ಪಳೆಯುಳಿಕೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.6.2) (robot Adding: io:Fosilo
No edit summary
೩ ನೇ ಸಾಲು:
 
[[ಚಿತ್ರ:Amonite Cropped.jpg|thumb|200px|ಮೂರು ಸಣ್ಣ ಸಾಲಿಗ್ರಾಮ ಪಳೆಯುಳಿಕೆಗಳು; ಪ್ರತಿಯೊಂದೂ ಸರಿಸುಮಾರಾಗಿ 1.5 ಸೆಂ.ಮೀ.ಯಷ್ಟು ಅಗಲವಾಗಿವೆ.]]
[[ಚಿತ್ರ:Priscacara- liops Green River Formation.jpg|right|thumb|200px|ಅಟಾಹ್‌ನ ಗ್ರೀನ್‌ ರಿವರ್‌ ಸ್ತರಕ್ಕೆ ಸೇರಿದ ಪ್ರಿಸ್ಕಾಕ್ಯಾರಾ ಲಿಯೋಪ್ಸ್‌ ಎಂಬ ಈಯಸೀನ್‌‌ ಕಾಲದ ಪಳೆಯುಳಿಕೆ ಮೀನು]]
[[ಚಿತ್ರ:Petrified forest log 2 md.jpg|thumb|right|200px|ಶಿಲಾರೂಪದ ಮರಅಂತರ್‌‌ಖನಿಜ ನಿಕ್ಷೇಪಣ ಪ್ರಕ್ರಿಯೆಯಲ್ಲಿ ಮರ ಮತ್ತು ತೊಗಟೆಯ ಆಂತರಿಕ ರಚನೆಯನ್ನು ಕಾಯ್ದುಕೊಂಡುಹೋಗಲಾಗುತ್ತದೆ.]]
'''ಪಳೆಯುಳಿಕೆಗಳು''' ('ಫಾಸಿಲ್ಸ್‌‌' ಎಂಬ ಪದವು [[ಲ್ಯಾಟಿನ್|ಲ್ಯಾಟಿನ್‌‌]] ಭಾಷೆಯ ''ಫಾಸಸ್‌'' ಎಂಬ ಪದದಿಂದ ಬಂದಿದ್ದು, ಅಕ್ಷರಶಃ ಇದು "ಅಗೆಯುವಿಕೆಗೆ ಒಳಗಾಗಿರುವ" ಎಂಬ ಅರ್ಥವನ್ನು ನೀಡುತ್ತದೆ) ಪ್ರಾಚೀನ ಕಾಲಕ್ಕೆ ಅಥವಾ ತೀರಾ ಹಿಂದಿನ ಕಾಲಕ್ಕೆ ಸೇರಿರುವ ಪ್ರಾಣಿಗಳು, ಸಸ್ಯಗಳು, ಮತ್ತು ಇತರ ಜೀವಿಗಳ ಸಂರಕ್ಷಿಸಲ್ಪಟ್ಟ ಅವಶೇಷಗಳು ಅಥವಾ ಕುರುಹುಗಳು ಆಗಿವೆ. ಆವಿಷ್ಕರಿಸಲ್ಪಟ್ಟ ಮತ್ತು ಆವಿಷ್ಕರಿಸಲ್ಪಡದ ಎರಡೂ ಪ್ರಕಾರಗಳಿಗೆ ಸೇರಿದ ಪಳೆಯುಳಿಕೆಗಳ ಪೂರ್ಣತೆ, ಮತ್ತು '''ಜೀವ್ಯವಶೇಷಗಳುಳ್ಳ''' (ಪಳೆಯುಳಿಕೆಯನ್ನು-ಒಳಗೊಂಡಿರುವ) [[ಕಲ್ಲು|ಬಂಡೆ]]ಯ ಸ್ತರಗಳು ಮತ್ತು ಸಂಚಿತ ಪದರಗಳಲ್ಲಿನ (ಸ್ತರಶ್ರೇಣಿಗಳು) ಅವುಗಳ ಇರಿಸುವಿಕೆಯು ''ಪಳೆಯುಳಿಕೆಯ ದಾಖಲೆ'' ಎಂದು ಕರೆಸಿಕೊಳ್ಳುತ್ತದೆ. ಭೂವೈಜ್ಞಾನಿಕ ಕಾಲದ ಉದ್ದಗಲಕ್ಕೂ ಇದ್ದ ಪಳೆಯುಳಿಕೆಗಳ ಅಧ್ಯಯನ, ಅವು ಹೇಗೆ ರೂಪುಗೊಂಡವು, ಮತ್ತು ವರ್ಗಗಳ (ಜೀವಿವಿಕಾಸದ) ನಡುವಿನ ವಿಕಸನೀಯ ಸಂಬಂಧಗಳ ಸ್ವರೂಪವೆಂಥದು ಇವೇ ಮೊದಲಾದ ವಿಷಯಗಳು, ಪ್ರಾಗ್ಜೀವಶಾಸ್ತ್ರ ವಿಜ್ಞಾನದ ಕೆಲವೊಂದು ಅತ್ಯಂತ ಪ್ರಮುಖ ಕಾರ್ಯಚಟುವಟಿಕೆಗಳಾಗಿವೆ.
೨೮ ನೇ ಸಾಲು:
 
== ಅತ್ಯಂತ ಹಿಂದಿನ ಜೀವ್ಯವಶೇಷಗಳುಳ್ಳ ತಾಣಗಳು ==
[[ಚಿತ್ರ:Proterozoic Stromatolites Cochabamba.jpg|thumb|right|200px|ಬೊಲಿವಿಯಾ, ದಕ್ಷಿಣ ಅಮೆರಿಕಾಗಳಿಗೆ ಸೇರಿದ ಕೆಳಗಿನ ವರ್ಗದ ಜೀವ ಪ್ರಾರಂಭಿಕ ಸ್ಟ್ರೊಮ್ಯಾಟೊಲೈಟ್‌‌ಗಳು]]
ಸ್ಟ್ರೊಮ್ಯಾಟೊಲೈಟ್‌‌ಗಳು ಭೂಮಿಯ ಅತ್ಯಂತ ಹಳೆಯ ಪಳೆಯುಳಿಕೆಗಳಾಗಿದ್ದು, ಸಂಚಯ ಮತ್ತು ಇತರ ಅವಕ್ಷೇಪಕಗಳು ಪದರದ ಮೇಲೆ ಪದರದಂತೆ ಜೋಡಿಸಲ್ಪಟ್ಟಿದ್ದರಿಂದ ರೂಪುಗೊಂಡಿರುವ ಬಂಡೆಯನ್ನು ಇವು ಒಳಗೊಂಡಿರುತ್ತವೆ.<ref>{{cite web| url=http://www.fossilmuseum.net/Tree_of_Life/Stromatolites.htm| title=Stromatolites, the Oldest Fossils| accessdate=2007-03-04}}</ref> ಈಗ-ಅಪರೂಪದ್ದಾಗಿರುವ (ಆದರೆ ಜೀವಂತವಾಗಿರುವ) ಸ್ಟ್ರೊಮ್ಯಾಟೊಲೈಟ್‌ಗಳ ಅಧ್ಯಯನಗಳನ್ನು (ನಿರ್ದಿಷ್ಟವಾಗಿ ಹೇಳುವುದಾದರೆ, ಕೆಲವೊಂದು ನೀಲಿ-ಹಸಿರು ಬ್ಯಾಕ್ಟೀರಿಯಾವನ್ನು) ಆಧರಿಸಿ ಹೇಳುವುದಾದರೆ, ಸಂಚಯಗಳನ್ನು ಸೆಳೆಯಬಲ್ಲ ತಮ್ಮ ಸಾಮರ್ಥ್ಯದ ಮೂಲಕ ಸೂಕ್ಷ್ಮಜೀವಿಗಳ ದಪ್ಪ ಪದರಗಳು ಸ್ಟ್ರೊಮ್ಯಾಟೋಲೈಟಿಕ್‌‌ ಪಳೆಯುಳಿಕೆಯ ರಚನೆಗಳ ಬೆಳವಣಿಗೆಗೆ ಜೀವಜನ್ಯವಾದ ರೀತಿಯಲ್ಲಿ ಮಧ್ಯಸ್ಥಿಕೆ ವಹಿಸಿರುವುದು ಕಂಡುಬರುತ್ತದೆ. ಆದಾಗ್ಯೂ, ಸ್ಟ್ರೊಮ್ಯಾಟೋಲೈಟಿಕ್‌‌ ಬೆಳವಣಿಗೆಗೆ ಸಂಬಂಧಿಸಿದಂತಿರುವ ಅಜೀವಕ ಕಾರ್ಯವಿಧಾನಗಳೂ ಸಹ ತಿಳಿದುಬಂದಿದ್ದು, ನಿರ್ದಿಷ್ಟ ಸ್ತರಗಳ ಜೈವಿಕ ಉತ್ಪತ್ತಿಗೆ ಸಂಬಂಧಿಸಿದಂತಿರುವ, ದಶಕಗಳಷ್ಟು ಸುದೀರ್ಘವಾದ ಮತ್ತು ಕೆಲವೊಮ್ಮೆ-ವಿವಾದಾಸ್ಪದವಾದ ವೈಜ್ಞಾನಿಕ ಚರ್ಚೆಗೆ ಅವು ಕಾರಣವಾಗಿವೆ; ಅದರಲ್ಲೂ ವಿಶೇಷವಾಗಿ ಕೆಳಗಿನ ಮಹಾಕಲ್ಪದಿಂದ ಮಧ್ಯದ ಆರ್ಕಿಯನ್‌ ಯುಗದ ಮಹಾಕಲ್ಪದವರೆಗಿನ ನಿರ್ದಿಷ್ಟ ಸ್ತರಗಳಿಗೆ ಇದು ಹೆಚ್ಚು ಅನ್ವಯಿಸುತ್ತದೆ.
 
"https://kn.wikipedia.org/wiki/ಪಳೆಯುಳಿಕೆ" ಇಂದ ಪಡೆಯಲ್ಪಟ್ಟಿದೆ