ಬಲರಾಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: th:พระพลราม
ಚು r2.5.2) (robot Modifying: jv:Baladéwa; cosmetic changes
೧ ನೇ ಸಾಲು:
[[Imageಚಿತ್ರ:Balarama9.jpg|thumb|200px|Balarama, next to the river [[Yamuna]]. Copyright [[Bhaktivedanta Book Trust|BBTI]]]]
 
ಬಲದೇವ, ಬಲಭದ್ರ, ಮತ್ತು ಹಲಾಯುಧ ಎಂಬ ಹೆಸರುಗಳನ್ನು ಹೊತ್ತ '''ಬಲರಾಮ''' [[ಕೃಷ್ಣ]]ನ ಹಿರಿಯಣ್ಣ. [[ದಕ್ಷಿಣ ಭಾರತ]]ದ ಬಹುತೇಕ ವೈಷ್ಣವರ ಪ್ರಕಾರ ಬಲರಾಮನು [[ವಿಷ್ಣು]]ವಿನ ಒಂಬತ್ತನೇ ಅವತಾರ. ವಿಷ್ಣುವನ್ನು ಹೊಂದುವ ದೈವೀ ಸರ್ಪ[[ಆದಿಶೇಷ]]ನ ಅವತಾರವಾಗಿಯೂ ಪರಿಗಣಿಸಲಾಗುತ್ತದೆ. [[ಭಾಗವತ ಪುರಾಣ]]ದ ಪ್ರಕಾರ [[ಕೃಷ್ಣ]]ನೇ ವಿಶ್ವದ ಮೂಲ. ಈ ಪ್ರಕಾರ ಕೃಷ್ಣನ ಮೊದಲ ಅವತಾರವೇ ಬಲರಾಮ. ಬಲರಾಮನಿಂದ ಇತರ ಅವತಾರಗಳು ಹುಟ್ಟಿದವು.
 
== ಅಸ್ತಿತ್ವ ==
 
ಬಲರಾಮನ ಹುಟ್ಟು [[ವಸುದೇವ]] ಮತ್ತು [[ದೇವಕಿ]]ಯರ ಪುತ್ರನಾಗಿ. [[ದೇವಕಿ]]ಯ ಅಣ್ಣ ಮತ್ತು ದುಷ್ಟ ರಾಜನಾದ [[ಕಂಸ]]ನು ದೇವಕಿಯ ಎಲ್ಲ ಮಕ್ಕಳನ್ನು ಕೊಲ್ಲುವ ಹೊಂಚು ಹಾಕಿದ್ದನು. ಇದಕ್ಕೆ ಕಾರಣ ದೇವಕಿಯ ಎಂಟನೇ ಸಂತಾನ ಕಂಸನ ಹತ್ಯೆ ಮಾಡುವುದೆಂಬ ಅಶರೀರವಾಣಿ. ಈ ಕಾರಣದಿಂದ ಕಂಸನು ದೇವಕಿ ಮತ್ತು ವಸುದೇವನನ್ನು ಬಂಧನದಲ್ಲಿಟ್ಟು ಅವರ ಮಕ್ಕಳನ್ನು ಹುಟ್ಟಿದ ಕೂಡಲೇ ಕೊಲ್ಲುತ್ತ ಬಂದನು. ಕಾಲಾನಂತರ ದೇವಕಿ ಏಳನೇ ಸಲ ಗರ್ಭಿಣಿಯಾದಳು. ಆದರೆ ಗರ್ಭದಲ್ಲಿದ್ದ ಮಗು ಮಾಯೆಯಿಂದ/ಪವಾಡದಿಂದ ದೇವಕಿಯ ಗರ್ಭದಿಂದ [[ರೋಹಿಣಿ]]ಯ ಗರ್ಭಕ್ಕೆ ಹರಿಯಿತು. ಈ ಕಾರಣದಿಂದ ಬಲರಾಮನ ಇನ್ನೊಂದು ಹೆಸರು ''ಸಂಕರ್ಷಣ'' ಎಂದು. ಮಗುವಿನ ಹೆಸರು ರಾಮ ಎಂದಿದ್ದರೂ, ಅವನ ಅತೀವ ಶಕ್ತಿಯ ಕಾರಣ "ಬಲರಾಮ" ಎಂದು ಕರೆಯಲಾಯಿತು. ಹೀಗೆ [[ರೋಹಿಣಿ]] ಬಲರಾಮನಿಗೆ ಜನ್ಮ ಕೊಟ್ಟು ಪಾಲಿಸಿದಳು. ಬಲರಾಮನು ತನ್ನ ಬಾಲ್ಯವನ್ನು ಸಹೋದರ [[ಕೃಷ್ಣ]]ನ ಜೊತೆ ಹಸುಗಳನ್ನು ಕಾಯುವ ಗೋಪಾಲನಾಗಿ ಕಳೆದನು.
 
=== ಕೃಷ್ಣನ ಸಹೋದರ ===
[[Imageಚಿತ್ರ:Krishnabalarama.JPG|thumb|200px|[[Krishna]] and Balarama playing with [[sacred cow|cows]] -- copyright 2005 [[Bhaktivedanta Book Trust|BBTI]]]]
ವೈಷ್ಣವರು ನಂಬುವ ಪ್ರಕಾರ ಬಲರಾಮನು ದೇವರ ಅಪರಾವತಾರ. ಅವನನ್ನು ಕೃಷ್ಣನಷ್ಟೇ ಪೂಜಿಸಲಾಗುತ್ತದೆ. ಆದರೆ ಕೃಷ್ಣನು ಕಂಡು ಬಂದಾಗಲೆಲ್ಲ ಬಲರಾಮನು ಅವನ ಸಹೋದರನಾಗಿ ಕಂಡುಬರುತ್ತಾನೆ. ಬಲರಾಮನು ಕೃಷ್ಣನ ಎಲ್ಲ ಅವತಾರಗಳಲ್ಲಿಯೂ ಅವನ ಜೊತೆಗಿರುತ್ತಾನೆ. [[ರಾಮಾಯಣ]]ದಲ್ಲಿ [[ರಾಮ]]ನ ತಮ್ಮ [[ಲಕ್ಷ್ಮಣ]]ನಾಗಿ ಮತ್ತು [[ಕಲಿಯುಗ]]ದಲ್ಲಿ [[ಚೈತನ್ಯ]]ನ '[[ಸಂಕೀರ್ತನ]] ಚಳುವಳಿ'ಯನ್ನು [[ನಿತ್ಯಾನಂದ]]ನಾಗಿ ಸಾರುತ್ತಾನೆ. ಕೃಷ್ಣ ಮತ್ತು ಬಲರಾಮರ ಮಧ್ಯೆ ಒಂದೇ ವ್ಯತ್ಯಾಸವೆಂದರೆ ಮೈಬಣ್ಣ. ಕೃಷ್ಣನು ಕಪ್ಪಗಿದ್ದರೆ ಬಲರಾಮನು ಬೆಳ್ಳಗೆ.
 
== ಶಾರೀರಿಕ ಲಕ್ಷಣಗಳು ==
 
ಬಲರಾಮನನ್ನು ಯಾವಾಗಲೂ ಬಿಳಿ ಚರ್ಮ ಹೊಂದಿರುವುದಾಗಿ ತೋರಿಸಲಾಗುತ್ತದೆ. ಅವನ ಆಯುಧಗಳೆಂದರೆ ನೇಗಿಲು (ಹಲ) ಮತ್ತು ಗದೆ. ಸಾಂಪ್ರದಾಯಿಕವಾಗಿ ಬಲರಾಮನು ನೀಲಿ ಬಟ್ಟೆಗಳನ್ನು ಧರಿಸುತ್ತಾನೆ. ಕೂದಲನ್ನು ಗಂಟಿನಲ್ಲಿ ಕಟ್ಟಿ ಕಿವಿಗೆ ಒಡವೆ, ಕೈಗೆ ಕಂಕಣ ಮತ್ತು ತೋಳಬಂದಿ ಧರಿಸಿರುತ್ತಾನೆ. ಬಲರಾಮನನ್ನು ಅತಿ ಶಕ್ತಿಶಾಲಿ ಎಂದು ಚಿತ್ರಿಸಲಾಗುತ್ತದೆ.
 
== ಭಾಗವತ ಪುರಾಣದಲ್ಲಿ ==
ಒಂದು ದಿನ [[ನಂದ ಮಹಾರಾಜ|ವಸುದೇವ]]ನು ಗರ್ಗಮುನಿಯನ್ನು ಪುತ್ರರಾದ ಕೃಷ್ಣ ಮತ್ತು ಬಲರಾಮರಿಗೆ ಹೆಸರನ್ನಿಡುವ ಸಲುವಾಗಿ ಆಹ್ವಾನಿಸಿದನು. ಆಗ ಗರ್ಗಮುನಿಯು [[ಕಂಸ]]ನ ವಿಷಯ ತಿಳಿಸಿ, ಹೆಸರಿಡುವ ಸಮಾರಂಭವನ್ನು ವಿಜೃಂಭಣೆಯಿಂದ ನಡೆಸಿದರೆ ಕಂಸನಿಗೆ ಈ ವಿಷಯ ತಿಳಿದು ಕೃಷ್ಣನ ವಿಷಯವಾಗಿ ಸಂಶಯಗೊಳ್ಳುವನೆಂದು ಹೇಳಿದಾಗ, ಈ ಸಮಾರಂಭವನ್ನು ಗುಪ್ತವಾಗಿ ನಡೆಸಲಾಯಿತು.
 
== ಮಹಾಭಾರತದಲ್ಲಿ ==
ಬಲರಾಮನು [[ಕೌರವರು|ಕೌರವ]] [[ದುರ್ಯೋಧನ]] ಮತ್ತು [[ಪಾಂಡವರು|ಪಾಂಡವ]] [[ಭೀಮ]]ರಿಗೆ ಗದಾವಿದ್ಯೆಯನ್ನು ಕಲಿಸಿದನು.ಬಲರಾಮನಿಗೆ ದುರ್ಯೋಧನನ ಮೇಲೆ ವಿಶೇಷವಾದ ಅಭಿಮಾನವಿತ್ತು. ನಂತರ ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರೇ ಗೆಲ್ಲುವರೆಂದು ತಿಳಿದಿದ್ದ ಕಾರಣ ಯಾರಿಗೂ ಸಹಾಯ ಮಾಡಲು ಇಚ್ಛಿಸದೆ ತೀರ್ಥಯಾತ್ರೆ ಹೋಗುತ್ತಾನೆ.ಅಂತಿಮವಾಗಿ ಭೀಮನು ಗದಾಯುದ್ಧದಲ್ಲಿ ದುರ್ಯೋಧನನನ್ನು ತೊಡೆಯ ಮೇಲೆ ಹೊಡೆದು ಕೊಂದಾಗ ಬಲರಾಮನು ಭೀಮನನ್ನು ಕೊಲ್ಲುವ ಬೆದರಿಕೆ ಹಾಕಿದನು. ಇದನ್ನು ತಡೆದ ಕೃಷ್ಣನು ಬಲರಾಮನಿಗೆ ಭೀಮನ ಪ್ರತಿಜ್ಞೆಯ ನೆನಪು ಮಾಡಿದನು.
 
== ಅಂತ್ಯ ==
[[ಭಾಗವತ ಪುರಾಣ]]ದ ಪ್ರಕಾರ ಪ್ರಭಾಸ ಕ್ಷೇತ್ರದಲ್ಲಿ [[ಯದು]]ವಂಶದ ನಿರ್ನಾಮದ ಬಳಿಕ, [[ಕೃಷ್ಣ]]ನ ಅಂತ್ಯದ ಬಳಿಕ ಧ್ಯಾನಮಗ್ನನಾಗಿ ತನ್ನ ಬಾಯಿಯಿಂದ ಸರ್ಪ ರೂಪವಾಗಿ ಶರೀರವನ್ನು ತ್ಯಜಿಸುತ್ತಾನೆ.
 
== ಹೊರಗಿನ ಸಂಪರ್ಕಗಳು ==
* [http://www.veda.harekrsna.cz ವೈದಿಕ ಜ್ಞಾನ ಭಂಡಾರ]
* [http://www.salagram.net/1000namesBalaram.html ಬಲರಾಮನ ೧೦೦೦ ನಾಮಗಳು]
* [http://www.iskconvrindavan.com/ ಕೃಷ್ಣ-ಬಲರಾಮ ದೇವಾಲಯ]
 
{{ವಿಷ್ಣುವಿನ ಅವತಾರಗಳು}}
{{ಮಹಾಭಾರತ}}
 
 
[[ವರ್ಗ:ವಿಷ್ಣುವಿನ ಅವತಾರಗಳು]]
Line ೪೪ ⟶ ೪೩:
[[id:Baladewa]]
[[it:Balarama]]
[[jv:BaladewaBaladéwa]]
[[lt:Balarama]]
[[ml:ബലരാമൻ]]
"https://kn.wikipedia.org/wiki/ಬಲರಾಮ" ಇಂದ ಪಡೆಯಲ್ಪಟ್ಟಿದೆ