ಬಕ್ರೀದ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: war:Eid al-Adha; cosmetic changes
೧ ನೇ ಸಾಲು:
ಬಕ್ರೀದ್. ತ್ಯಾಗ ಬಲಿದಾನದ ಸಂಕೇತ. ಭಾರತವೂ ಸೇರಿದಂತೆ ವಿಶ್ವದ್ಯಾಂತ ಮುಸ್ಲಿಮರು ಈ ಹಬ್ಬವನ್ನು ಭಕ್ತಿ ಶ್ರದ್ಧೆಯಿಂದ ಆಚರಿಸುತ್ತಾರೆ.
 
ಪ್ರವಾದಿಗಳಲ್ಲೊಬ್ಬರಾದ ಪ್ರವಾದಿ ಇಬ್ರಾಹಿಮರು ತಮ್ಮ ಮಗನಾದ ಇಸ್ಮಾಯಿಲ್‌ರನ್ನು ಸೃಷ್ಟಿಕರ್ತ ಅಲ್ಲ್ಹಾನಿಗೆ ಬಲಿ ಕೊಡಲು ಮುಂದಾದ ದಿನವನ್ನು ಈದ್ ಉಲ್ ಅದಾ ಅರ್ಥಾತ್ ಬಕ್ರೀದ್ ಎನ್ನಲಾಗುತ್ತದೆ. ಈ ಹಬ್ಬದ ಹಿನ್ನೆಲೆ, ಮಹತ್ವ ಹೀಗಿದೆ.
 
ರಮ್‌ಝಾನ್ ಮತ್ತು ಬಕ್ರೀದ್ ವಿಶ್ವದ್ಯಾಂತ ಮುಸ್ಲಿಮರು ಆಚರಿಸುವ ಎರಡು ಅತಿದೊಡ್ಡ ಹಬ್ಬಗಳು. ರಮ್‌ಝಾನ್ ಸಂದರ್ಭದಲ್ಲಿ ಮುಸ್ಲಿಮರು ಇಡಿ ಒಂದು ಮಾಸ ಉಪವಾಸಾಚರಣೆ ಆಚರಿಸಿ ಕೊನೆ ದಿನ ಈದ್ ಉಲ್ ಫಿತರ್ ಹಬ್ಬದ ಮೂಲಕ ಭಾವೈಕ್ಯ ಮರೆಯುತ್ತಾರೆ.
೯ ನೇ ಸಾಲು:
ವಿಶ್ವದ ಮೂಲೆಮೂಲೆಗಳಿಂದ ಬಂದು ಹಜ್ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳು ಬಕ್ರೀದ್ ಹಬ್ಬದ ದಿನದಂದು ತಮ್ಮ ಯಾತ್ರೆಯನ್ನು ಪೂರೈಸಿ ತಮ್ಮ ತಮ್ಮ ತಾಯಿನಾಡಿಗೆ ಮರಳುತ್ತಾರೆ. ಒಟ್ಟಾರೆ, ಹಜ್ ಯಾತ್ರೆ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ನಡೆಯುವ ಕ್ರಿಯೆ. ಇದೇ ವೇಳೆ ಬಕ್ರೀದ್ ಹಬ್ಬವನ್ನು ವಿಶ್ವದ್ಯಂತ ಮುಸ್ಲಿಮರು ಭಕ್ತಿ-ಶ್ರದ್ಧೆಯಿಂದ ಆಚರಿಸುತ್ತಾರೆ. ಇದಕ್ಕೊಂದು ಹಿನ್ನೆಲೆಯಿದೆ. ಧರ್ಮ ಪ್ರವಾದಿಗಳಾದ ಹಜ಼ರತ್ ಇಬ್ರಾಹಿ೦ ಖಲೀಲುಲ್ಲಾಹ್‌ರವರ ಸತ್ವಪರೀಕ್ಷೆ ಮಾಡಲು ಅಲ್ಲಾಹ್‌ನು ಒಮ್ಮೆ ಅವರಿಗೆ "ನಿನ್ನ ಅತಿ ಪ್ರೀತ್ಯಾದರಗಳಿಗೆ ಪಾತ್ರವಾದ ಜೀವ ಒ೦ದನ್ನು ಬಲಿ ಕೊಡಬಲ್ಲೆಯೋ?" ಎ೦ದು ಕೇಳಿದನು. ಪಿತೃವಾತ್ಸಲ್ಯದ ಪ್ರತೀಕವೆನಿಸಿದ ತಮ್ಮ ಏಕೈಕ ಪುತ್ರನಾದ ಇಸ್ಮಾಯಿಲ್ ಜಬೀಯುಲ್ಲಾಹ್‌ರನ್ನೇ ಬಲಿದಾನ ಮಾಡಬೇಕೆ೦ಬುದು ಭಗವ೦ತನ ಇಚ್ಛೆ ಎ೦ದು ಅವರಿಗೆ ಮನವರಿಕೆಯಾಯಿತು. ಮಗನನ್ನು ಬಲಿ ಕೊಡಲು ಸಿದ್ಧರಾದರು.
 
ಆದರೆ ಅನೇಕ ಸಲ ಪ್ರಯತ್ನ ಪಟ್ಟರೂ ಮಗನ ಕತ್ತಿನ ಮೇಲಿಟ್ಟ ಕತ್ತಿ ಹರಿಯಲಿಲ್ಲ. ಇದನ್ನು ಕ೦ಡ ಮಗ ಇಸ್ಮಾಯಿಲ್ ಜಬೀಯುಲ್ಲಾಹ್, ತನ್ನ ತ೦ದೆಗೆ ಹೀಗೆ ಹೇಳಿದರು: "ಅಪ್ಪಾ, ನಿನ್ನನ್ನು ಪುತ್ರವಾತ್ಸಲ್ಯ ಕಾಡಿಸುತ್ತಿದೆ. ಆದ್ದರಿ೦ದ ಕಣ್ಣಿಗೆ ಬಟ್ಟೆಯನ್ನು ಕಟ್ಟಿಕೊ೦ಡು ಕತ್ತಿ ಹರಿಸು". ಇದನ್ನು ಕೇಳಿದ ತ೦ದೆ ಇಬ್ರಾಹಿಮ್ ಖಲೀಲುಲ್ಲಾಹ್‌ರವರು ತಮ್ಮ ಕಣ್ಣುಗಳಿಗೆ ಪಟ್ಟಿಯನ್ನು ಕಟ್ಟಿ "ಬಿಸ್ಮಿಲ್ಲಾ" ಎ೦ದು ಹೇಳಿ ಒಮ್ಮೆಲೇ ಮಗನ ಮೇಲೆ ಕತ್ತಿಯನ್ನು ಜೋರಾಗಿ ಹರಿಸಿದರು. ಕತ್ತಿ ಎಷ್ಟೇ ಹರಿಸಿದರು ದೈವಿ ಕಾರಣದಿಂದ ಕತ್ತಿ ಇಸ್ಮಾಯಿಲರ ಕತ್ತನ್ನು ಕುಯ್ಯುವುದಿಲ್ಲ.
 
ಆ ವೇಳೆ, ಪ್ರತ್ಯಕ್ಷರಾದ ದೇವದೂತ ಜಿಬ್ರಾಯಿಲ್, ಇಸ್ಮಾಯಿಲ್‌ರನ್ನು ಒತ್ತಟ್ಟಿ ಅವರ ಬದಲು ಒ೦ದು ಕುರಿಯನ್ನು ಬಲಿಕೊಡುವಂತೆ ಆಜ್ಞೆಪಿಸುತ್ತಾರೆ. ಈ ಕಾರಣ ಬಲಿ ಕೊಡಲ್ಪಟ್ಟ ಜೀವ ಒ೦ದು ಕುರಿ ಆಗುತ್ತದೆ. ಜತೆಗೆ ಪ್ರವಾದಿ ಇಬ್ರಾಹಿಮರು ಸೃಷ್ಟಿಕರ್ತನಾದ ಅಲ್ಲ್ಹಾನಲ್ಲಿಟ್ಟಿರುವ ಸತ್ಯನಿಷ್ಠೆಯ ಸತ್ವಪರೀಕ್ಷೆಯೂ ನಡೆದಿರುತ್ತದೆ. ಹೀಗೆ , ದೇವನಲ್ಲಿ ತಮಗಿರುವ ಸತ್ಯನಿಷ್ಠೆಯ ಸಂಕೇತವಾಗಿ ವಿಶ್ವದ್ಯಂತ ಮುಸ್ಲಿಮರಿಂದ ಬಕ್ರೀದ್ ಹಬ್ಬ ಆಚರಿಸಲ್ಪಡುತ್ತಾ ಬಂದಿದೆ. ಅಲ್ಲದೇ, ಹಬ್ಬದ ದಿನದಂದು ಶಕ್ತ ಮುಸ್ಲಿಮರು ಕುರಿಯನ್ನು ತ್ಯಾಗ-ಬಲಿದಾನದ ಪ್ರತೀಕವಾಗಿ ಬಲಿ ಕೊಡುವುದು ಹಾಗೂ ಅದರ ಪಾಲನ್ನು ಬಂದುಭಾಂದವರು ಹಾಗೂ ನೆರೆಹೊರೆಯವರಿಗೆ ಸಮಾನವಾಗಿ ಹಂಚುವ ಸಂಪ್ರದಾಯ ಬೆಳೆದು ಬಂದಿದೆ. ಒಟ್ಟಿನಲ್ಲಿ ಜೀವಜ೦ತುವಿನ ಬಲಿದಾನದ ಮೂಲಕ ಈ ಹಬ್ಬ ಆಚರಿಸಲ್ಪಡುತ್ತದೆ.
೯೨ ನೇ ಸಾಲು:
[[ur:بقرعید]]
[[wa:Fiesse do moton]]
[[war:Eid al-Adha]]
[[wo:Bisub Tabaski]]
[[yo:Ọdún Iléyá]]
"https://kn.wikipedia.org/wiki/ಬಕ್ರೀದ್" ಇಂದ ಪಡೆಯಲ್ಪಟ್ಟಿದೆ