ಟಿ.ಪಟ್ಟಾಭಿರಾಮ ರೆಡ್ಡಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಮೊದಲ ಆವೃತ್ತಿ
 
ಆಂಧ್ರಪ್ರದೇಶ ಲಿಂಕ್
೩ ನೇ ಸಾಲು:
 
==ಜೀವನ==
ತಿಕ್ಕವಾರಪು ಪಟ್ಟಾಭಿರಾಮ ರೆಡ್ಡಿಯವರ ಜನ್ಮ ೧೯೧೯ರಲ್ಲಿ [[ಆ೦ಧ್ರಆಂಧ್ರ ಪ್ರದೇಶ|ಆಂಧ್ರ ಪ್ರದೇಶದ]] [[ನೆಲ್ಲೂರು|ನೆಲ್ಲೂರಿನಲ್ಲಾಯಿತು]]. [[ರವೀಂದ್ರನಾಥ ಟಾಗೋರ್|ರವೀಂದ್ರನಾಥ ಟಾಗೋರರಿಂದ]] ಪ್ರಭಾವಿತರಾದ ಪಟ್ಟಾಭಿರಾಮ ರೆಡ್ಡಿಯವರು ೨ ವರ್ಷಗಳ ಕಾಲ [[ಶಾಂತಿನಿಕೇತನ|ಶಾಂತಿನಿಕೇತನದಲ್ಲಿ]] ವ್ಯಾಸಾಂಗ ನೆಡಸಿದರು. ತದನಂತರ [[ಕಲ್ಕತ್ತಾ]] ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಮತ್ತು [[ಅಮೇರಿಕಾ|ಅಮೇರಿಕಾದ]] ಕೊಲಂಬಿಯ ವಿಶ್ವವಿದ್ಯಾಲಯದಲ್ಲಿ ಗಣಿತಶಾಸ್ತ್ರ ಅಧ್ಯಯನ ಮಾಡಿದರು. ೧೯೩೯ರಲ್ಲಿ ಶ್ರೀಯುತರು [[ತೆಲುಗು]] ಭಾಷೆಯಲ್ಲಿ ''ಫಿಡೇಲು ರಾಗಾಲು ಡಜನ್'' (ಪಿಟೀಲಿನ ಡಜನ್ ರಾಗಗಳು)ಎಂಬ ನವ ಶೈಲಿಯ ಕವನ ಸಂಕಲನ ರಚಿಸಿ ಪ್ರಸಿದ್ದಿಗೆ ಬಂದಿದ್ದರು. [[ಮದ್ರಾಸ್|ಮದ್ರಾಸಿನಲ್ಲಿ]] ತಮ್ಮ ಭಾವಿ ಪತ್ನಿ ಸ್ನೇಹಲತಾರನ್ನು ೧೯೪೭ರಲ್ಲಿ ಮೊದಲ ಭಾರಿ ಭೇಟಿಮಾಡಿದ ಪಟ್ಟಾಭಿರಾಮ ರೆಡ್ಡಿಯವರು, ೬ ತಿಂಗಳನಂತರ ತಮ್ಮ ತಂದೆಯ ಇಚ್ಛೆಗೆ ವಿರುದ್ಧವಾಗಿ ಅವರನ್ನು ಮದುವೆಯಾದರು. ನಂತರ [[ತೆಲುಗು]] ಚಿತ್ರರಂಗದಲ್ಲಿ ಕಾಲೂರಿದ ಪಟ್ಟಾಭಿರಾಮ ರೆಡ್ಡಿ ಕೆಲ ಚಿತ್ರಗಳನ್ನು ನಿರ್ಮಿಸಿದರು ಯಶಸ್ಸನ್ನು ಕಂಡರು. ತಮ್ಮ ಕೊನೆ ಚಿತ್ರ ನಷ್ಟ ಅನುಭವಿಸಿದ ನಂತರ ವ್ಯಾಪಾರಿ ಚಿತ್ರರಂಗ ತೊರೆದು [[ಬೆಂಗಳೂರು|ಬೆಂಗಳೂರಿನಲ್ಲಿ]] ನೆಲಸಿದ ಇವರು, ೧೯೭೦ರಲ್ಲಿ [[ಯು.ಆರ್. ಅನಂತಮೂರ್ತಿ|ಡಾ. ಯು ಆರ್ ಅನಂತಮೂರ್ತಿಯವರ]] ಪ್ರಸಿದ್ದ ಕಾದಂಬರಿ [[ಸಂಸ್ಕಾರ]] ಆಧರಿಸಿ ಅದೆ ಹೆಸರಿನಲ್ಲಿ ಚಿತ್ರ ನಿರ್ಮಿಸಿ ನಿರ್ದೇಶಿಸಿದರು. ಈ ಚಿತ್ರದಲ್ಲಿ [[ಗಿರೀಶ್ ಕಾರ್ನಾಡ್]], [[ಪಿ. ಲಂಕೇಶ್]] ಅಲ್ಲದೆ ಪಟ್ಟಾಭಿರಾಮ ರೆಡ್ಡಿಯವರ ಪತ್ನಿ ಸ್ನೇಹಲತಾ ರೆಡ್ಡಿ ಕೂಡ ನಟಿಸಿದರು. ೧೯೭೧ರಲ್ಲಿ ಸ್ವರ್ಣಕಮಲ ಪ್ರಶಸ್ತಿ ಗೆದ್ದ ಈ ಪ್ರಶಸ್ತಿ ಕನ್ನಡ ಹಾಗು ಭಾರತೀಯ ಚಿತ್ರರಂಗದಲ್ಲಿ ಒಂದು ಮೈಲಿಗಲ್ಲಾಯಿತು. ೧೯೭೨ರ ಲೊಕಾರ್ನೊ [[ಚಲನಚಿತ್ರೋತ್ಸವ|ಚಲನಚಿತ್ರೋತ್ಸವದಲ್ಲಿ]] ವಿಶೇಷ ಉಲ್ಲೇಖ ಪಡೆದ ಈ ಚಿತ್ರ ಹಲವಾರು ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶಿತವಾಯಿತು. ತುರ್ತು ಪರಿಸ್ಥಿತಿಯ ಕಾಲದಲ್ಲಿ ಪಟ್ಟಾಭಿರಾಮ ರೆಡ್ಡಿಯವರ ಪತ್ನಿ ಸ್ನೇಹಲತಾರನ್ನು [[ಜಾರ್ಜ್ ಫರ್ನಾಂಡಿಸ್ ]] ಬಗ್ಗೆ ಮಾಹಿತಿ ಪಡೆಯಲು ಬಂಧಿಸಿದರು. ಸ್ನೇಹಲತಾ ಸುಮಾರು ೮ ತಿಂಗಳ ಕಾಲ ಜೈಲುವಾಸ ಅನುಭವಿಸಿದ ನಂತರ ಬಿಡುಗಡೆಗೊಂಡರು ಆದರೆ [[ಆಸ್ತಮಾ|ಆಸ್ತಮಾದಿಂದ]] ಬಳಲುತ್ತಿದ್ದ ಸ್ನೇಹಲತಾ ಜೈಲಿನಲ್ಲಿ ಸರಿಯಾದ ಔಷಧೋಪಚಾರ ಸಿಗದೆ ಬಿಡುಗಡೆಯಾಗಿ ಕೆಲದಿನದ ನಂತರ ಸಾವನ್ನಪ್ಪಿದರು. ನಂತರ ಪಟ್ಟಾಭಿರಾಮ ರೆಡ್ಡಿ [[ಶೃಂಗಾರ ಮಾಸ]](೧೯೭೭), [[ಚಂಡಮಾರುತ]] (೧೯೮೪) ಮತ್ತು [[ದೇವರ ಕಾಡು]] (೧೯೯೩)ಎಂಬ ಚಿತ್ರಗಳನ್ನು ನಿರ್ಮಿಸಿದರು ಇವುಗಳಲ್ಲಿ [[ದೇವರ ಕಾಡು]] ಚಿತ್ರ ಪರಿಸರ ವಿಭಾಗದಲ್ಲಿ ರಾಷ್ಟ್ರೀಯ ಪ್ರಶಸ್ತಿ ಪಡೆಯಿತು. ೨೦೦೫ರಲ್ಲಿ [[ಕರ್ನಾಟಕ]] ಸರ್ಕಾರ ಪಟ್ಟಾಭಿರಾಮ ರೆಡ್ಡಿಯವರ ಜೀವಿತಾವಧಿ ಸೇವೆಗಾಗಿ ಪ್ರತಿಷ್ಠಿತ [[ಪುಟ್ಟಣ್ಣ ಕಣಗಾಲ್]] ಪ್ರಶಸ್ತಿ ನೀಡಿ ಗೌರವಿಸಿತು. ಮೇ ೬ ೨೦೦೬ರೊಂದು ಬೆಂಗಳೂರಿನಲ್ಲಿ ಶ್ರೀಯುತರು ತಮ್ಮ ಕೊನೆಯುಸಿರೆಳೆದರು. ಇವರ ಪುತ್ರ [[ಕೊನಾರ್ಕ್ ರೆಡ್ಡಿ]] ಪ್ರಸಿದ್ದ ಗಿಟಾರ್ ವಾದಕ.