ಬಿ.ಎಸ್.ರಂಗಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧ ನೇ ಸಾಲು:
[[Image:B_S_Rangaa.jpg|thumb|ಬಿ.ಎಸ್.ರಂಗಾ|200px|'ಬಿ.ಎಸ್.ರಂಗಾ']]
'[[ಬಿಂದಿಂಗನ್ ವಿಲೆ ಶ್ರೀನಿವಾಸ ಅಯ್ಯಂಗಾರ್]]', '''ಬಿ.ಎಸ್.ರಂಗಾ'''-[[ಕನ್ನಡ ಚಿತ್ರರಂಗ]] ಕಂಡ ಬಹುಮುಖ ಪ್ರತಿಭಾವಂತರಲ್ಲಿ ಪ್ರಮುಖರು. ಛಾಯಾಗ್ರಹಣ, ನಿರ್ದೇಶನ, ನಿರ್ಮಾಣ ಹೀಗೆ ಮೂರು ವಿಭಾಗಗಳಲ್ಲಿ ರಂಗಾ ಅವರು ಕನ್ನಡ ಚಿತ್ರರಂಗಕ್ಕೆ ಸಲ್ಲಿಸುರುವ ಸೇವೆ ಅಮೂಲ್ಯವಾದದ್ದು. 'ಚಲನಚಿತ್ರವೆಂಬ ಕಲ್ಪನೆ' ಇನ್ನೂ ರೂಪುಗೊಳ್ಳುತ್ತಿದ್ದ ಕಾಲದಲ್ಲಿ 'ಪೌರಾಣಿಕ ಚಿತ್ರ'ಗಳನ್ನು ನಿರ್ಮಿಸಿ, 'ಸ್ಟುಡಿಯೊ ಸ್ಥಾಪಿಸಿ', 'ಚಿತ್ರೋದ್ಯಮದ ಆತ್ಮವಿಶ್ವಾಸ ಹೆಚ್ಚಿಸಿದರು'.
==ಜನನ ಮತ್ತು, ಬಾಲ್ಯ ಹಾಗೂ ವೃತ್ತಿ-ಜೀವನ==
'[[ಬಿ. ಎಸ್. ರಂಗಾ]]' ರವರು, ಸನ್, ೧೯೧೭ ರ, ನವೆಂಬರ್, ೧೧ ರಂದು, ಬೆಂಗಳೂರಿಗೆ ಸಮೀಪದಲ್ಲಿರುವ '[[ಮಾಗಡಿ]]'ಯಲ್ಲಿ ಜನಿಸಿದರು. ತಮ್ಮ ೧೭ ನೇ ವಯಸ್ಸಿನ ಪ್ರಾಯದಲ್ಲೇ ಫೋಟೋಗ್ರಫಿ ಯಲ್ಲಿ ಆಕರ್ಷಿತರಾದರು. ಆ ವಲಯದಲ್ಲಿ ಅತ್ಯಂತ ಮಹತ್ವದ ಕೊಡುಗೆಗಳನ್ನು ಕೊಟ್ಟಬಳಿಕ, 'ಲಂಡನ್ ನ, ರಾಯಲ್ ಫೋಟೋಗ್ರಫಿಕ್ ಸೊಸೈಟಿಯ ಆನರ್ ಫೆಲೋ ಆಗಿ ಆಯ್ಕೆಯಾದರು. [[೧೯೩೭]]ರಲ್ಲಿ ಕಾಲೇಜು ತೊರೆದು, ತಂದೆ ಬಿ.ಶ್ರೀನಿವಾಸ ಅಯ್ಯಂಗಾರ್ಯರ ಮುದ್ರಣ ಕಾರ್ಯದಲ್ಲಿ ಸಹಾಯಕರಾಗಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದರು. ತಂದೆ, '[[ಅಮೆಚೂರ್ ಡ್ರಾಮಾಟಿಕ್ ಅಸೋಸಿಯೇಷನ್]]' ಹುಟ್ಟುಹಾಕಿದವರು. ಈ ಅಸೋಸಿಯೇಷನ್ ಮೂಲಕ ರಂಗಾ ಅವರಿಗೆ ಹಲವಾರು ಸಾಹಿತಿಗಳ, ರಂಗಪಟುಗಳ ಪರಿಚಯವಾಯಿತು. ಅದು ಅವರಲ್ಲಿ ಚಲನಚಿತ್ರರಂಗದಲ್ಲಿ ಆಸಕ್ತಿ ರೂಪುಗೊಳ್ಳುವಂತೆ ಮಾಡಿತು. ಎಲ್ಲಾ ವಿಭಾಗಗಳಿಗಿಂತ ಛಾಯಾಗ್ರಹಣದತ್ತ ಆಸಕ್ತರಾದ ಅವರು [[ಮುಂಬಯಿ|ಮುಂಬಯಿಗೆ]] ತೆರಳಿ, '[[ಭಾರತದ ಪ್ರಥಮ ಆಟೋಮ್ಯಾಟಿಕ್ ಪ್ರೊಸೆಸಿಂಗ್ ಲ್ಯಾಬೋರೇಟರಿ]]' ಸ್ಥಾಪಕರಾದ '[[ಕೃಷ್ಣಗೋಪಾಲ್]]' ರವರ ಸಹಾಯಕರಾಗಿ ಕೆಲಸಕ್ಕೆ ಸೇರಿದರು. ಹಿಂದಿ ಚಿತ್ರರಂಗದ ದಿಗ್ಗಜರ ಒಡನಾಟ ಲಭ್ಯವಾಯಿತು. ಹಲವು ಚಿತ್ರಗಳಿಗೆ 'ಸಹಾಯಕ ಛಾಯಾಗ್ರಹಕ' ರಾಗಿ ದುಡಿಯುವ ಅವಕಾಶವೂ ದೊರೆಯಿತು. 'ರಂಗಾ' ಅವರು 'ಸ್ವತಂತ್ರ ಛಾಯಾಗ್ರಹಕ'ರಾಗಿ ದುಡಿದದ್ದು '''ಭಕ್ತ ನಾರದರ್''' ಎಂಬ [[ತಮಿಳು]] ಚಲನಚಿತ್ರ. ೧೯೪೭-೪೯ ರ ಅವಧಿಯಲ್ಲಿ, '[[ಮಾಗೋಪಿ]]' ಯೆಂಬ ತೆಲುಗು ಚಿತ್ರವನ್ನು ಸ್ವತಂತ್ಯವಾಗಿ ಚಿತ್ರೀಕರಿಸಿ, ನಿರ್ದೇಶಿಸಿದರು ಸಹಿತ.
 
==ಮದ್ರಾಸ್ ನಲ್ಲಿ, '[[ವಿಕ್ರಂ ಪ್ರೊಡಕ್ಷನ್ ಕಂಪೆನಿ]]'ಯ ಸ್ಥಾಪನೆ==
'ಯಶಸ್ವಿ ಛಾಯಾಗ್ರಾಹಕ ವೃತ್ತಿ'ಯ ನಂತರ '''ವಿಕ್ರಂ ಪ್ರೊಡಕ್ಷನ್ ಸಂಸ್ಥೆ''' ಸ್ಥಾಪಿಸಿದರು. [[೧೯೫೦]]ರಲ್ಲಿ ಅದರ ವಿಸ್ತರಣವಾಗಿ '[[`ವಿಕ್ರಂ ಸ್ಟುಡಿಯೊಸ್ ಅಂಡ್ ಲ್ಯಾಬ್ ಸಂಸ್ಥೆ]]' ಸ್ಥಾಪನೆಯಾಯಿತು. [[೧೯೫೫]]ರಲ್ಲಿ [[ಚೆನ್ನೈ|ಮದ್ರಾಸಿನಲ್ಲಿ]] 'ಸುಸಜ್ಜಿತ ಸ್ಟುಡಿಯೊ' ಸ್ಥಾಪಿಸಿದರು. '[[ಬೆಂಗಳೂರಿನ ಹಿರಿಯ ನಿವೃತ್ತ ಪೋಲೀಸ್ ಆಫೀಸರ್]]', '[[ಶ್ರೀ. ಬಿ. ಎಸ್. ಗರುಡಾಚಾರ್]]', 'ಬಿ.ಎಸ್. ರಂಗಾ'ರವರ ಕಿರಿಯ ಸೋದರರು.
"https://kn.wikipedia.org/wiki/ಬಿ.ಎಸ್.ರಂಗಾ" ಇಂದ ಪಡೆಯಲ್ಪಟ್ಟಿದೆ