ದಿ ಪ್ಯಾಕ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೩ ನೇ ಸಾಲು:
 
ಇದಕ್ಕೆ ಮೊದಲು ಭಾರತದ ನೆಲದಲ್ಲಿ ನಿರ್ಮಿಸಿದ ಯಾವ ಚಿತ್ರವೂ ಇಂತಹ ಸಾಧನೆಗೆ ಪಾತ್ರವಾಗಿಲ್ಲ. ಅಂದರೆ ಬಿಬಿಸಿ ಮತ್ತು ನ್ಯಾಷನಲ್ ಜಿಯೋಗ್ರಫಿಕ್ ಚಾನೆಲ್ ಭಾರತದಲ್ಲಿ ನಿರ್ಮಿಸಿದ ಹಲವಾರು ಚಿತ್ರಗಳು ಸಹ ಈ ವಿಭಾಗದಲ್ಲಿ ಪ್ರವೇಶ ಗಿಟ್ಟಿಸಲು ವಿಫಲವಾಗಿದ್ದವು. ಈ ಹಿನ್ನೆಲೆಯಲ್ಲಿ ‘ದಿ ಪ್ಯಾಕ್’ಗೆ ಹೊಸ ಇತಿಹಾಸ ಬರೆದ ಕೀರ್ತಿ ಸಲ್ಲುತ್ತದೆ.
 
ಭಾರತದಲ್ಲಿ ಇಂಥ ಚಿತ್ರಗಳನ್ನು ರೂಪಿಸುವುದು ಸುಲಭವಲ್ಲ. ಇಲ್ಲಿರುವ ಸವಾಲು ಕಾಡುಗಳ ರಚನೆಯದ್ದು. ಇಲ್ಲಿಯ ದಟ್ಟಕಾಡುಗಳಲ್ಲಿ ಪ್ರಾಣಿಗಳನ್ನು ಕಾಣುವುದೇ ಕಷ್ಟ. ಚಿತ್ರೀಕರಣ ಅಸಾಧ್ಯವೆನಿಸುವಷ್ಟು ಕಷ್ಟ. ಆದರೂ ವಿಶ್ವಮಟ್ಟದ ಸ್ಪರ್ಧೆಗಳಲ್ಲಿ ಆಫ್ರಿಕಾದ ಹುಲ್ಲುಗಾವಲು ಕಾಡಿನಲ್ಲಿ ನಿರ್ಮಿಸಿದ ಚಿತ್ರಗಳೊಂದಿಗೆ ಇವು ಸ್ಪರ್ಧಿಸಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಆಫ್ರಿಕಾದ ಕಾಡುಗಳ ವೈವಿಧ್ಯ ಹಾಗೂ ಮನುಷ್ಯರಿಗೆ ಒಗ್ಗಿದ ಪ್ರಾಣಿಗಳು ಅಲ್ಲಿ ಚಿತ್ರ ನಿರ್ಮಾಣವನ್ನು ಸರಳಗೊಳಿಸುತ್ತವೆ.
 
ಎರಡು ತಾಸುಗಳ ‘ದಿ ಪ್ಯಾಕ್’ ಚಿತ್ರ ನಿರ್ಮಿಸಲು ತೆಗೆದುಕೊಂಡ ಸಮಯ ಮೂರು ವರ್ಷ. ಇದಕ್ಕಾಗಿ ಕೃಪಾಕರ ಸೇನಾನಿ ಮತ್ತು ತಂಡ ನೀಲಗಿರಿ ತಪ್ಪಲಿನ ಕಾಡುಗಳಲ್ಲಿ ಹದಿನೈದು ವರ್ಷಗಳ ನಿರಂತರ ಸಂಶೋಧನೆ ಮಾಡಿದೆ. ಇದರ ಫಲವಾಗಿಯೇ ‘ದಿ ಪ್ಯಾಕ್’ 2008-2010ರ ಅವಧಿಯ ಶ್ರೇಷ್ಠ ಚಿತ್ರ ಎನ್ನುವ ಗೌರವಕ್ಕೆ ಪಾತ್ರವಾಯಿತು.
 
ಗುಂಪಿನಲ್ಲಿ ವಾಸಿಸುವ ಕಾಡುನಾಯಿಗಳದ್ದು ಅತ್ಯಂತ ಸಂಕೀರ್ಣ ಬದುಕು. ಅಧ್ಯಯನಕ್ಕಾಗಲೀ, ಚಿತ್ರೀಕರಣಕ್ಕಾಗಲೀ ಸುಲಭಕ್ಕೆ ಸಿಗದ ನಿಗೂಢ ಜೀವಿಗಳಿವು. ಸಂಕೋಚ ಪ್ರವೃತ್ತಿಯ ಇವು ಮಾನವನಿಂದ ಸದಾ ದೂರ. ಇದಕ್ಕೆ ಕಾರಣಗಳು ಇಲ್ಲವೆಂದಲ್ಲ. ಭಾರತವನ್ನು ಆಳಿದ ಬ್ರಿಟೀಷರು ಕಾಡುನಾಯಿಗಳ ಮಾರಣಹೋಮ ಮಾಡಿದರು. ತಾವು ಬೇಟೆಯಾಡುವ ಜಿಂಕೆಗಳ ಸಂತತಿಗೆ ಈ ನಾಯಿಗಳು ಮಾರಕವೆಂದು ತೀರ್ಮಾನಿಸಿದರು. ತಮಗೆ ಸಿಗಬೇಕಾದ ಜಿಂಕೆಯನ್ನೆಲ್ಲಾ ಇವು ತಿಂದು ಮುಗಿಸುತ್ತಿವೆಯೆಂದು ಭಾವಿಸಿ, ಕಂಡಲ್ಲಿ ಕೊಲ್ಲಲು ಆದೇಶಿಸಿದರು. ಆನಂತರ ಕಾಡುನಾಯಿಗಳ ಸಂತತಿ ನಿರ್ನಾಮ ಹಂತಕ್ಕೆ ಬಂದಿತು. ಇದು 1972ರವರೆಗೆ ಮುಂದುವರೆಯಿತು. ಈ ಆಘಾತದಿಂದ ತತ್ತರಿಸಿದ ಕಾಡುನಾಯಿಗಳು ಮನುಷ್ಯರನ್ನು ಕಂಡರೆ ಸಾಕು, ಹೆದರಿ ನಡುಗುತ್ತಿದ್ದವು. ಆ ನೆನಪು ಇನ್ನೂ ಅವುಗಳಲ್ಲಿ ಉಳಿದಿರುವುದರಿಂದ, ಅವುಗಳನ್ನು ಸುಲಭವಾಗಿ ಸಮೀಪಿಸಲು ಸಾಧ್ಯವಿಲ್ಲ.
 
ಅಂದು ಸೇನಾನಿ ಕೈಯಲ್ಲಿ ಪ್ರಶಸ್ತಿ ಹಿಡಿದು ಮಾತನಾಡಿದ್ದು ಹೀಗೆ-
 
‘ನಮ್ಮ ದೇಶದಲ್ಲಿ ಕಾಡುನಾಯಿಗಳಿಗೆ ಯಾವಾಗಲೂ ಕಡೆಯ ಸ್ಥಾನವೇ. ಜನಪದದಲ್ಲಿಯೇ ಇರಬಹುದು ಅಥವಾ ಕಿಪ್ಲಿಂಗ್ಸ್‌ನ ಜಂಗಲ್ ಬುಕ್‌ನಲ್ಲಿರಬಹುದು ಅಥವಾ ವಿಜ್ಞಾನಿಗಳಿರಬಹುದು... ಅವುಗಳಿಗೆ ಎಲ್ಲೂ ವೇದಿಕೆ ಸಿಕ್ಕಿಲ್ಲ. ಆದ್ಯತೆಯೇನಿದ್ದರೂ ಕಾಡುನಾಯಿಗಳ ಜೊತೆಗಾರರಾದ ಆಕರ್ಷಕ ಹುಲಿ, ಚಿರತೆಗಳಿಗಷ್ಟೇ ಸೀಮಿತ. ಈ ನನ್ನ ಕಾಡುನಾಯಿಗಳು ಈ ದೊಡ್ಡ ವೇದಿಕೆಯಲ್ಲಿ ರಾರಾಜಿಸುವುದು ನನ್ನ ಕನಸಾಗಿತ್ತು’.
"https://kn.wikipedia.org/wiki/ದಿ_ಪ್ಯಾಕ್" ಇಂದ ಪಡೆಯಲ್ಪಟ್ಟಿದೆ