'' ಇರುವ ಸ್ಥಳವಾಗಿದೆ, ಇದು ದೊಡ್ಡ ದೊಡ್ಡ ಬಂಡೆಗಳಿಂದ ನಿರ್ಮಿತವಾಗಿದೆ.
 
==ಚಿತ್ರದುರ್ಗದ ಪಾಳೆಗಾರ ಕುಟುಂಬದ ಇತಿಹಾಸ ==
 
ಚಿತ್ರದುರ್ಗದ ಪಾಳೆಗಾರ ಕುಟುಂಬದವರು ''ಬೇಡ'' ಅಥವಾ ''ಬೋಯರ್'' ಸಮುದಾಯದ ಜಾತಿಗೆ ಸೇರಿದವರಾಗಿದ್ದರು. ಬೆಟ್ಟದ ಮೇಲೆ ವಾಸಿಸುತ್ತಿದ್ದ ಬುಡಕಟ್ಟು ಜನಾಂಗದವರಾಗಿದ್ದ ಇವರು ಬೇಟೆ ಹಾಗು ದನ ಕಾಯುವ ಮೂಲಕ ಜೀವನ ಸಾಗಿಸುತ್ತಿದ್ದರು. ಇವರ ಮೂಲದ ಬಗೆಗಿರುವ ವಿವರಣೆಯು ಅಸ್ಪಷ್ಟವಾಗಿದೆ. ಒಂದು ಸಾಂಪ್ರದಾಯಿಕ ನಂಬಿಕೆಯ ಪ್ರಕಾರ, ಮೂರು ಬೇಡ ಸಮುದಾಯದ ಕುಟುಂಬಗಳು, ತಿರುಪತಿಯ ಜಡಿಕಲ್-ದುರ್ಗದಿಂದ ವಲಸೆ ಬಂದು ಭರಮಸಾಗರದ ಸಮೀಪದ ನಿರುತಡಿಯಲ್ಲಿ ಸುಮಾರು ೧೪೭೫ರಲ್ಲಿ ನೆಲೆಗೊಳ್ಳುತ್ತವೆ. ಇವರನ್ನು ಕಮಗೆಟಿ ಕುಟುಂಬ ಹಾಗು ವಾಲ್ಮೀಕಿ ''ಗೋತ್ರ'' ಕ್ಕೆ ಸೇರಿದವರೆಂದು ಹೇಳಲಾಗುತ್ತದೆ. ಇವರಲ್ಲಿ ಮಗ ಹಾಗು ಮೊಮ್ಮಗ, ಹಿರೇ ಹನುಮಪ್ಪ ನಾಯಕ ಹಾಗು ತಿಮ್ಮಣ್ಣ ನಾಯಕ, ದಾವಣಗೆರೆ ''ತಾಲ್ಲೂಕಿನ'' ಮಟ್ಟಿಯಲ್ಲಿ ನೆಲೆಯಾಗುತ್ತಾರೆ. ಇವರಲ್ಲಿ ಕಮಗೆಟಿ ತಿಮ್ಮಣ್ಣ ನಾಯಕನೆಂದು ಕರೆಯಲ್ಪಡುವ ಎರಡನೇಯವನನ್ನು ವಿಜಯನಗರದ ರಾಜನು ಮೊದಲು ಹೊಳಲ್ಕೆರೆಗೆ, ನಂತರ ಹಿರಿಯೂರಿಗೆ, ಹಾಗು ಅಂತಿಮವಾಗಿ ಚಿತ್ರದುರ್ಗದ ನಾಯಕನನ್ನಾಗಿ ನೇಮಿಸಿಕೊಳ್ಳುತ್ತಾನೆ. ಈತ ಚಿತ್ರದುರ್ಗದ ಬೆಟ್ಟವನ್ನು ಬಲಪಡಿಸಿ, ಅದನ್ನು ಯಾವ ರೀತಿ ನಿಭಾಯಿಸುತ್ತಾನೆಂದರೆ ಆತನ ವಿರುದ್ಧ ಸೆಣಸಲು ರಾಜನು ಸೈನ್ಯವನ್ನು ಕಳುಹಿಸುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಮತ್ತೊಂದು ನಂಬಿಕೆ ಪ್ರಕಾರ, ತಿಮ್ಮಣ್ಣ ನಾಯಕನು ತಿರುಪತಿ ಸಮೀಪದ'' ಬೆಟ್ಟಗಳ'' ಕೆಳಗಿನ ಮದಕೇರಿ ಎಂಬ ಸ್ಥಳದಿಂದ ಒಂದು ಸಣ್ಣ ಸೈನ್ಯದೊಂದಿಗೆ ಇಲ್ಲಿಗೆ ಬಂದು ಬಸವಾಪಟ್ಟಣದ ಪಾಳೆಯಗಾರರಿಂದ ನೇಮಕಗೊಳ್ಳುತ್ತಾನೆ. ನಂತರದಲ್ಲಿ, ಆತ ಮತ್ತಿಯಲ್ಲಿ ಹೊಂದಿದ್ದ ಉಪಪತ್ನಿಗೆ ಸಂಬಂಧಿಸಿದ ಕೆಲ ಕಲಹಗಳು ಉಂಟಾಗುತ್ತವೆ. ಇದರಿಂದ ಆತ ಆ ಸ್ಥಳವನ್ನು ತೊರೆದು ಮಾಯಕೊಂಡದಲ್ಲಿ ಆಶ್ರಯ ಪಡೆಯುತ್ತಾನೆ. ಅಲ್ಲಿಂದಲೂ ಸ್ಥಳಾಂತರಗೊಂಡು, ಗುಂಟೂರಿನ ಸಮೀಪದ ಕಾಡಿನಲ್ಲಿ ತಲೆಮರೆಸಿಕೊಳ್ಳುತ್ತಾನೆ. ಅದಲ್ಲದೇ ತನ್ನದೇ ಆದ ತಂಡ ಕಟ್ಟಿಕೊಂಡ ನಂತರ, ಆ ಪ್ರದೇಶವನ್ನು ಲೂಟಿ ಮಾಡಲು ಆರಂಭಿಸಿದ. ಅಲ್ಲದೇ ಹಳೆಯೂರು ಸಮೀಪ ರಂಗಾಪಟ್ನವೆಂಬ ಒಂದು ಸಣ್ಣ ಕೋಟೆಯನ್ನು ನಿರ್ಮಿಸಿದ. ಈತ ಮಾಡುತ್ತಿದ್ದ ಲೂಟಿಯಿಂದ ಕೋಪಗೊಂಡ ಹರಪನಹಳ್ಳಿ, ನಿಡುಗಲ್, ಹಾಗು ಬಸವಾಪಟ್ಟಣದ ಪಾಳೆಯಗಾರರು, ಅವನ ವಿರುದ್ಧ ಒಂದಾಗಿ, ವಿಜಯನಗರದ ಕೆಲವು ಸೈನಿಕರೊಂದಿಗೆ, ರಂಗಾಪಟ್ನದೆಡೆಗೆ ಕ್ರಮಣ ಮಾಡುತ್ತಾರೆ. ತಿಮ್ಮಣ್ಣ ನಾಯಕನ ಸೈನ್ಯವು ಬಲವಂತದಿಂದ ಚಿತ್ರದುರ್ಗಕ್ಕೆ ಹಿಂದಿರುಗಬೇಕಾಗುತ್ತದೆ, ಅಲ್ಲಿ ಈತನ ಮೇಲೆ ಆಕ್ರಮಣ ಮಾಡಲಾಗುತ್ತದೆ. ಈ ಘಟನೆ ನಡೆದ ಸಂದರ್ಭದಲ್ಲೇ, ವಿಜಯನಗರದ ಅರಸರನ್ನು ಅವಲಂಬಿಸಿದ ನಾಯಕರುಗಳಲ್ಲಿ ಒಬ್ಬ ಎಂದು ಆತನನ್ನು ಪರಿಗಣಿಸಲಾಯಿತು. ಈ ಎಲ್ಲಾ ಘಟನೆಗಳು ನಡೆದದ್ದು ಸುಮಾರು ೧೫೬೨ ರ ಅವಧಿಯಲ್ಲಿ.
 
===ತಿಮ್ಮಣ್ಣ ನಾಯಕ ===
ತಿಮ್ಮಣ್ಣ ನಾಯಕನು, ತನ್ನ ವಿರುದ್ಧ ಸೈನ್ಯವನ್ನು ಕಳುಹಿಸಿದ [[ವಿಜಯನಗರ|ವಿಜಯನಗರವಿಜಯನಗರದ]] ರಾಜಕುಮಾರ ಸಾಳುವ ನರಸಿಂಗ ರಾಯನ ಕುದುರೆಯನ್ನು ಅಪಹರಿಸುವ ಉದ್ದೇಶದಿಂದ ಕಗ್ಗತ್ತಲ ರಾತ್ರಿಯಲ್ಲಿ ಅವರ ಪಾಳೆಯಕ್ಕೆ ರಹಸ್ಯವಾಗಿ ನುಗ್ಗುವ ವಿಲಕ್ಷಣ ಸಾಹಸವೊಂದಕ್ಕೆ ಕೈ ಹಾಕುತ್ತಾನೆ. ರಾಜಕುಮಾರನು ಎಚ್ಚರಗೊಳ್ಳುತ್ತಾನೆ, ಹಾಗು ತಿಮ್ಮಣ್ಣ ಅವನ ಕಣ್ಣಿಗೆ ಬೀಳದಂತೆ ಒಣ ಹುಲ್ಲಿನಲ್ಲಿ ಅಡಗಿಕೊಳ್ಳುತ್ತಾನೆ. ರಾಜಕುಮಾರನು ನೆಲಕ್ಕೆ ಹಗ್ಗದ ಸಹಾಯದಿಂದ ಸಡಿಲುಗೊಂಡ ಕುದುರೆಯ ಗೂಟವನ್ನು ಮತ್ತೆ ಸರಿಮಾಡುತ್ತಾನೆ, ಹಾಗು ತಿಳಿಯದೆ ತಿಮ್ಮಣ್ಣನನ್ನೂ ಸೇರಿಸಿ ಅಲ್ಲಿ ಕಟ್ಟಿ ಹಾಕಿದಂತೆ ಬಂಧಿಸುತ್ತಾನೆ. ತಿಮ್ಮಣ್ಣ ನಿಶಬ್ದವಾಗಿ ಕೆಲಹೊತ್ತು ಹಾಗೇ ಅಡಗಿ ಕುಳಿತುಕೊಳ್ಳುತ್ತಾನೆ. ಅಲ್ಲದೇ ಮತ್ತೆ ಎಲ್ಲವೂ ಮತ್ತೆ ಮೊದಲಿನಂತಾದಾಗ, ಹಗ್ಗದ ಆಣಿಯಿಂದ ಬಂಧಿತನಾದ ಆತ ತನ್ನನ್ನು ತಾನು ಬಿಡುಗಡೆ ಮಾಡಿಕೊಂಡು ಕುದುರೆಯನ್ನು ಅಪಹರಿಸುತ್ತಾನೆ. ತಿಮ್ಮಣ್ಣನನ್ನು ಬೆದರಿಸಿ ಮುತ್ತಿಗೆ ಹಾಕಲು ಬಂದ ಸೈನ್ಯಕ್ಕೆ ಈ ಉದ್ದೇಶ ಸಫಲವಾಗುವುದಿಲ್ಲವೆಂಬುದು ಈ ಘಟನೆಯಿಂದ ತಿಳಿದುಬರುತ್ತದೆ. ಇದಾದ ನಂತರ, ಶಾಂತಿ ಸಂಧಾನದ ಮೂಲಕ ವ್ಯಾಜ್ಯ ಬಗೆಹರಿಸಲಾಗುತ್ತದೆ. ವಿಜಯನಗರದ ಅರಸನು ತಿಮ್ಮಣ್ಣನನ್ನು ರಾಜಧಾನಿಗೆ ಆಹ್ವಾನಿಸುತ್ತಾನೆ. ಅಲ್ಲದೇ ಆತನ ಸಾಹಸಕಾರ್ಯವನ್ನು ಮುಕ್ತಕಂಠದಿಂದ ಹೊಗಳುತ್ತಾನೆ. ರಾಜನ ಕೋರಿಕೆಯ ಮೇರೆಗೆ, ತಿಮ್ಮಣ್ಣ ನಾಯಕ ಗುಲ್ಬರ್ಗದ ಮೇಲೆ ಆಕ್ರಮಣ ನಡೆಸುತ್ತಾನೆ. ವಿಜಯನಗರ ಸೈನ್ಯವು ಗುಲ್ಬರ್ಗಕ್ಕೆ ಮುತ್ತಿಗೆ ಹಾಕಿದ ಆರು ತಿಂಗಳ ನಂತರವೂ ಅದನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಿರುವುದಿಲ್ಲ. ಇದರಿಂದ ಸಂತುಷ್ಟನಾದ ಅರಸನು, ತಿಮ್ಮಣ್ಣನ್ನು ಆಸ್ಥಾನಕ್ಕೆ ಆಹ್ವಾನಿಸುತ್ತಾನೆ. ನಂತರದಲ್ಲಿ ತಿಮ್ಮಣ್ಣ, ಅರಸನ ಅಸಮಾಧಾನಕ್ಕೆ ಗುರಿಯಾಗುತ್ತಾನೆ. ಅಲ್ಲದೇ ವಿಜಯನಗರದ ಸೆರೆಮನೆಯಲ್ಲಿ ಬಂಧಿಯಾಗಿ ಅಲ್ಲಿಯೇ ಮರಣಹೊಂದುತ್ತಾನೆ.
 
ತಿಮ್ಮಣ್ಣ ನಾಯಕನು, ತನ್ನ ವಿರುದ್ಧ ಸೈನ್ಯವನ್ನು ಕಳುಹಿಸಿದ [[ವಿಜಯನಗರ|ವಿಜಯನಗರ]]ದ ರಾಜಕುಮಾರ ಸಾಳುವ ನರಸಿಂಗ ರಾಯನ ಕುದುರೆಯನ್ನು ಅಪಹರಿಸುವ ಉದ್ದೇಶದಿಂದ ಕಗ್ಗತ್ತಲ ರಾತ್ರಿಯಲ್ಲಿ ಅವರ ಪಾಳೆಯಕ್ಕೆ ರಹಸ್ಯವಾಗಿ ನುಗ್ಗುವ ವಿಲಕ್ಷಣ ಸಾಹಸವೊಂದಕ್ಕೆ ಕೈ ಹಾಕುತ್ತಾನೆ. ರಾಜಕುಮಾರನು ಎಚ್ಚರಗೊಳ್ಳುತ್ತಾನೆ, ಹಾಗು ತಿಮ್ಮಣ್ಣ ಅವನ ಕಣ್ಣಿಗೆ ಬೀಳದಂತೆ ಒಣ ಹುಲ್ಲಿನಲ್ಲಿ ಅಡಗಿಕೊಳ್ಳುತ್ತಾನೆ. ರಾಜಕುಮಾರನು ನೆಲಕ್ಕೆ ಹಗ್ಗದ ಸಹಾಯದಿಂದ ಸಡಿಲುಗೊಂಡ ಕುದುರೆಯ ಗೂಟವನ್ನು ಮತ್ತೆ ಸರಿಮಾಡುತ್ತಾನೆ, ಹಾಗು ತಿಳಿಯದೆ ತಿಮ್ಮಣ್ಣನನ್ನೂ ಸೇರಿಸಿ ಅಲ್ಲಿ ಕಟ್ಟಿ ಹಾಕಿದಂತೆ ಬಂಧಿಸುತ್ತಾನೆ. ತಿಮ್ಮಣ್ಣ ನಿಶಬ್ದವಾಗಿ ಕೆಲಹೊತ್ತು ಹಾಗೇ ಅಡಗಿ ಕುಳಿತುಕೊಳ್ಳುತ್ತಾನೆ. ಅಲ್ಲದೇ ಮತ್ತೆ ಎಲ್ಲವೂ ಮತ್ತೆ ಮೊದಲಿನಂತಾದಾಗ, ಹಗ್ಗದ ಆಣಿಯಿಂದ ಬಂಧಿತನಾದ ಆತ ತನ್ನನ್ನು ತಾನು ಬಿಡುಗಡೆ ಮಾಡಿಕೊಂಡು ಕುದುರೆಯನ್ನು ಅಪಹರಿಸುತ್ತಾನೆ. ತಿಮ್ಮಣ್ಣನನ್ನು ಬೆದರಿಸಿ ಮುತ್ತಿಗೆ ಹಾಕಲು ಬಂದ ಸೈನ್ಯಕ್ಕೆ ಈ ಉದ್ದೇಶ ಸಫಲವಾಗುವುದಿಲ್ಲವೆಂಬುದು ಈ ಘಟನೆಯಿಂದ ತಿಳಿದುಬರುತ್ತದೆ. ಇದಾದ ನಂತರ, ಶಾಂತಿ ಸಂಧಾನದ ಮೂಲಕ ವ್ಯಾಜ್ಯ ಬಗೆಹರಿಸಲಾಗುತ್ತದೆ. ವಿಜಯನಗರದ ಅರಸನು ತಿಮ್ಮಣ್ಣನನ್ನು ರಾಜಧಾನಿಗೆ ಆಹ್ವಾನಿಸುತ್ತಾನೆ. ಅಲ್ಲದೇ ಆತನ ಸಾಹಸಕಾರ್ಯವನ್ನು ಮುಕ್ತಕಂಠದಿಂದ ಹೊಗಳುತ್ತಾನೆ. ರಾಜನ ಕೋರಿಕೆಯ ಮೇರೆಗೆ, ತಿಮ್ಮಣ್ಣ ನಾಯಕ ಗುಲ್ಬರ್ಗದ ಮೇಲೆ ಆಕ್ರಮಣ ನಡೆಸುತ್ತಾನೆ. ವಿಜಯನಗರ ಸೈನ್ಯವು ಗುಲ್ಬರ್ಗಕ್ಕೆ ಮುತ್ತಿಗೆ ಹಾಕಿದ ಆರು ತಿಂಗಳ ನಂತರವೂ ಅದನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಿರುವುದಿಲ್ಲ. ಇದರಿಂದ ಸಂತುಷ್ಟನಾದ ಅರಸನು, ತಿಮ್ಮಣ್ಣನ್ನು ಆಸ್ಥಾನಕ್ಕೆ ಆಹ್ವಾನಿಸುತ್ತಾನೆ. ನಂತರದಲ್ಲಿ ತಿಮ್ಮಣ್ಣ, ಅರಸನ ಅಸಮಾಧಾನಕ್ಕೆ ಗುರಿಯಾಗುತ್ತಾನೆ. ಅಲ್ಲದೇ ವಿಜಯನಗರದ ಸೆರೆಮನೆಯಲ್ಲಿ ಬಂಧಿಯಾಗಿ ಅಲ್ಲಿಯೇ ಮರಣಹೊಂದುತ್ತಾನೆ.
 
ತಿಮ್ಮಣ್ಣ ನಾಯಕನ ನಂತರ ಆತನ ಪುತ್ರ ಓಬಣ್ಣಾ ನಾಯಕ ಪಾಳೆಯಗಾರನಾಗುತ್ತಾನೆ. ಈತ ತನ್ನ ಹೆಸರನ್ನು ಮದಕರಿ ನಾಯಕನೆಂದು ಬದಲಿಸಿಕೊಂಡು ಪಟ್ಟಕ್ಕೆ ಬಂದ ಕೆಲವೇ ವರ್ಷಗಳಲ್ಲಿ, ವಿಜಯನಗರ ಸಾಮ್ರಾಜ್ಯದಿಂದ ಸ್ವಾತಂತ್ರ್ಯವನ್ನು ಘೋಷಿಸಿಕೊಳ್ಳುತ್ತಾನೆ.
Line ೨೫ ⟶ ೨೩:
 
===ಚಿಕ್ಕಣ್ಣ ನಾಯಕ ===
 
ಮದಕರಿ ನಾಯಕನಿಗೆ ಮಕ್ಕಳಿಲ್ಲದ ಕಾರಣ, ಆತನ ದತ್ತುಪುತ್ರ ಓಬಣ್ಣಾ ನಾಯಕ, ಚಿತ್ರದುರ್ಗದ ಸಿಂಹಾಸನವನ್ನು ಏರುತ್ತಾನೆ. ಓಬಣ್ಣಾ ನಾಯಕ ದಳವಾಯಿಗಳಿಂದ ಹತನಾಗುತ್ತಾನೆ. ಬಹುಶಃ ಅವರಿಗೆ ಕಪ್ಪ ಕಾಣಿಕೆಗಳನ್ನು ಸಲ್ಲಿಸದಿರುವುದು ಇದಕ್ಕೆ ಮುಖ್ಯ ಕಾರಣವಿರಬಹುದು. ಚಿಕ್ಕಣ್ಣ ನಾಯಕ, ಮದಕರಿ ನಾಯಕನ ಕಿರಿಯ ಸಹೋದರ ೧೬೭೬ರಲ್ಲಿ ಸಿಂಹಾಸನಾರೂಢನಾಗುತ್ತಾನೆ. ಈ ಸಮಯದಲ್ಲಿ, ಹರಪನಹಳ್ಳಿಯ ನಾಯಕ ಅಣಜಿಗೆ ಮುತ್ತಿಗೆ ಹಾಕಿ ಸ್ಥಳೀಯ ಅಧಿಕಾರಿ ಭುನಪ್ಪನನ್ನು ಹತ್ಯೆ ಮಾಡುತ್ತಾನೆ. ಚಿಕ್ಕಣ್ಣ ನಾಯಕ ಅಣಜಿಗೆ ಹೋಗಿ, ಶತ್ರುಗಳು ಮುತ್ತಿಗೆ ಹಾಕುವುದನ್ನು ತಡೆಯುತ್ತಾನೆ. ಇದಾದ ಸ್ವಲ್ಪ ಸಮಯದಲ್ಲೇ, ಇವನು ಹರಿಹರಕ್ಕೆ ಹೋಗಿ ಅದು ಮುಸಲ್ಮಾನರಿಂದ ಆಕ್ರಮಿತವಾಗುವುದನ್ನು ತಪ್ಪಿಸಬೇಕಾಗುತ್ತದೆ. ಮುಸಲ್ಮಾನರು ಈ ಸ್ಥಳವನ್ನು ಶಂಷೇರ್ ಖಾನ್ ನ ಆಣತಿಯ ಮೇರೆಗೆ ಆಕ್ರಮಣ ಮಾಡಿರುತ್ತಾರೆ. ಆಗಿನ ದಾಳಿಯಿಂದ ರಕ್ಷಣೆಯು, ಈ ಕೆಳಕಂಡ ಯುದ್ಧತಂತ್ರದ ಮೂಲಕ ನಡೆಯುತ್ತಿರುತ್ತಿತ್ತು: ರಾತ್ರಿಯಾಗುತ್ತಿದ್ದಂತೆ ಹಲವಾರು ಲಾಂದ್ರಗಳನ್ನು ಹಚ್ಚಿ,ಮರದ ಕೊಂಬೆಗಳಿಗೆ ನೇತುಹಾಕಲಾಗುತ್ತಿತ್ತು. ಅಲ್ಲದೇ ಬರೆಗುಡ್ಡ ಬೆಟ್ಟದ ಮೇಲೆ ಬೀಡುಬಿಟ್ಟಿದ್ದ ಚಿಕ್ಕಣ್ಣನ ಸೈನ್ಯಕ್ಕಾಗಿ ಸಂಗೀತಗಾರರು ಎಂದಿನಂತೆ ತಮ್ಮ ವಾದ್ಯಗಳನ್ನು ನುಡಿಸುವಂತೆ ಹೇಳಲಾಗುತ್ತಿತ್ತು. ಶತ್ರುಗಳಿಗೆ ಸೈನ್ಯವು ಅಲ್ಲಿಂದ ಕಾಲ್ತೆಗೆದಿಲ್ಲವೆಂಬುದನ್ನು ತಿಳಿಯಪಡಿಸುವುದೇ ಈ ತಂತ್ರದ ಉದ್ದೇಶವಾಗಿತ್ತು. ನಾಯಕನು ತನ್ನ ಸಂಪೂರ್ಣ ಸೈನ್ಯವನ್ನು ಬಳಸು ಮಾರ್ಗಗಳ ಮೂಲಕ ಮುನ್ನಡೆಸಿ, ಕೋಟೆಯನ್ನು ಪಶ್ಚಿಮ ದಿಕ್ಕಿನಿಂದ ಆಕ್ರಮಿಸಿ, ಶತ್ರುಗಳನ್ನು ಹಿಮ್ಮೆಟ್ಟಿಸುತ್ತಾನೆ. ಚಿಕ್ಕಣ್ಣ, ರಾಯದುರ್ಗ ಹಾಗು ಬಸವಾಪಟ್ಟಣದ ನಾಯಕರುಗಳೊಂದಿಗೆ ವಿವಾಹದ ಮೂಲಕ ನೆಂಟಸ್ತಿಕೆ ಬೆಳಸಿಕೊಳ್ಳುತ್ತಾನೆ. ಚಿತ್ರದುರ್ಗದ ಕುಟುಂಬವು ಈ ನಾಯಕನ ಆಳ್ವಿಕೆಯಲ್ಲಿ ಎರಡು ಬಾರಿ ತಮ್ಮ ಧರ್ಮವನ್ನು ಬದಲಾವಣೆ ಮಾಡಿಕೊಂಡಿತೆಂದು ಹೇಳಲಾಗುತ್ತದೆ. ಮೊದಲಿಗೆ, ಸಂಪೂರ್ಣವಾಗಿ ಕುಟುಂಬವು ವೀರಶೈವ ಧರ್ಮವನ್ನು ಸ್ವೀಕರಿಸುತ್ತದೆ. ಅಲ್ಲದೇ ನಾಯಕರು ಕೋಟೆಯಲ್ಲಿ ಒಂದು ''ಮಠ'' ವನ್ನು ಸ್ಥಾಪಿಸುವ ಉದ್ದೇಶದ ಜೊತೆಗೆ ಉಗ್ರಚನ್ನವೀರದೇವ ಎಂಬ ವಿರಕ್ತ ಜಂಗಮರು ತಮ್ಮೆಲ್ಲರಿಗೂ ಗುರುವಾಗಬೇಕೆಂದೂ ಈ ಕುಟುಂಬ ಇಚ್ಛಿಸುತ್ತಿತ್ತೂ, ಎಂದು ಹೇಳಲಾಗುತ್ತದೆ. ನಂತರ, ಬಹುತೇಕ ಎಲ್ಲರೂ ತಮ್ಮ ಮೂಲ ಧರ್ಮಕ್ಕೇ ಹಿಂದಿರುಗಿದರೆಂದು ಹೇಳಲಾಗುತ್ತದೆ. ಈ ನಡುವೆ ಚಿಕ್ಕಣ್ಣ ನಾಯಕ ೧೬೮೬ರಲ್ಲಿ ವಿಧಿವಶನಾಗುತ್ತಾನೆ.
 
Line ೩೨ ⟶ ೨೯:
 
===ಭರಮಪ್ಪ ನಾಯಕ ===
 
ದಳವಾಯಿ ಭರಮಪ್ಪ ರಾಜ್ಯದ ಒಗ್ಗೂಡಿಕೆಯಲ್ಲಿನ ಸಮಗ್ರತೆಯಲ್ಲಿ ತನ್ನ ಆಸಕ್ತಿ ತೋರುತ್ತಾನೆ. ಸಿಂಹಾಸನಕ್ಕೆ ನೇರವಾದ ಉತ್ತಾರಾಧಿಕಾರಿ ಇರದ ಕಾರಣ, ಆತನು ಸಂಸ್ಥಾನದ ಇತರ ಹಿರಿಯರೊಂದಿಗೆ ಸಮಾಲೋಚಿಸಿ, ದೂರದ ಸಂಬಂಧಿ ಭರಮಪ್ಪ ನಾಯಕನನ್ನು ತನ್ನ ಉತ್ತರಾಧಿಕಾರಿಯನ್ನಾಗಿ ನೇಮಿಸಿಕೊಳ್ಳುತ್ತಾನೆ.
ಈ ಹೊಸ ನಾಯಕನು ಸುಮಾರು ೧೬೮೯ರಲ್ಲಿ ಸಿಂಹಾಸನವನ್ನು ಏರುತ್ತಾನೆ. ಈ ಅವಧಿಯಲ್ಲಿ ರಾಜ್ಯವು ಸಾಕಷ್ಟು ಕಷ್ಟ-ಕೋಟಲೆ,ಸಮಸ್ಯೆಗಳನ್ನು ಎದುರಿಸಿತ್ತು. ಈ ಅವಧಿಯಲ್ಲಿ [[ಮೊಘಲ್ ಸಾಮ್ರಾಜ್ಯ|ಮುಘಲರು]] ಬಿಜಾಪುರದ ಸಂಪತ್ತನ್ನು ಅತಿಕ್ರಮಿಸಿ ಕೈವಶ ಮಾಡಿ, ಸಿರಾದಲ್ಲಿ ತಮ್ಮ ಆಳ್ವಿಕೆಯನ್ನು ಸ್ಥಾಪಿಸುತ್ತಾರೆ. ಇದಕ್ಕೆ ಬಸವಾಪಟ್ಟಣ ಹಾಗು ಬೂದಿಹಾಳಗಳನ್ನು ತಮ್ಮ ''ಪರಗಣಗಳನ್ನಾಗಿ'' ಮಾಡಿಕೊಂಡರಲ್ಲದೇ ಜೊತೆಗೆ ಚಿತ್ರದುರ್ಗ ಹಾಗು ಪಾಳೆಯಗಾರರ ಇತರ ನೆರೆಯ ರಾಜ್ಯಗಳನ್ನು ಅದರ ಅಧೀನರಾಜ್ಯಗಳನ್ನಾಗಿ ಮಾಡಿಕೊಂಡರು. ಈ ನಾಯಕನ ಆಳ್ವಿಕೆಯಲ್ಲಿ ಹಲವಾರು ಕದನಗಳು ಈ ಎರಡರ ಮಧ್ಯೆ ಅಂದರೆ ಚಿತ್ರದುರ್ಗ ಹಾಗು ಹರಪನಹಳ್ಳಿ ನಡುವೆ, ಅಲ್ಲದೇ ರಾಯದುರ್ಗ ಹಾಗು ಬಿಜಾಪುರಗಳ ನಡುವೆ ನಡೆಯುತ್ತವೆ. ನಾಯಕನು ಈ ಎಲ್ಲ ಕದನಗಳಲ್ಲಿ ಯಶಸ್ವಿಯಾಗಿ ಜಯಶಾಲಿಯಾಗುತ್ತಾನೆ. ಆತನ ೩೩ ವರ್ಷಗಳ(೧೬೮೯–೧೭೨೧) ಸುದೀರ್ಘ ಆಳ್ವಿಕೆಯಲ್ಲಿ ತನ್ನ ದಾನಧರ್ಮಗಳಿಂದಲೂ ಸಮಾನವಾಗಿ ಜನೋಪಕಾರಿಯಾಗಿ, ಭರಮಪ್ಪ ನಾಯಕ ಗಮನ ಸೆಳೆದಿದ್ದಾನೆ. ಈತ ತನ್ನ ಪ್ರಾದೇಶಿಕ ಆಡಳಿತದಲ್ಲಿ ತನ್ನ ರಾಜ್ಯದುದ್ದಕ್ಕೂ ಸುಮಾರು ೩೦ ದೇವಾಲಯಗಳು, ಮೂರು ಅಥವಾ ನಾಲ್ಕು ಅರಮನೆಗಳು, ಐದು ಪ್ರಬಲವಾದ ಕೋಟೆಗಳು, ಕಡಿಮೆಯೆಂದರೆ ೨೦ ಕೆರೆಗಳನ್ನು ನಿರ್ಮಿಸಿದ್ದನೆಂದು ಹೇಳಲಾಗುತ್ತದೆ. ಚಿತ್ರದುರ್ಗ ಕೋಟೆಯ ಒಂದು ಭಾಗ ಹಾಗು ಹಲವಾರು ಗೋಪುರ ಮಹಾದ್ವಾರಗಳು ಹಾಗು ಕಾಯುವ ಬುರುಜು ಕೋಟೆಗಳ ನಿರ್ಮಾಣಕ್ಕೂ ಸಹ ಈತ ಕಾರಣನಾಗಿದ್ದಾನೆ. ಈತನ ಆಳ್ವಿಕೆಯಲ್ಲಿ ಜನರು ಅನುಭವಿಸಿದ ಏಕೈಕ ತೊಂದರೆಯೆಂದರೆ ೧೭೦೩ರಲ್ಲಿ ಕಾಡಿದ ಪ್ಲೇಗು ಮಹಾಮಾರಿ; ಇದಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಬಲಿಯಾಗುವುದರ ಜೊತೆಗೆ ಬಹುತೇಕ ಸಂಪೂರ್ಣವಾಗಿ ಕೆಲವು ದಿನಗಳ ಕಾಲ ರಾಜಧಾನಿಯೇ ಬರಿದಾಗಿತ್ತು.
"https://kn.wikipedia.org/wiki/ಮದಕರಿ_ನಾಯಕ" ಇಂದ ಪಡೆಯಲ್ಪಟ್ಟಿದೆ